ಲೋಕವ್ಯಾಪಕ ಐಕ್ಯ ಕೇವಲ ಒಂದು ಕನಸಲ್ಲ
ಭಾರತದ ಕೇರಳ ರಾಜ್ಯದ ಒಬ್ಬ ವ್ಯಕ್ತಿಯು ಈ ಪತ್ರಿಕೆಯ ಪ್ರಕಾಶಕರಿಗೆ ಬರೆದುದು: “ಬೇರೆ ಎಲ್ಲ ಪತ್ರಿಕೆಗಳಿಗೆ ಹೋಲಿಸುವಾಗ ನಿಮ್ಮ ಎಚ್ಚರ! ಪತ್ರಿಕೆಯು ನಿಶ್ಚಯವಾಗಿಯೂ ಎದ್ದುಕಾಣುವಂತಹದ್ದಾಗಿದೆ. ಈ ಪತ್ರಿಕೆಯಲ್ಲಿ ಚರ್ಚಿಸಲ್ಪಡದಿರುವಂತಹ ವಿಷಯವೇ ಇಲ್ಲ ಎಂಬುದು ನನ್ನ ಅನಿಸಿಕೆ. ವಿಶೇಷವಾಗಿ ನಿಸರ್ಗದ ಕುರಿತಾದ ಲೇಖನಗಳನ್ನು ಓದುವುದರಲ್ಲಿ ನಾನು ಆನಂದಿಸಿದ್ದೇನೆ.”
ಎಚ್ಚರ! ಪತ್ರಿಕೆಯು ಒಂದು ನಿರ್ದಿಷ್ಟ ಕಾರಣಕ್ಕಾಗಿ ತನಗೆ ತುಂಬ ಹಿಡಿಸಿತೆಂದು ಹೇಳುತ್ತಾ, ಆ ವ್ಯಕ್ತಿಯು ವಿವರಿಸಿದ್ದು: “ಬೇರೆ ಬೇರೆ ರಾಷ್ಟ್ರಗಳ ಜನರು ತಮ್ಮನ್ನು ಸಹೋದರರನ್ನಾಗಿ ಪರಿಗಣಿಸುವಂತೆ ಸಹಾಯಮಾಡುವುದರಲ್ಲಿ ಎಚ್ಚರ! ಪತ್ರಿಕೆಗೆ ಸರಿಸಮಾನವಾದ ಬೇರೊಂದು ಪತ್ರಿಕೆಯಿದೆ ಎಂದು ನನಗನಿಸುವುದಿಲ್ಲ. ಎಚ್ಚರ! ಪತ್ರಿಕೆಯಂತೆ ಬೇರೆ ಯಾವ ಪತ್ರಿಕೆಯೂ ಲೋಕವ್ಯಾಪಕ ಐಕ್ಯವನ್ನು ಉತ್ತೇಜಿಸುವುದಿಲ್ಲ. ನಾನು ಓದುವಂತಹ ಅನೇಕ ಪತ್ರಿಕೆಗಳನ್ನು ಹೋಲಿಸಿ ನೋಡುವಾಗ, ಎಚ್ಚರ! ಪತ್ರಿಕೆಯು ತುಂಬ ಅಮೂಲ್ಯವಾದ ಪತ್ರಿಕೆಯಾಗಿದೆ ಎಂದು ದೃಢನಿಶ್ಚಿತನಾಗಿ ಹೇಳಬಲ್ಲೆ.”
ಎಚ್ಚರ! ಪತ್ರಿಕೆಯ ಕುರಿತಾದ ಈ ವಾಚಕನ ಹೇಳಿಕೆಗಳು, ಈ ಪತ್ರಿಕೆಯ ಪ್ರತಿಯೊಂದು ಸಂಚಿಕೆಯ 4ನೆಯ ಪುಟದಲ್ಲಿ ಕಂಡುಬರುವ ಅದರ ಉದ್ದೇಶವನ್ನು ದೃಢಪಡಿಸುತ್ತವೆ. ಅಲ್ಲಿ ಹೀಗೆ ತಿಳಿಸಲ್ಪಟ್ಟಿದೆ: “ಅದು ರಾಜಕೀಯವಾಗಿ ಯಾವಾಗಲೂ ತಟಸ್ಥವಾಗಿದ್ದು, ಒಂದು ಕುಲವನ್ನು ಇನ್ನೊಂದಕ್ಕಿಂತ ಮೇಲಕ್ಕೇರಿಸುವುದಿಲ್ಲ.” ಹೆಚ್ಚು ಪ್ರಾಮುಖ್ಯವಾಗಿ, ಎಚ್ಚರ! ಪತ್ರಿಕೆಯು ಜೀವಿತದ ಅತ್ಯಗತ್ಯ ಪ್ರಶ್ನೆಗಳಿಗೆ ಉತ್ತರಗಳಿಗಾಗಿ ನಮ್ಮ ಸೃಷ್ಟಿಕರ್ತನ ಕಡೆಗೆ ನೋಡುವಂತೆ ವಾಚಕನನ್ನು ಮಾರ್ಗದರ್ಶಿಸುತ್ತದೆ.
ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ 32 ಪುಟದ ಬ್ರೋಷರ್ ಸಹ ಇದನ್ನೇ ಮಾಡುತ್ತದೆ. ಇದರ 16 ಪಾಠಗಳಲ್ಲಿ, “ದೇವರು ಯಾರು?,” “ಭೂಮಿಗಾಗಿ ದೇವರ ಉದ್ದೇಶವು ಏನು?” ಮತ್ತು “ದೇವರ ರಾಜ್ಯವು ಏನು?” ಎಂಬ ಮೇಲ್ಬರಹಗಳುಳ್ಳ ಪಾಠಗಳು ಇವೆ. ನೀವು ಈ ಬ್ರೋಷರ್ನ ಕುರಿತಾದ ಹೆಚ್ಚಿನ ಮಾಹಿತಿಗಾಗಿ ವಿನಂತಿಸಿಕೊಳ್ಳಬಹುದು. ಇದಕ್ಕಾಗಿ ನೀವು ಇದೇ ಪುಟದಲ್ಲಿರುವ ಕೂಪನ್ ಅನ್ನು ಭರ್ತಿಮಾಡಿ, ಅಂಚೆಯ ಮೂಲಕ ಕೂಪನಿನ ಮೇಲೆ ಕೊಡಲ್ಪಟ್ಟಿರುವ ವಿಳಾಸಕ್ಕೆ ಅಥವಾ ಈ ಪತ್ರಿಕೆಯ ಪುಟ 5ರಲ್ಲಿ ಪಟ್ಟಿಮಾಡಲ್ಪಟ್ಟಿರುವ ತಕ್ಕದಾದ ವಿಳಾಸಕ್ಕೆ ಕಳುಹಿಸಬಹುದು.(g01 7/22)
□ ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರ್ನ ಕುರಿತಾದ ಹೆಚ್ಚಿನ ಮಾಹಿತಿಯನ್ನು ನನಗೆ ಕಳುಹಿಸಿಕೊಡಿ.
□ ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಭ್ಯಾಸಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.