ಒಂದು ವಿಶೇಷಾರ್ಥವುಳ್ಳ ಸ್ಮಾರಕಲೇಖಗಳು
“ಯೆಹೋವಾ ಸಿಟ್ ಟೀಬಿ ಕುಸ್ಟೋಸ್”
ಪೂರ್ವ ಸ್ವಿಟ್ಸರ್ಲೆಂಡ್ನ ಸೆಲರೀನ ಹಳ್ಳಿಯಲ್ಲಿ 17 ನೆಯ ಶತಮಾನದ ಒಂದು ಮನೆಯ ಎದುರುಗೋಡೆಯ ಮೇಲೆ ಕೊರೆಯಲ್ಪಟ್ಟಿರುವ ಈ ಮಾತುಗಳ ಅರ್ಥವು “ಯೆಹೋವನು ನಿನ್ನ ಸಂರಕ್ಷಕನಾಗಿದ್ದಾನೆ.” ಈ ಪರ್ವತಮಯ ಪ್ರದೇಶದಲ್ಲಿ ಶತಮಾನಗಳಷ್ಟು ಹಳೆಯದಾದ ಮನೆಗಳ, ಚರ್ಚುಗಳ, ಮತ್ತು ಮಠಗಳ ಮೇಲೆ ದೇವರ ನಾಮವು ಕೊರೆಯಲ್ಪಟ್ಟಿರುವುದನ್ನು ಅಥವಾ ಬಣ್ಣದಲ್ಲಿ ಚಿತ್ರಿಸಲ್ಪಟ್ಟಿರುವುದನ್ನು ಕಾಣುವುದೇನೂ ಅಸಾಮಾನ್ಯವಲ್ಲ. ಯೆಹೋವನ ಹೆಸರು ಅಷ್ಟು ಖ್ಯಾತವಾಗಿದ್ದದ್ದು ಹೇಗೆ?
ಸಾ.ಶ.ಪೂ. 15 ರಲ್ಲಿ, (ಯಾವುದು ಈಗ ಆಗ್ನೇಯ ಜರ್ಮನಿ, ಆಸ್ಟ್ರಿಯ, ಮತ್ತು ಪೂರ್ವ ಸ್ವಿಟ್ಸರ್ಲೆಂಡ್ ಆಗಿರುತ್ತದೊ ಅದರ ಭಾಗಗಳು ಒಳಗೊಂಡಿರುವ) ಪುರಾತನ ರೇಷಿಯ, ಒಂದು ರೋಮನ್ ಪ್ರಾಂತ್ಯವಾಯಿತು. ಅದರ ನಿವಾಸಿಗಳು ರೋಮಾಂಷ್ ಎಂಬ ಲ್ಯಾಟಿನ್-ಮೂಲದ ಭಾಷೆಯನ್ನು ಆಡಲಾರಂಭಿಸಿದರು, ಅದು ಹಲವಾರು ಭಾಷಾರೂಪಗಳಾಗಿ ವಿಕಾಸಗೊಂಡು, ಸ್ವಿಟ್ಸರ್ಲೆಂಡ್ನ ಕೆಲವು ಆಲ್ಪ್ಸ್ಪರ್ವತ ಶ್ರೇಣಿಗಳಲ್ಲಿ ಮತ್ತು ಉತ್ತರ ಇಟೆಲಿಯಲ್ಲಿ ಇನ್ನೂ ಆಡಲ್ಪಡುತ್ತಿದೆ.
ಕಾಲಾನಂತರ, ಬೈಬಲ್ನ ಅಂಶಗಳು ರೋಮಾಂಷ್ ಭಾಷೆಗೆ ತರ್ಜುಮೆಯಾದವು. ಬೀಬ್ಲಿಯ ಷ್ನಿ ಎಂಬ ಒಂದು ಸಂಚಿಕೆಯು, ಕೀರ್ತನೆಗಳು ಮತ್ತು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥವನ್ನು ಒಳಗೊಂಡಿತ್ತು. ಇಸವಿ 1666 ರಲ್ಲಿ ಪ್ರಕಾಶಿತವಾದ ಈ ಬೈಬಲ್ನಲ್ಲಿ ಯೆಹೋವ ಹೆಸರು ಇಡೀ ಕೀರ್ತನೆಯಲ್ಲಿ ಅನೇಕಾವರ್ತಿ ಕಂಡುಬಂತು. ಮನೆಯಲ್ಲಿ ಪ್ರಾಮುಖ್ಯ ವಾಚನ ವಿಷಯವು ಬೈಬಲ್ ಆಗಿದದ್ದರಿಂದ, ಬೀಬ್ಲಿಯ ಷ್ನಿದ ವಾಚಕರು ನಿರ್ಮಾಣಿಕನ ಹೆಸರಿನೊಂದಿಗೆ ಚಿರಪರಿಚಿತರಾದರು.
ಆದರೂ, ತರುವಾಯ ಬಂದ ಸಂತತಿಗಳು ಬೈಬಲ್ನ ವಿಷಯಗಳಲ್ಲಿ ಆಸಕ್ತಿಯನ್ನು ಕಳೆದುಕೊಂಡವು. ಹೆಚ್ಚಿನವರು “ಯೆಹೋವ” ಶಬ್ದದ ಅರ್ಥವೇನೆಂದು ವಿಚಾರಿಸುವ ತೊಂದರೆ ತೆಗೆದುಕೊಳ್ಳಲೂ ಇಲ್ಲ, ವೈದಿಕರು ಅದನ್ನು ವಿವರಿಸಲು ಯಾವ ಪ್ರಯತ್ನವನ್ನು ಮಾಡಲೂ ಇಲ್ಲ. ಆದಕಾರಣ, ಈ ಸ್ಮಾರಕಲೇಖಗಳು ಒಂದು ಹಳೆಯ ಕಾಲಾವಧಿಯ ವೈಶಿಷ್ಟ್ಯದ ಬರಿಯ ಅಲಂಕಾರಗಳಾಗಿ ಪರಿಣಮಿಸಿದವು.
ಇತ್ತೀಚಿನ ದಶಕಗಳಲ್ಲಿ ತಿಳಿವಳಿಕೆಯಲ್ಲಿ ಒಂದು ಅಪೂರ್ವ ಬದಲಾವಣೆಯು ಸಂಭವಿಸಿದೆ. ಯೆಹೋವನ ಸಾಕ್ಷಿಗಳು ಸ್ವಿಟ್ಸರ್ಲೆಂಡಿನ ತಗ್ಗುಪ್ರದೇಶದಿಂದ ಬಂದು ಈ ಸುಂದರವಾದ ಕಣಿವೆಗಳಲ್ಲಿ ರಜಾದಿನಗಳನ್ನು ಕಳೆಯುತ್ತಾ, ಅಲ್ಲಿನ ನಿವಾಸಿಗಳಿಗೆ ಯಾರ ಹೆಸರು ಯೆಹೋವ ಎಂದಾಗಿದೆಯೋ ಆ ದೇವರ ಕುರಿತು ಕಲಿಸಲು ಒಂದು ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಭೂಮಿಗಾಗಿ ಮತ್ತು ಮನುಷ್ಯನಿಗಾಗಿ ನಿರ್ಮಾಣಿಕನ ಆಶ್ಚರ್ಯಕರವಾದ ಉದ್ದೇಶಗಳ ಕುರಿತು ಜನರಿಗೆ ತಿಳಿಸುವುದರಲ್ಲಿ ಹೆಚ್ಚು ಸಮಯವನ್ನು ಕಳೆಯಲಾಗುವಂತೆ ಕೆಲವು ಸಾಕ್ಷಿಗಳು ಆ ಕ್ಷೇತ್ರದಲ್ಲಿ ನೆಲೆಸಿದ್ದಾರೆ ಸಹ. ಹೀಗೆ, ಜನರು ಸತ್ಯ ದೇವರಾದ ಯೆಹೋವನ ಕುರಿತು ಕಲಿಯುವಾಗ ಈ ಪ್ರಾಚೀನ ರೋಮಾಂಷ್ ಸ್ಮಾರಕಲೇಖಗಳು ಹೊಸ ಅರ್ಥವನ್ನು ತೆಗೆದುಕೊಳ್ಳುತ್ತಾ ಇವೆ.
[ಪುಟ 32 ರಲ್ಲಿರುವ ಚಿತ್ರಗಳು]
ಯೆಹೋವ ಪಾರ್ಟಿಯೊ ಮೇಆ: ಯೆಹೋವನೇ ನನ್ನ ಪಾಲು—ಕೀರ್ತನೆ 119:57 ನೋಡಿ