ಯುವ ಜನರಿಗಾಗಿರುವ ಒಂದು ಪುಸ್ತಕ
ಅರ್ಕಾಂಜಿಲಸ್ಕ್ನಲ್ಲಿನ ಒಂದು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳು, ರಷ್ಯದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿಗೆ ಪತ್ರ ಬರೆದಳು. ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ ಒಂದು ಪತ್ರಿಕೆಯನ್ನು ಬೀದಿಯಲ್ಲಿ ಯಾರೋ ಒಬ್ಬರು ನನಗೆ ಕೊಟ್ಟರು ಎಂದು ಅವಳು ವಿವರಿಸಿದಳು. ಅವಳು ಬರೆದುದು: “ಇದು, ನಾನು ಜೀವನದ ಕುರಿತು ಮತ್ತು ದೇವರು ಹಾಗೂ ಧರ್ಮದ ಬಗ್ಗೆ ನನಗೇನು ತಿಳಿದಿದೆಯೋ ಅದರ ಕುರಿತು ಆಲೋಚಿಸುವಂತೆ ಮಾಡಿತು. ಈಗ ನಾನು ಬೈಬಲ್ ಅಧ್ಯಯನಮಾಡಲು ಬಯಸುತ್ತೇನೆ. ನಮ್ಮಲ್ಲಿ ಯಾರ ಪರಿಚಯವಿರದಿದ್ದರೂ, ನಮ್ಮ ಪಾಪಗಳಿಗಾಗಿ ಮತ್ತು ನಮ್ಮ ರಕ್ಷಣೆಗಾಗಿ ತನ್ನ ಜೀವವನ್ನೇ ತ್ಯಾಗಮಾಡಿದಂಥ ಆ ವ್ಯಕ್ತಿಯ ಕುರಿತು ನಾನು ಹೆಚ್ಚನ್ನು ಕಲಿಯಲು ಬಯಸುತ್ತೇನೆ.”
ಅವಳ ಪತ್ರವು ಹೀಗೆ ಮುಂದುವರಿಯಿತು: “ಸಾಕ್ಷಿಗಳಾದ ನೀವು ಅತ್ಯಂತ ಜರೂರಿಯ ಕೆಲಸವನ್ನು ಮಾಡುತ್ತಿದ್ದೀರಿ, ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಒಳ್ಳೇದರ ಹಾಗೂ ಕೆಟ್ಟದ್ದರ ನಡುವೆ ಇರುವ ವ್ಯತ್ಯಾಸವನ್ನು ವಿವರಿಸುವ ಮೂಲಕ. ಎಷ್ಟೆಂದರೂ ಅವರು ತಮ್ಮ ಸುತ್ತಲೂ ಇರುವುದೆಲ್ಲವನ್ನೂ ಹೀರಿಕೊಳ್ಳುವ ಮತ್ತು ಅದಕ್ಕನುಸಾರ ಬದಲಾಗುವ ಸ್ಪಂಜುಗಳಂತಿದ್ದಾರೆ.” ಆ ವಿದ್ಯಾರ್ಥಿನಿಗೆ ಒಬ್ಬ ತಮ್ಮನೂ ಒಬ್ಬ ತಂಗಿಯೂ ಇದ್ದಾರೆ, ಮತ್ತು ಅವಳು ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕದ ಒಂದು ಪ್ರತಿಯನ್ನು ಕಳುಹಿಸುವಂತೆ ಕೇಳಿಕೊಂಡಿದ್ದಾಳೆ. ಅವಳು ತಿಳಿಸುವುದು: “ಇದು ಅವರಿಗೆ ಶಾಲೆಯಲ್ಲಿ ಮತ್ತು ದಿನನಿತ್ಯದ ಜೀವನದಲ್ಲಿ ಸಹಾಯಮಾಡುವುದು ಎಂಬುದೇ ನನ್ನ ನಿರೀಕ್ಷೆ.”
ನೀವು ಸಹ ಈ ಪುಸ್ತಕದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಸಾಧ್ಯವಿದೆ. ಇದು ಯುವ ಜನರು ಇಂದು ಎದುರಿಸುವಂಥ ಸಮಸ್ಯೆಗಳನ್ನು ನಿಭಾಯಿಸುವಂತೆ ಸಹಾಯಮಾಡಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿದೆ. ಇದರ ಜೊತೆ ಕೊಡಲ್ಪಟ್ಟಿರುವ ಕೂಪನ್ ಅನ್ನು ಭರ್ತಿಮಾಡಿ, ಈ ಪತ್ರಿಕೆಯ 5ನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ಸೂಕ್ತವಾದ ವಿಳಾಸಕ್ಕೆ ಕಳುಹಿಸಿರಿ.(g03 9/8)
□ ನಾನು ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಬಯಸುತ್ತೇನೆ.
□ ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.