ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 4/07 ಪು. 32
  • ಅರಳಿದ ಸಂಸಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅರಳಿದ ಸಂಸಾರ
  • ಎಚ್ಚರ!—2007
ಎಚ್ಚರ!—2007
g 4/07 ಪು. 32

ಅರಳಿದ ಸಂಸಾರ

ದಕ್ಷಿಣ ಆಫ್ರಿಕಾದಲ್ಲಿ ಮಾಲೀಕಳೊಬ್ಬಳು ತನ್ನ ಕೆಲಸಗಾರಳಾದ ಬೆಲ ಎಂಬವಳು ವೈವಾಹಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾಳೆಂದು ಕಂಡುಕೊಂಡಳು. ಅವಳು ಥಾಂಡೀ ಎಂಬ ಯೆಹೋವನ ಸಾಕ್ಷಿಯನ್ನು ಬೆಲಳೊಂದಿಗೆ ಮಾತಾಡುವಂತೆ ಕೇಳಿಕೊಂಡಳು. ಬೆಲ ತನ್ನ ಗಂಡನನ್ನು ವಿಚ್ಛೇದಿಸಲು ನಿರ್ಣಯಿಸಿರುವುದು ಥಾಂಡೀಗೆ ತಿಳಿದುಬಂತು.

ಥಾಂಡೀ, ಕುಟುಂಬ ಸಂತೋಷದ ರಹಸ್ಯ ಪುಸ್ತಕದ ಎರಡು ಪ್ರತಿಗಳನ್ನು ಬೆಲಳಿಗೆ ನೀಡಿ ಒಂದು ಪುಸ್ತಕವನ್ನು ಅವಳ ಗಂಡನಿಗೆ ನೀಡುವಂತೆ ಉತ್ತೇಜಿಸಿದಳು. ಅದರಂತೆಯೇ ಬೆಲ ತನ್ನ ಗಂಡನಿಗೆ ಆ ಪುಸ್ತಕವನ್ನು ನೀಡಿದಳು. ಒಂದು ವಾರದ ಬಳಿಕ ಬೆಲಳ ಗಂಡ ಆ ಪುಸ್ತಕವನ್ನು ಓದುತ್ತಿದ್ದದ್ದು ಮತ್ತು ಮುದುಡಿದ ಅವರ ಸಂಸಾರ ಅರಳಿದ್ದು ಥಾಂಡೀಗೆ ತಿಳಿಯಿತು. ತನ್ನ ವೈವಾಹಿಕ ಜೀವನವನ್ನು ಪ್ರಾರ್ಥನೆ ಮತ್ತು ಕುಟುಂಬ ಸಂತೋಷದ ರಹಸ್ಯ ಪುಸ್ತಕದ ಮೂಲಕ ದೇವರು ಕಾಪಾಡಿದನೆಂದು ಮೂರು ತಿಂಗಳ ನಂತರ ಬೆಲ ಥಾಂಡೀಗೆ ಹೇಳಿದಳು. ಆದರೆ ವಿಷಯ ಇಷ್ಟಕ್ಕೆ ಮುಗಿಯಲಿಲ್ಲ.

ನಡೆದ ಸಂಗತಿ ಬೆಲಳ ಮಾಲೀಕಳಿಗೆ ತಿಳಿದುಬಂದಾಗ ಎಲ್ಲ ಸಿಬ್ಬಂದಿಗಳು ಆ ಪುಸ್ತಕವನ್ನು ಪಡೆಯುವಂತೆ ಅವಳು ಸಲಹೆ ನೀಡಿದಳು. ಇದರಿಂದಾಗಿ ನೂರಕ್ಕಿಂತಲೂ ಹೆಚ್ಚು ಕುಟುಂಬ ಸಂತೋಷದ ರಹಸ್ಯ ಪುಸ್ತಕಗಳನ್ನು ಕಂಪನಿಯಲ್ಲಿನ ಎಲ್ಲರಿಗೂ ನೀಡಲಾಯಿತು. ಆ ಪುಸ್ತಕದಲ್ಲಿರುವ ಕೆಲವು ಪ್ರಾಯೋಗಿಕ ಅಧ್ಯಾಯಗಳು ಈ ಕೆಳಗಿನಂತಿವೆ: “ವಿವಾಹವು ಮುರಿದುಹೋಗುವ ಹಂತದಲ್ಲಿರುವುದಾದರೆ,” “ನಿಮ್ಮ ಕುಟುಂಬವನ್ನು ನಾಶಕಾರಕ ಪ್ರಭಾವಗಳಿಂದ ಸಂರಕ್ಷಿಸಿರಿ” ಮತ್ತು “ನಿಮ್ಮ ಮನೆವಾರ್ತೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಿರಿ.”

ಈ ಪುಟದಲ್ಲಿರುವ ಕೂಪನ್‌ ಅನ್ನು ಭರ್ತಿಮಾಡಿ, ಈ ಪತ್ರಿಕೆಯ 5ನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ಸೂಕ್ತವಾದ ವಿಳಾಸಕ್ಕೆ ಕಳುಹಿಸುವ ಮೂಲಕ ನೀವು ಈ ಪುಸ್ತಕದ ಕುರಿತು ಹೆಚ್ಚಿನ ಮಾಹಿತಿಗಾಗಿ ವಿನಂತಿಸಬಹುದು. (g 2/07)

□ ಯಾವುದೇ ನಿರ್ಬಂಧಕ್ಕೆ ಒಳಪಡದೆ, ಕುಟುಂಬ ಸಂತೋಷದ ರಹಸ್ಯ ಪುಸ್ತಕದ ಕುರಿತು ಹೆಚ್ಚಿನ ಮಾಹಿತಿಗಾಗಿ ನಾನು ವಿನಂತಿಸಿಕೊಳ್ಳುತ್ತಿದ್ದೇನೆ.

□ ಉಚಿತ ಮನೆ ಬೈಬಲ್‌ ಅಧ್ಯಯನಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ