ಹವಳಕ್ಕಿಂತಲೂ ಅಧಿಕ ಅಮೂಲ್ಯ
ಕೆಂಪು ಸಮುದ್ರದ ನೀರುಗಳಲ್ಲಿ ಇದರಂತಹ ಪ್ರದರ್ಶನಗಳ ಬಗ್ಗೆ ಹೆಚ್ಚಾಗುತ್ತಿರುವ ಸಂಖ್ಯೆಗಳ ಸಂದರ್ಶಕರು ಪುಳಕಿತರಾಗಿದ್ದಾರೆ.
ನಿರ್ಮಲವಾದ ನೀರುಗಳಲ್ಲಿ ಈಜುವವರಿಗೆ ಅನೇಕ ಬಣ್ಣಗಳ ಮತ್ತು ರಂಗುಗಳ ಎಣಿಕೆಯಿಲ್ಲದ ಮೀನುಗಳು ಮರುಳುಗೊಳಿಸುವಂಥವುಗಳಾಗಿವೆ. ಆದರೆ ಇಲ್ಲಿ ಕಂಡುಬರುವ ವರ್ಣರಂಜಿತ ಮೀನುಗಳ ಸುತ್ತಲೂ, ಥಳಥಳಿಸುವ ಬಣ್ಣಗಳ ಹವಳಗಳನ್ನು ಸೇರಿಸಿ, ಇತರ ಸಮುದ್ರತಳದ ಅದ್ಭುತಗಳ ಕಣ್ಣು ಸೆಳೆಯುವ ಪ್ರದರ್ಶನವು ಇದೆ ಎಂಬುದನ್ನು ಗಮನಿಸಿರಿ.
ಈ ಸುಂದರವಾದ ಹವಳಗಳು ಅನೇಕ ಆಕಾರ ಮತ್ತು ಬಣ್ಣಗಳಲ್ಲಿ ಕಂಡುಕೊಳ್ಳಲ್ಪಡುತ್ತವೆ. ನೀವು ಊಹಿಸಸಾಧ್ಯವಿರುವಂತೆ, ಪ್ರಾಚೀನ ಸಮಯಗಳಲ್ಲಿಯೂ ಕೂಡ, ಹವಳದ ಪ್ರಭಾಮಯ ತುಂಡುಗಳಿಗೆ ಅತಿಶಯವಾದ ಬೆಲೆಯನ್ನು ನೀಡಲಾಗುತ್ತಿತ್ತು. ಅವುಗಳಿಂದ ಶಿಲ್ಪಕಾರರು ಸುಂದರವಾದ ಆಭರಣಗಳನ್ನು ರೂಪಿಸಿದರು, ಮತ್ತು ಬೈಬಲ್ ಬರಹಗಾರರು ಬಂಗಾರ, ಬೆಳ್ಳಿ, ಮತ್ತು ಮಾಣಿಕ್ಯದೊಂದಿಗೆ ಹವಳಗಳನ್ನು ಉಲ್ಲೇಖಿಸಿದರು. (ಜ್ಞಾನೋಕ್ತಿ 3:14, 15; ಯೆಹೆಜ್ಕೇಲ 27:16) ಆದರೆ ಆ ಬರಹಗಾರರು, ಸ್ವತಃ ಹವಳಗಳ ಸೌಂದರ್ಯ ಮತ್ತು ಮೌಲ್ಯಕ್ಕಿಂತಲೂ ಆಚೆಗೆ ನೋಡುವಂತೆ ನಮಗೆ ಸಹಾಯ ಮಾಡುತ್ತಾರೆ.
ಕೆಲವು ವಿಷಯಗಳು ಇನ್ನೂ ಹೆಚ್ಚು ಮೌಲ್ಯವುಳ್ಳದ್ದಾಗಿವೆ ಮತ್ತು ನಾವು ಅವುಗಳನ್ನು ಅತ್ಯಧಿಕವಾಗಿ ಭದ್ರವಾಗಿಟ್ಟುಕೊಳ್ಳಬೇಕೆಂದು ಅವರು ಎತ್ತಿ ತೋರಿಸಿದರು. ಒಬ್ಬಾಕೆ ಒಳ್ಳೆಯ, ಗುಣವತಿಯಾದ ಹೆಂಡತಿಯು ಅಂತಹ ವ್ಯಕ್ತಿಯಾಗಿದ್ದಾಳೆ, ಯಾಕೆಂದರೆ ನಾವು ಓದುವುದು: “ಗುಣವತಿಯಾದ ಸತಿಯು ಎಲ್ಲಿ ಸಿಕ್ಕಾಳು? ಆಕೆಯು ಹವಳಕ್ಕಿಂತಲೂ ಬಹು ಅಮೂಲ್ಯಳು.” (ಜ್ಞಾನೋಕ್ತಿ 31:10) ನೀವು ಒಬ್ಬ ವಿವಾಹಿತ ಪುರುಷರಾಗಿದ್ದೀರೊ? ಇಲ್ಲಿರುವ ಅತ್ಯಂತ ಉತ್ಕೃಷ್ಟವಾದ ಹವಳಗಳನ್ನು ಪುನಃ ನೋಡಿರಿ, ಮತ್ತು ನೀವು ನಿಮ್ಮ ಹೆಂಡತಿಯನ್ನು ಅವಳ ಆರ್ಹತೆಗೆ ತಕ್ಕಂತೆ ಗೌರವದಿಂದ ಕಾಣುತ್ತಿದ್ದೀರೊ ಇಲ್ಲವೊ ಎಂಬುದರ ಕುರಿತು ಆಲೋಚಿಸಿರಿ.
ನಾವು ಗಂಡಸರಾಗಿರಲಿ ಯಾ ಹೆಂಗಸರಾಗಿರಲಿ, ವಿವಾಹಿತರಾಗಿರಲಿ ಯಾ ಒಬ್ಬೊಂಟಿಗರಾಗಿರಲಿ, ಪ್ರಕಾಶಮಾನವಾದ ಹವಳಗಳ ಒಂದು ನೋಟವು, ದಿವ್ಯ ವಿವೇಕ, ವಿವೇಚನೆ, ಮತ್ತು ಜ್ಞಾನದ ಇನ್ನೂ ಶ್ರೇಷ್ಠವಾದ ಮೌಲ್ಯವನ್ನು ಗಣ್ಯಮಾಡುವಂತೆ ನಮಗೆ ಸಹಾಯ ಮಾಡಬೇಕು. ದೇವರ ವಾಕ್ಯವು ಹೇಳುವುದು: “ಜ್ಞಾನವನ್ನು ಪಡೆಯುವವನು ಧನ್ಯನು, ವಿವೇಕವನ್ನು ಸಂಪಾದಿಸುವವನು ಭಾಗ್ಯವಂತನು. ಅದರ ಲಾಭವು ಬೆಳ್ಳಿಯ ಲಾಭಕ್ಕಿಂತಲೂ ಅದರಿಂದಾಗುವ ಆದಾಯವು ಬಂಗಾರಕ್ಕಿಂತಲೂ ಅಮೂಲ್ಯವೇ ಸರಿ. ಅದರ ಬೆಲೆಯು ಹವಳಕ್ಕಿಂತಲೂ ಹೆಚ್ಚು, ನಿನ್ನ ಇಷ್ಟವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ.”—ಜ್ಞಾನೋಕ್ತಿ 3:13-15; 8:11.
ಆದುದರಿಂದ ಅವುಗಳನ್ನು ನಾವೇ ಉಸಿರಾಟದ ನಳಿಗೆಯನ್ನು ತೊಟ್ಟು ಈಜುವ ಮೂಲಕವಾಗಲಿ ಯಾ ಛಾಯಾಚಿತ್ರದ ಮೂಲಕವಾಗಲಿ ನೋಡುವಾಗ, ಕೆಂಪು ಸಮುದ್ರದ ಹವಳಗಳು ಲಾಭದಾಯಕ ಆಲೋಚನೆಗಾಗಿ, ಸೌಂದರ್ಯವನ್ನೂ ವಿಷಯವನ್ನೂ ನಮಗೆ ತಲಪಿಸಬೇಕು.