ದುಂದಿಲ್ಲದಿದ್ದರೆ ಕುಂದೂ ಇಲ್ಲ
ನಮ್ಮ ಆಧುನಿಕ ಬಳಕೆದಾರ ಸಮಾಜದಲ್ಲಿ, ಕಸದ ಹಾಗೂ ಅಪಾಯಕರವಾದ ಹಿಪ್ಪೆ ಉತ್ಪನ್ನಗಳ ಸುರಕ್ಷಿತವಾದ ಹೊರಹಾಕುವಿಕೆಯು, ಒಂದು ಘೋರ ಸ್ವಪ್ನವಾಗಿ ಪರಿಣಮಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ, ದೇವರ ಸೃಷ್ಟಿಯು ಆರ್ಥಿಕ ನಿರ್ವಹಣೆ ಹಾಗೂ ಪುನರ್ಸಂಸ್ಕರಣೆಯ ಒಂದು ಅದ್ಭುತಕರ ದೃಷ್ಟಾಂತವಾಗಿದೆ. ಉದಾಹರಣೆಗಾಗಿ, ಜೇನುಗೂಡನ್ನು ತೆಗೆದುಕೊಳ್ಳಿರಿ. ಜೇನುಗೂಡಿನ ಕಟ್ಟುವ ಸಾಮಗ್ರಿಯಾದ ಜೇನುಮೇಣವು, ಒಂದು ದುಬಾರಿ ಪದಾರ್ಥವಾಗಿದೆ—ಕೇವಲ ಒಂದು ಗ್ರಾಮ್ ತೂಕದ ಜೇನುಮೇಣವನ್ನು ಮಾಡಲಿಕ್ಕಾಗಿ, ಒಂದು ಜೇನುನೊಣಕ್ಕೆ 16 ಗ್ರಾಮ್ಗಳಷ್ಟು ಜೇನು ಮತ್ತು ಅನಿರ್ಧರಿತ ಪ್ರಮಾಣದ ಪುಷ್ಪಧೂಳಿಯು ಆವಶ್ಯಕವಾಗಿದೆ. ಈ ಜೇನುನೊಣಗಳು ತಮ್ಮ ಜೇನುಮೇಣವನ್ನು ಹೇಗೆ ಅಗ್ಗವಾಗಿ ಮಾಡುತ್ತವೆ? “ಜೇನುಗೂಡಿನ ಕೋಶಗಳ ಮೇಣದ ಗೋಡೆಗಳು, ಮೂರರಂತೆ 120 ಡಿಗ್ರಿ ಕೋನಗಳಲ್ಲಿ ಒಟ್ಟುಗೂಡಿ, ಷಡ್ಭುಜಗಳ ಒಂದು ಕ್ರಮವಾದ ಶ್ರೇಣಿಯನ್ನು ರೂಪಿಸುತ್ತವೆ” ಎಂಬುದಾಗಿ ಬೈ ನೇಚರ್ಸ್ ಡಿಸೈನ್ ಎಂಬ ಪುಸ್ತಕವು ವಿವರಿಸುತ್ತದೆ. “ಈ ಮಾದರಿಯು, ಅವುಗಳು ಉಪಯೋಗಿಸುವ ಮೇಣದ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಸಾಧ್ಯಮಾಡುತ್ತಾ, ಅದೇ ಸಮಯದಲ್ಲಿ ಜೇನನ್ನು ಶೇಖರಿಸಲಿಕ್ಕಾಗಿ ಬಿರುಸಾದ ಒಂದು ರಚನೆಯನ್ನು ಒದಗಿಸುತ್ತದೆ.” ಆದುದರಿಂದ ಅತಿ ಬುದ್ಧಿವಂತಿಕೆಯ ರಚನೆಯು, ರಚನಾಸೌಂದರ್ಯವನ್ನು ಕೆಲಸದ ಆರ್ಥಿಕ ನಿರ್ವಹಣೆಯೊಂದಿಗೆ ಸಂಯೋಜಿಸುತ್ತದೆ, ಮತ್ತು ಅದನ್ನು ಪುನರ್ಸಂಸ್ಕರಿಸಸಾಧ್ಯವಿದೆ!
ವಿಜ್ಞಾನ ಹಾಗೂ ನೈಸರ್ಗಿಕ ಅದ್ಭುತಗಳ ಕುರಿತಾದ ಲೇಖನಗಳನ್ನು ಓದುವುದರಲ್ಲಿ ನೀವು ಆನಂದಿಸುವುದಾದರೆ, ಮತ್ತು ಎಚ್ಚರ! ಪತ್ರಿಕೆಯನ್ನು ಕ್ರಮವಾಗಿ ಪಡೆದುಕೊಳ್ಳಲು ಬಯಸುವುದಾದರೆ, ನಿಮ್ಮ ನೆರೆಹೊರೆಯಲ್ಲಿರುವ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿರಿ ಅಥವಾ 5ನೆಯ ಪುಟದಲ್ಲಿ ಪಟ್ಟಿಮಾಡಿರುವ ಅತ್ಯಂತ ಸಮೀಪದ ವಿಳಾಸಕ್ಕೆ ಬರೆಯಿರಿ.