ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w92 8/1 ಪು. 6-7
  • 1914 ರ ಸಂತತಿ—ಯಾಕೆ ಗಮನಾರ್ಹವು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 1914 ರ ಸಂತತಿ—ಯಾಕೆ ಗಮನಾರ್ಹವು?
  • ಕಾವಲಿನಬುರುಜು—1992
ಕಾವಲಿನಬುರುಜು—1992
w92 8/1 ಪು. 6-7

1914 ರ ಸಂತತಿ—ಯಾಕೆ ಗಮನಾರ್ಹವು?

“ಈ ಯುಗವು ಒಂದು ಅತಿರೇಕ ತೊಂದರೆಯಿಂದ ಕೊನೆಗೊಳ್ಳುವುದು ಎಂದು ಕೆಲವು ವರ್ಷಗಳಿಂದ ನಾವು ನಿರೀಕ್ಷಿಸುತ್ತಿದ್ದದ್ದು ನಮ್ಮ ವಾಚಕರಿಗೆ ತಿಳಿದದೆ, ಮತ್ತು ಅದು ಫಕ್ಕನೆ ಮತ್ತು ಬಲದಿಂದ ತಲೆದೋರಲು 1914 ರ ಅಕ್ಟೋಬರದ ನಂತರ ಬಹಳ ಸಮಯ ಹೋಗದೆಂದು ನಾವು ನಿರೀಕ್ಷಿಸುತ್ತೇವೆ.”—ಮೇ 15, 1911 ರ ವಾಚ್‌ ಟವರ್‌ ಆ್ಯಂಡ್‌ ಹೆರಲ್ಡ್‌ ಆಫ್‌ ಕ್ರೈಸ್ಟ್ಸ್‌ ಪ್ರೆಸೆನ್ಸ್‌ ನಿಂದ.

ಆಗ ದ ವಾಚ್‌ ಟವರ್‌ ಆ್ಯಂಡ್‌ ಹೆರಲ್ಡ್‌ ಆಫ್‌ ಕ್ರೈಸ್ಟ್ಸ್‌ ಪ್ರೆಸೆನ್ಸ್‌ ಎಂದು ಖ್ಯಾತವಾಗಿದ್ದ (ಈಗ ದ ವಾಚ್‌ಟವರ್‌ ಅನೌನ್ಸಿಂಗ್‌ ಜೆಹೋವಸ್‌ ಕಿಂಗ್‌ಡಂ ಎಂದು ಪ್ರಖ್ಯಾತ) ಪತ್ರಿಕೆಯು 1879 ರಿಂದ, ಬೈಬಲ್‌ ಪ್ರವಾದನೆಯಲ್ಲಿ ಒಂದು ಗುರುತಿಸಿದ ವರ್ಷವಾಗಿ 1914 ಕ್ಕೆ ಆಗಿಂದಾಗ್ಯೆ ಕೈತೋರಿಸಿತ್ತು. ಆ ವರ್ಷವು ಗೋಚರವಾದಷ್ಟಕ್ಕೆ “ತೊಂದರೆಗಳ ಒಂದು ಭೀಕರ ಸಮಯವನ್ನು” ನಿರೀಕ್ಷಿಸ ಸಾಧ್ಯವಿದೆ ಎಂಬ ಮರುಜ್ಞಾಪಕವನ್ನು ವಾಚಕರಿಗೆ ಕೊಡಲಾಗಿತ್ತು.

ಬೈಬಲ್‌ನಲ್ಲಿ ತಿಳಿಸಲಾದ “ಏಳು ಕಾಲಗಳು” ಮತ್ತು “ಅನ್ಯ ಜನಾಂಗಗಳ ಕಾಲ” ದ ಕುರಿತು ಅವರಿಗಿದ್ದ ತಿಳುವಳಿಕೆಯ ಮೇಲೆ ಆಧಾರಿಸಿ, ಕ್ರೈಸ್ತರು ಈ ಸಮಾಚಾರವನ್ನು ವಿಸ್ತಾರ್ಯವಾಗಿ ಪ್ರಕಟಪಡಿಸಿದ್ದರು.a ಈ ಕಾಲಾವಧಿಯು 2,520 ವರ್ಷಗಳದ್ದಾಗಿದ್ದು—ಯೆರೂಸಲೇಮಿನಲ್ಲಿ ಪುರಾತನ ದಾವೀದನ ರಾಜ್ಯದ ದೊಬ್ಬಿಬಿಡುವಿಕೆಯಿಂದ ಪ್ರಾರಂಭಿಸಿ, 1914 ರ ಅಕ್ಟೋಬರದಲ್ಲಿ ಅಂತ್ಯಗೊಳ್ಳುವುದು—ಎಂದವರು ತಿಳಿದರು.b—ದಾನಿಯೇಲ 4:16, 17; ಲೂಕ 21:24, ಕಿಂಗ್‌ ಜೇಮ್ಸ್‌ ವರ್ಷನ್‌.

ಅಕ್ಟೋಬರ 2, 1914 ರಲ್ಲಿ, ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯ ಆಗಿನ ಪ್ರೆಸಿಡೆಂಟರಾದ ಚಾರ್ಲ್ಸ್‌ ಟೇಸ್‌ ರಸ್ಸಲ್‌ ಧೈರ್ಯದಿಂದ ಘೋಷಿಸಿದ್ದು: “ಅನ್ಯ ಜನಾಂಗಗಳ ಕಾಲವು ಅಂತ್ಯಗೊಂಡಿದೆ; ಅವರ ಅರಸರ ದಿನಗಳು ಮುಗಿದಿವೆ.” ಅವರ ಮಾತುಗಳು ಎಷ್ಟು ಸತ್ಯವಾಗಿ ರುಜುವಾದವು! ಮಾನವ ನೇತ್ರಗಳಿಗೆ ಅಗೋಚರವಾಗಿ, ಲೋಕವನ್ನೇ ನಡುಗಿಸಿದ ಪ್ರಾಧಾನ್ಯತೆಯ ಒಂದು ಘಟನೆಯು ಪರಲೋಕದಲ್ಲಿ ನಡೆಯಿತು. “ದಾವೀದನ ಸಿಂಹಾಸನಕ್ಕೆ ಶಾಶ್ವತ ಬಾಧ್ಯಸ್ಥನಾದ” ಯೇಸು ಕ್ರಿಸ್ತನು ಎಲ್ಲಾ ಮಾನವ ಕುಲದ ಮೇಲೆ ಅರಸನಾಗಿ ತನ್ನ ಆಡಳಿತವನ್ನು ಪ್ರಾರಂಭಿಸಿದನು.—ಲೂಕ 1:32, 33: ಪ್ರಕಟನೆ 11:15.

‘ಆದರೆ,’ ನೀವು ಕೇಳಬಹುದು, ‘ಕ್ರಿಸ್ತನು 1914 ರಲ್ಲಿ ತನ್ನ ಆಳಿಕೆಯನ್ನು ಪ್ರಾರಂಭಿಸಿದನ್ದಾದರೆ, ಲೋಕದ ಪರಿಸ್ಥಿತಿಗಳು ಮತ್ತೂ ಕೆಟ್ಟದಾಗಿ ಹೋದದ್ದೇಕೆ?’ ಏಕೆಂದರೆ ಮಾನವ ಕುಲದ ಅದೃಶ್ಯ ಶತ್ರುವು ಇನ್ನೂ ಅಸ್ತಿತ್ವದಲ್ಲಿದ್ದನು. 1914 ರ ತನಕ ಸೈತಾನನಿಗೆ ಪರಲೋಕಕ್ಕೆ ಪ್ರವೇಶವಿತ್ತು. 1914 ರಲ್ಲಿ ದೇವರ ರಾಜ್ಯದ ಸ್ಥಾಪನೆಯೊಂದಿಗೆ ಆ ಪರಿಸ್ಥಿತಿಯು ಬದಲಾಯಿತು. “ಪರಲೋಕದಲ್ಲಿ ಯುದ್ಧ ನಡೆಯಿತು.” (ಪ್ರಕಟನೆ 12:7) ಸೈತಾನ ಮತ್ತು ಅವನ ದೆವ್ವಗಳು ಸೋಲಿಸಲ್ಪಟ್ಟು, ಮಾನವ ಕುಲದ ಮೇಲೆ ವಿನಾಶಕರ ಪರಿಣಾಮಗಳೊಂದಿಗೆ, ಭೂಮಿಗೆ ದೊಬ್ಬಲ್ಪಟ್ಟರು. ಬೈಬಲ್‌ ಮುಂತಿಳಿಸಿದ್ದು: “ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ.”—ಪ್ರಕಟನೆ 12:12.

ಭೂಮಿಯ ಹೊಸ ಅರಸನೋಪಾದಿ ತನ್ನ ಅದೃಶ್ಯ ಸಾನಿಧ್ಯವು ಒಂದು ದೃಶ್ಯ ಚಿಹ್ನೆಯಿಂದ ಗುರುತಿಸಲ್ಪಡುವುದೆಂದು ಯೇಸು ಸಾ.ಶ. ಒಂದನೆಯ ಶತಮಾನದಲ್ಲಿ ಹೇಳಿದ್ದನು. ಅವನಿಗೆ ಕೇಳಲ್ಪಟ್ಟದ್ದು: “ನೀನು ಪ್ರತ್ಯಕ್ಷನಾಗುವದಕ್ಕೂ [ನಿನ್ನ ಸಾನ್ನಿಧ್ಯಕ್ಕೂ, NW] ಯುಗದ ಸಮಾಪ್ತಿಗೂ ಸೂಚನೆಯೇನು?” ಅವನ ಉತ್ತರ? “ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ಅಲ್ಲಲ್ಲಿ ಬರಗಳು ಬರುವವು, ಭೂಕಂಪಗಳು ಆಗುವವು; ಇವೆಲ್ಲಾ ಪ್ರಸವ ವೇದನೆಯ ಪ್ರಾರಂಭ.”— ಮತ್ತಾಯ 24:3, 7, 8.

ಇದಕ್ಕನುಸಾರ, 1914 ರಲ್ಲಿ ತಲೆದೋರಿದ ಆ ಯುದ್ಧವು ಭೀಕರ ಬರಗಳಿಂದ ಜತೆಗೂಡಿತ್ತು ಯಾಕಂದರೆ ಸಾಮಾನ್ಯ ರೀತಿಯ ಆಹಾರ ಉತ್ಪಾದನೆಗೆ ನಾಲ್ಕು ವರ್ಷಗಳಿಂದ ತಡೆಗಟ್ಟಾಗಿತ್ತು. “ಭೂಕಂಪಗಳು ಆಗುವವು” ಎಂಬದರ ಕುರಿತೇನು? 1914 ನ್ನು ಹಿಂಬಾಲಿಸಿದ ದಶಮಾನದಲ್ಲಿ, ಕನಿಷ್ಠಪಕ್ಷ ಹತ್ತು ನಾಶಕಾರಕ ಭೂಕಂಪಗಳು 3,50,000 ಕ್ಕಿಂತಲೂ ಹೆಚ್ಚು ಜನರನ್ನು ಕೊಂದವು. (ಚೌಕಟ್ಟು ನೋಡಿರಿ.) ನಿಶ್ಚಯವಾಗಿಯೂ 1914 ನೆಯ ಸಂತತಿಯು ಒಂದು “ಪ್ರಸವ ವೇದನೆಯ ಪ್ರಾರಂಭ” ವನ್ನು ಅನುಭವಿಸಿತು. ಮತ್ತು ಅಂದಿನಿಂದ ನೈಸರ್ಗಿಕ ವಿಪತ್ತುಗಳು, ಬರಗಳು ಮತ್ತು ಅನೇಕಾನೇಕ ಯುದ್ಧಗಳ ರೂಪದಲ್ಲಿ ಸಂಕಟಗಳ ವೇದನೆಗಳು ಹೊಡೆದಿರುತ್ತವೆ.

ಹಾಗಿದ್ದರೂ, 1914 ರಲ್ಲಿ ದೇವರ ರಾಜ್ಯದ ಸ್ಥಾಪನೆಯ ವಾರ್ತೆಯು ಶುಭವಾರ್ತೆಯಾಗಿದೆ ಯಾಕಂದರೆ ಆ ರಾಜ್ಯವು ಈ ಭೂಮಿಯನ್ನು ಧ್ವಂಸವಾಗುವುದರಿಂದ ರಕ್ಷಿಸಲಿದೆ. ಹೇಗೆ? ಎಲ್ಲಾ ಸುಳ್ಳು, ಕಪಟಾಚರಣೆಯ ಧರ್ಮಗಳನ್ನು, ಭ್ರಷ್ಟ ಸರಕಾರಗಳನ್ನು ಮತ್ತು ಸೈತಾನನ ದುಷ್ಟ ಪ್ರಭಾವವನ್ನು ಅದು ತೆಗೆದುಹಾಕಲಿದೆ. (ದಾನಿಯೇಲ 2:44; ರೋಮಾಪುರ 16:20; ಪ್ರಕಟನೆ 11:18; 18:4-8, 24) ಅದಲ್ಲದೆ, “ನೀತಿಯು ವಾಸವಾಗಿರುವ” ಒಂದು ಹೊಸ ಲೋಕವನ್ನು ಅದು ಬರಮಾಡಲಿದೆ.—2 ಪೇತ್ರ 3:13.

1 ನೆಯ ಲೋಕ ಯುದ್ಧದ ಅನಂತರ ಬೇಗನೆ, ಆಗ ಯೆಹೋವನ ಸಾಕ್ಷಿಗಳು ಯಾವ ಹೆಸರಿನಿಂದ ಖ್ಯಾತರಿದ್ದರೋ ಆ ಪ್ರಾಮಾಣಿಕ ಬೈಬಲ್‌ ವಿದ್ಯಾರ್ಥಿಗಳು, ಯೇಸು ರಾಜನಾಗಿ ಸನ್ನಿಧಿಗೆ ಬರುವ ಚಿಹ್ನೆಯ ಇನ್ನೊಂದು ವೈಶಿಷ್ಟ್ಯದ ಸಂಬಂಧದಲ್ಲಿ ತಮ್ಮ ಸುಯೋಗವನ್ನು ಕಾಣತೊಡಗಿದರು. ಯೇಸು ಮುಂತಿಳಿಸಿದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವುದು; ಆಗ ಅಂತ್ಯವು ಬರುವದು.”—ಮತ್ತಾಯ 24:14.

1919 ರಲ್ಲಿ ಚಿಕ್ಕ ಆರಂಭಗಳೊಂದಿಗೆ ಯೆಹೋವನ ಸಾಕ್ಷಿಗಳು ಎಡೆಬಿಡದೆ “ಈ ಸುವಾರ್ತೆಯನ್ನು” ಹಬ್ಬಿಸುತ್ತಾ ಮುಂದುವರಿದಿದ್ದಾರೆ. ಫಲಿತಾಂಶವಾಗಿ 200 ಕ್ಕಿಂತಲೂ ಹೆಚ್ಚು ದೇಶಗಳಿಂದ ಲಕ್ಷಾಂತರ ಜನರು ದೇವರ ರಾಜ್ಯದ ಪ್ರಜೆಗಳೋಪಾದಿ ಈಗ ಒಟ್ಟುಗೂಡಿಸಲ್ಪಡುತ್ತಿದ್ದಾರೆ. ಮತ್ತು ಈ ಪ್ರಜೆಗಳಿಗೆ ಎಂತಹ ಆಶೀರ್ವಾದಗಳು ಕಾದಿವೆ! ಆ ರಾಜ್ಯವು ಯುದ್ಧ, ಬರಗಾಲ, ಪಾತಕ, ಮತ್ತು ದಬ್ಬಾಳಿಕೆಯನ್ನು ನಿರ್ಮೂಲಗೊಳಿಸುವುದು. ಅದು ರೋಗ ಮತ್ತು ಮರಣವನ್ನು ಸಹ ನಿಲ್ಲಿಸಿಬಿಡುವುದು!—ಕೀರ್ತನೆ 46:9; 72:7, 12-14, 16; ಜ್ಞಾನೋಕ್ತಿ 2:21, 22; ಪ್ರಕಟನೆ 21:3, 4.

ಈ 1914 ರ ಸಂತತಿಯು ದಾಟಿಹೋಗುವ ಮುಂಚೆ, ರಾಜ್ಯ-ಸಾರುವಿಕೆಯ ಕೆಲಸವು ತನ್ನ ಉದ್ದೇಶವನ್ನು ಪೂರೈಸಿಯಾಗಿರುವುದು. “ಆಗ” ಮುಂತಿಳಿಸಿದ್ದು ಯೇಸು, “ಅಂಥ ಸಂಕಟವು ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನ ವರೆಗೂ ಆಗಲಿಲ್ಲ. ಇನ್ನು ಮೇಲೆಯೂ ಆಗುವದಿಲ್ಲ. [ಕರ್ತನು] ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಒಂದು ನರಪ್ರಾಣಿಯಾದರೂ ಉಳಿಯದು; ಆದರೆ ತಾನು ಆದುಕೊಂಡವರಿಗೋಸ್ಕರ ಆ ದಿನಗಳನ್ನು ಕಡಿಮೆ ಮಾಡುವನು.”—ಮತ್ತಾಯ 24:21, 22.

1914 ಕ್ಕೆ ಮುಂಚಿನ ಸಂತತಿಯು ಮಾಡಿದಂಥ ತಪ್ಪನ್ನು ಮಾಡಬೇಡಿರಿ. ವಿಷಯಗಳು ಈಗ ಇರುವಂತೆ ಯಾವಾಗಲೂ ಹಾಗೆಯೇ ಮುಂದುವರಿಯಲಾರವು. ದಿಗ್‌ಭ್ರಮೆಗೊಳಿಸುವ ಬದಲಾವಣೆಗಳು ಮುಂದಿವೆ. ಆದರೆ ಯಾರು ವಿವೇಕದಿಂದ ಕ್ರಿಯೆ ನಡಿಸುತ್ತಾರೋ ಅವರಿಗೆ ಆಶ್ಚರ್ಯಕರ ಪ್ರತೀಕ್ಷೆಗಳು ಕಾದಿವೆ.

ಹೀಗಿರಲಾಗಿ, ಪುರಾತನ ಪ್ರವಾದಿಯ ಮಾತುಗಳಿಗೆ ಕಿವಿಗೊಡಿರಿ: “ಯೆಹೋವನ ನಿಯಮವನ್ನು ಕೈಕೊಂಡ ಲೋಕದ ದೀನರೇ, . . . ಯೆಹೋವನನ್ನು ಆಶ್ರಯಿಸಿರಿ. ಸದ್ಧರ್ಮವನ್ನು ಅಭ್ಯಾಸಿಸಿರಿ, ದೈನ್ಯವನ್ನು ಹೊಂದಿಕೊಳ್ಳಿರಿ; ಒಂದುವೇಳೆ ಯೆಹೋವನ ಸಿಟ್ಟಿನ ದಿನದಲ್ಲಿ ಮರೆಯಾಗುವಿರಿ.” (ಚೆಫನ್ಯ 2:3) ನಾವು ಈ ಸೂಚನೆಯನ್ನು ಹೇಗೆ ಅನ್ವಯಿಸಬಹುದು? ಆ ಪ್ರಶ್ನೆಯನ್ನು ಉತ್ತರಿಸಲು ಹಿಂಬಾಲಿಸುವ ಲೇಖನಗಳು ಸಹಾಯಮಾಡುವುವು. (w92 5⁄1)

[ಅಧ್ಯಯನ ಪ್ರಶ್ನೆಗಳು]

a  1914 ರ ಸಿನಾರಿಯೊ ಆಫ್‌ ದ ಫೋಟೋ ಡ್ರಾಮ ಆಫ್‌ ಕ್ರಿಯೇಶನ್‌ ನ ಮುಖಪತ್ರ.

b  ಅಧಿಕ ವಿವರಗಳಿಗಾಗಿ, ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಇಂಡಿಯ ಪ್ರಕಾಶಿತವಾದ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕದ 16 ನೆಯ ಅಧ್ಯಾಯ ನೋಡಿರಿ.

[ಪುಟ 7 ರಲ್ಲಿರುವ ಚಿತ್ರ]

ಭೂಕಂಪಗಳು 1914 ನ್ನು ಹಿಂಬಾಲಿಸಿದ ದಶಮಾನದಲ್ಲಿ

ತಾರೀಕು: ಸ್ಥಳ: ಮರಣಗಳು:

ಜನವರಿ 13, 1915 ಅವಜ್ಜಾನೊ, ಇಟೆಲಿ 32,600

ಜನವರಿ 21, 1917 ಬಾಲಿ, ಇಂಡೋನೇಷ್ಯ 15,000

ಫೆಬ್ರವರಿ 13, 1918 ಕ್ವಾಂಗ್‌ಟಂಗ್‌ ಪ್ರಾವಿನ್ಸ್‌, ಚೈನಾ 10,000

ಅಕ್ಟೋಬರ 11, 1918 ಪೋರ್ಟ ರೀಕೊ (ಪಶ್ಚಿಮ) 116

ಜನವರಿ 3, 1920 ವೇರಾಕ್ರುಸ್‌, ಮೆಕ್ಸಿಕೊ 648

ಸಪ್ಟಂಬರ 7, 1920 ರಿಗ್ಯೋ ಡಿ ಕಲಾಬ್ರಿಯ, ಇಟೆಲಿ 1,400

ಡಿಸೆಂಬರ್‌ 16, 1920 ನಿಂಗ್‌ಸಿಯ ಪ್ರಾವಿನ್ಸ್‌, ಚೈನಾ 2,00,000

ಮಾರ್ಚ್‌ 24, 1923 ಜೆಕ್ವಾನ್‌ ಪ್ರಾವಿನ್ಸ್‌, ಚೈನಾ 5,000

ಮೇ 26, 1923 ಇರಾನ್‌ (ಈಶಾನ್ಯ) 2,200

ಸಪ್ಟಂಬರ 1, 1923 ಟೋಕಿಯೊ-ಯೊಕೊಹಾಮ, ಜಪಾನ್‌ 99,300

ಜೇಮ್ಸ್‌ ಎಮ್‌. ಗರ್‌ ಮತ್ತು ಹರೀಶ್‌ ಸಿ. ಶಾ ಇವರ, ಟೆರ್ರಾ ನಾನ್‌ ಫರ್ಮ ಪುಸ್ತಕದಲ್ಲಿ “ಲೋಕದ ಗಮನಾರ್ಹ ಭೂಕಂಪಗಳು” ತಖ್ತೆಯಿಂದ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ