ಭಾರತ ಮತ್ತು ಚೀನಾ ಇವುಗಳಿಗೆ ಹೊಗೆಸೊಪ್ಪಿನಿಂದ ಕೆಡುಕಿನ ಬೆದರಿಕೆ
ಭಾರತದ ಎಚ್ಚರ! ಸುದ್ದಿಗಾರರಿಂದ
ಪಾಶ್ಚಿಮಾತ್ಯ ದೇಶಗಳಲ್ಲಿ ಹೊಗೆಸೊಪ್ಪಿನ ಕುರಿತಾದ ಜಾಹೀರಾತಿನ ಮೇಲೆ ಹೆಚ್ಚೆಚ್ಚು ಕಡಿವಾಣಗಳು ಬೀಳುತ್ತಿರುವಂತೆ ಮತ್ತು ಸಿಗರೇಟ್ ಸೇವನೆಯಿಂದಾಗುವ ಆರೋಗ್ಯ ಹಾನಿಯ ಕುರಿತು ಶಿಕ್ಷಣವು ಹಬ್ಬುತ್ತಿರುವಂತೆ, ದೊಡ್ಡ ದೊಡ್ಡ ಹೊಗೆಸೊಪ್ಪಿನ ಕಂಪನಿಗಳು ತಮ್ಮ ಉತ್ಪಾದನೆಗಳನ್ನು ಮಾರಲಿಕ್ಕಾಗಿ ಪೂರ್ವದೇಶಗಳ ಕಡೆಗೆ ತಿರುಗಿವೆ. ಹಣಸಹಾಯವನ್ನು ಒದಗಿಸಿರುವ ವಿಶ್ವ ಬ್ಯಾಂಕ್ನ ಅಧ್ಯಯನಗಳು ಮುಂತಿಳಿಸುವುದೇನೆಂದರೆ, ಇಸವಿ 2010ರಷ್ಟಕ್ಕೆ ಚೀನಾದಲ್ಲಿ ವಾರ್ಷಿಕವಾಗಿ ಸುಮಾರು ಒಂದು ಮಿಲಿಯದಷ್ಟು ಜನರು ಅಸುನೀಗುವರು. 29 ವರ್ಷ ಪ್ರಾಯಕ್ಕಿಂತಲೂ ಕಡಿಮೆ ಪ್ರಾಯದ ಸುಮಾರು 10 ಕೋಟಿಯಷ್ಟು ಚೀನಿಯರು ಧೂಮಪಾನದಿಂದ ಮೃತರಾಗುವರು ಎಂದು ಬ್ರಿಟಿಷ್ ಮೆಡಿಕಲ್ ಜರ್ನಲ್ ಹೇಳಿತು.
ಚೀನಾದೊಂದಿಗೆ ಭಾರತದ ಹೆಚ್ಚುಕಡಿಮೆ ದಶಕೋಟಿ ಜನರು “ತ್ವರಿತಗತಿಯಲ್ಲಿ ಹೆಚ್ಚುತ್ತಿರುವ ಹೊಗೆಸೊಪ್ಪಿಗೆ ಸಂಬಂಧಿಸಿದ ರೋಗಗಳಿಗೆ” ತುತ್ತಾಗುವರು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಕಲ್ಪಿಸುತ್ತದೆ. ಸುಮಾರು 2 ಕೋಟಿ ಮಕ್ಕಳು ಪ್ರತಿ ವರ್ಷ ಧೂಮಪಾನಮಾಡಲು ಆರಂಭಿಸುತ್ತಾರೆ ಎಂದು ವರದಿಗಳು ಹೇಳುತ್ತವೆ. ದಕ್ಷಿಣ ಭಾರತದ ಒಬ್ಬ ವ್ಯಕ್ತಿಯು ಅನೇಕ ವರ್ಷಗಳಿಂದ ಒಂದರ ಮೇಲೊಂದರಂತೆ ಸಿಗರೇಟುಗಳನ್ನು ಸೇದುತ್ತಿದ್ದನು. ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡಲು ಅವನಿಗೆ ಸಹಾಯಮಾಡಿದ ಎಚ್ಚರ! ಪತ್ರಿಕೆಯ ಲೇಖನಕ್ಕಾಗಿ ಆ ಪತ್ರಿಕೆಯ ಸಂಪಾದಕರಿಗೆ ಅವನು ಪತ್ರವನ್ನು ಬರೆದನು. ಜನವರಿ 8, 1999ರ ಸಂಚಿಕೆಯಲ್ಲಿ ಮೂಡಿಬಂದ “ನಾವು ಬಿಟ್ಟುಬಿಟ್ಟೆವು—ನೀವು ಸಹ ಬಿಟ್ಟುಬಿಡಸಾಧ್ಯವಿದೆ!” ಎಂಬುದು ಆ ಲೇಖನವಾಗಿತ್ತು.
ಧೂಮಪಾನವನ್ನು ನಿಲ್ಲಿಸಲಿಕ್ಕಾಗಿ ನೀವು ಯಾವ ಕಾರಣಗಳನ್ನು ಕೊಡುವಿರಿ? ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ 32 ಪುಟಗಳ ಬ್ರೋಷರಿನ 25ನೇ ಪುಟದಲ್ಲಿ ಕೆಲವು ಆಲೋಚನಾಪ್ರೇರಕ ಕಾರಣಗಳಿವೆ. ಈ 32 ಪುಟಗಳ ಬ್ರೋಷರಿನ ಕುರಿತು ಹೆಚ್ಚಿನ ಮಾಹಿತಿಯನ್ನು ನೀವು ಬಯಸುವಲ್ಲಿ, ಇದರ ಜೊತೆಯಲ್ಲಿರುವ ಕೂಪನನ್ನು ಭರ್ತಿಮಾಡಿ, ಈ ಕೆಳಗೆ ನೀಡಲ್ಪಟ್ಟಿರುವ ವಿಳಾಸಕ್ಕೆ ಅಥವಾ ಈ ಪತ್ರಿಕೆಯ 5ನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ಸೂಕ್ತವಾದ ವಿಳಾಸಕ್ಕೆ ದಯವಿಟ್ಟು ಅಂಚೆಯ ಮೂಲಕ ಕಳುಹಿಸಿರಿ.
□ ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರಿನ ಕುರಿತು ಹೆಚ್ಚಿನ ಮಾಹಿತಿಯನ್ನು ನನಗೆ ಕಳುಹಿಸಿರಿ.
□ ಒಂದು ಉಚಿತ ಗೃಹ ಬೈಬಲ್ ಅಭ್ಯಾಸಕ್ಕಾಗಿ ನನ್ನನ್ನು ಸಂಪರ್ಕಿಸಿರಿ.