ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 3/1 ಪು. 30
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1993
  • ಅನುರೂಪ ಮಾಹಿತಿ
  • ಪುನರುತ್ಥಾನ ಆದಾಗ ಯೇಸುವಿಗೆ ಯಾವ ತರದ ದೇಹ ಇತ್ತು?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • “ಸತ್ತವರು ಎಬ್ಬಿಸಲ್ಪಡುವರು”
    ಕಾವಲಿನಬುರುಜು—1998
  • 4 ಸಂಶಯಕ್ಕೆ ಆಸ್ಪದಕೊಡಬೇಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಯೇಸುವಿನ ಪುನರುತ್ಥಾನ ನಮ್ಮ ಮೇಲೆ ಬೀರುವ ಪರಿಣಾಮ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
ಇನ್ನಷ್ಟು
ಕಾವಲಿನಬುರುಜು—1993
w93 3/1 ಪು. 30

ವಾಚಕರಿಂದ ಪ್ರಶ್ನೆಗಳು

ಮತ್ತಾಯ 28:17 ರ ಅರ್ಥವು, ಪುನರುತಿಥ್ತ ಯೇಸುವು ಅವರಿಗೆ ಗೋಚರಿಸಿಯಾದ ಬಹು ಸಮಯದ ಅನಂತರವೂ ಕೆಲವು ಅಪೊಸ್ತಲರು ಸಂದೇಹಪಡುವುದನ್ನು ಮುಂದರಿಸಿದರೆಂದಾಗಿದೆಯೇ?

ಅಲ್ಲ, ಮತ್ತಾಯ 28:16, 17 ರಿಂದ ನಾವು ಆ ತೀರ್ಮಾನವನ್ನು ಮಾಡುವ ಅಗತ್ಯವಿಲ್ಲ, ಅದು ಓದುವುದು: “ಬಳಿಕ ಹನ್ನೊಂದು ಮಂದಿ ಶಿಷ್ಯರು ಗಲಿಲಾಯಕ್ಕೆ ಹೋಗಿ ಯೇಸು ತಮಗೆ ಗೊತ್ತುಮಾಡಿದ ಬೆಟ್ಟಕ್ಕೆ ಸೇರಿದರು. ಅಲ್ಲಿ ಆತನನ್ನು ಕಂಡು ಆತನಿಗೆ ಅಡಬ್ಡಿದ್ದರು; ಆದರೆ ಕೆಲವರು ಸಂದೇಹಪಟ್ಟರು.”

ಇದಕ್ಕೆ ಬಹಳ ಮುಂಚಿತವಾಗಿಯೇ ಯೇಸು ತನ್ನ ಶಿಷ್ಯರಿಗೆ, “ತಾನು ಯೆರೂಸಲೇಮಿಗೆ ಹೋಗಿ ಅಲ್ಲಿ ಹಿರಿಯರಿಂದಲೂ ಮಹಾಯಾಜಕರಿಂದಲೂ ಬಹು ಕಷ್ಟಗಳನ್ನನುಭವಿಸಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡಬೇಕು” ಎಂಬದನ್ನು ಗ್ರಹಿಸುವಂತೆ ಸಹಾಯ ಮಾಡಲು ಪ್ರಯತ್ನಿಸಿದ್ದನು. (ಮತ್ತಾಯ 16:21) ಆದಾಗ್ಯೂ, ಆತನ ದಸ್ತಗಿರಿ ಮತ್ತು ಕೊಲ್ಲಲ್ಪಡುವಿಕೆಯು ಶಿಷ್ಯರನ್ನು ನಿರಾಶೆ ಮತ್ತು ಗಲಿಬಿಲಿಗೊಳಿಸಿತ್ತು. ಆತನ ಪುನರುತ್ಥಾನವು ಒಂದು ಆಶ್ಚರ್ಯದೋಪಾದಿ ಬಂದಂತೆ ತೋರಿತು. ಮತ್ತು ಆತನು ತನ್ನನ್ನು ಮನುಷ್ಯ ರೂಪದಲ್ಲಿ ತೋರಿಸಿಕೊಂಡಾಗ, ಮೊದಮೊದಲು ಕೆಲವರು “ಸಂತೋಷದ ದೆಸೆಯಿಂದ ಇನ್ನೂ ನಂಬದೆ” ಇದ್ದರು. (ಲೂಕ 24:36-41) ಪುನರುತ್ಥಾನದ ತರುವಾಯದ ಆತನ ಕಾಣಿಸಿಕೊಳ್ಳುವಿಕೆಗಳಾದರೋ, ಆತನ ಪುನರುತ್ಥಾನದ ನಿಜತ್ವವನ್ನು ಸ್ವೀಕರಿಸುವುದಕ್ಕೆ ಆತನ ಆಪ್ತ ಹಿಂಬಾಲಕರಿಗೆ ಸಹಾಯಮಾಡಿದ್ದವು; ಯೇಸು ಎಬ್ಬಿಸಲ್ಪಟ್ಟಿದ್ದನು ಎಂಬ ಖಾತ್ರಿಯು ಅಪೊಸ್ತಲ ತೋಮನಿಗೆ ಸಹ ಆಗಿತ್ತು.—ಯೋಹಾನ 20:24-29.

ಆ ಮೇಲೆ ಆ 11 ಮಂದಿ ನಂಬಿಗಸ್ತ ಅಪೊಸ್ತಲರು “ಗಲಿಲಾಯಕ್ಕೆ ಹೋದರು.” (ಮತ್ತಾಯ 28:16; ಯೋಹಾನ 21:1) ಅವರು ಅಲ್ಲಿರುವಾಗಲೇ ಯೇಸು, “ಐನೂರು ಮಂದಿಗಿಂತ ಹೆಚ್ಚು ಸಹೋದರರಿಗೆ ಕಾಣಿಸಿಕೊಂಡನು.” (1 ಕೊರಿಂಥ 15:6) “ಕೆಲವರು ಸಂದೇಹಪಟ್ಟರು” ಎಂದು ಮತ್ತಾಯ 28:17 ತಿಳಿಸುವುದು ಇದೇ ಸನ್ನಿವೇಶದಲ್ಲಾಗಿತ್ತು. ಹೀಗೆ ಯಾರು ಇನ್ನೂ ಸಂದೇಹಪಟ್ಟರೋ ಅವರು ಆ 500 ಮಂದಿ ಹಿಂಬಾಲಕರಲ್ಲಿ ಇದ್ದವರಾಗಿರ ಸಾಧ್ಯವಿದೆ.

ಈ ವಿಷಯದ ಮೇಲೆ, ವಾಚ್‌ ಟವರ್‌ ಸೊಸೈಟಿಯ ಮೊದಲನೆಯ ಪ್ರೆಸಿಡೆಂಟರಾದ ಸಿ.ಟಿ. ರಸ್ಸೆಲ್‌ರು ಮಾಡಿದ್ದ ಆಸಕ್ತಿಭರಿತ ಹೇಳಿಕೆಯನ್ನು ಗಮನಿಸಿರಿ:

“ಸಂದೇಹಪಟ್ಟವರಲ್ಲಿ ಆ ಹನ್ನೊಂದು ಅಪೊಸ್ತಲರಲ್ಲಿ ಯಾರಾದರೂ ಇದ್ದರೆಂದು ನಾವು ನ್ಯಾಯಸಮ್ಮತವಾಗಿ ಊಹಿಸ ಸಾಧ್ಯವಿಲ್ಲ ಯಾಕಂದರೆ ಅವರಿಗೆ ಪೂರ್ಣ ಮನದಟ್ಟಾಗಿತ್ತು, ಸಂಪೂರ್ಣ ಖಾತ್ರಿಯಾಗಿತ್ತು, ಮತ್ತು ಹಾಗೆಂದು ಅವರು ಮುಂಚೆಯೇ ತಮ್ಮನ್ನು ವ್ಯಕ್ತಪಡಿಸಿಕೊಂಡಿದ್ದರು. ಸಂದೇಹಪಟ್ಟವರು, ನಾವು ನೆನಸುವ ಮೇರೆಗೆ, ಈ ನೇಮಿತ ಕೂಟದಲ್ಲಿ ಹಾಜರಿದ್ದ ಆ ‘ಐನೂರು ಮಂದಿ ಸಹೋದರರಲ್ಲಿ’ ಕೂಡಿದ್ದವರಾಗಿರಬೇಕು, ಯಾಕಂದರೆ ಆತನ ಪುನರುತ್ಥಾನದಂದಿನಿಂದ ಅವರಿಗೆ ಆತನೊಂದಿಗೆ ಯಾವ ಪೂರ್ವ ಸಮಾಗಮವೂ ಸಿಕ್ಕಿರಲಿಲ್ಲ, ಮತ್ತು ಅವರಲ್ಲಿ ಕೆಲವರ ನಂಬಿಕೆಯು, ಆತನು ಯಾರೊಂದಿಗೆ ಈವಾಗಲೇ ಮಾತಾಡಿದ್ದನೋ ಆ ಅಪೊಸ್ತಲರಿಗಿಂತ ಮತ್ತು ವಿಶೇಷ ಸ್ನೇಹಿತರಿಗಿಂತ ಹೆಚ್ಚು ನಿರ್ಬಲವಾಗಿತ್ತು ಎಂದು ನ್ಯಾಯಸಮ್ಮತವಾಗಿ ಊಹಿಸಬಹುದು. ‘ಕೆಲವರು ಸಂದೇಹ ಪಟ್ಟರು’ ಎಂಬ ಈ ಹೇಳಿಕೆಯು ಸೌವಾರ್ತಿಕನ ದಾಖಲೆಯ ಯಥಾರ್ಥತೆಯ ಒಂದು ರುಜುವಾತಾಗಿದೆ. ಕರ್ತನ ಹಿಂಬಾಲಕರು ಸುಲಭವಾಗಿ ನಂಬಿಬಿಡುವವರಲ್ಲ, ಬದಲಾಗಿ, ನೀಡಲಾದ ರುಜುವಾತುಗಳನ್ನು ಶೋಧಿಸಿ, ತೂಗಿನೋಡುವ ಪ್ರವೃತ್ತಿಯವರೆಂದೂ ಇದು ನಮಗೆ ತೋರಿಸುತ್ತದೆ; ಮತ್ತು ನಂಬಿದವರಲ್ಲಿದ್ದ ಹುರುಪು, ಉತ್ಸಾಹ, ಮತ್ತು ಸ್ವ-ತ್ಯಾಗದ ಆತ್ಮವು, ನಮ್ಮ ಕರ್ತನ ಪುನರುತ್ಥಾನದ ಸಂಬಂಧವಾಗಿ ಅವರಿಗಿದ್ದ ಖಾತ್ರಿಗಳ ಪ್ರಾಮಾಣಿಕತೆಗೆ ಹೇರಳ ರುಜುವಾತನ್ನು ನಮಗೆ ಕೊಡುತ್ತದೆ; ಅದನ್ನು, ಅವರು ಹಾಗೂ ನಾವು ಆತನಲ್ಲಿ ನಮ್ಮ ನಂಬಿಕೆಯ ನೆತ್ತೆಗಲ್ಲಾಗಿ ಅಂಗೀಕರಿಸುತ್ತೇವೆ. ಕ್ರಿಸ್ತನು ಎದ್ದು ಬರಲಿಲ್ಲವಾದರೆ ನಮ್ಮ ನಂಬಿಕೆಯು ವ್ಯರ್ಥವು ಮತ್ತು ನಾವಿನ್ನೂ ನಮ್ಮ ಪಾಪದಲ್ಲೇ ಇದ್ದೇವೆ.—1 ಕೊರಿ. 15:17.” ಸಯನ್ಸ್‌ ವಾಚ್‌ ಟವರ್‌ ಆ್ಯಂಡ್‌ ಹೆರಾಲ್ಡ್‌ ಆಫ್‌ ಕ್ರೈಸ್ಟ್ಸ್‌ ಪ್ರೆಸೆನ್ಸ್‌, ಮೇ 1, 1901, ಪುಟ 152.

ಮತ್ತಾಯನು ಈ ವಿಷಯವನ್ನು ತಿಳಿಸುವ ರೀತಿಯು ಬೈಬಲಿನ ನಂಬಲರ್ಹತೆ ಮತ್ತು ಪ್ರಾಮಾಣಿಕತೆಯ ಒಂದು ರುಜುವಾತನ್ನು ನಮಗೆ ಒದಗಿಸುತ್ತದೆಂಬದನ್ನು ನಾವು ಗಮನಿಸಬಹುದು. ಒಬ್ಬನು ಒಂದು ವೃತ್ತಾಂತವನ್ನು ಕಲ್ಪಿಸಿ ಹೇಳುತ್ತಿದದ್ದಾದರೆ, ತನ್ನ ಕಲ್ಪಿತ ಕಥೆಯು ನಂಬಲರ್ಹವಾಗುವಂತೆ ಮಾಡುವ ವಿವರಗಳನ್ನು ಒದಗಿಸುವ ಪ್ರವತ್ತಿಯುಳ್ಳವನಾಗುವನು; ಬಿಡಲ್ಪಟ್ಟ ವಿವರಗಳು ಅಥವಾ ತೆರಪುಗಳಾಗಿ ತೋರುವವುಗಳು ಅವನ ಕೃತಿಮರಚನೆಯ ಮೇಲೆ ಸಂದೇಹವನ್ನು ಹಾಕುವುವೆಂಬ ಅನಿಸಿಕೆ ಅವನಿಗಾಗುವುದು ಸಂಭವನೀಯ. ಮತ್ತಾಯನ ಕುರಿತಾಗಿ ಏನು?

“ಕೆಲವರು ಸಂದೇಹಪಟ್ಟರು” ಎಂಬ ತನ್ನ ಹೇಳಿಕೆಗೆ ಒಂದು ಸವಿಸ್ತಾರ ವಿವರಣೆಯನ್ನು ಒದಗಿಸುವುದಕ್ಕೆ ಹಂಗಿಗನೆಂಬ ಅನಿಸಿಕೆ ಅವನಿಗಾಗಲಿಲ್ಲ. ಮಾರ್ಕ, ಲೂಕ, ಮತ್ತು ಯೋಹಾನರ ವೃತ್ತಾಂತಗಳು ಇದರ ಕುರಿತು ಏನನ್ನೂ ಹೇಳುವುದಿಲ್ಲ, ಹೀಗೆ ಮತ್ತಾಯನ ಹೇಳಿಕೆಯನ್ನು ಒಂಟಿಯಾಗಿ ತಕ್ಕೊಂಡಲ್ಲಿ, ಅವನೂ ಒಬ್ಬನಾಗಿದ್ದ ಆ 11 ಅಪೊಸ್ತಲರನ್ನು ಒಳಗೂಡಿಸುವಂತೆ ತೋರಬಹುದು. ಆದಾಗ್ಯೂ, ಮತ್ತಾಯನು ಯಾವುದೇ ಸ್ಪಷ್ಟೀಕರಣವನ್ನು ಒದಗಿಸದೇ ಆ ಸಂಕ್ಷಿಪ್ತ ಹೇಳಿಕೆಯನ್ನು ಕೊಟ್ಟನು. ಸುಮಾರು 14 ವರ್ಷಗಳ ಅನಂತರ, ಅಪೊಸ್ತಲ ಪೌಲನು 1 ಕೊರಿಂಥದವರಿಗೆ ಪುಸ್ತಕವನ್ನು ಬರೆದನು. 1 ಕೊರಿಂಥದವರಿಗೆ 15:6 ರಲ್ಲಿ ಅವನು ಒದಗಿಸಿದ ವಿವರಗಳ ಬೆಳಕಿನಲ್ಲಿ, ಸಂದೇಹಪಟ್ಟವರಾದ ಆ ಜನರು ಅಪೊಸ್ತಲರಲ್ಲ, ಬದಲಾಗಿ, ಯೇಸು ಯಾರಿಗೆ ಇನ್ನೂ ಕಾಣಿಸಿರಲಿಲ್ಲವೋ ಆ ಗಲಿಲಾಯದಲ್ಲಿನ ಶಿಷ್ಯರು ಎಂಬ ಸಂಭವನೀಯ ತೀರ್ಮಾನಕ್ಕೆ ನಾವು ಬರಬಹುದಾಗಿದೆ. ಹೀಗೆ, “ಕೆಲವರು ಸಂದೇಹಪಟ್ಟರು” ಎಂಬ ಮತ್ತಾಯನ ಹೇಳಿಕೆಯು ಸಾಚಾ ನಾದವನ್ನು ಕೊಡುತ್ತದೆ; ಪ್ರತಿಯೊಂದು ಅಂತ್ಯ ವಿವರವನ್ನು ವಿವರಿಸಲು ಪ್ರಯತ್ನಿಸದೇ ಒಂದು ಸತ್ಯಯುಕ್ತ ವೃತ್ತಾಂತವನ್ನು ಸಾದರಪಡಿಸುವ ಒಬ್ಬ ಪ್ರಾಮಾಣಿಕ ಲೇಖಕನ ನಾದವು ಯುಕ್ತವಾಗಿಯೇ ಅದಕ್ಕಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ