“ಎಚ್ಚರ! ಪತ್ರಿಕೆಯಲ್ಲಿ ಸಂಪೂರ್ಣ ಮಾಹಿತಿಯು ದೊರಕುತ್ತದೆ”
ಈ ಮೇಲಿನ ಹೇಳಿಕೆಯು, ಆಫ್ರಿಕ ದೇಶದ ನೈಜೀರಿಯದಲ್ಲಿರುವ, ಬೆನಿನ್ ಸಿಟಿಯ 16 ವರ್ಷ ಪ್ರಾಯದ ಒಬ್ಬ ಮುಸ್ಲಿಮ್ ಹುಡುಗನದ್ದಾಗಿದೆ. ನೈಜೀರಿಯದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿಗೆ ಬರೆದ ಒಂದು ಪತ್ರದಲ್ಲಿ ಅವನು ಹೀಗೆ ವಿವರಿಸಿದನು:
“ನನ್ನ ಸ್ನೇಹಿತನ ಮನೆಯಲ್ಲಿ ನಾನು ಎಚ್ಚರ! ಪತ್ರಿಕೆಯನ್ನು ನೋಡಿದೆ ಮತ್ತು ಅದರ ಒಂಬತ್ತು ಸಂಚಿಕೆಗಳನ್ನು ಅವನಿಂದ ತೆಗೆದುಕೊಂಡು ಬಂದೆ. ಒಂದೇ ದಿನದಲ್ಲಿ ನಾನು ಆ ಪತ್ರಿಕೆಗಳನ್ನೆಲ್ಲ—ಮೊದಲ ಪುಟದಿಂದ ಕೊನೆಯ ಪುಟದ ವರೆಗೆ—ಓದಿಮುಗಿಸಿದೆ! ಯೆಹೋವನನ್ನು ಮತ್ತು ಎಚ್ಚರ! ಪತ್ರಿಕೆಯ ಹಿಂದಿರುವ ಎಲ್ಲ ಬುದ್ಧಿಶಕ್ತಿಯನ್ನು ಪ್ರಶಂಸಿಸುತ್ತಾ ನಾನು ಪತ್ರ ಬರೆಯುತ್ತಿದ್ದೇನೆ—ಖಂಡಿತವಾಗಿಯೂ ಇದು ಅತ್ಯುತ್ತಮವಾದ ಕೆಲಸವೇ ಸರಿ! ಪರಿಸರ ಸಂಬಂಧಿತ ವಿಷಯಗಳನ್ನು, ನೀವು ಬೈಬಲಿನೊಂದಿಗೆ ಹಾಗೂ ದೇವರೊಂದಿಗೆ ಜೋಡಿಸುವ ವಿಧದಿಂದ ನಾನು ವಿಶೇಷವಾಗಿ ಪ್ರಭಾವಿತನಾಗಿದ್ದೇನೆ. ನೈಜೀರಿಯದ ಸಂರಕ್ಷಣಾ ಸಂಸ್ಥೆಯಲ್ಲಿ ನಾನು ಒಬ್ಬ ಸದಸ್ಯನಾಗಿದ್ದು, ಪರಿಸರ ಸಂಬಂಧಿತ ವಿಷಯದ ಕುರಿತು ಹಾಗೂ ಪ್ರಕೃತಿಯ ಕುರಿತು ನನ್ನ ಸ್ವಂತ ಗ್ರಂಥಾಲಯವನ್ನು ಸ್ಥಾಪಿಸಲಿಕ್ಕಾಗಿ ನಾನು ಮಾಹಿತಿಯನ್ನು ಸಂಗ್ರಹಿಸುತ್ತಿದ್ದೆ. ಎಚ್ಚರ! ಪತ್ರಿಕೆಯಲ್ಲಿ ಸಂಪೂರ್ಣ ಮಾಹಿತಿಯು ದೊರಕುತ್ತದೆ ಎಂಬುದು ನನಗೆ ಈಗ ಗೊತ್ತಾಗಿದೆ. ಪ್ರತಿ ತಿಂಗಳು ನೇರವಾಗಿ ನಿಮ್ಮಿಂದ ಎಚ್ಚರ! ಪತ್ರಿಕೆಯ ಎರಡು ಸಂಚಿಕೆಗಳನ್ನು ಪಡೆದುಕೊಳ್ಳುವ ವಿಧಾನವನ್ನು ದಯವಿಟ್ಟು ನನಗೆ ತಿಳಿಯಪಡಿಸಿರಿ.”
ನೀವು ಎಚ್ಚರ! ಪತ್ರಿಕೆಯ ಪ್ರತಿಯನ್ನು ಇದೇ ಮೊದಲ ಬಾರಿ ನೋಡುತ್ತಿರಬಹುದು. ಇದಕ್ಕೆ ಮೊದಲು ನೀವು ಅದನ್ನು ಎಂದೂ ಓದಿಲ್ಲದಿರಬಹುದು. ನೀವು ಇನ್ನೊಂದು ಪ್ರತಿಯನ್ನು ಪಡೆದುಕೊಳ್ಳಲು ಇಷ್ಟಪಡುವಲ್ಲಿ, Praharidurg Prakashan Society, Plot A/35, Nr Industrial Estate, Nangargaon, Lonavla 410 401, Mah., India, ಎಂಬ ವಿಳಾಸಕ್ಕೆ ಬರೆಯುವ ಪತ್ರವೊಂದರಲ್ಲಿ ಇಂಥ ಒಂದು ಕೋರಿಕೆಯನ್ನು ತಿಳಿಯಪಡಿಸಿರಿ, ಅಥವಾ 5ನೇ ಪುಟದಲ್ಲಿ ಕೊಡಲ್ಪಟ್ಟಿರುವ ತಕ್ಕದಾದ ವಿಳಾಸಕ್ಕೆ ಪತ್ರ ಬರೆಯಿರಿ. ಮತ್ತೊಂದು ಪ್ರತಿಯನ್ನು ಅಂಚೆಯ ಮೂಲಕ ರವಾನಿಸಲು ಇಲ್ಲವೇ ನಾವು ಜೀವಿಸುವ ಸಮಯಗಳ ಮಹತ್ವವನ್ನು ಪರಿಗಣಿಸಲು ನಿಮ್ಮ ಮನೆಗೆ ಯಾರಾದರೂ ಭೇಟಿನೀಡುವಂತೆ ನೀವು ಕೇಳಿಕೊಳ್ಳುವುದಾದರೆ, ಅದನ್ನು ಏರ್ಪಡಿಸಲು ನಾವು ಸಂತೋಷಿಸುತ್ತೇವೆ.
□ ಎಚ್ಚರ! ಪತ್ರಿಕೆಯ ಸದ್ಯದ ಪ್ರತಿಯನ್ನು ನನಗೆ ಕಳುಹಿಸಿರಿ.
□ ಉಚಿತ ಗೃಹ ಬೈಬಲ್ ಅಭ್ಯಾಸಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿರಿ
[ಪುಟ 43 ರಲ್ಲಿರುವ ಚಿತ್ರ ಕೃಪೆ]
ಗ್ಲೋಬ್: Courtesy of Replogle Globes, Inc.