“ಅವನು ಎಂದಾದರೂ ಓದಿದ ಪುಸ್ತಕಗಳಲ್ಲಿ ಅದು ಪ್ರಥಮ ಪುಸ್ತಕವಾಗಿತ್ತು”
ಯೂಕ್ರೇನ್ನಲ್ಲಿರುವ ಯೆಹೋವನ ಸಾಕ್ಷಿಗಳು, ರೈಲುಗಾಡಿಗಳಿಗಾಗಿ ಕಾಯುತ್ತಿರುವವರೊಂದಿಗೆ ಅನೇಕ ವೇಳೆ ಮಾತಾಡುತ್ತಾರೆ. ಬೈಬಲ್ನಲ್ಲಿ ಆಸಕ್ತಿಯನ್ನು ತೋರಿಸಿದ ಒಬ್ಬಾಕೆ ಸ್ತ್ರೀಗೆ, ಬೈಬಲ್ ಕಥೆಗಳ ನನ್ನ ಪುಸ್ತಕ (ಇಂಗ್ಲಿಷ್) ಎಂಬ ಪುಸ್ತಕದ ಒಂದು ಪ್ರತಿಯನ್ನು ಕೊಡಲಾಯಿತು. ಈ ಪ್ರಕಾಶನವು, ಬೈಬಲಿನ ಕಾಲಾನುಕ್ರಮವಾದ ಇತಿಹಾಸದೊಂದಿಗೆ ಅನೇಕ ಚಿತ್ರಗಳನ್ನು ಉಪಯೋಗಿಸುತ್ತದೆ.
ತದನಂತರ, ಅದೇ ನಿಲ್ದಾಣದಲ್ಲಿ, ಆ ಸ್ತ್ರೀಯು ಸಾಕ್ಷಿಯನ್ನು ಪುನಃ ಕಂಡು, ಪುಸ್ತಕಕ್ಕಾಗಿ ಅವಳಿಗೆ ಉಪಕಾರ ಸಲ್ಲಿಸಿದಳು. ಅವಳು ವಿವರಿಸಿದ್ದು: “ನನ್ನ ಮಗನು ತನ್ನ ಶಾಲಾಪುಸ್ತಕಗಳ ಅಧ್ಯಯನಮಾಡುವುದನ್ನು ಇಷ್ಟಪಡುತ್ತಿರಲಿಲ್ಲ. ಅವನು ಅವುಗಳನ್ನು ಓದುವುದೂ ಇಲ್ಲ. ಆದರೆ ನಾನು ಅವನಿಗೆ ಬೈಬಲ್ ಕಥೆಗಳ ಪುಸ್ತಕವನ್ನು ಕೊಟ್ಟಾಗ, ಅವನು ಚಿತ್ರಗಳನ್ನು ನೋಡಿದನು ಮತ್ತು ಅದನ್ನು ಓದುವ ಬಲವಾದ ಬಯಕೆ ಅವನಲ್ಲಿತ್ತು. ಅವನು ಇಡೀ ಪುಸ್ತಕವನ್ನು ಸುಮಾರು ಎರಡು ವಾರಗಳೊಳಗೆ ಓದಿದನು. ಅವನು ಎಂದಾದರೂ ಓದಿದ ಪುಸ್ತಕಗಳಲ್ಲಿ ಅದು ಪ್ರಥಮ ಪುಸ್ತಕವಾಗಿತ್ತು. ಆದರೆ ಎಲ್ಲಕ್ಕಿಂತಲೂ ಮಿಗಿಲಾಗಿ, ದೇವರ ಪರಿಚಯವಾದುದಕ್ಕೆ ಅವನು ಹರ್ಷಿಸಿದನು. ಮತ್ತು ಅವನಲ್ಲಿನ ಈ ಬದಲಾವಣೆಗಳನ್ನು ನೋಡಿ ನಾನು ಕೂಡ ಹರ್ಷಿಸುತ್ತಾ ಇದ್ದೇನೆ. ಓದಲು ಇನ್ನು ಹೆಚ್ಚಿನದ್ದನ್ನು ನನಗೆ ದಯವಿಟ್ಟು ಕೊಡಿರಿ.”
ಹತ್ತಿರದಲ್ಲೇ ನಿಂತಿದ್ದ ಮತ್ತೊಬ್ಬ ಸ್ತ್ರೀಯು, ಈ ಕಥೆಯನ್ನು ಕೇಳಿದಳು. ಬೈಬಲ್ ಕಥೆಗಳ ನನ್ನ ಪುಸ್ತಕವನ್ನು ತಾನು ಪಡೆಯಸಾಧ್ಯವಿತ್ತೊ ಎಂದು ಅವಳು ಕೇಳಿದಳು. ನೀವು ಈ 256-ಪುಟದ ಪುಸ್ತಕದ ಒಂದು ಪ್ರತಿಯನ್ನು ಪಡೆದುಕೊಳ್ಳಬಲ್ಲಿರಿ ಇಲ್ಲವೆ ಬೈಬಲ್ ಶಿಕ್ಷಣದ ಮಹತ್ವವನ್ನು ನಿಮ್ಮೊಂದಿಗೆ ಚರ್ಚಿಸಲು ನಿಮ್ಮ ಮನೆಗೆ ಯಾರಾದರೂ ಭೇಟಿ ನೀಡಬಲ್ಲರು. ಅದಕ್ಕಾಗಿ ನೀವು Watch Tower, H-58, Old Khandala Road, Lonavla 410 401, Mah., India, ಇವರಿಗೆ, ಅಥವಾ 5ನೆಯ ಪುಟದಲ್ಲಿ ಕೊಡಲ್ಪಟ್ಟ ತಕ್ಕದ್ದಾದ ವಿಳಾಸಕ್ಕೆ ಬರೆಯಿರಿ.