ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • T-33 ಪು. 1-4
  • ಈ ಲೋಕ ಯಾರ ಕೈಯಲ್ಲಿದೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಈ ಲೋಕ ಯಾರ ಕೈಯಲ್ಲಿದೆ?
  • ಈ ಲೋಕ ಯಾರ ಕೈಯಲ್ಲಿದೆ?
  • ಅನುರೂಪ ಮಾಹಿತಿ
  • ಮುಂದೆ ಈ ಲೋಕ ಹೇಗಿರುತ್ತದೆ?
    ಮುಂದೆ ಈ ಲೋಕ ಹೇಗಿರುತ್ತದೆ?
  • ಈ ಲೋಕವನ್ನು ಮುಂದೆ ಎಂದಾದರೂ ದೇವರು ಆಳುತ್ತಾನಾ?
    ಈ ಲೋಕವನ್ನು ಮುಂದೆ ಎಂದಾದರೂ ದೇವರು ಆಳುತ್ತಾನಾ?
  • ಸತ್ತವರು ಮತ್ತೆ ಬದುಕಿ ಬರುತ್ತಾರಾ?
    ಸತ್ತವರು ಮತ್ತೆ ಬದುಕಿ ಬರುತ್ತಾರಾ?
  • ನಮ್ಮ ಕಷ್ಟಗಳಿಗೆ ಕೊನೆ ಇದೆಯಾ?
    ನಮ್ಮ ಕಷ್ಟಗಳಿಗೆ ಕೊನೆ ಇದೆಯಾ?
ಇನ್ನಷ್ಟು
ಈ ಲೋಕ ಯಾರ ಕೈಯಲ್ಲಿದೆ?
T-33 ಪು. 1-4

ಈ ಲೋಕ ಯಾರ ಕೈಯಲ್ಲಿದೆ?

ನೀವೇನು ನೆನಸುತ್ತೀರಿ . . .

  • ದೇವರ ಕೈಯಲ್ಲಿ?

  • ಮನುಷ್ಯರ ಕೈಯಲ್ಲಿ?

  • ಇನ್ನಾರದೋ ಕೈಯಲ್ಲಿ?

ಪವಿತ್ರ ಗ್ರಂಥ ಏನು ಹೇಳುತ್ತದೆ?

“ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ.”—1 ಯೋಹಾನ 5:19.

“ಸೈತಾನನ ಕೆಲಸಗಳನ್ನು ಲಯಮಾಡುವದಕ್ಕೋಸ್ಕರವೇ ದೇವಕುಮಾರನು ಪ್ರತ್ಯಕ್ಷನಾದನು.”—1 ಯೋಹಾನ 3:8, ಸತ್ಯವೇದವು.

ಈ ಸತ್ಯಾಂಶ ತಿಳಿದುಕೊಳ್ಳುವುದರಿಂದ . . .

ಜಗತ್ತಿನ ಎಲ್ಲ ಸಮಸ್ಯೆಗಳ ನಿಜ ಕಾರಣ ಏನೆಂದು ಗೊತ್ತಾಗುತ್ತದೆ.—ಪ್ರಕಟನೆ 12:12.

ಒಳ್ಳೇ ಕಾಲ ಬರುತ್ತೆ ಅನ್ನೋ ಭರವಸೆ ಮೂಡುತ್ತದೆ.—1 ಯೋಹಾನ 2:17.

ಲೋಕದಲ್ಲಿ ರಾಜಕೀಯವನ್ನು, ಮಿಲಿಟರಿಯನ್ನು, ಧರ್ಮಗಳನ್ನು ಮತ್ತು ಜನರನ್ನು ಸೈತಾನ ನಿಯಂತ್ರಿಸುತ್ತಿದ್ದಾನೆ

ಪವಿತ್ರ ಗ್ರಂಥ ಹೇಳುವುದನ್ನು ನಂಬಬಹುದಾ?

ಖಂಡಿತ ನಂಬಬಹುದು. ಯಾಕೆ ಅಂತ ಮೂರು ಕಾರಣಗಳನ್ನು ನೋಡೋಣ:

  • ಸೈತಾನನ ಆಡಳಿತ ಅಂತ್ಯ ಕಾಣುವ ಕಾಲ ಹತ್ತಿರವಾಗಿದೆ. ಮಾನವಕುಲವನ್ನು ಸೈತಾನನ ಕೈಯಿಂದ ಬಿಡಿಸಬೇಕನ್ನುವುದು ಯೆಹೋವ ದೇವರ ಸಂಕಲ್ಪ. ಸೈತಾನನನ್ನು ಇಲ್ಲದಂತೆ ಮಾಡಿ ಅವನಿಂದಾದ ನಷ್ಟವನ್ನೆಲ್ಲ ಸರಿಪಡಿಸಬೇಕೆಂದು ದೇವರು ಈಗಾಗಲೇ ನಿರ್ಧಾರ ಮಾಡಿಯಾಗಿದೆ.—ಇಬ್ರಿಯ 2:14.

  • ಈ ಲೋಕವನ್ನು ಆಳಲು ದೇವರು ಆಯ್ಕೆಮಾಡಿರುವ ವ್ಯಕ್ತಿ ಯೇಸು ಕ್ರಿಸ್ತ. ಇವತ್ತಿರುವ ಸ್ವಾರ್ಥ, ಕ್ರೂರ ಅಧಿಕಾರಿಗಳಂತಲ್ಲ ಯೇಸು. “ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ . . . ಕುಯುಕ್ತಿ ಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವದು” ಎಂದು ರಾಜ ಯೇಸುವಿನ ಬಗ್ಗೆ ಬೈಬಲ್‌ ಹೇಳುತ್ತದೆ.—ಕೀರ್ತನೆ 72:13, 14.

  • ಸುಳ್ಳಾಡದ ದೇವರು. “ದೇವರು ಸುಳ್ಳಾಡಲಾರ” ಎಂದು ಬೈಬಲ್‌ ಸ್ಪಷ್ಟವಾಗಿ ಹೇಳುತ್ತದೆ. (ಇಬ್ರಿಯ 6:18, ನೂತನ ಲೋಕ ಭಾಷಾಂತರ) ಯೆಹೋವ ದೇವರು ಒಂದು ಸಲ ಒಂದು ಮಾತು ಹೇಳಿದ ಮೇಲೆ ಮುಗಿಯಿತು! (ಯೆಶಾಯ 55:10, 11) ದೇವರ ಕೈಯಿಂದ “ಈ ಲೋಕದ ಅಧಿಪತಿ” ಸೈತಾನ ಖಂಡಿತ ನಾಶವಾಗುವನು.—ಯೋಹಾನ 12:31.

ಯೋಚಿಸಿ

ಸುಖೀ ಕುಟುಂಬವೊಂದು ವಿನೋದ ವಿಹಾರದಲ್ಲಿ ಆನಂದಿಸುತ್ತಿದೆ

ಈ ಲೋಕದ ಅಧಿಪತಿಯಾದ ಸೈತಾನ ನಾಶವಾದ ಮೇಲೆ ಈ ಲೋಕ ಹೇಗಿರುತ್ತೆ?

ಉತ್ತರ ಪವಿತ್ರ ಗ್ರಂಥದ ಈ ಭಾಗದಲ್ಲಿದೆ: ಕೀರ್ತನೆ 37:10, 11; ಪ್ರಕಟನೆ 21:3, 4.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ