“ಪರಲೋಕಗಳಲ್ಲಿ ಒಂದು ನಂಬಿಗಸ್ತ ಸಾಕ್ಷಿ”
ಭೂಮಿಯ ಮೇಲೆ ಮೊದಲನೆಯ ಮನುಷ್ಯನು ನಡೆದಾಡುವ ಬಹಳ ಮೊದಲೇ, ರಾತ್ರಿಯ ಗಗನದಲ್ಲಿ ಚಂದ್ರನು ಪ್ರಕಾಶಮಾನವಾಗಿ ಹೊಳೆದಿರುತ್ತಾನೆ. ಒಂದು ಸಮಯದಲ್ಲಿ ಅನೇಕರು ಅದನ್ನು ಒಂದು ದೇವತೆಯೋಪಾದಿ ಆರಾಧಿಸಿದ್ದರು. ಮರಣದ ನಂತರ ನಿರ್ಮಲ ಆತ್ಮಗಳ ಕಟ್ಟಕಡೆಯ ಗಮ್ಯಸ್ಥಾನವೆಂದು ಗ್ರೀಕ್ ಗ್ರಂಥಕರ್ತ ಪ್ಲುಟಾರ್ಕ್ ವಾದಿಸಿದ್ದನು. ಬಾಲಿಕ್ಟ್ ಪುರಾಣಕಥೆಗಳಲ್ಲಿ, ಚಂದ್ರನು ಒಬ್ಬ ಪುರುಷನು, ಸೂರ್ಯನ ಗಂಡನು ಆಗಿದ್ದನು. ಅವರೊಳಗೆ ಒಂದು ವೈವಾಹಿಕ ಕಲಹ ಎದಿತ್ದು, ಮತ್ತು ತನ್ನ ಹೆಂಡತಿಯಿಂದ ಚಂದ್ರನು ಓಡಿಹೋದನು, ಆಕಾಶದಲ್ಲಿ ಅವಳೊಂದಿಗೆ ಕಾಣಸಿಗುವುದು ಅತಿ ವಿರಳವೆಂದೇ ಹೇಳಬಹುದು!
ಇಂದು, ಎಳೆಯ—ಮತ್ತು ಅತಿ ಎಳೆಯರಲ್ಲದ—ಪ್ರೇಮಿಗಳು ಚಂದ್ರನೆಡೆಗೆ ವೀಕ್ಷಿಸುತ್ತಾರೆ ಮತ್ತು ಪ್ರಣಯಾಚರಣೆಯ ಕಲ್ಪನೆಗಳನ್ನು ಯೋಚಿಸುತ್ತಾರೆ. ವಿಜ್ಞಾನಿಗಳು 1960 ರುಗಳಲ್ಲಿ ಚಂದ್ರನ ಮೇಲೆ ಮಾನವರನ್ನು ಇಡಲು ಮತ್ತು ಸಂಶೋಧನೆಗಾಗಿ ಕೆಲವು ಪೌಂಡುಗಳಷ್ಟು ಕಲ್ಲುಬಂಡೆಗಳನ್ನು ತರಲು ಅಪಾರ ಮೊತ್ತವನ್ನು ಖರ್ಚುಮಾಡಿರುತ್ತಾರೆ. ಚಂದ್ರನ ಕುರಿತು ಒಂದು ಸಂಗತಿಯಾದರೋ ಖಂಡಿತವಾಗಿದೆ. ಪ್ರತಿದಿನ, ಕಾರ್ಯತಖ್ತೆಗೆ ಸರಿಯಾಗಿ, ಅದು ಉದಯಿಸುವುದು ಮತ್ತು ಅಸ್ತಮಿಸುವುದು. ಅದರ ನೇಮಿತ ಆವರ್ತನಗಳಿಗೆ ಅದು ಎಷ್ಟು ನಂಬಿಗಸ್ತಿಕೆಯಿಂದ ಇದೆಯೆಂದರೆ ಗತಕಾಲದ ಸಾವಿರಾರು ವರ್ಷಗಳ ಅದರ ಕಲೆಗಳನ್ನು ಮತ್ತು ಗ್ರಹಣಗಳನ್ನು ನಾವು ಲೆಕ್ಕಿಸಶಕ್ತರಾಗಿದ್ದೇವೆ.
ಚಂದ್ರನೆಡೆಗೆ ಇಸ್ರಾಯೇಲ್ಯರು ನೋಡಿದಾಗ, ಅವರಿಗೆ ಯಾವುದೋ ಒಂದು ಆಶ್ಚರ್ಯಕರವಾದುದರ ಮರುಜ್ಞಾಪಕವಾಗುತ್ತಿತ್ತು. ರಾಜ ದಾವೀದನ ರಾಜಮನೆತನವು ಅಳಿದು ಹೋಗುವುದಿಲ್ಲ ಎಂದು ದೇವರು ವಾಗ್ದಾನಿಸಿದ್ದನು. ಅವನಂದದ್ದು: “ಚಂದ್ರನಂತೆ ಅದು [ದಾವೀದನ ಸಂತತಿ] ನಿತ್ಯಕ್ಕೂ ಸ್ಥಿರವಾಗಿರುವದು. ಪರಲೋಕಗಳಲ್ಲಿ ಒಂದು ನಂಬಿಗಸ್ತ ಸಾಕ್ಷಿಯೋಪಾದಿ.” (ಕೀರ್ತನೆ 89:35-37) ಈ ವಾಗ್ದಾನವು “ದಾವೀದನ ಕುಮಾರ”ನಾದ ಯೇಸುವಿನಲ್ಲಿ ನೆರವೇರಿತು. (ಲೂಕ 18:38) ಅವನ ಮರಣಾನಂತರ, ಯೇಸುವು ಅಮರ ಆತ್ಮನಾಗಿ ಪುನರುತ್ಥಾನಗೊಳಿಸಲ್ಪಟ್ಟನು ಮತ್ತು ಪರಲೋಕಕ್ಕೆ ಏರಿಹೋದನು. (ಅ. ಕೃತ್ಯಗಳು 2:34-36) ಸಮಯಾನಂತರ ದೇವರ ಸ್ವರ್ಗೀಯ ರಾಜ್ಯದ ಅರಸನೋಪಾದಿ ಅವನನ್ನು ಪ್ರತಿಷ್ಠಾಪಿಸಲಾಯಿತು. (ಪ್ರಕಟನೆ 12:10) ಆ ರಾಜ್ಯವು ಈಗ ಆಳುತ್ತದೆ ಮತ್ತು “ಶಾಶ್ವತವಾಗಿ ನಿಲ್ಲುವದು.” (ದಾನಿಯೇಲ 2:44) ಈ ರೀತಿಯಲ್ಲಿ ಯೇಸುವು, ದಾವೀದನ ರಾಜಮನೆತನದ ಸಾಲಿನ ಅಮರ ಪ್ರತಿನಿಧಿ, “ಪರಲೋಕಗಳಲ್ಲಿ ಒಂದು ನಂಬಿಗಸ್ತ ಸಾಕ್ಷಿಯೋಪಾದಿ” ಚಂದ್ರನು ಎಷ್ಟರ ತನಕ ಬಾಳುವನೋ ಅಷ್ಟರ ತನಕ ಇರುವನು.
ಆದಕಾರಣ, ಪ್ರತಿ ಸಾರಿ ಚಂದ್ರನು ರಾತ್ರಿಯ ಆಕಾಶದಲ್ಲಿ ಪ್ರಕಾಶಮಾನವಾಗಿ ಹೊಳೆಯುತ್ತಿರುವುದನ್ನು ನೀವು ಕಾಣುವಾಗ, ದಾವೀದನಿಗೆ ದೇವರು ಕೊಟ್ಟ ವಾಗ್ದಾನವನ್ನು ನೆನಪಿಸಿರಿ ಮತ್ತು ದೇವರ ಘನತೆಗಾಗಿ ಮತ್ತು ನಂಬಿಗಸ್ತ ಮಾನವ ಕುಲದ ನಿತ್ಯ ಆಶೀರ್ವಾದಕ್ಕಾಗಿ, ದೇವರ ರಾಜ್ಯವು ಈಗ ಆಳುತ್ತದೆ ಮತ್ತು ಸದಾ ಕಾಲವೂ ಆಳಲಿರುವುದಕ್ಕೆ ಉಪಕಾರ ಸಲ್ಲಿಸಿರಿ.—ಪ್ರಕಟನೆ 11:15. (w93 1⁄1)
[ಪುಟ 32 ರಲ್ಲಿರುವ ಚಿತ್ರ ಕೃಪೆ]
Frank Zullo