ದುಷ್ಟಾತ್ಮಗಳಲ್ಲಿ ಯಾರು ನಂಬುತ್ತಾರೆ?
ನಿಮ್ಮ ಜೀವಿತವನ್ನು ಅದೃಶ್ಯ ಆತ್ಮಗಳು ಪ್ರಭಾವಿಸಬಲ್ಲವೆಂದು ನೀವು ನಂಬುತ್ತೀರೊ? ಅನೇಕರು ಒತ್ತಿನಿಂದ ಇಲ್ಲವೆಂದು ಉತ್ತರಿಸುವರು. ದೇವರ ಅಸ್ತಿತ್ವವನ್ನು ಅಂಗೀಕರಿಸುವಾಗ, ದುಷ್ಟತನದ ಅತಿಮಾನವ ಕೆಲಸಗಾರರ ಕಲ್ಪನೆಯನ್ನು ಅವರು ಹೀಯಾಳಿಸುತ್ತಾರೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಆತ್ಮಗಳಲ್ಲಿ ವಿಸ್ತಾರವಾದ ಅಪನಂಬಿಕೆಯ ಹರಡುವಿಕೆಯು ಭಾಗಶಃ ಕ್ರೈಸ್ತಪ್ರಪಂಚದ ಪ್ರಭಾವದ ಕಾರಣದಿಂದಾಗಿದೆ, ಅದು ಶತಮಾನಗಳಿಂದಲೂ ಸ್ವರ್ಗ ಮತ್ತು ಭೂತಳವೊಂದರ ನರಕದ ನಡುವೆ ಕೇಂದ್ರಿತವಾಗಿದ್ದ ಭೂಮಿಯು ವಿಶ್ವದ ಕೇಂದ್ರವೆಂದು ಕಲಿಸಿತ್ತು. ಈ ಕಲಿಸುವಿಕೆಗನುಸಾರ, ದೇವದೂತರು ಸ್ವರ್ಗದ ಸುಖವನ್ನು ಅನುಭವಿಸುವಾಗ, ದೆವ್ವಗಳು ನರಕದ ವ್ಯವಹಾರವನ್ನು ನಿರ್ವಹಿಸುತ್ತಾರೆ.
ವಿಜ್ಞಾನದಲ್ಲಿ ಅನ್ವೇಷಣೆಗಳು ವಿಶ್ವದ ರಚನೆಯ ಕುರಿತಾದ ತಪ್ಪು ಕಲ್ಪನೆಗಳನ್ನು ನಿರಾಕರಿಸಲು ಜನರಿಗೆ ಕಾರಣವಾದಂತೆ, ಆತ್ಮ ಜೀವಿಗಳಲ್ಲಿ ನಂಬುಗೆಯು ಅನಾಕರ್ಷಕವಾಯಿತು. ದ ನ್ಯೂ ಎನ್ಸೈಕ್ಲೊಪೀಡಿಯಾ ಬ್ರಿಟ್ಯಾನಿಕ ಹೇಳುವುದು: “ಹದಿನಾರನೆಯ ಶತಮಾನದ ಕೊಪರ್ನಿಕನ್ ಕ್ರಾಂತಿಯ (ಪೊಲಿಷ್ ಗಗನವಿಜ್ಞಾನಿ ಕೊಪರ್ನಿಕಸ್ನ ವಾದಗಳ ಮೇಲಾಧಾರಿತ) ಫಲಾಂತರದಲ್ಲಿ . . . ವಿಶ್ವದ ಕೇಂದ್ರವಾಗಿ ಭೂಮಿಯನ್ನು ಇನ್ನು ಮುಂದೆ ವೀಕ್ಷಿಸಲಾಗುತ್ತಿರಲಿಲ್ಲ, ಬದಲಾಗಿ ಕಣ್ಣಿಗೆ ಕಾಣುವಂತೆ ಅಪಾರವಾದ ವಿಶ್ವದ ಆಕಾಶಗಂಗೆಯೊಂದರ ಒಂದು ಚಿಕ್ಕ ಭಾಗವಾದ ಸೌರವ್ಯೂಹದ ಕೇವಲ ಒಂದು ಗ್ರಹದೋಪಾದಿ ವೀಕ್ಷಿಸಲಾಯಿತು—ಇದರಲ್ಲಿ ದೇವದೂತರುಗಳ ಮತ್ತು ದೆವ್ವಗಳ ಕಲ್ಪನೆಗಳು ಇನ್ನು ಮುಂದೆ ಸಮಂಜಸವೆಂದು ತೋರಲಿಲ್ಲ.”
ಅನೇಕರು ದುಷ್ಟಾತ್ಮಗಳಲ್ಲಿ ನಂಬುವುದಿಲ್ಲವಾದರೂ, ಲಕ್ಷಾಂತರ ಮಂದಿ ನಂಬುವವರು ಇದ್ದಾರೆ. ಭೂತ ಮತ್ತು ವರ್ತಮಾನ ಎರಡೂ ಕಾಲಗಳಲ್ಲಿ ಪತನಗೊಂಡ ದೇವದೂತರು ಅನೇಕ ಧರ್ಮಗಳಲ್ಲಿ ಪ್ರಾಮುಖ್ಯ ಭಾಗವನ್ನು ವಹಿಸಿದ್ದಾರೆ. ಆತ್ಮಿಕತೆಯನ್ನು ಭೃಷ್ಟಗೊಳಿಸುವವರೋಪಾದಿಯ ಅವರ ಪಾತ್ರದ ಹೊರತಾಗಿ, ಈ ದುಷ್ಟಾತ್ಮಗಳು ಯುದ್ಧ, ಕ್ಷಾಮ, ಮತ್ತು ಭೂಕಂಪಗಳಂತಹ ವಿಪತ್ತುಗಳ ಕಾರ್ಯನಿಯೋಗಿಗಳಾಗಿ, ಹಾಗೂ ರೋಗ, ಮಾನಸಿಕ ಅಸ್ವಾಸ್ಥತೆಗಳು, ಮತ್ತು ಮರಣದ ಪ್ರವರ್ತಕರೋಪಾದಿ ವೀಕ್ಷಿಸಲ್ಪಟ್ಟಿರುತ್ತಾರೆ.
ಕ್ರೈಸ್ತತ್ವ ಮತ್ತು ಯೆಹೂದ್ಯ ಮತದಲ್ಲಿ ಪ್ರಮುಖ ದುಷ್ಟಾತ್ಮವಾದ ಪಿಶಾಚನಾದ ಸೈತಾನನು ಮುಸ್ಲಿಮ್ರಿಂದ ಇಬ್ಲಿಸ್ ಎಂದು ಕರೆಯಲ್ಪಡುತ್ತಾನೆ. ಪುರಾತನ ಜೊರೊಆ್ಯಸ್ಟ್ರಿಯನ್ನ ಪರ್ಶಿಯನ್ ಮತದಲ್ಲಿ, ಅವನು ಅಂಗ್ರೆ ಮೈನ್ಯೂ ಆಗಿ ಗೋಚರಿಸುತ್ತಾನೆ. ಸಾ.ಶ. ಎರಡನೆಯ ಮತ್ತು ಮೂರನೆಯ ಶತಕಗಳಲ್ಲಿ ಪ್ರವರ್ಧಮಾನಕ್ಕೆ ಬಂದ ಅಧ್ಯಾತ್ಮರಹಸ್ಯದ ಮತದಲ್ಲಿ, ಅಸೂಯೆಯುಳ್ಳ ಮತ್ತು ಸೃಷ್ಟಿಕರ್ತನಿಗೆ ಕೆಳಮಟ್ಟದಲ್ಲಿರುವ ಮತ್ತು ಅಜ್ಞಾನದಿಂದ ಮಾನವಕುಲದ ಅಧಿಕಾಂಶದವರು ಆರಾಧನೆಯನ್ನು ಯಾರಿಗೆ ಕೊಟ್ಟರೋ ಆ ಡೆಮಿಅರ್ಜ್ [ಅಧೀನದೇವ] ಹೆಸರಿನ ದೇವನೇ ಪಿಶಾಚನೆಂದು ನೆನಸಲಾಗಿತ್ತು.
ದುಷ್ಟತನದ ಕೀಳ್ಮಟ್ಟದ ಆತ್ಮಗಳು ಪ್ರಾಚ್ಯ ಮತಗಳಲ್ಲಿ ಪ್ರಧಾನವಾಗಿ ತೋರಿಸಲ್ಪಟ್ಟಿವೆ. ಅಸುರರು (ದೆವ್ವಗಳು) ದೇವರುಗಳನ್ನು (ದೇವತೆಗಳನ್ನು) ವಿರೋಧಿಸುತ್ತಾರೆ ಎಂದು ಹಿಂದುಗಳು ನಂಬುತ್ತಾರೆ. ಅಸುರರಲ್ಲಿ ಭೀತಿದಾಯಕರು ಶ್ಮಶಾನಗಳಲ್ಲಿ ಸುಳಿದಾಡುವ ಭಯಂಕರ ಜೀವಿಗಳಾದ ರಾಕ್ಷಸರಾಗಿದ್ದಾರೆ.
ಆಶೆಗಳನ್ನು ನಿರ್ಮೂಲಗೊಳಿಸುವ ನಿರ್ವಾಣವನ್ನು ಪಡೆಯುವುದರಿಂದ ಮನುಷ್ಯರನ್ನು ತಡೆಯುವ ವ್ಯಕ್ತಿಪರ ಶಕಿಗ್ತಳೋಪಾದಿ ದೆವ್ವಗಳ ಕಲ್ಪನೆಯನ್ನು ಬೌದ್ಧಮತೀಯರು ಮಾಡುತ್ತಾರೆ. ರತಿ (ಆಶೆ), ರಾಗ (ಸುಖ), ಮತ್ತು ಟಾನ್ಹಾ (ಅವಿಶ್ರಾಂತ) ಎಂಬ ಅವನ ಮೂವರು ಪುತ್ರಿಯರೊಂದಿಗೆ ಮಾರಾ ಅವರಲ್ಲಿ ಪ್ರಧಾನ ಶೋಧಕನಾಗಿದ್ದಾನೆ.
ಗ್ವಾ, ಯಾ ನಿಸರ್ಗ ದೆವ್ವಗಳ ವಿರುದ್ಧ ಸಂರಕ್ಷಿಸಿಕೊಳ್ಳಲು ಚೀನೀ ಆರಾಧಕರು ಉತ್ಸವಾಗ್ನಿಗಳನ್ನು, ಪಂಜುಗಳನ್ನು, ಮತ್ತು ಸುಡುಮದ್ದುಗಳನ್ನು ಬಳಸುತ್ತಾರೆ. ಜಪಾನೀಯರು ಕೂಡ ಅನೇಕ ದೆವ್ವಗಳಲ್ಲಿ ನಂಬಿಕೆಯಿಡುತ್ತಾರೆ, ಅವುಗಳಲ್ಲಿ ಪುರೋಹಿತನೊಬ್ಬನಿಂದ ಹೊರಡಿಸಲ್ಪಡುವ ತನಕ ಜನರನ್ನು ಸ್ವಾಧೀನದಲ್ಲಿಡುವ ಆತ್ಮಗಳಾದ ಭಯಂಕರವಾದ ಟೆಂಗೂ ಸೇರಿರುತ್ತವೆ.
ಏಶ್ಯಾ, ಆಫ್ರಿಕ, ಓಷಿಯೇನಿಯ, ಮತ್ತು ಅಮೆರಿಕಗಳ ನಿರಕ್ಷರಕುಕ್ಷಿ ಮತಗಳಲ್ಲಿ ಆತ್ಮ ಜೀವಿಗಳು ಪರಿಸ್ಥಿತಿಗಳಿಗನುಸಾರ ಮತ್ತು ಅವರ ಪ್ರಚಲಿತ ಮನೋಸ್ಥಿತಿಗನುಸಾರ ಸಹಾಯಕರವಾದವುಗಳು ಯಾ ಹಾನಿಕರವಾದವುಗಳು ಎಂದು ನಂಬಲ್ಪಡುತ್ತವೆ. ವಿಪತ್ತುಗಳನ್ನು ನಿವಾರಿಸಲು ಮತ್ತು ಮೆಚ್ಚಿಗೆಗಳನ್ನು ಪಡೆಯಲು ಈ ಆತ್ಮಗಳನ್ನು ಜನರು ಪೂಜಿಸುತ್ತಾರೆ.
ಮಂತ್ರತಂತ್ರ ಮತ್ತು ಪ್ರೇತಾರಾಧನೆಯಲ್ಲಿ ವ್ಯಾಪಕವಾಗಿ ಹರಡಿರುವ ಆಸಕ್ತಿಯನ್ನು ಇದಕ್ಕೆಲ್ಲಾ ಕೂಡಿಸುವಾಗ, ದುಷ್ಟಾತ್ಮಗಳಲ್ಲಿ ನಂಬಿಕೆಗೆ ಒಂದು ದೀರ್ಘಕಾಲದ ಮತ್ತು ವ್ಯಾಪಕವಾಗಿರುವ ಇತಿಹಾಸವೊಂದು ಇದೆ ಎಂಬುದು ಸ್ಪಷ್ಟವಾಗಿಗಿದೆ. ಆದರೆ ಅಂತಹ ಜೀವಿಗಳು ಅಸ್ತಿತ್ವದಲ್ಲಿವೆ ಎಂದು ನಂಬುವುದು ಸಮಂಜಸವಾಗಿರುತ್ತದೊ? ಅವು ಅಸ್ತಿತ್ವದಲ್ಲಿವೆಯೆಂದು ಬೈಬಲು ಹೇಳುತ್ತದೆ. ಆದಾಗ್ಯೂ, ಅವು ಅಸ್ತಿತ್ವದಲ್ಲಿರುವುದಾದರೆ, ಅವನ ಕೇಡಿಗೆ ಅವು ಮನುಷ್ಯನನ್ನು ಪ್ರಭಾವಿಸುವಂತೆ ಬಿಡಲು ದೇವರು ಅನುಮತಿಸುವುದೇಕೆ?