ವಿವಾಹದ ನಿರ್ಬಲಗೊಳ್ಳುತ್ತಿರುವ ಬಂಧ
ಒಬ್ಬಾಕೆ ಯೌವನಸ್ಥೆ ತಾಯಿಯು ಅವಳ ಎರಡು ತಿಂಗಳ ಮಗುವನ್ನು ಮುದ್ದಾಡಿದಳು. ಅನಂತರ, ಹಠಾತ್ತಾದ ಭ್ರಮಾವೇಶದಿಂದ, ಅವಳು ಅವನನ್ನು ನೆಲಕ್ಕೆ ಬೀಳಿಸಿದಳು. ಆ ಹುಡುಗನು ಕೆಲವು ತಾಸುಗಳ ಬಳಿಕ ಸತ್ತನು. “ನಾನವನನ್ನು ಉದ್ದೇಶಪೂರ್ವಕವಾಗಿಯೆ ಬೀಳಿಸಿದೆನು, ಯಾಕಂದರೆ ನನ್ನ ಗಂಡನು ತನ್ನ ಕುಟುಂಬದ ಪರಾಮರಿಕೆ ಮಾಡುತ್ತಿಲ್ಲ,” ಎಂದು ತಾಯಿಯು ಹೇಳಿದಳು. ಅವಳ ಗಂಡನೊಂದಿಗೆ ವಿಷಯವನ್ನು ಮಾತಾಡಿ ತೀರ್ಮಾನಕ್ಕೆ ಬರುವ ಬದಲು, ಅವಳು ತನ್ನ ಕೋಪವನ್ನು ಮುಗ್ಧ ಮಗುವಿನ ಮೇಲೆ ತೆಗೆದಳು.
ಕೆಲವೇ ತಾಯಂದಿರು ಅಂತಹ ಒಂದು ಅತಿರೇಕದ ಕ್ರಮವನ್ನು ಅವಲಂಬಿಸುತ್ತಾರೆ, ಆದರೆ ಅನೇಕರು ಅವಳ ಭಾವನೆಗಳಲ್ಲಿ ಸಹಭಾಗಿಯಾಗುತ್ತಾರೆ. ವಿವಾಹಿತ ದಂಪತಿಗಳಿಗೆ ಅವರ ವಿವಾಹವನ್ನು ಯಶಸ್ವಿಗೊಳಿಸುವುದು ಹೆಚ್ಚು ಹೆಚ್ಚು ಜಟಿಲವಾದದ್ದಾಗುತ್ತಿದೆ. “ವಿವಾಹದ ಯಶಸ್ಸಿನ ಸಂಭವನೀಯತೆಯು ಇಂದು ಅಮೆರಿಕದಲ್ಲಿ ಕೆಳ ಮಟ್ಟದಲ್ಲಿರುವಂತೆಯೆ, ವಿವಾಹಕ್ಕೆ ಒಂದು ಬಲವಾದ, ಅರ್ಹತೆ ಇಲ್ಲದ ಕಟ್ಟುಪಾಡನ್ನು ಮಾಡುವುದು . . . ಎಷ್ಟು ಅಪಾಯಕರವೆಂದರೆ ಯಾವುದೇ ಪೂರ್ಣ ತರ್ಕಸಮ್ಮತ ವ್ಯಕ್ತಿಯು ಅದನ್ನು ಮಾಡಲಾರನು,” ಎಂದು ಜರ್ನಲ್ ಆಫ್ ಮ್ಯಾರೆಜ್ ಆ್ಯಂಡ್ ದ ಫ್ಯಾಮಿಲಿ ಹೇಳುತ್ತದೆ.
ಈ ಗೊಂದಲಮಯ ಸಮಯಗಳಲ್ಲಿ, ಅನೈತಿಕತೆ, ಅಸಾಮಂಜಸ್ಯತೆ, ಸಾಲಗಳು, ವಿವಾಹದಿಂದುಂಟಾದ ಸಂಬಂಧಿಗಳೊಂದಿಗೆ ಘರ್ಷಣೆಗಳು, ಮತ್ತು ಸ್ವಾರ್ಥ, ಇವೆಲ್ಲವು ಅನೇಕಬಾರಿ ವಿವಾಹ ವಿಚ್ಛೇದದೊಳಗೆ ಇಳಿಯುವ ಸಂಸಾರದ ಕಲಹವನ್ನು ಉದ್ರೇಕಿಸುತ್ತದೆ. ಜಪಾನಿನಲ್ಲಿ ಪರಿಸ್ಥಿತಿಯು ಎಷ್ಟು ಗಂಭೀರವಾಗಿದೆಯೆಂದರೆ, ವಿವಾಹ ವಿಚ್ಛೇದದ ವಿರುದ್ಧ ಅದರ ಬಲವಾದ ನಿಲುವಿಗಾಗಿ ಪ್ರಖ್ಯಾತವಾಗಿರುವ ಕ್ಯಾತೊಲಿಕ್ ಚರ್ಚ್ ಕೂಡ, ವಿವಾಹ ವಿಚ್ಛೇದಿತರಿಗೆ ಮತ್ತು ಮರುವಿವಾಹಿತ ಸದಸ್ಯರಿಗೆ ವಿಷಯಗಳನ್ನು ಸುಲಭಗೊಳಿಸಲು ಒಂದು ವಿಶೇಷ ಮಂಡಳಿಯನ್ನು ರಚಿಸಬೇಕಾಯಿತು. ವಿಚ್ಛೇದ ಸಂಬಂಧಿತ ಸಮಸ್ಯೆಗಳ ಮೂಲಕ ಚರ್ಚ್ಗೆ ಹೋಗುವವರ ಒಂದು ಹೆಚ್ಚುತ್ತಿರುವ ಸಂಖ್ಯೆಯು ಬಾಧಿಸಲ್ಪಡುತ್ತಿದೆ.
ಆದಾಗ್ಯೂ, ವಿವಾಹ ವಿಚ್ಛೇದಗಳ ಸಂಖ್ಯೆಯು, ಅಧಿಕ ಮಹತ್ತಾದ ಸಮಸ್ಯೆಗಳಲ್ಲಿ ಕೇವಲ ಒಂದು ಸಣ್ಣ ಭಾಗವಾಗಿರುವುದನ್ನು ಮಾತ್ರ ಬಯಲುಪಡಿಸುತ್ತದೆ. ವಿವಾಹ ವಿಚ್ಛೇದವನ್ನು ಸುಲಭ ಮಾಡುವ ಕೇವಲ ಸಾಮಾಜಿಕ ಒಲವಿಗಿಂತ ಮದುವೆಯ ಕ್ಷೀಣಿಸುವ ಗುಣವು ತಾನೇ ವಿವಾಹ ವಿಚ್ಛೇದಗಳು ವೃದ್ಧಿಯಾಗುವುದರ ಕಾರಣವಾಗಿದೆ ಎಂದು ಅಮೆರಿಕದಲ್ಲಿನ ಸಂಶೋಧನೆಯು ತೋರಿಸಿಕೊಡುತ್ತದೆ. ಕಡಿಮೆ ಪ್ರಯತ್ನ ಮತ್ತು ಕಡಿಮೆ ಕಟ್ಟುಪಾಡಿನೊಂದಿಗೆ, ವಿವಾಹ ಜೀವಿತವು ಅದರ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಅನೇಕರು ವಿವಾಹವಾಗಿರುವ ಜೋಡಿ ಎಂದು ಹೊರತೋರಿಕೆಯನ್ನು ಕಾಪಾಡಿಕೊಳ್ಳುತ್ತಾರೆ, ಆದರೆ ಅವರು ಮಲಗುವ ಕೋಣೆಯಲ್ಲಿ ಪಾಲಿಗರಾಗುವುದಿಲ್ಲ, ಮತ್ತು ಒಬ್ಬರೊಂದಿಗೊಬ್ಬರು ಎಂದೂ ಮಾತಾಡುವುದೇ ವಿರಳ. ‘ನಾನು ನನ್ನ ಗಂಡನೊಂದಿಗೆ ಸಮಾಧಿಯಲ್ಲಿರಲು ತಿರಸ್ಕರಿಸುತ್ತೇನೆ’ ಎಂದು ಹೇಳಿ ತನ್ನ ಸ್ವಂತ ಪ್ರತ್ಯೇಕ ಸಮಾಧಿಯನ್ನು ಕೊಂಡುಕೊಂಡ ಪೌರ್ವಾತ್ಯ ಮಹಿಳೆಯ ಭಾವನೆಯೆ ಕೆಲವರಲ್ಲಿ ಇರುತ್ತದೆ. ಅವಳ ಗಂಡನಿಂದ ಈಗ ವಿವಾಹ ವಿಚ್ಛೇದವನ್ನು ಪಡಕೊಳ್ಳಲಾಗದೆ ಇರುವುದರಿಂದ, ಮರಣಾನಂತರದ ವಿವಾಹ ವಿಚ್ಛೇದವನ್ನು ಹೊಂದಲು ಆಕೆಯು ಉದ್ದೇಶಿಸಿರುತ್ತಾಳೆ. ದುಖಃಕರವಾಗಿ, ಅಂಥ ವ್ಯಕ್ತಿಗಳು ವಿವಾಹ ವಿಚ್ಛೇದ ಹೊಂದಿರದಿದ್ದರೂ, ವಿವಾಹ ಜೀವನವು ಅವರಿಗೆ ಸಂತೋಷದ ಮೂಲವಾಗಿರುವುದಿಲ್ಲ.
ಈಸಾವೊವಿನ ಸಂಬಂಧದಲ್ಲಿಯೂ ಹಾಗೆಯೇ ಇತ್ತು. ಆತನು ತನ್ನ ಹೆಂಡತಿಯನ್ನು ಹುಚ್ಚಾಟಿಕೆಯಿಂದ ಮದುವೆಯಾಗಿದ್ದನು, ಆದುದರಿಂದ ಅವನ ಆತ್ಮದುರಭಿಮಾನದ ಜೀವನ ಕ್ರಮವನ್ನು ಬದಲಾಯಿಸಲು ಅವನು ಪ್ರೇರಣೆಯನ್ನೇ ಅನುಭವಿಸಲಿಲ್ಲ. ದೂರ ಮಾರ್ಗದ ಟ್ರಕ್ ಚಾಲಕನೋಪಾದಿ ಆತನಿಗೆ ಒಳ್ಳೇ ಆದಾಯವಿದ್ದರೂ, ತನ್ನ ಕುಟುಂಬದ ಕಾಳಜಿಯನ್ನು ವಹಿಸದೇ, ತಿನ್ನುವುದು ಮತ್ತು ಕುಡಿಯುವುದರ ಮೇಲೆ ತನ್ನೆಲ್ಲಾ ಆದಾಯವನ್ನು ಅವನು ಹಾಳು ಮಾಡುತ್ತಿದ್ದನು. ಅದರ ಫಲವಾಗಿ, ಅವನ ಹೆಂಡತಿಯೊಂದಿಗಿನ ಜಗಳಗಳು ಕೊನೆಯಿಲ್ಲದವುಗಳಾಗಿದ್ದುವು. ಈಸಾವೊ ನೆನಪಿಸುವುದು, “ನನಗಾಗಿ ವಿಷಯಗಳು ಕೆಟ್ಟದಾದಾಗ, ಮನೆಗೆ ತೆರಳಿ, ನನ್ನ ಕೋಪವನ್ನು ನನ್ನ ಕುಟುಂಬದ ಮೇಲೆ ಕಾರುತಿದ್ದೆನು.” ಶಾಂತವಾಗದ ಜ್ವಾಲಾಮುಖಿಯಂತೆ, ವಿವಾಹ ವಿಚ್ಛೇದದ ವಿಷಯವು ದಿನಾಲೂ ಹೊರಚಿಮ್ಮುತಿತ್ತು.
ಅನೇಕ ಪುರುಷ ಮತ್ತು ಸ್ತ್ರೀಯರು ಒಂದು ಕೆಟ್ಟ ವಿವಾಹವನ್ನು ಸಹಿಸುತ್ತಿದ್ದಾರೆ. ವಿವಾಹ ವಿಚ್ಛೇದವನ್ನು ಪಡಕೊಳ್ಳಲಿ ಯಾ ಇಲ್ಲದಿರಲಿ, ಅವರು ಸಂತೋಷವನ್ನು ಕಂಡುಕೊಳ್ಳುವುದಿಲ್ಲ. ಅವರ ವಿವಾಹವನ್ನು ಯಶಸ್ವಿಗೊಳಿಸಲು ಅವರಿಗಾಗಿ ಒಂದು ಮಾರ್ಗವಿದೆಯೊ? ಅವರ ವಿವಾಹ ಬಂಧವನ್ನು ಬಲಗೊಳಿಸಲು ಏನನ್ನು ಮಾಡಸಾಧ್ಯವಿದೆ?