ರಕ್ತ ಪೂರಣಗಳಿಗೆ ಮಿತಿ ಮೀರಿದ ಬೆಲೆ ಕಟ್ಟಲಾಗಿದೆಯೇ?
ಆಧುನಿಕ ಔಷಧದಲ್ಲಿ ರಕ್ತ ಪೂರಣಗಳು ಸಾಮಾನ್ಯವಾಗಿದೆ, ಆದರೆ ಅವುಗಳ ಕೀರ್ತಿಗೆ ತಕ್ಕಂತೆ ಅವುಗಳು ಇವೆಯೇ? ನೀವೇನು ಎಣಿಸುತ್ತೀರಿ?
ಅಮೆರಿಕನ್ ಜರ್ನಲ್ ಆಫ್ ಮೆಡಿಸಿನ್ (ಫೆಬ್ರವರಿ 1993) ರಲ್ಲಿ, ಡಾ. ಕ್ರೇಗ್ ಎಸ್. ಕಿಶೆನ್ಸ್ ಕೇಳಿದ್ದು: “ರಕ್ತ ಪೂರಣಗಳಿಗೆ ಮಿತಿ ಮೀರಿದ ಬೆಲೆ ಕಟ್ಟಲಾಗಿದೆಯೇ?” ವೈದ್ಯರು ಅನೇಕ ಸಲ ಒಂದು ಚಿಕಿತ್ಸೆಯ ಪ್ರಯೋಜನವು ಅದರಲ್ಲಿ ಒಳಗೂಡಿರುವ ಅಪಾಯಗಳಿಗಿಂತ ಅಧಿಕವೂ ಎಂದು ಜಾಗ್ರತೆಯಿಂದ ತೂಗಿ ನೋಡುತ್ತಾರೆಂದು ಅವನು ಗಮನಿಸಿದನು. ರಕ್ತ ಪೂರಣಗಳ ಕುರಿತೇನು?
ರಕ್ತ ಪೂರಣಗಳೊಂದಿಗೆ ಒಳಗೂಡಿರುವ ಯಕೃತ್ತಿನ ಊತ, ಶಿಥಿಲಗೊಂಡಿದ್ದ ಸೋಂಕು ರಕ್ಷೆಯ ವ್ಯವಸ್ಥೆ, ಅಂಗ ವ್ಯವಸ್ಥೆಯ ನ್ಯೂನತೆ, ಮತ್ತು ಕಸಿಯ ವಿರುದ್ಧ ಅತಿಥೇಯ (ಗ್ರಾಫ್ಟ್-ಅಗೇನ್ಸ್ಟ್-ಹೊಸ್ಟ್) ಪ್ರತಿಕ್ರಿಯೆಗಳಂತಹ ಅನೇಕ ಗಂಡಾಂತರಗಳ ಇತ್ತೀಚೆಗಿನ ಸಾಕ್ಷ್ಯಗಳನ್ನು ಕಿಶೆನ್ಸ್ ಪರಾಮರ್ಶಿಸಿದರು. ರಕ್ತ ಪೂರಣಗಳಿಂದ “ಅಸಂಖ್ಯಾತ ಸಂಕ್ಲಿಷ್ಟತೆಗಳನ್ನು” ಒಂದು ಅಧ್ಯಯನವು ಸಾರಾಂಶಿಸುತ್ತಾ, “ಪ್ರತಿಯೊಂದು ರಕ್ತ ಪೂರಣ ಘಟನೆಗೆ ಸುಮಾರು 20% ಕೆಲವೊಂದು ಪ್ರತಿಕೂಲ ಪ್ರತಿಕ್ರಿಯೆಗಳ, ಕೆಲವು ಅತಿ ಚಿಕ್ಕ ಪ್ರಮಾಣ ಪ್ರತಿಕ್ರಿಯೆಗಳ ಆದರೆ ಇತರ ಕೆಲವು ದೇಹಕ್ಕೆ ಹಾನಿಮಾಡುವ,” ಮಾರಕವೂ ಕೂಡ “ಆಗುವ ಸಾಧ್ಯತೆಯಿದೆ ಎಂಬ ಸಮಾಪ್ತಿಗೆ ಬಂತು.”
ಆದಾಗ್ಯೂ, ಭಾವಿಸಿಕೊಂಡ ಪ್ರಯೋಜನಗಳು ಅಂತಹ ಗಂಡಾಂತರಗಳನ್ನು ಎದುರಿಸುವುದನ್ನು ನ್ಯಾಯೀಕರಿಸುತವ್ತೋ?
ಡಾ. ಕಿಶೆನ್ಸ್ ಯೆಹೋವನ ಸಾಕ್ಷಿಗಳ ಮೇಲೆ ಮಾಡಿದ 1,404 ಶಸ್ತ್ರಚಿಕಿತ್ಸೆಗಳನ್ನೊಳಗೊಂಡ ವರದಿಸಲ್ಪಟ್ಟ 16 ಅಧ್ಯಯನಗಳನ್ನು ಪರಾಮರ್ಶಿಸಿದರು, ಇವರು ‘ರಕ್ತವನ್ನು ವರ್ಜಿಸಿರಿ’ ಎಂಬ ಬೈಬಲಿನ ಅಪ್ಪಣೆಗೆ ವಿಧೇಯತೆಯಲ್ಲಿ ಪೂರಣಗಳನ್ನು ನಿರಾಕರಿಸುತ್ತಾರೆ.—ಅ. ಕೃತ್ಯಗಳು 15:28, 29.
ಫಲಿತಾಂಶ? “ಪ್ರಧಾನ ಶಸ್ತ್ರಕ್ರಿಯೆಯ ಕ್ರಮವಿಧಾನಗಳಿಗೆ ಪೂರಣವನ್ನು ತೊರೆಯುವ ಯೆಹೋವನ ಸಾಕ್ಷಿ ರೋಗಿಗಳ ತೀರ್ಮಾನವು ಪೂರ್ತಿ ಕಾರ್ಯರೂಪದಲ್ಲಿರುವ ಗಂಡಾಂತರಕ್ಕೆ 0.5% ರಿಂದ 1.5% ಮರಣ ಸಂಖ್ಯೆಗೆ ಕೂಡಿಸುತ್ತದೆಂದು ತೋರಿಸುತ್ತದೆ. ಪೂರಣವನ್ನು ತೊರೆಯುವ ಈ ಪದ್ಧತಿಯಿಂದ ಎಷ್ಟೊಂದು ರೋಗವ್ಯಾಪನೆ ಮತ್ತು ಮರಣಸಂಖ್ಯೆಯನ್ನು ಹೋಗಲಾಡಿಸಲಾಗಿದೆ ಎಂಬುದು ಇನ್ನೂ ಕಡಿಮೆ ಸ್ಪಷ್ಟವಾಗಿಗಿದೆ, ಆದರೆ ಅವರು ಪೂರಣ ತೆಗೆದುಕೊಳ್ಳದಿರುವ ಗಂಡಾಂತರವನ್ನು ಪ್ರಾಯಶಃ ಮೀರಿರಬೇಕು.” (ಓರೆಅಕ್ಷರ ನಮ್ಮದು.) ಅವನ ವಿಷಯವೇನಾಗಿತ್ತು? ರಕ್ತ ಪೂರಣವನ್ನು ಸ್ವೀಕರಿಸುವುದರಲ್ಲಿ ಒಳಗೂಡಿರುವ ಗಂಡಾಂತರಗಳಿಗಿಂತಲೂ ರಕ್ತವನ್ನು ನಿರಾಕರಿಸುವುದರಲ್ಲಿ ಇರುವ ಯಾವುದೇ ಗಂಡಾಂತರವು ಪ್ರಾಯಶಃ ಕಡಿಮೆಯಾಗಿದೆ.
ಆದುದರಿಂದ, ಕಿಶೆನ್ಸ್ನ ಸಮಂಜಸತೆಯ ಪ್ರಶ್ನೆಯು: “ಯೆಹೋವನ ಸಾಕ್ಷಿಗಳಿಗೆ ಪೂರಣವನ್ನು ಕೊಡದಿರುವುದರಿಂದ ಕಡಿಮೆ ತೀವ್ರ ಹೆಚ್ಚಿನ ರೋಗವ್ಯಾಪನೆ ಮತ್ತು ಮರ್ತ್ಯತೆ ಫಲಿಸುವುದಾದರೆ, ಮತ್ತು ಗಮನಾರ್ಹ ಮೊತ್ತದ ಬೆಲೆ ಮತ್ತು ಅಸ್ಥಿಗತ ಸಂಕ್ಲಿಷ್ಟತೆಗಳನ್ನು ಹೋಗಲಾಡಿಸುವುದಾದರೆ, ರೋಗಿಗಳು ಕೊಂಚವೇ ಪೂರಣಗಳನ್ನು ಪಡೆಯಬೇಕಲ್ಲವೇ?”
ಅಂತಹ ಪುರಾವೆಗಳ ಆಧಾರದ ಮೇಲೆ ಪೂರಣಗಳನ್ನು ನಿರಾಕರಿಸುವವರು ನಮ್ಮ ನಿರ್ಮಾಣಿಕನ ಮಾರ್ಗದರ್ಶನಗಳ ಸಹಮತದಲ್ಲಿ ಕೂಡ ವರ್ತಿಸುವವರಾಗಿರುತ್ತಾರೆ.