ದೇವರನ್ನು ಹುಡುಕುವ ಸಮಯ
ಈ ಪುಟದಲ್ಲಿರುವ ಚಿತ್ರವು ಅಥೇನ್ಸಿನ ಅಕ್ರಾಪೊಲಿಸ್ ಆಗಿದ್ದು, ಒಮ್ಮೆ ಅನೇಕ ದೇವರು, ದೇವತೆಗಳ ಆರಾಧನೆಯ ಕೇಂದ್ರವಾಗಿತ್ತು. ಅಕ್ರಾಪೊಲಿಸ್‌ನ ಕೆಳಗಡೆ ಅರಿಯೊಪಾಗ ಇದೆ, ಇದು ಪುರಾತನ ಕಾಲದ ಒಂದು ನ್ಯಾಯಸ್ಥಾನದ ಒಂದು ನಿವೇಶನವಾಗಿತ್ತು ಎಂದು ಹೇಳಲಾಗುತ್ತದೆ. ಈ ಸ್ಥಳದಲ್ಲಿಯೆ, ಸುಮಾರು 2,000 ವರ್ಷಗಳ ಹಿಂದೆ, ಅಪೊಸ್ತಲ ಪೌಲನು ನಿಂತು, ನಿಜವಾಗಿಯೂ ಗಮನಾರ್ಹವಾದ ಭಾಷಣವೊಂದನ್ನು ನೀಡಿದನು. ಅವನು ಹೇಳಿದ್ದರಲ್ಲಿ ಕೆಲವು ಹೀಗೆ ಇತ್ತು:
“ಆತನು [ದೇವರು] ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ ಅವರವರು ಇರತಕ್ಕ ಕಾಲಗಳನ್ನೂ ಅವರವರ ನಿವಾಸಗಳ ಮೇರೆಗಳನ್ನೂ ನಿಷ್ಕರ್ಷಿಸಿ ಭೂಮಂಡಲದಲ್ಲಿಲ್ಲಾ ವಾಸಮಾಡಿಸಿ ಒಂದು ವೇಳೆ ಅವರು ತಡವಾಡಿ ಕಂಡುಕೊಂಡಾರೇನೋ ಎಂದು ತನ್ನನ್ನು ಹುಡುಕುವವರನ್ನಾಗಿ ಮಾಡಿದನು. ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ. ಆತನಲ್ಲಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ, ಇರುತ್ತೇವೆ.”—ಅ.ಕೃತ್ಯಗಳು 17:26-28.
ಪೌಲನ ಮಾತುಗಳನ್ನು ಸಾಮಾನ್ಯ ಮಾನವ ಕುಲವು ಗಮನಿಸಿದ್ದರೆ, ಇತಿಹಾಸವು ಎಷ್ಟೊಂದು ಭಿನ್ನವಾಗಿರುತ್ತಿತ್ತು! ಸಾರ್ವಭೌಮ ಪ್ರಭುವಾದ ಯೆಹೋವನಿಂದ ಸೃಷ್ಟಿಸಲ್ಪಟ್ಟ ಒಬ್ಬ ಮನುಷ್ಯನ ಸಂತಾನದವರೋಪಾದಿ, ಒಂದು ವೇಳೆ ಮಾನವ ಕುಲವು ಅವರ ಸಾಮಾನ್ಯ ಅಭಿರುಚಿಯನ್ನು ಅಂಗೀಕರಿಸಿದ್ದರೆ, ಎಷ್ಟೊಂದು ಯುದ್ಧಗಳು, ಸಂಕಷ್ಟಗಳು ತಡೆಯಲ್ಪಡುತ್ತಿದ್ದವು.
ಇಂದು, ಮಾನವ ಕುಲವು ರಾಷ್ಟ್ರೀಯತೆ, ವರ್ಗಭೇದಗಳು, ಕುಲವರ್ಣೀಯ ದ್ವೇಷಗಳು, ಮತ್ತು ಸಾಮಾಜಿಕ ಅಸಮಾನತೆಗಳಿಂದಾಗಿ ಸೀಳಲ್ಪಟ್ಟಿದೆ. ಆದರೂ, ಪೌಲನ ಮಾತುಗಳು ಇಂದೂ ಅನ್ವಯಿಸಲ್ಪಡುತ್ತವೆ. ದೇವರಿಂದ ಸೃಷ್ಟಿಸಲ್ಪಟ್ಟ ಆ ಒಬ್ಬ ಮನುಷ್ಯನ ವಂಶಜರು ನಾವೆಲ್ಲರೂ ಆಗಿದ್ದೇವೆ. ನಾವೆಲ್ಲರೂ, ಆ ಅರ್ಥದಲ್ಲಿ ಸಹೋದರ, ಸಹೋದರಿಯರಾಗಿರುತ್ತೇವೆ. ಮತ್ತು ಅವನು ಸಿಕ್ಕುವಾಗಲೇ ದೇವರನ್ನು ಹುಡುಕಲು ಈಗಲೂ ಕೂಡ ತಡವಾಗಿರುವದಿಲ್ಲ.
ಅವನ ಭಾಷಣದ ಕೊನೆಯ ಮಾತುಗಳನ್ನು ನಾವು ಗಮನಿಸುವಾಗ, ಪೌಲನು ಮಾತುಗಳು ಇನ್ನಷ್ಟು ಗಂಭೀರ ತರಹದ್ದಾಗುತ್ತವೆ. ಅವನು ಅಂದದ್ದು: “ಆತನು [ದೇವರು] ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸವನ್ನು ಗೊತ್ತುಮಾಡಿದ್ದಾನೆ. ಆವನನ್ನು ಸತ್ತವರೊಳಗಿಂದ ಎಬ್ಬಿಸಿದರ್ದಲ್ಲಿ ಇದನ್ನು ನಂಬುವದಕ್ಕೆ ಎಲ್ಲರಿಗೂ ಆಧಾರ ಕೊಟ್ಟಿದ್ದಾನೆ.”
ಯೇಸುವಿನ ಪುನರುತ್ಥಾನವು ಒಂದು ಐತಿಹಾಸಿಕ ನಿಜಾಂಶವಾಗಿದೆ, ಮತ್ತು ಪೌಲನು ತೋರಿಸುವಂತೆ, ಮಾನವ ಕುಲಕ್ಕೆ ನ್ಯಾಯವಿಚಾರಣೆಯ ದಿನವೊಂದು ಇರುವುದು ಎಂಬುದಕ್ಕೆ ಅದು ಖಾತರಿಯಾಗಿದೆ. ಯಾವಾಗ? ಒಳ್ಳೇದು, ಈ ಮಾತುಗಳನ್ನು ಅರಿಯೊಪಾಗದಲ್ಲಿ ನಿಂತು ಪೌಲನು ನುಡಿದಂದಿನಿಂದ ಹೆಚ್ಚುಕಡಿಮೆ 2,000 ವರ್ಷಗಳು ಹತ್ತಿರಕ್ಕೆ ಅದು ಬಂದದೆ ಎಂದು ನಾವು ಬಲ್ಲೆವು. ನಿಶ್ಚಯವಾಗಿಯೂ, ಬೈಬಲ್ ಪ್ರವಾದನೆಯ ನೆರವೇರಿಕೆಯು, ಅದು ಬಹಳ ಸಮೀಪದಲ್ಲಿದೆ ಎಂದು ಸೂಚಿಸುತ್ತದೆ. ಸ್ತಿಮಿತತೆಯ ಎಂಥ ಒಂದು ವಿಚಾರ! ಎಲ್ಲಾ ಯಥಾರ್ಥತೆಯಲ್ಲಿ ದೇವರನ್ನು ಹುಡುಕುವದು ಎಷ್ಟೊಂದು ತುರ್ತಿನದ್ದಾಗಿರುತ್ತದೆ, ಯಾಕಂದರೆ ಪೌಲನು ಅಥೇನ್ಯರಿಗೆ ಹೇಳಿದಂತೆ, “ಈಗಲಾದರೋ ಆತನು ನಾಲ್ಕು ದಿಕ್ಕಿನಲ್ಲಿರುವ ಮನುಷ್ಯರೆಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪ್ಪಣೆಕೊಡುತ್ತಾನೆ” !—ಅ. ಕೃತ್ಯಗಳು 17:30, 31. (w92 7/1)