ಗೀತೆ 73
ಧೈರ್ಯ ತುಂಬು
1. ಸಿಹಿ ಸುದ್ದಿ ಸಾರುವಾಗ
ಸಿಟ್ಟಿನಿಂದ ಜನರು
ಮಾಡಿದರೆ ಅವಮಾನ
ಕೂಗಿದರೆ ವಿರೋಧ
ಅವರ ಮುಂದೆ ನಾವು
ಬೆವರಿ ನೀರಾಗೋ ಮುನ್ನ
ಸುರಿಸಿ ನಿನ್ನ ಶಕ್ತಿಯನ್ನ
ಕೊಡು ಧೈರ್ಯ ಓ ದೇವರೇ
(ಪಲ್ಲವಿ)
ಸಿಹಿಸುದ್ದಿ ಸಾರೋ ಧೈರ್ಯ
ಕೊಟ್ಟು ನೀಗಿಸು ಭಯ
ತಲೆ ಎತ್ತಿ ಧೈರ್ಯದಿಂದ
ಸಾರೋ ಛಲ ನೀಡಪ್ಪ
ಲೋಕದ ಅಂತ್ಯ ಮುಂದಿದೆ
ಸಾರಲೇಬೇಕು ಅಂಜದೆ
ಜಗತ್ತಿಗೆ ಸಾರೋ ಧೈರ್ಯ
ನೀಡು ದೇವ
2. ಭಯವನ್ನು ಮೆಟ್ಟಿ ನಿಲ್ಲೋ
ಬಲ ನೀಡು ದೇವರೇ
ಕುಗ್ಗಿದಾಗ ನಮ್ಮ ಧೈರ್ಯ
ತುಂಬು ನೀನು ಸ್ಪೂರ್ತಿನ
ಜನರು ಹಿಂಸೆ ಮಾಡಿ
ಬೆದರಿಕೆ ಹಾಕೋವಾಗ
ಜೊತೆಲಿ ನಿಂತು ಶಕ್ತಿ ನೀಡು
ಹಿಡಿದು ನಮ್ಮ ಕೈಯನ್ನು
(ಪಲ್ಲವಿ)
ಸಿಹಿಸುದ್ದಿ ಸಾರೋ ಧೈರ್ಯ
ಕೊಟ್ಟು ನೀಗಿಸು ಭಯ
ತಲೆ ಎತ್ತಿ ಧೈರ್ಯದಿಂದ
ಸಾರೋ ಛಲ ನೀಡಪ್ಪ
ಲೋಕದ ಅಂತ್ಯ ಮುಂದಿದೆ
ಸಾರಲೇಬೇಕು ಅಂಜದೆ
ಜಗತ್ತಿಗೆ ಸಾರೋ ಧೈರ್ಯ
ನೀಡು ದೇವ
(1 ಥೆಸ. 2:2; ಇಬ್ರಿ. 10:35 ಸಹ ನೋಡಿ)