ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 2/15 ಪು. 32
  • ಇದು ಅಶಕ್ಯವೇ ಸರಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇದು ಅಶಕ್ಯವೇ ಸರಿ!
  • ಕಾವಲಿನಬುರುಜು—1993
ಕಾವಲಿನಬುರುಜು—1993
w93 2/15 ಪು. 32

ಇದು ಅಶಕ್ಯವೇ ಸರಿ!

“ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವದು ಸುಲಭ.” (ಮತ್ತಾಯ 19:24) ತನ್ನ ಶಿಷ್ಯರಿಗೆ ಒಂದು ಪಾಠವನ್ನು ಕಲಿಸುವುದಕ್ಕಾಗಿ ಯೇಸು ಕ್ರಿಸ್ತನು ಇದನ್ನು ಹೇಳಿದ್ದನು. ಐಶ್ವರ್ಯವಂತನಾದ ಒಬ್ಬ ಯುವ ಅಧಿಪತಿಯು ಯೇಸುವಿನ ಹಿಂಬಾಲಕನಾಗುವ ಮತ್ತು ಅನೇಕ ಆಶೀರ್ವಾದಗಳ ಆತ್ಮಿಕ ಸಂದರ್ಭಗಳಲ್ಲಿ ಪಾಲುಗಾರನಾಗುವ ಒಂದು ಆಮಂತ್ರಣವನ್ನು ಆವಾಗಲೇ ನಿರಾಕರಿಸಿದ್ದನು. ಮೆಸ್ಸೀಯನನ್ನು ಹಿಂಬಾಲಿಸುವ ಬದಲಾಗಿ ತನ್ನ ಅನೇಕಾನೇಕ ಸೊತ್ತುಗಳಿಗೆ ಅಂಟಿಕೊಂಡಿರುವುದನ್ನು ಆ ಮನುಷ್ಯನು ಆರಿಸಿಕೊಂಡನು.

ರಾಜ್ಯ ಏರ್ಪಾಡಿನಲ್ಲಿ ನಿತ್ಯಜೀವವನ್ನು ಪಡೆಯುವುದಕ್ಕೆ ಒಬ್ಬ ಐಶ್ವರ್ಯವಂತ ವ್ಯಕ್ತಿಗೆ ಪೂರಾ ಅಶಕ್ಯವೆಂದು ಯೇಸು ಇಲ್ಲಿ ಹೇಳುತ್ತಿರಲಿಲ್ಲ, ಯಾಕಂದರೆ ನಿರ್ದಿಷ್ಟ ಧನಿಕ ವ್ಯಕ್ತಿಗಳೂ ಅವನ ಹಿಂಬಾಲಕರಾಗಿದ್ದರು. (ಮತ್ತಾಯ 27:57; ಲೂಕ 19:2, 9) ಆದರೂ, ಆತ್ಮಿಕ ವಿಷಯಗಳಿಗಿಂತ ತನ್ನ ಸೊತ್ತುಗಳ ಮೇಲೆ ಹೆಚ್ಚಿನ ಪ್ರೀತಿ ಇರುವ ಯಾವನೇ ಧನಿಕ ವ್ಯಕ್ತಿಗೆ, ಇದು ಅಶಕ್ಯವಾಗಿದೆ. ತನ್ನ ಆತ್ಮಿಕ ಅಗತ್ಯತೆಗಳ ಪ್ರಜ್ಞೆಯುಳ್ಳವನಾಗುವ ಮತ್ತು ದೈವಿಕ ಸಹಾಯವನ್ನು ಹುಡುಕುವ ಮೂಲಕ ಮಾತ್ರವೇ ಅಂಥ ವ್ಯಕ್ತಿಯೊಬ್ಬನು ದೇವದತ್ತ ರಕ್ಷಣೆಯನ್ನು ಪಡೆಯಶಕ್ತನು.—ಮತ್ತಾಯ 5:3; 19:16-26.

ಒಂಟೆ ಮತ್ತು ಸೂಜೀ ಕಣ್ಣಿನ ದೃಷ್ಟಾಂತವು ಅಕ್ಷರಶಃ ಪರಿಗಣಿಸುವುದಕ್ಕಾಗಿಲ್ಲ. ಒಂದು ಸಮೃದ್ಧವಾದ ಪ್ರಾಪಂಚಿಕ ಜೀವನಶೈಲಿಯನ್ನು ಕಾಪಾಡುತ್ತಾ ಇದ್ದು, ದೇವರನ್ನು ಪ್ರೀತಿಸಲು ಪ್ರಯತ್ನಿಸುವ ಐಶ್ವರ್ಯವಂತರಾದ ಜನರನ್ನು ಎದುರಿಸುವ ಕಷ್ಟವನ್ನು ಒತ್ತಿಹೇಳುವುದಕ್ಕೆ ಯೇಸು ಒಂದು ಅತಿಶಯೋಕ್ತಿಯನ್ನು ಉಪಯೋಗಿಸುತ್ತಿದ್ದನು.—1 ತಿಮೊಥೆಯ 6:17-19.

ಸೂಜಿಯ ಕಣ್ಣು ನಗರದ ಗೋಡೆಯ ಒಂದು ಚಿಕ್ಕ ದ್ವಾರವೆಂದೂ ಮತ್ತು ಒಂದು ಒಂಟೆಯು, ಅದರ ಹೊರೆಯನ್ನು ಕಳಚಿಬಿಟ್ಟಲ್ಲಿ ಅದನ್ನು ದಾಟಬಲ್ಲದೆಂದೂ ಕೆಲವರು ಹೇಳುತ್ತಾರೆ. ಆದ, ಮತ್ತಾಯ 19:24 ಮತ್ತು ಮಾರ್ಕ 10:25 ರಲ್ಲಿ “ಸೂಜಿ” ಎಂದು ಭಾಷಾಂತರವಾದ ಗ್ರೀಕ್‌ ಪದ ರಾಫಿಸ್‌ ಎಂಬದು “ಹೊಲಿ” ಎಂಬ ಅರ್ಥವುಳ್ಳ ಕ್ರಿಯಾಪದದಿಂದ ಬಂದಿದೆ. ಲೂಕ 18:25 ರ ಬಿಲೋನ್‌ ಎಂಬ ಪದವು ಒಂದು ಹೊಲಿಯುವ ಸೂಜಿಯನ್ನು ಸೂಚಿಸುತ್ತದೆ, ಮತ್ತು ಅಲ್ಲಿ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಷನ್‌ ಓದುವುದು: “ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ, ವಾಸ್ತವದಲ್ಲಿ, ಒಂಟೆಯು ಹೊಲಿಗೆಯ ಸೂಜಿಯ ಕಣ್ಣಿನೊಳಗೆ ನುಗ್ಗುವದು ಸುಲಭ.” ವಿವಿಧ ಪ್ರಮಾಣಗ್ರಂಥಗಳು ಈ ಭಾಷಾಂತರವನ್ನು ಬೆಂಬಲಿಸಿವೆ. ಡಬ್ಲ್ಯೂ.ಇ. ವೈನ್‌ ಅನ್ನುವುದು: “‘ಸೂಜಿಯ ಕಣ್ಣನ್ನು’ ಚಿಕ್ಕ ದ್ವಾರಗಳಿಗೆ ಅನ್ವಯಿಸುವ ವಿಚಾರವು ಒಂದು ಆಧುನಿಕ ವಿಚಾರವಾಗಿ ತೋರುತ್ತದೆ; ಅದಕ್ಕೆ ಯಾವ ಪುರಾತನ ಸುಳಿವೂ ಇಲ್ಲ.”—ಆ್ಯನ್‌ ಎಕ್ಸ್‌ಪೊಸಿಟರಿ ಡಿಕ್ಷೆನರಿ ಆಫ್‌ ನ್ಯೂ ಟೆಸ್ಟಮೆಂಟ್‌ ವರ್ಡ್ಸ್‌.

ಒಂದು ದೊಡ್ಡ ಒಂಟೆಯು ಒಂದು ಚಿಕ್ಕ ಹೊಲಿಗೆಯ ಸೂಜೀ ಕಣ್ಣಿನೊಳಗೆ ನುಗ್ಗಲು ಪ್ರಯತ್ನಿಸುವುದು “ಪೌರಾತ್ಯ ಅತಿಶಯೋಕ್ತಿಯ ಆಸ್ವಾದ” ಎನ್ನುತ್ತದೆ ಒಂದು ನಿರ್ದೇಶಕ ಕೃತಿ. ಮತ್ತು ಅವುಗಳಲ್ಲಿ ಕೆಲವು ಎಷ್ಟು ಮರ್ಮಭೇದಿಯಾಗಿವೆಯೆಂದರೆ ಅವು ಅಶಕ್ಯವಾದದ್ದನ್ನು ಮಾಡುವಂತೆ ತೋರುತ್ತವೆ, ಎನ್ನುತ್ತದೆ ದ ಬ್ಯಾಬಿಲೋನಿಯನ್‌ ಟಾಲ್ಮೂಡ್‌: “ಅವು ಆನೆಯನ್ನು ಸೂಜೀ ಕಣ್ಣಿನೊಳಗಿಂದ ಎಳೆಯುತ್ತವೆ.” ಒಂದು ಅಸಾಧ್ಯತೆಯನ್ನು ಒತ್ತಿಹೇಳುವುದಕ್ಕಾಗಿ ಯೇಸು ಲಾಕ್ಷಣಿಕ ಅತಿಶಯೋಕ್ತಿ ಮತ್ತು ಸ್ಫುಟವಾದ ವೈದೃಶ್ಯವನ್ನು ಉಪಯೋಗಿಸಿದನು. ಒಂದು ಒಂಟೆಗಾಗಲಿ, ಆನೆಗಾಗಲಿ ಹೊಲಿಗೆಯ ಸೂಜೀ ಕಣ್ಣಿನೊಳಗೆ ಹೋಗುವುದು ಅಸಾಧ್ಯವು. ಆದರೂ, ದೈವಿಕ ಸಹಾಯದೊಂದಿಗೆ, ಐಶ್ವರ್ಯವಂತನು ಒಂದು ಪ್ರಾಪಂಚಿಕ ನೋಟವನ್ನು ತ್ಯಜಿಸಬಲ್ಲನು ಮತ್ತು ನಿಜವಾಗಿಯೂ ನಿತ್ಯಜೀವವನ್ನು ಹುಡುಕಶಕ್ತನು. ಅಂತೆಯೇ, ಮಹೋನ್ನತ ದೇವರಾದ ಯೆಹೋವನ ಕುರಿತು ಕಲಿಯಲು ಮತ್ತು ಆತನ ಚಿತ್ತವನ್ನು ಮಾಡಲು ಬಯಸುವ ಎಲ್ಲರೂ ಮಾಡಶಕ್ತರಾಗಿದ್ದಾರೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ