ಅಮೂಲ್ಯವಾದೊಂದು ಪತ್ರಿಕೆ
ಲಂಡನಿನ ನರ್ಸೊಬ್ಬಳು, ಎಚ್ಚರ! ಪತ್ರಿಕೆಯ ಪ್ರಕಾಶಕರಿಗೆ ಈ ಕೆಳಗಿನ ಹೇಳಿಕೆಗಳನ್ನು ಬರೆದಳು:
“ಒಂದು ದಿನ ನಾನು ನನ್ನ ಹೊಸ ನೆರೆಯವಳಾದ ಜಾಕೀಯೊಂದಿಗೆ, ವೃದ್ಧರೊಂದಿಗಿನ ನನ್ನ ಕೆಲಸದ ಕುರಿತಾಗಿ ಮಾತಾಡುತ್ತಿದ್ದೆ. ‘ಅವರು ಓದಲು ಇಷ್ಟಪಡಬಹುದಾದಂತಹ ಕೆಲವು ಪತ್ರಿಕೆಗಳು ನನ್ನಲ್ಲಿವೆ’ ಎಂದು ಅವಳು ನನಗೆ ಹೇಳಿದಳು. ನಾನು ಅವಳ ಪತ್ರಿಕೆಗಳನ್ನು ಕೆಲಸದ ಸ್ಥಳಕ್ಕೆ ತೆಗೆದುಕೊಂಡುಹೋಗಿ, ಅವುಗಳನ್ನು ಕಾಫಿ ಟೇಬಲುಗಳ ಮೇಲೆ ಇಟ್ಟುಬಿಟ್ಟೆ. ಮುಂದಿನ ಭೇಟಿಗಳಲ್ಲಿ, ಆ ಪತ್ರಿಕೆಗಳ ಪುಟಗಳು ಚೆನ್ನಾಗಿ ಮಗುಚಲ್ಪಟ್ಟದ್ದುದನ್ನು ನಾನು ಗಮನಿಸಿದೆ, ಹಾಗಾದರೆ, ಜನರು ಅವುಗಳನ್ನು ಓದುತ್ತಿದ್ದರು.
“ತದನಂತರ ನಾನು ನನ್ನ ಉದ್ಯೋಗವನ್ನು ಬದಲಾಯಿಸಿ, ಒಂದು ಆಸ್ಪತ್ರೆಯಲ್ಲಿ ಕೆಲಸಮಾಡಲಾರಂಭಿಸಿದೆ. ನನ್ನ ನೆರೆಯವಳ ಪತ್ರಿಕೆಗಳಲ್ಲಿ ಕೆಲವನ್ನು ನಿರೀಕ್ಷಣಾಲಯದಲ್ಲಿ ಇಟ್ಟೆ. ಪುನಃ ಒಮ್ಮೆ ಆ ಪತ್ರಿಕೆಗಳನ್ನು ಓದಲಾಗಿರುವುದನ್ನು ನಾನು ನೋಡಸಾಧ್ಯವಿತ್ತು. ಒಂದು ದಿನ ಬೆಳಗ್ಗೆ, ನಾನು ಒಬ್ಬ ವೃದ್ಧ ಮಹಿಳೆಯ ಕೈಯ ಶುಶ್ರೂಷೆ ಮಾಡುತ್ತಿದ್ದಾಗ, ಅವಳ ಗಂಡನು ಹೇಳಿದ್ದು: ‘ಇದು ನಿಷಿದ್ಧವಲ್ಲವೆಂದು ನಾನು ಭಾವಿಸುತ್ತೇನೆ, ನಾನು ಈ ಪತ್ರಿಕೆಯನ್ನು ನಿಮ್ಮ ನಿರೀಕ್ಷಣಾಲಯದಿಂದ ತೆಗೆದುಕೊಂಡೆ. ಅದರಲ್ಲಿ ಒಂದು ತುಂಬ ಒಳ್ಳೆಯ ಲೇಖನವಿದೆ, ಅದನ್ನು ನಾನು ನನ್ನ ಮಗನೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.’
“ಆ ಪತ್ರಿಕೆಗಳು ನನಗೂ ಒಂದು ಆಶೀರ್ವಾದವಾಗಿವೆ. ನಾನು ನರ್ಸಿಂಗ್ ಕ್ಷೇತ್ರದಲ್ಲಿ ಇನ್ನೂ ತರಬೇತಿಯನ್ನು ಪಡೆದುಕೊಳ್ಳುತ್ತಿರುವುದರಿಂದ, ಈ ಲೇಖನಗಳಲ್ಲಿರುವ ಮಾಹಿತಿಯನ್ನು ನಾನು ನನ್ನ ಸಂಶೋಧನಾ ಪ್ರಬಂಧದಲ್ಲಿ ಉಪಯೋಗಿಸಿದ್ದೇನೆ. ಇದರಿಂದಾಗಿ ನನ್ನ ಶಿಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ.
“ನನ್ನ ನೆರೆಯವಳಾದ ಜಾಕೀ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದಾಳೆ, ಮತ್ತು ನಾನು ಸೂಚಿಸುತ್ತಿರುವ ಪತ್ರಿಕೆ ಎಚ್ಚರ! ಪತ್ರಿಕೆಯಾಗಿದೆ. ನಾನು ಈ ಪತ್ರಿಕೆಯಲ್ಲಿ ಓದಿರುವ ವಿಷಯವು, ನನ್ನ ಕುರಿತಾಗಿಯೂ ಮಾನವಕುಲಕ್ಕಾಗಿರುವ ಭವಿಷ್ಯತ್ತಿನ ಕುರಿತಾಗಿಯೂ ಹೆಚ್ಚನ್ನು ಅರ್ಥಮಾಡಿಕೊಳ್ಳುವಂತೆ ನನಗೆ ಸಹಾಯ ಮಾಡಿದೆ.”
ನೀವು ಎಚ್ಚರ! ಪತ್ರಿಕೆಯ ಮುಂದಿನ ಸಂಚಿಕೆಗಳನ್ನು ಪಡೆದುಕೊಳ್ಳಲು ಬಯಸುವಲ್ಲಿ, ದಯವಿಟ್ಟು ಸ್ಥಳಿಕವಾಗಿ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿರಿ, ಅಥವಾ ಪುಟ 5ರಲ್ಲಿ ಪಟ್ಟಿಮಾಡಲಾಗಿರುವ ಅತಿ ಸಮೀಪದ ವಿಳಾಸಕ್ಕೆ ಪತ್ರ ಬರೆಯಿರಿ.