‘ಅವು ನಮ್ಮ ಹೊರನೋಟವನ್ನು ವಿಶಾಲಗೊಳಿಸುತ್ತವೆ’
ಸೋವಿಯಟ್ ಒಕ್ಕೂಟದ ಹಿಂದಿನ ಗಣರಾಜ್ಯವಾಗಿದ್ದ ಕಿರ್ಗಿಸ್ಸ್ತಾನ್ನಲ್ಲಿರುವ, ಕಾರಾಕೂಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ವಿದೇಶಿ ಭಾಷೆಗಳ ಇಲಾಖೆಯ ಮುಖ್ಯಸ್ಥರು, ಯೆಹೋವನ ಸಾಕ್ಷಿಗಳ ಪ್ರಕಾಶನಗಳನ್ನು ಹೊಗಳಿದರು. ರಷ್ಯದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿಗೆ ಅವರು ಹೀಗೆ ಬರೆದರು:
“ಇಂದಿನ ಸಾಮಾಜಿಕ ಹಾಗೂ ಆರ್ಥಿಕ ಗೊಂದಲದಲ್ಲಿ, ಇಂಗ್ಲಿಷ್, ಜರ್ಮನ್, ರಷ್ಯನ್, ಕಿರ್ಗಿಸ್, ಮತ್ತು ತುರ್ಕಿ ಭಾಷೆಗಳನ್ನು ಕಲಿಸುವುದರಲ್ಲಿ, ನಿಮ್ಮ ಪುಸ್ತಕಗಳು ಹಾಗೂ ಬ್ರೋಷರುಗಳು ನಮಗೆ ಬಹಳಷ್ಟು ಸಹಾಯ ಮಾಡಿವೆ. . . . ಪ್ರಾಯೋಗಿಕ ಭಾಷಾಂತರವನ್ನು ಕಲಿಯುವವರಲ್ಲಿ, ನಿಮ್ಮ ಬ್ರೋಷರುಗಳಿಗೆ ಜನಪ್ರಿಯ ಗಿರಾಕಿ ಇದೆ. . . . ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೊ ಸೃಷ್ಟಿಯಿಂದಲೊ?, ಕುಟುಂಬ ಸಂತೋಷದ ರಹಸ್ಯ, ಮತ್ತು ಯುವ ಜನರು ಕೇಳುವ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು, ಎಂಬ ಪುಸ್ತಕಗಳಿಗಾಗಿ ನಿಮಗೆ ಉಪಕಾರ.
“ನಮ್ಮ ವಿದ್ಯಾರ್ಥಿಗಳಲ್ಲಿ ಅನೇಕರು ಯೆಹೋವನ ಸಾಕ್ಷಿಗಳಾಗಿದ್ದಾರೆ. ಅವರು ಎಚ್ಚರ! ಪತ್ರಿಕೆಯ ಲೇಖನಗಳನ್ನು ಆಸಕ್ತಿಯಿಂದ ಓದುತ್ತಾರೆ ಮತ್ತು ಶಾಲಾ ಮನೆಗೆಲಸದಲ್ಲಿ ಅವುಗಳನ್ನು ಉಪಯೋಗಿಸುತ್ತಾರೆ.”
ಈ ಬರಹಗಾರನು ವಿಶೇಷವಾಗಿ ಎಚ್ಚರ! ಪತ್ರಿಕೆಯನ್ನು ಪ್ರಶಂಸಿಸಿದನು: “ಆಸಕ್ತಿಕರ ಹಾಗೂ ಬೋಧಪ್ರದವಾದ ಲೇಖನಗಳಿಗಾಗಿ ನಿಮಗೆ ಉಪಕಾರ. . . . ಅವು ನಮ್ಮಲ್ಲಿ ನಿರೀಕ್ಷೆಯನ್ನು ಹುಟ್ಟಿಸಿ, ನಮ್ಮ ಸಾಮಾನ್ಯ ಹೊರನೋಟವನ್ನು ವಿಶಾಲಗೊಳಿಸುತ್ತವೆ. . . . ನಮ್ಮಲ್ಲಿ ಎಲ್ಲರೂ ಎಚ್ಚರ! ಪತ್ರಿಕೆಯಲ್ಲಿರುವ ‘ಜಗತ್ತನ್ನು ಗಮನಿಸುವುದು’ ಎಂಬ ವಿಭಾಗವನ್ನು ಆನಂದದಿಂದ ಓದುತ್ತೇವೆ.”
ನಿಮಗೆ ಎಚ್ಚರ! ಪತ್ರಿಕೆಯ ಒಂದು ಪ್ರತಿ ಬೇಕಿದ್ದರೆ, ಇಲ್ಲವೆ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ನಿಮ್ಮೊಂದಿಗೆ ಬೈಬಲನ್ನು ಚರ್ಚಿಸಲು ನಿಮ್ಮ ಮನೆಯಲ್ಲಿ ನಿಮ್ಮನ್ನು ಭೇಟಿಮಾಡುವಂತೆ ನೀವು ಬಯಸುವುದಾದರೆ, Praharidurg Prakashan Society, Plot A/35, Nr Industrial Estate, Nangargaon, Lonavla 410 401, Mah., India, ಇವರಿಗೆ, ಅಥವಾ 5ನೆಯ ಪುಟದಲ್ಲಿ ಕೊಡಲ್ಪಟ್ಟ ತಕ್ಕದ್ದಾದ ವಿಳಾಸಕ್ಕೆ ಬರೆಯಿರಿ.