ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • cf ಪು. 2
  • ಪ್ರಸ್ತಾವನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಸ್ತಾವನೆ
  • “ನನ್ನನ್ನು ಹಿಂಬಾಲಿಸಿರಿ”
“ನನ್ನನ್ನು ಹಿಂಬಾಲಿಸಿರಿ”
cf ಪು. 2

ಪ್ರಸ್ತಾವನೆ

ಪ್ರಿಯ ಓದುಗರೇ,

“ನನ್ನನ್ನು ಹಿಂಬಾಲಿಸಿರಿ.” (ಮತ್ತಾಯ 4:19) ಈ ಮಾತುಗಳೊಂದಿಗೆ ಯೇಸು ಕ್ರಿಸ್ತನು ತನ್ನನ್ನು ಹಿಂಬಾಲಿಸುವಂತೆ ನಮ್ಮನ್ನು ಆಮಂತ್ರಿಸುತ್ತಿದ್ದಾನೆ. ಅವನ ಕರೆಗೆ ನೀವು ಓಗೊಡುತ್ತೀರೋ? ಓಗೊಡುವಲ್ಲಿ, ಅದು ನಿಮ್ಮ ಜೀವನವನ್ನೇ ಮಹತ್ತರವಾಗಿ ಪ್ರಭಾವಿಸಬಲ್ಲದು. ಹೇಗೆ?

ಯೆಹೋವನು ತನ್ನ ಏಕೈಕಜಾತ ಪುತ್ರನನ್ನು ಭೂಮಿಗೆ ಕಳುಹಿಸಿದ್ದು ಆ ಪುತ್ರನು ತನ್ನ ಜೀವವನ್ನು ವಿಮೋಚನಾ ಮೌಲ್ಯವಾಗಿ ಅರ್ಪಿಸುವುದಕ್ಕಾಗಿತ್ತು. (ಯೋಹಾನ 3:16) ಆ ಪುತ್ರನು ನಮಗಾಗಿ ಸತ್ತದ್ದು ಮಾತ್ರವಲ್ಲ, ಹೇಗೆ ಜೀವಿಸುವುದು ಎಂಬುದನ್ನೂ ತೋರಿಸಿಕೊಟ್ಟನು. ಅವನು ಇಟ್ಟ ಪ್ರತಿ ಹೆಜ್ಜೆಯಲ್ಲೂ ಸಮಗ್ರತೆ ಕಾಪಾಡಿಕೊಂಡನು ಮತ್ತು ತನ್ನ ತಂದೆಯ ಮನಸ್ಸನ್ನು ಸಂತೋಷಪಡಿಸಿದನು. ತನ್ನ ತಂದೆಯಂತೆ ಇರುವುದು ಹೇಗೆಂಬುದನ್ನೂ ಯೇಸು ನಮಗೆ ತೋರಿಸಿಕೊಟ್ಟನು. ತಂದೆಯ ಕಾರ್ಯವೈಖರಿ ಮತ್ತು ಚಿತ್ತವನ್ನು ಮಗನ ನಡೆನುಡಿಗಳಲ್ಲಿ ಪರಿಪೂರ್ಣವಾಗಿ ನೋಡಸಾಧ್ಯವಿತ್ತು.​—ಯೋಹಾನ 14:9.

“ತನ್ನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸುವಂತೆ” ಯೇಸು ನಮಗೆ “ಮಾದರಿ” ಆಗಿದ್ದಾನೆ ಎಂಬುದಾಗಿ ಬೈಬಲ್‌ ಹೇಳುತ್ತದೆ. (1 ಪೇತ್ರ 2:21) ನಾವು ಯೆಹೋವನಿಗೆ ಆಪ್ತರಾಗಲು ಬಯಸುವಲ್ಲಿ, ನಿಜವಾಗಿಯೂ ಅರ್ಥಭರಿತವಾದ ಜೀವನವನ್ನು ನಡೆಸಲು ಬಯಸುವಲ್ಲಿ ಮತ್ತು ನಿತ್ಯಜೀವದ ಮಾರ್ಗದಲ್ಲಿ ನಡೆಯಲು ಬಯಸುವಲ್ಲಿ ಕ್ರಿಸ್ತನ ಹೆಜ್ಜೆಜಾಡನ್ನು ನಿಕಟವಾಗಿ ಹಿಂಬಾಲಿಸತಕ್ಕದ್ದು.

ಈ ಪ್ರಯಾಣವನ್ನು ಆರಂಭಿಸಬೇಕಾದರೆ ಮೊದಲು ನಾವು ಯೇಸುವಿನ ಭೂಜೀವಿತವನ್ನು ಅರ್ಥಮಾಡಿಕೊಳ್ಳಬೇಕು. ಅದಕ್ಕಾಗಿ ಬೈಬಲ್‌ನಲ್ಲಿ ಸಂರಕ್ಷಿಸಿಡಲ್ಪಟ್ಟಿರುವ ಯೇಸುವಿನ ಕುರಿತ ಸುಚಿತ್ರಿತ ವರ್ಣನೆಗಳನ್ನು ನಾವು ಜಾಗರೂಕತೆಯಿಂದ ಅಧ್ಯಯನ ಮಾಡೋಣ. ಯೇಸು ಹೇಳಿದ ಮತ್ತು ಮಾಡಿದ ವಿಷಯಗಳನ್ನು ಧ್ಯಾನಿಸಿ ಅವನನ್ನು ನಮ್ಮ ನಡೆನುಡಿಗಳಲ್ಲಿ ಹೇಗೆ ಅನುಕರಿಸುವುದೆಂಬುದನ್ನು ಪರಿಗಣಿಸುವಲ್ಲಿ ಆತನನ್ನು ಹಿಂಬಾಲಿಸುವುದು ಹೇಗೆಂದು ಸ್ಪಷ್ಟವಾಗಿ ತಿಳಿದುಕೊಳ್ಳಲು ಸಹಾಯವಾಗುವುದು.

ಈ ಪುಸ್ತಕವು, ಯೇಸುವಿನ ಮತ್ತು ಯೆಹೋವನ ಮೇಲೆ ನಿಮಗಿರುವ ಪ್ರೀತಿಯನ್ನು ಹೆಚ್ಚಿಸುವಂತಾಗಲಿ. ಮತ್ತು ಆ ಪ್ರೀತಿ ಯೇಸುವಿನ ಹೆಜ್ಜೆಜಾಡನ್ನು ನಿಕಟವಾಗಿ ಹಿಂಬಾಲಿಸುವಂತೆ ನಿಮ್ಮನ್ನು ಪ್ರೇರಿಸಲಿ. ಆಗ ನೀವು ಯೆಹೋವನ ಮನಸ್ಸನ್ನು ನಿತ್ಯನಿರಂತರವೂ ಸಂತೋಷಪಡಿಸುವಿರಿ.

ಪ್ರಕಾಶಕರು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ