‘ನಮ್ಮ ಪುತ್ರಿಯರು ಹೆಚ್ಚು ಆಪ್ತರಾಗುವಂತೆವಂತೆ ಇದು ಸಹಾಯ ಮಾಡಿತು
ಕಳೆದ ವರ್ಷ, ಸಿಂಬಾಬ್ವೆ ದೇಶದ ಮುರೇವ ನಗರದ ಉಪಾಧ್ಯಾಯಿನಿಯೊಬ್ಬಳು, ಮೈ ಬುಕ್ ಆಫ್ ಬೈಬಲ್ ಸ್ಟೋರೀಸ್ ಎಂಬ ಪುಸ್ತಕ ಇದನ್ನೇ ಮಾಡಿತೆಂದು ಹೇಳಿದಳು. ಅವಳು ಈ ಪುಸ್ತಕವನ್ನು ಸಹ ಉಪಾಧ್ಯಾಯನಿಂದ ಪಡೆದು ಹೀಗೆಂದಳು:
“ಪುಸ್ತಕದ ಅತಿ ಸದುಪಯೋಗವನ್ನು ಹೇಗೆ ಮಾಡಬಹುದೆಂಬ ಬಗೆಗೆ ಅವನ ಸಲಹೆಯನ್ನು ನಾನು ಮೊದಲಾಗಿ ಸ್ಥಳೀಕ ಬೋರ್ಡಿಂಗ್ ಸೆಕೆಂಡರಿ ಸ್ಕೂಲಿನಲ್ಲಿದ್ದ ನನ್ನ ಅತಿ ಕಿರಿಯ 8-ವಯಸ್ಸಿನ ಮಗಳೊಂದಿಗೂ, ಬಳಿಕ 16 ಮತ್ತು 18 ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳೊಂದಿಗೂ ಪ್ರಯೋಗಿಸಿದೆ. ಈ ಮೂರು ಪುತ್ರಿಯರ ಪ್ರತಿವರ್ತನೆಯೂ ಅತಿ ಪ್ರೋತ್ಸಾಹಕರವಾಗಿತ್ತೆಂದು ತಿಳಿಸಲು ನನಗೆ ಮಹಾ ಸಂತೋಷವಾಗುತ್ತದೆ. ಅವರ ನೈತಿಕ ನಡತೆ ಅಂದಿನಿಂದ ಗಮನಾರ್ಹವಾಗಿ ಉತ್ತಮಗೊಂಡಿದೆ.” ಆ ತಾಯಿ ಮುಂದುವರಿಸಿ ಹೇಳಿದ್ದು: “ನಮ್ಮ ಪುತ್ರಿಯರು ಹೆತ್ತವರಾದ ನಮಗೆ ಹಿಂದೆಂದಿಗಿಂತಲೂ ಹೆಚ್ಚು ಆಪ್ತರಾಗುವಂತೆವಂತೆ ಈ ಪುಸ್ತಕ ಯಶಸ್ವಿಯಾಗಿ ಸಹಾಯ ಮಾಡಿದೆ.”
ಈ ಪತ್ರಿಕೆಯ ಪುಟದ ಗಾತ್ರದಷ್ಟೇ ದೊಡ್ಡದಾದ ಈ 256-ಪುಟಗಳ ಪುಸ್ತಕವನ್ನು ಜೊತೆಯಲ್ಲಿರುವ ಕೂಪಾನನ್ನು ತುಂಬಿಸಿ ರೂ. 30ನ್ನು ಕಳುಹಿಸುವಲ್ಲಿ ಪಡೆಯಬಹುದು. ಈ ಪುಸ್ತಕದಲ್ಲಿರುವ 116 ಬೈಬಲ್ ವೃತ್ತಾಂತಗಳು ಓದುಗರಿಗೆ ಬೈಬಲು ಮೊತ್ತದಲ್ಲಿ ಏನಾಗಿದೆ ಎಂಬ ವಿಚಾರವನ್ನು ತಿಳಿಸುತ್ತದೆ. ಇತಿಹಾಸದಲ್ಲಿ ಸಂಗತಿಗಳು ನಡೆದ ಕ್ರಮದಲ್ಲಿಯೇ ಕಥೆಗಳು ಕಂಡುಬರುತ್ತವೆ. ಇತಿಹಾಸದಲ್ಲಿ, ಇತರ ಸಂಗತಿಗಳ ಸಂಬಂಧದಲ್ಲಿ, ಇವು ಯಾವಾಗ ನಡೆದವೆಂದು ತಿಳಿಯಲು ಇದು ನಿಜವಾಗಿಯೂ ಸಹಾಯಕರವೆಂದು ನೀವು ಕಂಡುಕೊಳ್ಳುವಿರಿ. ಪುಸ್ತಕದಲ್ಲಿ ಸುಂದರವಾದ ಚಿತ್ರಗಳಿದ್ದು ಪುಸ್ತಕವು ದೊಡ್ಡ ಮುದ್ರಣಾಕ್ಷರಗಳಲ್ಲಿದೆ.
ನನಗೆ ದಯವಿಟ್ಟು ಗಟ್ಟಿರಟ್ಟಿನ ಮೈ ಬುಕ್ ಆಫ್ ಬೈಬಲ್ ಸ್ಟೋರೀಸ್ ಪುಸ್ತಕವನ್ನು, ಅಂಚೆ ವೆಚ್ಚವನ್ನು ನೀವೇ ಸೇರಿಸಿ ಕಳುಹಿಸಿರಿ. ಅದಕ್ಕಾಗಿ ಮನಿಆರ್ಡರ್⁄ಚೆಕ್⁄ಇತರ ರೀತಿಯಲ್ಲಿ ರೂ. 30.00 ಕಳುಹಿಸಿದ್ದೇನೆ.