ಇತಿಹಾಸದಲ್ಲೇ ಅತಿ ಪ್ರಾಮುಖ್ಯ ತಾರೀಖು
ಅದು ಯೇಸು ಕ್ರಿಸ್ತನು ಮರಣಹೊಂದಿದ ತಾರೀಖು. ಯೇಸುವಿನಮರಣವು ಏಕೆ ಅಷ್ಟು ಪ್ರಾಮುಖ್ಯವಾಗಿತ್ತು. ಅನೇಕ ಕಾರಣಗಳಿಗಾಗಿ.
ಮರಣದ ತನಕ ಯೇಸುವಿನ ನಂಬಿಗಸ್ತಿಕೆಯು, ಒಬ್ಬ ಮಾನವನು ದೇವರ ಕಡೆಗೆ ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳಸಾಧ್ಯವಿದೆ ಎಂಬುದನ್ನು ರುಜುಪಡಿಸಿತು.
ಕ್ರಿಸ್ತನ ಮರಣವು ಮಾನವಕುಲದಲ್ಲಿ ಕೆಲವರಿಗೆ ಸ್ವರ್ಗದಲ್ಲಿ ಅವನೊಂದಿಗೆ ಜೊತೆಅರಸರಾಗುವ ಅವಕಾಶವನ್ನು ಸಹ ಒದಗಿಸಿತು. ಅದಕ್ಕೆ ಕೂಡಿಸುತ್ತಾ, ಇನ್ನೂ ಹೆಚ್ಚು ಮಂದಿ ಭೂಮಿಯಲ್ಲಿನ ಪರದೈಸಿನಲ್ಲಿ ನಿತ್ಯಜೀವವನ್ನು ಆನಂದಿಸುವಂತೆ ಅದು ಮಾರ್ಗವನ್ನು ತೆರೆಯಿತು.
ಯೇಸುವಿನ ಮರಣದ ಹಿಂದಿನ ಸಾಯಂಕಾಲ, ಅವನು ಹುಳಿಯಿಲ್ಲದ ರೊಟ್ಟಿ ಮತ್ತು ಕೆಂಪು ದ್ರಾಕ್ಷಾಮದ್ಯವನ್ನು ತನ್ನ ಪ್ರೀತಿಭರಿತ ಮಾನವ ಯಜ್ಞದ ಸಂಕೇತಗಳಾಗಿ ಉಪಯೋಗಿಸಿದನು. ಅನಂತರ ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.” (ಲೂಕ 22:19) ಈ ಪ್ರಾಮುಖ್ಯ ಘಟನೆಯನ್ನು ನೀವು ನೆನಸಿಕೊಳ್ಳುವಿರೊ?
ಯೇಸುವಿನ ಮರಣದ ಜ್ಞಾಪಕವನ್ನು ಮಾಡುವುದರಲ್ಲಿ ತಮ್ಮೊಂದಿಗೆ ಜೊತೆಗೂಡುವಂತೆ ಯೆಹೋವನ ಸಾಕ್ಷಿಗಳು ನಿಮ್ಮನ್ನು ಹಾರ್ದಿಕವಾಗಿ ಆಮಂತ್ರಿಸುತ್ತಾರೆ. ಈ ವರ್ಷ, ಇದನ್ನು ಏಪ್ರಿಲ್ 12ರ ಬುಧವಾರದಂದು ಸೂರ್ಯಾಸ್ತಮಾನದ ಅನಂತರ ಆಚರಿಸಲಾಗುವುದು. ನಿಮ್ಮ ಮನೆಗೆ ಅತಿ ಹತ್ತಿರದಲ್ಲಿರುವ ರಾಜ್ಯ ಸಭಾಗೃಹದಲ್ಲಿ ನೀವು ಹಾಜರಾಗಬಹುದು. ಸರಿಯಾದ ಸಮಯ ಮತ್ತು ಸ್ಥಳದ ಕುರಿತು ಸ್ಥಳಿಕ ಯೆಹೋವನ ಸಾಕ್ಷಿಗಳೊಂದಿಗೆ ವಿಚಾರಿಸಿ ತಿಳಿದುಕೊಳ್ಳಿ. (g 3/06)