“ಗರ್ಜಿಸುವ ಸಿಂಹದೋಪಾದಿಯಲ್ಲಿ”
ಸೈತಾನನು ಅಸ್ತಿತ್ವದಲ್ಲಿದ್ದಾನೆಂದು ನೀವು ನಂಬುತ್ತೀರೋ? ಇಂದು ಅನೇಕರು ನಂಬುವುದಿಲ್ಲ. ಅಂಥ ಒಂದು ನಂಬಿಕೆಯು “ವಿಜ್ಞಾನಸಮ್ಮತವಲ್ಲ” ಎಂದವರು ವೀಕ್ಷಿಸುತ್ತಾರೆ. ಹಿಂದೆ 1911 ರಲ್ಲೂ, ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳಿದ್ದು: “ವಿಜ್ಞಾನವು ಮನುಷ್ಯನ ಬಾಹ್ಯ ಸ್ವಭಾವದ ಮತ್ತು ಆಂತರಿಕ ಜೀವನದ ಕಾರ್ಯಗತಿಗಳಲ್ಲಿ ಅನೇಕವನ್ನು ಎಷ್ಟು ವಿವರಿಸಿದೆಯೆಂದರೆ, ಸೈತಾನನ ಕಾರ್ಯಭಾರಕ್ಕೆ ಯಾವ ಎಡೆಯನ್ನೂ ಬಿಟ್ಟಿರುವುದಿಲ್ಲ.” ಸೈತಾನನು ಕೇವಲ ಒಂದು ಕುರುಹು, ಒಂದು ಮಿಥ್ಯೆ ಎಂದು ದೇವಶಾಸ್ತ್ರಜ್ಞರು ವಿವೇಚಿಸುತ್ತಾರೆ. ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವುದು: “ಅನೇಕ ಆಧುನಿಕ ದೇವಶಾಸ್ತ್ರಜ್ಞರು ಪಿಶಾಚನನ್ನು, ಮಾನವ ಸ್ವಭಾವದ ಅತ್ಯಂತ ಕೆಟ್ಟ ಗುಣಗಳಾಗಿ, ಒಂದು ದುಷ್ಟ ಶಕ್ತಿಯ ಕುರುಹಾಗಿ ಪರಿಗಣಿಸುತ್ತಾರೆ.”
ನಿಜಸಂಗತಿಗಳಾದರೂ ಏನು? ಬೈಬಲನ್ನು ನೀವು ನಂಬುವುದಾದರೆ, ಸೈತಾನನು ನೈಜನೆಂದು ನೀವು ನಂಬಲೆ ಬೇಕು. ಅವನು ಅಸ್ತಿತ್ವದಲ್ಲಿದ್ದಾನೆಂದು ಯೇಸು ನಂಬಿದ್ದು ಮಾತ್ರವೇ ಅಲ್ಲ, ಅವನನ್ನು “ಇಹಲೋಕಾಧಿಪತಿ” ಎಂದೂ ಕರೆದಿದ್ದನು. (ಯೋಹಾನ 14:30) ಅಪೊಸ್ತಲ ಪೌಲನು ಸೈತಾನನನ್ನು, “ಈ ಪ್ರಪಂಚದ ದೇವರು” ಎಂದು ಕರೆದಿದ್ದಾನೆ. (2 ಕೊರಿಂಥ 4:4) ಮತ್ತು ವೃದ್ಧ ಅಪೊಸ್ತಲ ಯೋಹಾನನು ಹೇಳಿದ್ದು: “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದಿದ್ದೆ.”—1 ಯೋಹಾನ 5:19.
ಯೋಹಾನನೊಂದಿಗೆ ನೀವು ಅಸಮ್ಮತಿಸುವುದಾದರೆ, ಇತ್ತೀಚಿನ ಇತಿಹಾಸವನ್ನು ತುಸು ಯೋಚಿಸಿರಿ. ಮೃತ್ಯು ತಂಡಗಳನ್ನು ಮತ್ತು ಸರಕಾರಗಳಿಂದ ಚಿತ್ರಹಿಂಸೆಯ ಉಪಯೋಗವನ್ನು ಗಮನಿಸಿರಿ. ನಮ್ಮ ಸಂತತಿಯು ಕಂಡಿರುವ ಯುದ್ಧಗಳನ್ನು ಮತ್ತು ಕಗ್ಗೊಲೆಗಳನ್ನು ನೆನಪಿಸಿರಿ. ಮತ್ತು ನಮ್ಮ ವಾರ್ತಾಪತ್ರಗಳ ತಲೇಪಂಕ್ತಿಯಾಗಿರುವ ಕ್ರೂರ ಪಾತಕಗಳಲ್ಲಿ ಕೆಲವನ್ನೇ ಹೆಸರಿಸುವಲ್ಲಿ,—ಸಾಮೂಹಿಕ ಕೊಲೆಗಳು, ಬಲಾತ್ಕಾರ ಸಂಭೋಗಗಳು, ಕ್ರಮಾಗತ ಖೂನಿಗಳು, ಮಕ್ಕಳ ಲೈಂಗಿಕ ದೂಷ್ಯತೆ ಇವುಗಳ ಕುರಿತೇನು? ಸೈತಾನನಲ್ಲದೆ ಬೇರೆ ಯಾರು ಈ ಪ್ರಪಂಚದ ದೇವರಾಗಿರ ಸಾಧ್ಯವಿದೆ?
ಕ್ರೈಸ್ತ ಅಪೊಸ್ತಲ ಪೇತ್ರನು ಎಚ್ಚರಿಸಿದ್ದು: “ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.” (1 ಪೇತ್ರ 5:8) ನಿಮ್ಮ ನೆರೆಕರೆಯಲ್ಲಿ ಒಂದು ಸಿಂಹವು ಸಡಿಲವಾಗಿ ಬಿಡಲ್ಪಟ್ಟಿದ್ದರೆ, ಅದು ಅಸ್ತಿತ್ವದಲ್ಲಿದೆಯೋ ಇಲ್ಲವೋ ಎಂದು ನೀವು ಚರ್ಚಿಸುತ್ತಿರುವಿರೋ? ಇಲ್ಲವೇ ರಕ್ಷೆಗಾಗಿ ಓಡುವಿರೋ?
ಸೈತಾನನು ಅಸ್ತಿತ್ವದಲ್ಲಿದ್ದಾನೆಂಬ ಆಶ್ವಾಸನೆ ಉಳ್ಳವರಾಗಿರಿ. ಅವನು ನಿರ್ದಯನೂ ಕ್ರೂರನೂ ಆಗಿರುತ್ತಾನೆ, ಮತ್ತು ಅವನು ನಮಗಿಂತ ಹೆಚ್ಚು ಬಲಾಢ್ಯನು. ಆದ್ದರಿಂದ ಭದ್ರತೆಗಾಗಿ ಅದಕ್ಕಿಂತಲೂ ಹೆಚ್ಚು ಬಲಶಾಲಿಯಾದಾತನ ಬಳಿಗೆ ಓಡಿರಿ. “ಯೆಹೋವನ ನಾಮವು ಬಲವಾದ ಬುರುಜು; ಶಿಷ್ಟನು ಅದರೊಳಗೆ ಓಡಿಹೋಗಿ ಭದ್ರವಾಗಿರುವನು.” (ಜ್ಞಾನೋಕ್ತಿ 18:10) ಯೆಹೋವ ದೇವರೊಂದಿಗೆ ಆಶ್ರಯವನ್ನು ತಕ್ಕೊಳ್ಳಿರಿ, ಮತ್ತು ಆ ಕೆಡುಕನಾದ ಸೈತಾನನ ಪ್ರಭಾವದಿಂದ ಮಾನವಕುಲವು ಬೇಗನೇ ಮುಕ್ತವಾಗಲಿದೆಯೆಂದು ತಿಳಿಯಿರಿ. ಎಂಥ ಒಂದು ಸಂತೋಷಭರಿತ ಪರಿಹಾರವು ಅದಾಗಿರುವುದು!—ಪ್ರಕಟನೆ 20:1-3. (w92 12/1)