ನೀವು ಬೈಬಲನ್ನು ಬೆಲೆಯುಳ್ಳದ್ದೆಂದು ಎಣಿಸುತ್ತೀರೊ?
ಕೇವಲ 200 ವರುಷಗಳ ಹಿಂದೆ, ಅಟ್ಲಾಂಟಿಕ್ ಸಾಗರದ ಕಡಲಂಚಿನಿಂದ ಹೆಚ್ಚು ದೂರವಿಲ್ಲದ ವೇಲ್ಸಿನ, ಬಹುದೂರದ ಒಂದು ಹಳ್ಳಿಯಾದ ಲನ್ಫಿಆನ್ಶೆಲ್ ಎಂಬ ಹಳ್ಳಿಯಲ್ಲಿ ಮೇರಿ ಜೋನ್ಸ್ ಜನಿಸಿದ್ದಳು. ಅವಳ ಹೆತ್ತವರು ಬಡ ನೇಕಾರರಾಗಿದ್ದರು—ಒಂದು ಬೈಬಲನ್ನು ಪಡೆದುಕೊಳ್ಳಲು ತೀರ ಬಡವರಾಗಿದ್ದರು. ಆದರೆ ತಾವು ಜ್ಞಾಪಿಸಿಕೊಂಡ ವಚನಗಳನ್ನು ಪುನರಾವೃತ್ತಿಸುವ ಮೂಲಕ ಮತ್ತು ಬೈಬಲ್ ಕಥೆಗಳನ್ನು ಅವಳಿಗೆ ಹೇಳುವ ಮೂಲಕ, ದೇವರೆಡೆಗೆ ಪ್ರೀತಿಯನ್ನು ತಮ್ಮ ಮಗಳಲ್ಲಿ ಅವರು ತುಂಬಿದರು. ಮೇರಿ ಆಗಿಂದಾಗ್ಗೆ ನೆರೆಯವರ ವೆಲ್ಲ್ ಭಾಷೆಯ ಬೈಬಲನ್ನು ಓದುತ್ತಿದ್ದಳು ಮತ್ತು ತನ್ನ ಸ್ವಂತ ಬೈಬಲೊಂದನ್ನು ಕೊಂಡುಕೊಳ್ಳಲು ನಿಶ್ಚಯಿಸಿ, ತನ್ನಿಂದ ಸಾಧ್ಯವಿರುವಷ್ಟು ಹಣವನ್ನು ಉಳಿಸಲಾರಂಭಿಸಿದಳು.
ವರುಷ 1800 ರಲ್ಲಿ, ಮೇರಿ 16 ವರುಷದವಳಿದ್ದಾಗ, 40 ಕಿಲೊಮೀಟರ್ ದೂರದ ಚಿಕ್ಕ ಪಟ್ಟಣವಾದ ಬಾಲದಲ್ಲಿ, ಕೆಲವೊಂದು ವೆಲ್ಲ್ ಬೈಬಲ್ಗಳು ಮಾರಾಟಕ್ಕಿವೆ ಎಂಬುದನ್ನು ಅವಳು ಕೇಳಿದಳು. ಧೈರ್ಯಗೆಡದೆ, ಅಲ್ಲಿಗೆ ನಡೆದುಕೊಂಡುಹೋಗಲು ಅವಳು ನಿರ್ಧರಿಸಿದಳು. ಗುಡ್ಡಗಳ ಆಚೆ ಕಡೆಗೆ ಬರಿಯ ಕಾಲಿನಲ್ಲಿ ಅವಳು ನಡೆದಳು. ಹಾಗಿದ್ದರೂ, ಅವಳು ಆಗಮಿಸಿದ ಸಮಯದೊಳಗಾಗಿ, ಎಲ್ಲಾ ಪ್ರತಿಗಳು ಮಾರಲ್ಪಟ್ಟಿದ್ದವು. ತಾನು ಉಳಿಸಿದ ಹಣದ ಮೊತ್ತವು ತೀರ ಸಣ್ಣದ್ದಾಗಿತ್ತೆಂದು ಸಹ ಮೇರಿ ಅರಿತುಕೊಂಡಳು.
ಮೇರಿಯ ಜ್ಞಾನ ಮತ್ತು ಬೈಬಲಿನ ಕುರಿತಾದ ಪ್ರೀತಿಯಿಂದ ಸ್ಥಳೀಯ ಪಾಸ್ಟರ್ ತೀವ್ರವಾಗಿ ಪ್ರೇರಿಸಲ್ಪಟ್ಟನು. ಅವಳು ಮಾಡಿದ ಎಲ್ಲಾ ಪ್ರಯತ್ನದ ಬಳಿಕ ಅವಳ ನಿರಾಶೆಯ ಕಣ್ಣೀರುಗಳನ್ನು ನೋಡಿ, ಅವನು ಕರುಣೆಯಿಂದ ತನ್ನ ಸ್ವಂತ ವೈಯಕ್ತಿಕ ಪ್ರತಿಯನ್ನು ಅವಳಿಗೆ ಕೊಟ್ಟು, ಹೇಳಿದ್ದು: “ಇದನ್ನು ಎಚ್ಚರಿಕೆಯಿಂದ ಓದು, ಶ್ರದ್ಧೆಯಿಂದ ಅದನ್ನು ಅಭ್ಯಾಸಿಸು, ಪವಿತ್ರ ಮಾತುಗಳನ್ನು ನಿನ್ನ ಜ್ಞಾಪಕದಲ್ಲಿ ಭದ್ರಪಡಿಸು, ಮತ್ತು ಅದರ ಬೋಧನೆಗಳಿಗನುಸಾರವಾಗಿ ನಡೆದುಕೊ.”
ತದನಂತರ ಕಮಿಟಿ ಆಫ್ ದ ರಿಲಿಜಸ್ ಟ್ರ್ಯಾಕ್ಟ್ ಸೊಸೈಟಿ ಆಫ್ ಲಂಡನ್ನ ಸಭೆಯೊಂದರಲ್ಲಿ ಈ ಕಥೆಯು ಹೇಳಲ್ಪಟ್ಟಿತು. ಅಲ್ಲಿ, ಕೇವಲ ವೆಲ್ಷ್ನ ಜನರಿಗೆ ಮಾತ್ರವಲ್ಲ ಆದರೆ ಇಡೀ ಲೋಕಕ್ಕೆ ಬೈಬಲ್ ಭಾಷಾಂತರಗಳನ್ನು ಒದಗಿಸುವ ನಿರ್ಧಾರವು ಮಾಡಲ್ಪಟ್ಟಿತು. ಈ ಸರಳಾರಂಭದಿಂದ 19 ನೆಯ ಶತಮಾನದ ಅನೇಕ ಬೈಬಲ್ ಸೊಸೈಟಿಗಳಲ್ಲಿ ಪ್ರಥಮವಾದದ್ದು ಉದ್ಭವಿಸಿತು. ತದನಂತರ, ಹೆಚ್ಚಿನ ಪ್ರಮಾಣದಲ್ಲಿ ಬೈಬಲಿನ ವಿದೇಶೀ ಭಾಷೆಯ ಪ್ರತಿಗಳು ಪ್ರಕಟವಾಗಲಾರಂಭಿಸಿದವು.
ಇಂದು, 1884 ರಲ್ಲಿ ಸಂಘಟಿತವಾದ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯು ಬೈಬಲ್ಗಳನ್ನು ಮತ್ತು ಬೈಬಲ್ ಅಧ್ಯಯನ ಸಹಾಯಕಗಳನ್ನು 200 ಕ್ಕಿಂತಲೂ ಅಧಿಕ ಭಾಷೆಗಳಲ್ಲಿ ಮುದ್ರಿಸುತ್ತದೆ. ಲೋಕವ್ಯಾಪಕವಾಗಿ, ಆಧುನಿಕ ಭಾಷೆಯ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ನ, 7 ಕೋಟಿ 20 ಲಕ್ಷ ಪ್ರತಿಗಳನ್ನು ಅದು ವಿತರಣೆ ಮಾಡಿದೆ. ಮೂಲ ಹೀಬ್ರು ಮತ್ತು ಗ್ರೀಕ್ನಿಂದ ಭಾಷಾಂತರಿಸಲ್ಪಟ್ಟು, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಈಗ ಸಂಪೂರ್ಣವಾಗಿ ಅಥವಾ ಭಾಗಶಃ 18 ಭಾಷೆಗಳಲ್ಲಿ ದೊರೆಯುತ್ತದೆ ಮತ್ತು ಸದ್ಯದಲ್ಲಿ 12 ಅಧಿಕ ಭಾಷೆಗಳಲ್ಲಿ ಅದನ್ನು ಭಾಷಾಂತರಿಸಲಾಗುತ್ತಿದೆ.
ಬೈಬಲ್ ಈಗ ಬಹುಮಟ್ಟಿಗೆ ಪ್ರತಿಯೊಬ್ಬರಿಗೂ ಸುಲಭಲಭ್ಯವಿರುವುದರಿಂದ, ನೀವದನ್ನು ಹೇಗೆ ಅವಲೋಕಿಸುತ್ತೀರಿ? ನೀವು ಬೈಬಲನ್ನು ಬೆಲೆಯುಳ್ಳದ್ದೆಂದು ಎಣಿಸುತ್ತೀರೊ? ನೀವು ಅಮೂಲ್ಯವೆಂದೆಣಿಸುವ ಮತ್ತು ಓದುವ ಒಂದು ಪ್ರತಿಯು ನಿಮಗಿದೆಯೊ?
[ಪುಟ 3 ರಲ್ಲಿರುವ ಚಿತ್ರ ಕೃಪೆ]
ಮೇರಿ ಜೋನ್ಸ್ ಮತ್ತು ಆಕೆಯ ಬೈಬಲಿನ ಕಥೆ [ಇಂಗ್ಲಿಷ್ನಲ್ಲಿ] ಎಂಬ ಪುಸ್ತಕದಿಂದ