ಗುಪ್ತ ನಿಕ್ಷೇಪವನ್ನು ಹುಡುಕುವುದು
ಇಸವಿ 1848 ರಲ್ಲಿ, ಅಮೆರಿಕದ ಕ್ಯಾಲಿಫೋರ್ನಿಯದ ಸಟರ್ನ ಮಿಲ್ ಬಳಿಯಲ್ಲಿ ಬಂಗಾರವು ಕಂಡುಹಿಡಿಯಲ್ಪಟ್ಟಿತು. ಇಸವಿ 1849 ರೊಳಗೆ ಸಾವಿರಾರು ಮಂದಿ ಬೇಗನೆ ಐಶ್ವರ್ಯವಂತರಾಗುವ ಆಶೆಯಿಂದ ಆ ಕ್ಷೇತ್ರದಲ್ಲಿ ಏಕಾಗ್ರಮುಖವಾದರು, ಮತ್ತು ಹೊಸ ಚಿನ್ನದ ಗಣಿಗೆ ಅಮೆರಿಕದ ಇತಿಹಾಸದಲ್ಲೇ ಮಹತ್ತಾದ ನುಗ್ಗಾಟವು ಪ್ರಾರಂಭಿಸಿತು. ಒಂದು ವರ್ಷದ ಅವಧಿಯೊಳಗೆ, ಅತಿ ಸಮೀಪದ ಬಂದರಾದ ಸ್ಯಾನ್ ಫ್ರಾನ್ಸಿಸ್ಕೊ, ಒಂದು ಚಿಕ್ಕ ಊರಿನಿಂದ 25,000 ಜನಸಂಖ್ಯೆಯ ಒಂದು ಶಹರವಾಗಿ ಬೆಳೆಯಿತು. ದಿಢೀರ್ ಐಶ್ವರ್ಯದ ಪ್ರತೀಕ್ಷೆಯು ಒಂದು ಶಕ್ತಿಶಾಲಿ ಸೆಳೆವಸ್ತುವಾಗಿ ಪರಿಣಮಿಸಿತು.
ಜನರು ಗುಪ್ತ ನಿಧಿಗಾಗಿ ಎಷ್ಟು ಉತ್ಸಾಹವುಳ್ಳವರಾಗಿ ಅಗೆಯುತಾರ್ತೆಂದು ಪ್ರಾಚೀನ ಇಸ್ರಾಯೇಲಿನ ಅರಸ ಸೊಲೊಮೋನನಿಗೆ ತಿಳಿದಿತ್ತು, ಮತ್ತು ಅವನು ಬರೆದಾಗ ಇದಕ್ಕೆ ಇದನ್ನು ಸೂಚಿಸಿದನು: “ಬುದ್ಧಿಗಾಗಿ ಮೊರೆಯಿಟ್ಟು ವಿವೇಕಕ್ಕಾಗಿ ಕೂಗಿಕೊಂಡು ಅದನ್ನು ಬೆಳ್ಳಿಯಂತೆಯೂ ನಿಕ್ಷೇಪದಂತೆಯೂ ಹುಡುಕು; ಆಗ ನೀನು ಯೆಹೋವನ ಭಯವನ್ನು ಅರಿತು ದೈವಜ್ಞಾನವನ್ನು ಪಡೆದುಕೊಳ್ಳುವಿ.”—ಜ್ಞಾನೋಕ್ತಿ 2:3-5.
ಬೆಳ್ಳಿ, ಬಂಗಾರದಿಂದ ನೀವು ಅನೇಕ ವಿಷಯಗಳನ್ನು ಮಾಡಬಹುದು, ಆದರೆ ಬುದ್ಧಿ ಮತ್ತು ವಿವೇಕದಿಂದ ಇನ್ನೂ ಹೆಚ್ಚನ್ನು ನೀವು ಮಾಡಬಲ್ಲಿರಿ. ಇವು ನಿಮಗೆ ಯೋಗ್ಯ ನಿರ್ಣಯಗಳನ್ನು ಮಾಡಲು, ಸಮಸ್ಯೆಗಳನ್ನು ನಿಭಾಯಿಸಲು, ಮದುವೆಯಲ್ಲಿ ಸಫಲಗೊಳ್ಳಲು, ಮತ್ತು ಸಂತೋಷವನ್ನು ಕಂಡುಕೊಳ್ಳಲು ಸಹಾಯ ಮಾಡುವುವು. (ಜ್ಞಾನೋಕ್ತಿ 2:11, 12) ತದ್ರೀತಿಯಲ್ಲಿ, ನಿಜ ಜ್ಞಾನ ಮತ್ತು ವಿವೇಕವು ನಿಮ್ಮ ನಿರ್ಮಾಣಿಕನನ್ನು ತಿಳಿಯಲು, ಆತನ ಉದ್ದೇಶಗಳನ್ನು ತಿಳುಕೊಳ್ಳಲು, ಆತನಿಗೆ ವಿಧೇಯರಾಗಲು ಮತ್ತು ಆತನನ್ನು ಮೆಚ್ಚಿಸಲು ನಿಮಗೆ ಸಹಾಯ ಮಾಡುವುದು. ಇವುಗಳಲ್ಲಿ ಯಾವುದನ್ನೂ ಬಂಗಾರವು ನಿಮಗೆ ಕೊಡಲಾರದು.
ಬೈಬಲಿನ ಮಾತುಗಳು ಸತ್ಯವಾಗಿವೆ: “ಧನವು ಹೇಗೋ ಹಾಗೆ ಜ್ಞಾನವೂ ಆಶ್ರಯ; ಆದರೆ ಇದು ಜ್ಞಾನದ ವಿಶೇಷತೆ: ವಿವೇಕವು ತನ್ನನ್ನು ಹೊಂದಿದವನ ಜೀವವನ್ನು ಕಾಪಾಡುತ್ತದೆ.” (ಪ್ರಸಂಗಿ 7:12, ನ್ಯೂ ಇಂಟರ್ನ್ಯಾಷನಲ್ ವರ್ಷನ್) ದಿಢೀರ್ ಐಶ್ವರ್ಯಗಳ ಕನಸನ್ನು ಅನೇಕರು ಕಾಣುತ್ತಾರಾದರೂ, ಬೈಬಲನ್ನು ತೆರೆದು, ನಿಜ ಐಶ್ವರ್ಯವಾದ ವಿವೇಚನೆ, ತಿಳಿವಳಿಕೆ, ಜ್ಞಾನ ಮತ್ತು ವಿವೇಕಕ್ಕಾಗಿ ಅಗೆಯುವುದು ಅದೆಷ್ಟು ಸುಜ್ಞತೆಯಾಗಿದೆ.