ಒಂದು ದಯಾಪೂರ್ಣ ಮಾತಿಗಿರುವ ಶಕ್ತಿ
“ಕಳವಳದಿಂದ ಕುಗ್ಗಿರುವ ಮನಸ್ಸು, ದಯಾಪೂರ್ಣವಾದ ಮಾತು ಅದನ್ನು ಹೇಗೆ ಚೈತನ್ಯಗೊಳಿಸಬಲ್ಲದು!”—ಜ್ಞಾನೋಕ್ತಿ 12:25, ನಾಕ್ಸ್.
ಕ್ರೈಸ್ತರು ವಿಪತ್ತಿನಿಂದ ಸಂಪೂರ್ಣವಾಗಿ ರಕ್ಷಿಸಲ್ಪಟ್ಟಿಲ್ಲ. ‘ನಿಭಾಯಿಸಲು ಕಷ್ಟಕರವಾದ ಈ ಕಠಿನ ಸಮಯಗಳಲ್ಲಿ’ ಜೀವಿಸುವುದರಿಂದ, ಕೆಲವೊಮ್ಮೆ ಅವರು ಕಳವಳವನ್ನು ಅನುಭವಿಸುತ್ತಾರೆ.—2 ತಿಮೊಥೆಯ 3:1.
ಅಂತಹ ಕೇಡನ್ನು ಅನುಭವಿಸುತ್ತಿರುವಾಗ, ಒಬ್ಬ ನಿಷ್ಠಾವಂತ ಸ್ನೇಹಿತನಿಂದ ದಯೆಯ ಮಾತುಗಳನ್ನು ಕೇಳುವುದು, ಎಂತಹ ಒಂದು ಆಶೀರ್ವಾದವಾಗಿದೆ! “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ,” ಎಂಬುದಾಗಿ ಬೈಬಲ್ ಹೇಳುತ್ತದೆ. (ಜ್ಞಾನೋಕ್ತಿ 17:17) ನಂಬಿಗಸ್ತ ಮನುಷ್ಯನಾದ ಯೋಬನು ಈ ರೀತಿಯ ಸ್ನೇಹಿತನಾಗಿದ್ದದ್ದಕ್ಕೆ ಪ್ರಸಿದ್ಧನಾಗಿದ್ದನು. ಎಲೀಫಜನೂ ಅವನ ಕುರಿತು ಹೇಳಿದ್ದು: “ಎಡವಿ ಬೀಳುವವರನ್ನು ನಿನ್ನ ಮಾತುಗಳಿಂದ ಉದ್ಧರಿಸಿ ಕುಸಿಯುವ ಮೊಣಕಾಲುಗಳನ್ನು ದೃಢಪಡಿಸಿದ್ದೀ.”—ಯೋಬ 4:4, ಟಿಇವಿ.
ಹಾಗಿದ್ದರೂ, ಸ್ವತಃ ಯೋಬನಿಗೆ ಉತ್ತೇಜನದ ಅಗತ್ಯವಿದ್ದಾಗ, ಎಲೀಫಜನು ಮತ್ತು ಅವನ ಸಂಗಾತಿಗಳು ದಯೆಯ ಮಾತುಗಳನ್ನು ಆಡಲಿಲ್ಲ. ಯೋಬನಲ್ಲಿ ಯಾವುದೊ ಗುಪ್ತವಾದ ತಪ್ಪು ಇರಬೇಕೆಂಬುದನ್ನು ಸೂಚಿಸುತ್ತಾ, ಅವನ ವಿಪತ್ತಿಗಾಗಿ ಅವರು ಯೋಬನನ್ನು ದೂಷಿಸಿದರು. (ಯೋಬ 4:8) ದಿ ಇಂಟರ್ಪ್ರೆಟರ್ಸ್ ಬೈಬಲ್ ಹೇಳುವುದು: “ಯೋಬನಿಗೆ ಬೇಕಾಗಿರುವುದು, ಮಾನವ ಹೃದಯದ ಅನುಕಂಪ. ಅವನಿಗೆ ಸಿಗುವಂಥದ್ದು, ಖಂಡಿತವಾಗಿ ‘ಸತ್ಯ’ ವಾದ ಹಾಗೂ ಖಂಡಿತವಾಗಿ ಸುಂದರವಾದ ಧಾರ್ಮಿಕ ಹಳಸಲು ಮಾತು ಮತ್ತು ನೈತಿಕ ಮಾತುಗಳ ಒಂದು ಸರಣಿ.” ಎಲೀಫಜ ಮತ್ತು ಅವನ ಸಂಗಾತಿಗಳ ಮಾತನ್ನು ಕೇಳಿದರ್ದಿಂದ ಯೋಬನು ಎಷ್ಟು ಕಳವಳಗೊಂಡನೆಂದರೆ, ಅವನು ಹೀಗೆ ಕೂಗಿಕೊಳ್ಳುವಂತೆ ಒತ್ತಾಯಿಸಲ್ಪಟ್ಟನು: “ಎಷ್ಟರ ವರೆಗೆ ನನ್ನ ಆತ್ಮವನ್ನು ನೋಯಿಸಿ ಮಾತುಗಳಿಂದ ನನ್ನನ್ನು ಜಜ್ಜುತ್ತಿರುವಿರಿ?”—ಯೋಬ 19:2.
ನಮ್ಮ ಯೋಚನಾರಹಿತ, ದಯಾರಹಿತ ಮಾತುಗಳಿಂದ ದೇವರ ಒಬ್ಬ ಜೊತೆ ಸೇವಕನು ಸಂಕಟದಲ್ಲಿ ಕೂಗಿಕೊಳ್ಳುವಂತೆ ನಾವು ಎಂದಿಗೂ ಮಾಡಬಾರದು. (ಹೋಲಿಸಿ ಧರ್ಮೋಪದೇಶಕಾಂಡ 24:15.) ಒಂದು ಬೈಬಲ್ ಜ್ಞಾನೋಕ್ತಿಯು ಎಚ್ಚರಿಸುವುದು: “ನೀವು ಹೇಳುವಂಥದ್ದು ಜೀವವನ್ನು ಉಳಿಸಬಲ್ಲದು ಯಾ ಅದನ್ನು ನಾಶಮಾಡಬಲ್ಲದು; ಆದುದರಿಂದ ನಿಮ್ಮ ಮಾತುಗಳ ಪರಿಣಾಮಗಳನ್ನು ನೀವು ಸ್ವೀಕರಿಸಬೇಕು.”—ಜ್ಞಾನೋಕ್ತಿ 18:21, ಟುಡೇಸ್ ಇಂಗ್ಲಿಷ್ ವರ್ಶನ್.
ಮಾತಿನ ಸಾಮರ್ಥ್ಯವನ್ನು ಗುರುತಿಸುತ್ತಾ, ಅಪೊಸ್ತಲ ಪೌಲನ ಮಾದರಿಯನ್ನು ನಾವು ಅನುಕರಿಸೋಣ. ಮಕೆದೋನ್ಯದಲ್ಲಿರುವಾಗ, ಅವನು “ಅಲ್ಲಿಯವರನ್ನು ಅನೇಕ ಮಾತುಗಳಿಂದ ಧೈರ್ಯ” ಪಡಿಸಿದನು.—ಅ. ಕೃತ್ಯಗಳು 20:2.