ಕ್ರೈಸ್ತ ಪ್ರಪಂಚದ ಪವಿತ್ರ ಸ್ಥಳಗಳಿಗೇನು ಸಂಭವಿಸಲಿದೆ?
ಅಗೆತ ಶಾಸ್ತ್ರಜ್ಞ ಸ್ಟ್ಯುವರ್ಟ್ ಪರೌನ್ ಬರೆದ ಹೋಲಿ ಪ್ಲೇಸಸ್ ಆಫ್ ಕ್ರಿಶ್ಚನ್ಡಮ್ ಪುಸ್ತಕದ ಪ್ರಕಾಶಕರು, ಕೇಳಿದ್ದು: “ಯಾವನು, ಅವನು ಯಾವುದೇ ಕ್ರೈಸ್ತ ಸಂಪ್ರದಾಯದಿಂದ ಬಂದವನಾಗಿರಲಿ, ಯೆರೂಸಲೇಮಿನ ಕಲ್ವರಿಯಲ್ಲಿರುವ ಚರ್ಚ್ ಆಫ್ ರೆಸರೆಕ್ಷನ್ [ಅಥವಾ ಚರ್ಚ್ ಆಫ್ ದ ಹೋಲಿ ಸೆಪ್ಚಲರ್] ನಲ್ಲಿ ಒಂದು ಭಯಚಕಿತ ಭಾವವಿಲ್ಲದೆ ನಿಲ್ಲಶಕ್ತನಾದಾನು: ಯಾಕಂದರೆ ಇಲ್ಲಿ ಪೂಜ್ಯಾರ್ಹವಾದ ಮತ್ತು ಶತಮಾನಗಳಿಂದ ಹೋರಾಟವೂ ಮಾಡಲ್ಪಟ್ಟಂಥ ಒಂದು ಸ್ಥಳದಲ್ಲಿ, ಕ್ರೈಸ್ತ ಪ್ರಪಂಚದ ಕೇಂದ್ರ ತಿರುಳು ನಿಂತಿರುತ್ತದೆ.”
ಕ್ರಿಸ್ತನು ಸತ್ತ ಆ ಕಲ್ವರಿಯಲ್ಲಿ ಈ ಚರ್ಚು ಕಟ್ಟಲ್ಪಟ್ಟಿತ್ತೆಂಬದನ್ನು ರುಜುಪಡಿಸಲು ಯಾರೂ ಶಕ್ತರಾಗಿಲ್ಲ. ವಾಸ್ತವದಲ್ಲಿ ರೋಮನ್ ಸಾಮ್ರಾಟ ಕಾನ್ಸ್ಟಾಂಟೀನನು ಅಲ್ಲಿ ಒಂದು ಚರ್ಚನ್ನು ಕಟ್ಟಲು ನಿರ್ಧರಿಸಿದ ಮುಂಚೆ, ಒಂದು ವಿಧರ್ಮಿ ದೇವಸ್ಥಾನವು ಆ ಸ್ಥಳದಲ್ಲಿತ್ತು. ಅದಲ್ಲದೆ, ಯೇಸು ಅಂದದ್ದು: “ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತನನ್ನು ಆತ್ಮದಿಂದ ಮತ್ತು ಸತ್ಯದಿಂದ ಆರಾಧಿಸಬೇಕು.” (ಯೋಹಾನ 4:24) ಅಂಥ ಆರಾಧಕರು ಭೌತಿಕವಾದ “ಪವಿತ್ರ” ಸ್ಥಾನಗಳನ್ನು ಪೂಜ್ಯವಾಗಿ ನೋಡುವುದಿಲ್ಲ.
ಒಂದು ಕಾಲದಲ್ಲಿ, ಯೆರೂಸಲೇಮು ದೇವರ ಆಲಯದ ಸ್ಥಾನವಾಗಿತ್ತು ಮತ್ತು ಹೀಗೆ ಶುದ್ಧಾರಾಧನೆಯ ಕೇಂದ್ರವಾಗಿತ್ತು. ಆದರೂ, ದೇಶದ ನಿವಾಸಿಗಳ ಅಪನಂಬಿಗಸ್ತಿಕೆಯ ಕಾರಣ, ಹಾಗೆ ಮಾಡುವನೆಂದು ಯೇಸು ಮುಂತಿಳಿಸಿದ ಪ್ರಕಾರವೆ, ಯೆಹೋವನು ಅದನ್ನು ತ್ಯಜಿಸಿಬಿಟ್ಟನು. (ಮತ್ತಾಯ 23:37, 38) ಪವಿತ್ರ ಸ್ಥಾನವಾಗಿ ಅನೇಕರು ವೀಕ್ಷಿಸುತ್ತಾ ಇದ್ದ ಆ ಧಾರ್ಮಿಕ ಕೇಂದ್ರದ ಬರಿದಾಗುವಿಕೆಯನ್ನು ಯೇಸು ಸಹಾ ಮುಂತಿಳಿಸಿದ್ದನು. ರೋಮನರು ಸಾ.ಶ. 70ರಲ್ಲಿ ಯೆರೂಸಲೇಮನ್ನು ಮತ್ತು ಅದರ ಆಲಯವನ್ನು ನಾಶಮಾಡಿದಾಗ ಆತನ ಮಾತುಗಳು ನೆರವೇರಿಕೆಯನ್ನು ಪಡೆದವು.—ಮತ್ತಾಯ 24:15, 21.
ಯೇಸುವಿನ ಪ್ರವಾದನೆಯು ಬೇಗನೇ, ಯಾವುದನ್ನು ಪವಿತ್ರ ಸ್ಥಾನವೆಂದು ಕ್ರೈಸ್ತ ಪ್ರಪಂಚ ವಾದಿಸುತ್ತದೋ ಆ ಇಡೀ ಕ್ರೈಸ್ತ ಪ್ರಪಂಚದ ಧಾರ್ಮಿಕ ಕ್ಷೇತ್ರದ ಮೇಲೆ ಒಂದು ಮಹಾ ನೆರವೇರಿಕೆಯನ್ನು ತರುವುದು. ಕ್ರೈಸ್ತ ಪ್ರಪಂಚ ಮತ್ತು ಅವಳ ಪವಿತ್ರ ಸ್ಥಳಗಳು “ಹಾಳುಮಾಡುವ ಅಸಹ್ಯ ವಸ್ತು” ಎಂದು ಕರೆಯಲ್ಪಡುವ ಒಂದು ಧರ್ಮ ವಿರೋಧಿ ಶಕಿಯ್ತಿಂದ ಈಗ ನಾಶನಕ್ಕೆ ಎದುರಾಗಿವೆ. (ದಾನಿಯೇಲ 11:31) ಈ ಧಕ್ಕೆಬಡಿಸುವ ಘಟನೆಯು ಸಂಭವಿಸುವ ವಿಧಾನದ ಕುರಿತು ಅಧಿಕ ಸಮಾಚಾರವನ್ನು ಯೆಹೋವನ ಸಾಕ್ಷಿಗಳು ಸಂತೋಷದಿಂದ ಒದಗಿಸಿ ಕೊಡುವರು.
[ಪುಟ 32 ರಲ್ಲಿರುವ ಚಿತ್ರ]
ಚರ್ಚ್ ಆಫ್ ದ ಹೋಲಿ ಸೆಪ್ಚಲರ್ನ ಒಂದು ಆರಾಧನಾ ಗೃಹ
[ಕೃಪೆ]
Pictorial Archive (Near Eastern History) Est.