ಬಿರುಸಾದ ಮಾತುಗಳು, ಜಜ್ಜಲ್ಪಟ್ಟ ಮನೋಭಾವಗಳು
“ಮೂರ್ಖ ಮಂದಬುದ್ಧಿಯವಳು!”* ಜಪಾನಿನಲ್ಲಿರುವ ಒಬ್ಬಾಕೆ ಸ್ತ್ರೀಯು ಈ ಮಾತುಗಳನ್ನು ಬಹಳ ಚೆನ್ನಾಗಿ ಜ್ಞಾಪಿಸಿಕೊಳ್ಳುತ್ತಾಳೆ—ಅವಳು ಚಿಕ್ಕ ಮಗುವಾಗಿದ್ದಾಗ, ಅವಳ ಕಡೆಗೆ ಈ ಮಾತುಗಳು ಮೇಲಿಂದ ಮೇಲೆ ಎಸೆಯಲ್ಪಟ್ಟಿದ್ದವು. ಯಾರಿಂದ? ಶಾಲಾಮಕ್ಕಳಿಂದಲೋ? ಒಡಹುಟ್ಟಿದವರಿಂದಲೋ? ಇಲ್ಲ. ಅವಳ ಹೆತ್ತವರಿಂದಲೇ. ಅವಳು ಜ್ಞಾಪಿಸಿಕೊಳ್ಳುವುದು: “ನಾನು ಖಿನ್ನಳಾಗುತ್ತಿದ್ದೆ ಏಕೆಂದರೆ ಆ ಅಪಮಾನಪಡಿಸುವ ಮಾತುಗಳು ನನ್ನ ಭಾವನೆಗಳನ್ನು ಬಹು ಆಳವಾಗಿ ತಿವಿಯುತ್ತಿದ್ದವು.”
ಮಗುವಾಗಿದ್ದಾಗ, ತನ್ನ ತಂದೆ ಮನೆಗೆ ಬಂದಾಗಲೆಲ್ಲ ತನಗೆ ಭಯದ ಮತ್ತು ಆತಂಕದ ಭಾವನೆಯಾಗುತ್ತಿತ್ತು ಎಂಬುದಾಗಿ ಅಮೆರಿಕದಲ್ಲಿನ ಒಬ್ಬ ವ್ಯಕ್ತಿಯು ಜ್ಞಾಪಿಸಿಕೊಳ್ಳುತ್ತಾನೆ. ಅವನು ಜ್ಞಾಪಿಸಿಕೊಳ್ಳುವುದು: “ನಮ್ಮ ಮನೆಗೆ ಬರುವ ವಾಹನಪಥದಲ್ಲಿ ನನ್ನ ತಂದೆಯ ಕಾರಿನ ಟಯರುಗಳ ಶಬ್ದವನ್ನು ಈ ದಿನದ ವರೆಗೆ ನಾನು ಇನ್ನೂ ಜ್ಞಾಪಿಸಿಕೊಳ್ಳಬಲ್ಲೆ ಮತ್ತು ಆ ಜ್ಞಾಪಕ ಬಂದೊಡನೆ ನನಗೆ ಜುಮ್ಮೆನ್ನುತ್ತದೆ. ನನ್ನ ಪುಟ್ಟ ತಂಗಿ ಅಡಗಿಕೊಳ್ಳುತ್ತಿದ್ದಳು. ನನ್ನ ತಂದೆ ಒಬ್ಬ ಪರಿಪೂರ್ಣತಾವಾದಿಯಾಗಿದ್ದರು ಮತ್ತು ನಾವು ಮಾಡಬೇಕಿದ್ದ ಎಲ್ಲ ಸಣ್ಣಪುಟ್ಟ ಕೆಲಸಗಳನ್ನು ಸಾಕಷ್ಟು ಉತ್ತಮವಾಗಿ ಮಾಡದ ಕಾರಣ ನಮ್ಮನ್ನು ಸತತವಾಗಿ ಗದರಿಸುತ್ತಿದ್ದರು.”
ಈ ವ್ಯಕ್ತಿಯ ಅಕ್ಕ ಕೂಡಿಸುವುದು: “ನನ್ನ ಹೆತ್ತವರಲ್ಲಿ ಯಾರೇ ಆಗಲಿ ನಮ್ಮನ್ನು ತಬ್ಬಿಕೊಂಡ, ನಮ್ಮನ್ನು ಮುದ್ದಿಟ್ಟ, ಅಥವಾ ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಅಥವಾ ‘ನಾನು ನಿನ್ನ ವಿಷಯದಲ್ಲಿ ಹೆಮ್ಮೆ ಪಡುತ್ತೇನೆ,’ ಎಂಬ ಮಾತನ್ನು ಹೇಳಿದ ಜ್ಞಾಪಕ ನನಗಿಲ್ಲ. ಮತ್ತು ಒಂದು ಮಗುವಿಗೆ, ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂಬ ಮಾತನ್ನು ಎಂದೂ ಕೇಳದಿರುವುದು, ‘ನಾನು ನಿನ್ನನ್ನು ಹಗೆಮಾಡುತ್ತೇನೆ’ ಎಂಬುದನ್ನು—ಅವನ ಜೀವಿತದ ಪ್ರತಿ ದಿನ—ಕೇಳುವುದಕ್ಕೆ ಸಮಾನವಾಗಿದೆ.”
ಮಕ್ಕಳೋಪಾದಿ ಈ ಜನರು ಅನುಭವಿಸಿದ ಬೇಗುದಿ ತೀರ ಅಲ್ಪವಾದದ್ದು ಎಂದು ಕೆಲವರು ಹೇಳಬಹುದು. ನಿಶ್ಚಯವಾಗಿಯೂ ಮಕ್ಕಳು ಬಿರುಸಾದ, ದಯಾರಹಿತವಾದ ಮಾತುಗಳು ಮತ್ತು ಕೀಳಾದ ಉಪಚಾರವನ್ನು ಪಡೆಯುವುದು ಅಸಾಮಾನ್ಯವಾದ ವಿಷಯವಲ್ಲ. ವಾರ್ತಾಪತ್ರಿಕೆಯ ಅತಿಭಯಂಕರವಾದ ತಲೆಬರಹಗಳಲ್ಲಿ ಮತ್ತು ಭಾವೋದ್ರೇಕಕಾರಿ ಟಿವಿ ಪ್ರದರ್ಶನಗಳಲ್ಲಿ ಈ ರೀತಿಯ ದುರುಪಚಾರವು ಎತ್ತಿಹೇಳಲ್ಪಡುವುದಿಲ್ಲ. ಹಾನಿಯು ದೃಶ್ಯವಾಗಿರುವುದಿಲ್ಲ. ಆದರೆ ಹೆತ್ತವರು ತಮ್ಮ ಮಕ್ಕಳನ್ನು ದಿನಂಪ್ರತಿ ಇಂತಹ ರೀತಿಗಳಲ್ಲಿ ದುರುಪಚರಿಸಿದರೆ, ಪರಿಣಾಮಗಳು ವಿನಾಶಕರವಾಗಿರಬಹುದು—ಮತ್ತು ಜೀವನಾದ್ಯಂತ ಉಳಿಯಬಹುದು.
ಐದು ವರ್ಷ ಪ್ರಾಯದ ಮಕ್ಕಳ ಒಂದು ಗುಂಪಿನ ಮೇಲೆ ಪ್ರಯೋಗಿಸಲಾದ ಜನ್ಮದಾತೃತನದ ಅಭ್ಯಾಸಗಳನ್ನು ಪರೀಕ್ಷಿಸಿದ—1951ರ ಅಧ್ಯಯನವನ್ನು ಪ್ರಸ್ತಾವಿಸಿ ಮಾಡಿದ—1990ರ ಅಧ್ಯಯನವನ್ನು ಪರಿಗಣಿಸಿರಿ. ಅವರನ್ನು ಬೆಳೆಸಿದ ರೀತಿಯಿಂದಾದ ದೀರ್ಘಕಾಲದ ಪರಿಣಾಮಗಳ ಕುರಿತು ಒಳನೋಟವನ್ನು ಪಡೆಯಲು, ಈಗ ಮಧ್ಯ ವಯಸ್ಕರಾಗಿರುವ ಈ ಮಕ್ಕಳಲ್ಲಿ ಅನೇಕರನ್ನು ಪತ್ತೆಹಚ್ಚಲು ಸಂಶೋಧಕರು ಶಕ್ತರಾದರು. ತದನಂತರದ ಜೀವಿತದಲ್ಲಿ ಅತೀ ಕಠಿನ ಸಮಯವನ್ನು ಎದುರಿಸಿದ, ಮಾನಸಿಕ ಕ್ಷೇಮದ ಕೊರತೆಯನ್ನು ಅನುಭವಿಸಿದ, ಮತ್ತು ಮದುವೆಯ ಜೀವಿತದಲ್ಲಿ, ಸ್ನೇಹಿತರೊಂದಿಗೆ, ಹಾಗೂ ಕೆಲಸದ ಸ್ಥಳದಲ್ಲಿ ಸಹ ಕಠಿನ ಸಮಯವನ್ನು ಅನುಭವಿಸಿದ ಜನರು, ಅನಿವಾರ್ಯವಾಗಿ ಬಡ ಅಥವಾ ಐಶ್ವರ್ಯವಂತ ಅಥವಾ ತೊಂದರೆಗೊಳಗಾಗಿದ್ದ ಹೆತ್ತವರ ಮಕ್ಕಳಾಗಿರಲಿಲ್ಲ ಎಂಬುದಾಗಿ ಈ ಹೊಸ ಅಧ್ಯಯನವು ನಿರ್ಧರಿಸಿತು. ಇವರು, ಅನ್ಯೋನ್ಯವಲ್ಲದ ಹಾಗೂ ಭಾವಶೂನ್ಯವಾದ ಮತ್ತು ಸ್ವಲ್ಪವೇ ವಾತ್ಸಲ್ಯವನ್ನು ತೋರಿಸಿದ ಅಥವಾ ವಾತ್ಸಲ್ಯವನ್ನೇ ತೋರಿಸದ ಹೆತ್ತವರ ಮಕ್ಕಳಾಗಿದ್ದರು.
ಈ ಕಂಡುಹಿಡಿಯುವಿಕೆಯು, ಸುಮಾರು 2,000 ವರ್ಷಗಳ ಹಿಂದೆ ಬರೆದಿಡಲ್ಪಟ್ಟಿದ್ದ ಸತ್ಯದ ಕೇವಲ ಕೀಳ್ತರದ ಪ್ರತಿಬಿಂಬವಾಗಿದೆ: “ತಂದೆಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಅವರಿಗೆ ಮನಗುಂದಿಸಬೇಡಿರಿ.” (ಕೊಲೊಸ್ಸೆ 3:21) ನಿಶ್ಚಯವಾಗಿ, ಹೆತ್ತವರಿಂದ ಮೌಖಿಕ ಮತ್ತು ಭಾವನಾತ್ಮಕ ದುರುಪಯೋಗವು ಮಕ್ಕಳನ್ನು ಕೆಣಕುತ್ತದೆ ಮತ್ತು ಪರಿಣಾಮವಾಗಿ ಅವರು ಮನಗುಂದಿದವರಾಗುವಂತೆ ಮಾಡಸಾಧ್ಯವಿದೆ.
ದುಃಖಿತರಾಗಿ ಬೆಳೆಯುವುದು (ಇಂಗ್ಲಿಷ್) ಎಂಬ ಪುಸ್ತಕಕ್ಕನುಸಾರ, ಬಾಲ್ಯಾವಸ್ಥೆಯ ಖಿನ್ನತೆ ಎಂಬಂತಹ ಒಂದು ವಿಷಯವಿಲ್ಲ ಎಂಬುದಾಗಿ ಇತ್ತೀಚಿನ ವರೆಗೆ ವೈದ್ಯರು ನೆನಸುತ್ತಿದ್ದರು. ಆದರೆ ಸಮಯ ಮತ್ತು ಅನುಭವವು ಅದಕ್ಕೆ ವ್ಯತಿರಿಕ್ತವಾದುದನ್ನು ರುಜುಪಡಿಸಿದೆ. ಇಂದು ಬಾಲ್ಯಾವಸ್ಥೆಯ ಖಿನ್ನತೆಯನ್ನು ಅಂಗೀಕರಿಸಲಾಗಿದೆ ಮತ್ತು ಅದು ಅಸಾಮಾನ್ಯವಾದ ವಿಷಯವಲ್ಲ ಎಂದು ಆ ಲೇಖಕರು ದೃಢಪಡಿಸುತ್ತಾರೆ. ಅವುಗಳ ಕಾರಣಗಳಲ್ಲಿ, ಹೆತ್ತವರಿಂದ ತ್ಯಜಿಸುವಿಕೆ ಮತ್ತು ದುರುಪಚಾರವು ಸೇರಿದೆ. ಲೇಖಕರು ವಿವರಿಸುವುದು: “ಕೆಲವು ವಿದ್ಯಮಾನಗಳಲ್ಲಿ ಹೆತ್ತವರು, ಮಗುವನ್ನು ಟೀಕೆ ಮತ್ತು ಅಪಮಾನದ ಸತತವಾದ ಸುರಿಮಳೆಗೆ ಗುರಿಮಾಡಿದ್ದಾರೆ. ಇತರ ವಿದ್ಯಮಾನಗಳಲ್ಲಿ, ಹೆತ್ತವರ ಹಾಗೂ ಮಕ್ಕಳ ಸಂಬಂಧದಲ್ಲಿ ಕೇವಲ ಒಂದು ಶೂನ್ಯವಿದೆ: ಮಕ್ಕಳ ಕಡೆಗಿನ ಹೆತ್ತವರ ಪ್ರೀತಿಯು ವ್ಯಕ್ತಗೊಳಿಸಲ್ಪಡುವುದಿಲ್ಲ. . . . ಇಂತಹ ಹೆತ್ತವರ ಮಕ್ಕಳಿಗೆ ಫಲಿತಾಂಶವು ನಿರ್ದಿಷ್ಟವಾಗಿ ಗಂಡಾಂತರದ್ದಾಗಿರುತ್ತದೆ. ಏಕೆಂದರೆ ಒಂದು ಗಿಡಕ್ಕೆ ಸೂರ್ಯಕಿರಣ ಮತ್ತು ನೀರು ಎಷ್ಟು ಅತ್ಯಗತ್ಯವಾಗಿದೆಯೊ, ಮಗುವಿಗೆ—ಅಥವಾ ಈ ವಿಷಯದಲ್ಲಿ ಒಬ್ಬ ಪ್ರಾಯಸ್ಥನಿಗೆ—ಪ್ರೀತಿಯು ಅಷ್ಟೇ ಅತ್ಯಗತ್ಯವಾಗಿದೆ.”
ಸ್ಪಷ್ಟವಾಗಿ ಮತ್ತು ಬಹಿರಂಗವಾಗಿ ವ್ಯಕ್ತಪಡಿಸುವಲ್ಲಿ ಹೆತ್ತವರ ಪ್ರೀತಿಯ ಮೂಲಕ ಮಕ್ಕಳು, ತಾವು ಪ್ರೀತಿಯೋಗ್ಯರು, ತಮಗೆ ಬೆಲೆಯಿದೆ ಎಂಬ ಒಂದು ಪ್ರಾಮುಖ್ಯ ಸತ್ಯವನ್ನು ಕಲಿಯುತ್ತಾರೆ. ಅನೇಕರು ಈ ಕಲ್ಪನೆಯನ್ನು ದುರಹಂಕಾರದ—ಇತರರಿಗಿಂತ ಹೆಚ್ಚಾಗಿ ತಮ್ಮನ್ನು ಪ್ರೀತಿಸಿಕೊಳ್ಳುವುದು—ಒಂದು ರೂಪವಾಗಿ ತಪ್ಪಾಗಿ ತಿಳಿಯುತ್ತಾರೆ. ಆದರೆ ಈ ಪೂರ್ವಾಪರದಲ್ಲಿ, ಇದರ ಅರ್ಥ ಅದಲ್ಲ. ಒಬ್ಬಾಕೆ ಲೇಖಕಿ ತನ್ನ ಪುಸ್ತಕದಲ್ಲಿ ಈ ವಿಷಯದ ಕುರಿತು ಹೇಳುವುದು: “ನಿಮ್ಮ ಮಗುವಿಗೆ ಸ್ವತಃ ಅವನ ಕುರಿತಾಗಿರುವ ಅಭಿಪ್ರಾಯವು, ಅವನು ಯಾವ ರೀತಿಯ ಗೆಳೆಯರನ್ನು ಆರಿಸಿಕೊಳ್ಳುತ್ತಾನೆ, ಇತರರೊಂದಿಗೆ ಅವನು ಯಾವ ರೀತಿಯಲ್ಲಿ ಹೊಂದಿಕೊಂಡುಹೋಗುತ್ತಾನೆ, ಯಾವ ರೀತಿಯ ವ್ಯಕ್ತಿಯನ್ನು ಅವನು ಮದುವೆಯಾಗುತ್ತಾನೆ, ಮತ್ತು ಅವನು ಎಷ್ಟು ಫಲದಾಯಕವಾಗಿರುತ್ತಾನೆ ಎಂಬ ವಿಷಯಗಳನ್ನು ಪ್ರಭಾವಿಸುತ್ತದೆ.” “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು,” (ಓರೆಅಕ್ಷರಗಳು ನಮ್ಮವು.) ಎಂಬುದನ್ನು ಅತ್ಯಂತ ಮಹಾನ್ ಆಜ್ಞೆಗಳಲ್ಲಿ ಎರಡನೆಯ ಆಜ್ಞೆಯಾಗಿ ಪಟ್ಟಿಮಾಡಿದಾಗ, ನಮ್ಮ ಕುರಿತು ಸಮತೂಕದ, ನಿಸ್ವಾರ್ಥತೆಯ ವೀಕ್ಷಣೆ ಇರುವುದು ಎಷ್ಟು ಪ್ರಾಮುಖ್ಯ ಎಂಬುದನ್ನು ಬೈಬಲ್ ಅಂಗೀಕರಿಸುತ್ತದೆ.—ಮತ್ತಾಯ 22:38, 39.
ಮಗುವಿನ ಸ್ವಯೋಗ್ಯತೆಯಂತಹ ಪ್ರಾಮುಖ್ಯ ಮತ್ತು ಸೂಕ್ಷ್ಮವಾದ ವಿಷಯವನ್ನು ಯಾವನೇ ಹೆತ್ತವನು ನುಚ್ಚುನೂರು ಮಾಡಬಯಸುತ್ತಾನೆ ಎಂಬುದನ್ನು ಕಲ್ಪಿಸಿಕೊಳ್ಳುವುದು ಕಷ್ಟಕರವಾಗಿದೆ. ಹಾಗಾದರೆ, ಇದು ಅನೇಕವೇಳೆ ಏಕೆ ಸಂಭವಿಸುತ್ತದೆ? ಮತ್ತು ಇದನ್ನು ಹೇಗೆ ತಡೆಗಟ್ಟಸಾಧ್ಯವಿದೆ?
[ಅಧ್ಯಯನ ಪ್ರಶ್ನೆಗಳು]
ಜಪಾನಿ ಭಾಷೆಯಲ್ಲಿ, ನೊರೋಮ ಬಾಕಾ!