ಇಂದು ಯುವ ಜನರಿಗೆ ಅಗತ್ಯವಿರುವ ಒಂದು ವಿಷಯ
ಅಮೆರಿಕದ ನ್ಯೂ ಜರ್ಸಿಯ, 14 ವರ್ಷ ಪ್ರಾಯದ ಒಬ್ಬ ಹುಡುಗಿಯು, ಈ ವರ್ಷದ ಆರಂಭದಲ್ಲಿ, “ವಿದ್ಯಾರ್ಥಿಗಳು ಕಿರುಪರೀಕ್ಷೆಗಳಲ್ಲಿ ಮೋಸಮಾಡಲು ಕಾರಣ,” ಎಂಬ ವಿಷಯದಲ್ಲಿ ತನಗೆ ಒಂದು ವರದಿಯನ್ನು ಬರೆಯಲಿಕ್ಕಿತ್ತು ಎಂದು ಹೇಳಿದಳು. ಆಕೆ ಸಂಶೋಧನೆ ಮಾಡಲಿಕ್ಕಾಗಿ ಯುವ ಜನರು ಕೇಳುವ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು (ಇಂಗ್ಲಿಷ್) ಎಂಬ ಪುಸ್ತಕವನ್ನು ಶಾಲೆಗೆ ತಂದಳು. ಆಕೆಯ ಶಾಲಾ ಸ್ನೇಹಿತೆಯರಲ್ಲಿ ಒಬ್ಬಳು ಅದನ್ನು ತೆಗೆದುಕೊಂಡು, “ಕಾಮ ಮತ್ತು ನೀತಿ ಶೀಲಗಳು” ಹಾಗೂ “ಡೇಟಿಂಗ್, ಪ್ರೇಮ ಮತ್ತು ವಿರುದ್ಧ ಲಿಂಗಜಾತಿ” ಮುಂತಾದ ವಿಭಾಗಾನುಕ್ರಮಣಿಕೆಗಳ ಶಿರೋನಾಮಗಳನ್ನು ಓದತೊಡಗಿದಳು.
“ನನಗೆ ಈ ಪುಸ್ತಕ ಕೊಡುವಿಯೊ?” ಎಂದು ಕೇಳಿದಳು, ಆ ಶಾಲಾ ಸ್ನೇಹಿತೆ.
“ಇದು ನನ್ನ ಪ್ರತಿಯೆಂದೂ, ಆದರೆ ನಾನು ಆಕೆಗೆ ಒಂದು ಪ್ರತಿಯನ್ನು ತರುವೆನೆಂದೂ ನಾನು ವಿವರಿಸಿದೆ. ನಾನು ತಂದಾಗ ಇನ್ನೊಬ್ಬ ಸಹಪಾಠಿ ಆ ಪುಸ್ತಕವನ್ನು ನೋಡಿ, ತನಗೂ ಒಂದನ್ನು ತರುವಂತೆ ಕೇಳಿಕೊಂಡಳು. ಇದಾಗಿ ಸ್ವಲ್ಪದರಲ್ಲಿ, ಒಂದು ಪ್ರತಿಯನ್ನು ಬಯಸಿದ ವಿದ್ಯಾರ್ಥಿಗಳಿಗೆ, ಯುವ ಜನರು ಪ್ರಶ್ನಿಸುವುದು ಎಂಬ ಹತ್ತು ಪುಸ್ತಕಗಳನ್ನು ನಾನು ತಂದುಕೊಟ್ಟೆ,” ಎಂದಳು ಆ ವಿದ್ಯಾರ್ಥಿನಿ.
ಅದು ಇಟ್ಟುಕೊಳ್ಳಲು ಅಮೂಲ್ಯವಾದ ಪುಸ್ತಕ ಎಂಬುದು ಆ 14 ವರ್ಷ ವಯಸ್ಸಿನ ವಿದ್ಯಾರ್ಥಿನಿಯ ಅಭಿಪ್ರಾಯ. ಅವಳು ಹೇಳಿದ್ದು: “ಈ ದಿನಗಳಲ್ಲಿ ಯುವವ್ಯಕ್ತಿಯಾಗಿರುವುದು ತೀರ ಕಷ್ಟಕರವಾಗಿರುವ ಕಾರಣ, ನಮಗೆ ಈ ಪ್ರಕಾಶನವು ನಿಜವಾಗಿಯೂ ಅಗತ್ಯ.”
ಯುವ ಜನರು ಕೇಳುವ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು (ಇಂಗ್ಲಿಷ್) ಎಂಬ ಪುಸ್ತಕದ ಒಂದು ಪ್ರತಿಯನ್ನು ಪಡೆದುಕೊಳ್ಳಲು ನೀವು ಇಷ್ಟಪಡುವಲ್ಲಿ ಅಥವಾ ಬೈಬಲ್ ಶಿಕ್ಷಣದ ಅಮೂಲ್ಯತೆಯನ್ನು ಚರ್ಚಿಸಲಿಕ್ಕಾಗಿ ಯಾರಾದರೂ ನಿಮ್ಮ ಮನೆಗೆ ಭೇಟಿ ನೀಡುವಂತೆ ನೀವು ಬಯಸುವಲ್ಲಿ, ದಯವಿಟ್ಟು Watchtower, H-58 Old Khandala Road, Lonavla 410 401, Mah., India, ಅಥವಾ ಪುಟ 5ರಲ್ಲಿ ಕೊಡಲ್ಪಟ್ಟಿರುವ, ನಿಮಗೆ ಅತಿ ಹತ್ತಿರದಲ್ಲಿರುವ ವಿಳಾಸಕ್ಕೆ ಬರೆಯಿರಿ.