ಮೊಸಾಂಬೀಕ್ನಲ್ಲಿ “ಉಪ್ಪು ಮಾರುವುದು”
ಮೊಸಾಂಬೀಕ್ನಲ್ಲಿರುವ ದೇಶದ ಕಮಿಟಿಯ ಒಬ್ಬ ಸದಸ್ಯನಾದ ಫ್ರಾನ್ಸಿಸ್ಕೊ ಕೊಆನಾ, “ಪುನರ್ಶಿಕ್ಷಣ ಶಿಬಿರಗಳಲ್ಲಿ” ಹತ್ತು ವರ್ಷಗಳನ್ನು ಕಳೆದನು. ಅವನು ತನ್ನ ಅನುಭವವನ್ನು ತಿಳಿಸುತ್ತಾನೆ: “ನಾವು ಇಲ್ಲಿ ಸ್ವಲ್ಪ ಸಮಯ ಇರುವೆವೆಂದು ನನಗೆ ತಿಳಿದಿತ್ತು, ಆದುದರಿಂದ ನಾನು ಸರ್ಕಿಟ್ ಮೇಲ್ವಿಚಾರಕನಿಗೆ ನಾನು ಒಬ್ಬ ಕ್ರಮದ ಪಯನೀಯರನಾಗಿ ಮುಂದುವರಿಯಬಲ್ಲೆನೊ ಎಂದು ಕೇಳಿದೆ. ಆದರೆ ಶಿಬಿರಗಳಲ್ಲಿರುವ ಬಹುಮಟ್ಟಿಗೆ ಪ್ರತಿಯೊಬ್ಬರು ಯೆಹೋವನ ಸಾಕ್ಷಿಗಳಾಗಿದದ್ದರಿಂದ ನಾನು ಸಾರ್ವಜನಿಕ ಶುಶ್ರೂಷೆಯಲ್ಲಿ ಸಾಕಷ್ಟು ಸಮಯವನ್ನು ಮೀಸಲಾಗಿಡಲು ಹೇಗೆ ಶಕ್ತನಾಗುವೆ? ಸಾರಲಿಕ್ಕಾಗಿ ಜನರನ್ನು ಕಂಡುಕೊಳ್ಳಲು ನಾನು 47 ಕಿಲೋಮೀಟರ್ಗಳ ದೂರದಲ್ಲಿರುವ ಒಂದು ಪಟ್ಟಣವಾದ ಮಿಲಾಂಜ್ಗೆ ಹೋಗುವೆನೆಂದು ನಾನು ಹೇಳಿದೆ.
“ಅಧಿಕೃತವಾಗಿ ನಾವು ಶಿಬಿರವನ್ನು ಬಿಟ್ಟುಹೇಗಲು ಅನುಮತಿಸಲ್ಪಡದಿದ್ದರೂ, ಈ ನಿಯಮವು ಕಟ್ಟುನಿಟ್ಟಾಗಿ ಜಾರಿಯಲ್ಲಿರಲಿಲ್ಲ. ಸ್ಥಳೀಯ ಜನರಿಗೆ ಸಾರುವಂತೆ ಒಂದು ಮಾರ್ಗಕ್ಕಾಗಿ, ಪೊದೆಗಾಡಿಗೆ ಹೋಗಿ, ಮೊಣಕಾಲೂರಿ, ಪ್ರಾರ್ಥಿಸಿದ್ದನ್ನು ನಾನು ನೆನಪಿಸಬಲ್ಲೆ. ಯೆಹೋವನು ಕೂಡಲೇ ಉತ್ತರಿಸಿದನು.
“ಒಂದು ಸೈಕಲನ್ನು ಹೊಂದಿದ್ದ ಒಬ್ಬ ಮನುಷ್ಯನನ್ನು ನಾನು ಸಂಪರ್ಕಿಸಿದೆ, ಮತ್ತು ನಾನು ಅವನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡೆ. ಮಳೆಗಾಲವು ಬರುವ ಮುಂಚೆ ನಾನು ಆತನ ಎರಡು ಎಕರೆ ಜಮೀನನ್ನು ಬೇಸಾಯ ಮಾಡಿದರೆ, ಆತನು ಈ ಸೈಕಲನ್ನು ಕೊಟ್ಟು ನನ್ನ ಸಂಬಳವನ್ನು ಕೊಡಲು ಒಪ್ಪಿದನು. ಆದುದರಿಂದ ನಾನು ಪ್ರತಿ ಬೆಳಗ್ಗೆಯನ್ನು ಆತನ ಹೊಲಗಳನ್ನು ಬೇಸಾಯ ಮಾಡುವದರಲ್ಲಿ ಕಳೆದೆ. ಯೆಹೋವನು ಈ ಏರ್ಪಾಡನ್ನು ಆಶೀರ್ವದಿಸಿದನು, ಯಾಕಂದರೆ ಕೊನೆಯಲ್ಲಿ ನಾನು ನನ್ನ ಸೈಕಲನ್ನು ಪಡೆದೆ.
“ಪರಿಣಾಮವೇನಾಯಿತೆಂದರೆ, ನಾನು ಮಿಲಾಂಜ್ನ ದೊಡ್ಡ ಪಟ್ಟಣಕ್ಕೆ ತಲಪಲು ಶಕ್ತನಾದೆ ಮತ್ತು ಈ ಫಲಪ್ರದ ಕ್ಷೇತ್ರದಲ್ಲಿ ನನ್ನ ಪಯನೀಯರ್ ಸೇವೆಯನ್ನು ಪರಿಣಾಮಕಾರಿಯಾಗಿ ಮುಂದುವರಿಸಲು ಶಕ್ತನಾದೆ. ನಮ್ಮ ಕೆಲಸವು ನಿಷೇಧದ ಕೆಳಗೆ ಇದದ್ದರಿಂದ, ಜನರಿಗೆ ಸತ್ಯವನ್ನು ಪ್ರಸ್ತಾಪಿಸಲು ನಾನೊಂದು ಯೋಜನೆಯನ್ನು ಯೋಜಿಸಬೇಕಾಯಿತು. ನನ್ನ ಶರ್ಟಿನೊಳಗೆ ಪುಸ್ತಕಗಳನ್ನು ಮತ್ತು ಪತ್ರಿಕೆಗಳನ್ನು ತುರುಕಿಸಿ, ಒಂದು ಚೀಲದಲ್ಲಿ ಸ್ವಲ್ಪ ಉಪ್ಪನ್ನು ತೆಗೆದುಕೊಂಡೆ ಮತ್ತು ಉಪ್ಪು ಮಾರುವ ವ್ಯಾಪಾರದಲ್ಲಿ ತೊಡಗಿದೆ. ಅದನ್ನು 5 ಮೆಟೀಕೈಗಳಿಗೆ ಮಾರುವ ಬದಲು, ನಾನು 15 ಮೆಟೀಕೈಗಳನ್ನು ಕೇಳಿಕೊಂಡೆ. (ಉಪ್ಪು ತುಂಬಾ ಕಡಿಮೆ ಬೆಲೆಯದ್ದಾಗಿದ್ದಲ್ಲಿ, ಜನರು ಅದೆಲ್ಲವನ್ನು ಖರೀದಿಸುತ್ತಿದ್ದರು, ಮತ್ತು ಸಾರಲಿಕ್ಕಾಗಿ ಉಪಯೋಗಿಸಲು ನನಗೆ ಇನ್ನು ಉಪ್ಪು ಇರುತ್ತಿರಲಿಲ್ಲ!) ನನ್ನ ಸಂಭಾಷಣೆಗಳು ಸಾಧಾರಣ ಹೀಗಿದ್ದವು:
“‘ನಮಸ್ಕಾರ! ನಾನು ಈ ದಿನ ಉಪ್ಪನ್ನು ಮಾರುತ್ತಿದ್ದೇನೆ.’
“‘ಅದರ ಬೆಲೆ ಎಷ್ಟು?’
“‘ಹದಿನೈದು ಮೆಟೀಕೈಗಳು”
“‘ಇಲ್ಲ, ಇಲ್ಲ. ಅದು ತುಂಬಾ ದುಬಾರಿಯಾಗಿದೆ!’
“ಹೌದು, ಅದು ದುಬಾರಿಯಾಗಿದೆಯೆಂದು ನಾನು ಒಪ್ಪುತ್ತೇನೆ. ಆದರೆ ಅದು ಈಗಲೇ ದುಬಾರಿಯಾಗಿದೆಯೆಂದು ನೀವು ನೆನಸುತ್ತೀರಾದರೆ, ಇನ್ನೂ ಸ್ವಲ್ಪ ಕಾಲ ಕಾಯಿರಿ ಯಾಕಂದರೆ ಅದು ಭವಿಷ್ಯತ್ತಿನಲ್ಲಿ ಇನ್ನೂ ಹೆಚ್ಚು ದುಬಾರಿಯಾಗಿರುವುದು. ಇದು ಬೈಬಲಿನಲ್ಲಿ ಮುಂತಿಳಿಸಲ್ಪಟ್ಟಿತ್ತೆಂದು ನಿಮಗೆ ತಿಳಿದಿತ್ತೋ?’
“‘ನಾನು ಅದನ್ನು ನನ್ನ ಬೈಬಲಿನಲ್ಲಿ ಎಂದೂ ಓದಿಲ್ಲ.’
“‘ಹೌದು, ಅದು ಇದೆ. ನಿಮ್ಮ ಬೈಬಲನ್ನು ತನ್ನಿ, ನಾನು ನಿಮಗೆ ತೋರಿಸುತ್ತೇನೆ.’
“ಅದರೊಂದಿಗೆ ಅವನ ಬೈಬಲನ್ನು ಉಪಯೋಗಿಸುತ್ತಾ ಒಂದು ಸಂಭಾಷಣೆಯು ಪರಿಣಮಿಸುತ್ತಿತ್ತು, ಹೀಗಿರುವದರಿಂದ ನನ್ನ ಬೈಬಲ್ ನನ್ನ ಶರ್ಟಿನೊಳಗೇ ಇರುತ್ತಿತ್ತು. ಕಠಿನವಾದ ಪರಿಸ್ಥಿತಿಗಳು ಮತ್ತು ಆಹಾರದ ಅಭಾವಗಳ ಕುರಿತಾದ ಪ್ರಕಟನೆ ಅಧ್ಯಾಯ 6ಕ್ಕೆ ನಾನು ನಿರ್ದೇಶಿಸುತ್ತಿದ್ದೆ. ಒಂದು ಹಿತಕರ ಪ್ರತಿಕ್ರಿಯೆಯನ್ನು ನಾನು ಗ್ರಹಿಸಿದ್ದಲ್ಲಿ, ನಾನು ನಿತ್ಯ ಜೀವಕ್ಕೆ ನಡಿಸುವ ಸತ್ಯವು ಅಥವಾ ನಿಮ್ಮನ್ನು ಸಂತೋಷಪಡಿಸಲಿಕ್ಕೆ ಸುವಾರ್ತೆಯು ಪುಸ್ತಕವನ್ನು ಹೊರಗೆಳೆಯುತ್ತಿದ್ದೆ ಮತ್ತು ಸರಿಯಾದ ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸುತ್ತಿದ್ದೆ.
“ಪರಿಣಾಮವಾಗಿ, ನಾನು ಮಿಲಾಂಜ್ನಲ್ಲಿದ್ದ 15 ಆಸಕ್ತ ವ್ಯಕ್ತಿಗಳ ಒಂದು ಗುಂಪನ್ನು ಆರಂಭಿಸಲು ಶಕ್ತನಾದೆ. ಆದರೆ ಸ್ವಲ್ಪ ಸಮಯದ ನಂತರ, ಅಧಿಕಾರಿಗಳಿಗೆ ನಮ್ಮ ಚಟುವಟಿಕೆಗಳ ಕುರಿತು ತಿಳಿಯಿತು. ಒಂದು ದಿವಸ ನಾನು ಬೈಬಲ್ ಅಧ್ಯಯನವೊಂದನ್ನು ನಡಿಸುತ್ತಿದ್ದಾಗ, ಪೊಲೀಸರು ಹಠಾತ್ತಾಗಿ ನುಗ್ಗಿ ನಮ್ಮನ್ನು ದಸ್ತಗಿರಿಮಾಡಿದರು. ಕುಟುಂಬದ ಚಿಕ್ಕ ಮಕ್ಕಳನ್ನು ಒಳಗೊಂಡು, ನಾವೆಲ್ಲರು ಸ್ಥಳಿಕ ಸೆರೆಮನೆಗೆ ಕೊಂಡೊಯ್ಯಲ್ಪಟ್ಟೆವು. ಅಲ್ಲಿ ಒಂದು ತಿಂಗಳನ್ನು ಕಳೆದ ಬಳಿಕ, ನಮ್ಮೆಲ್ಲರನ್ನು ಶಿಬಿರಕ್ಕೆ ಪುನಃ ಒಮ್ಮೆ ಕಳುಹಿಸಲಾಯಿತು.”
ಈ ಅನುಭವಗಳು ನಮ್ಮ ಸಹೋದರರ ಹುರುಪನ್ನು ಕುಂದಿಸಲಿಲ್ಲ. ವ್ಯತಿರಿಕ್ತವಾಗಿ, ಶಿಬಿರಗಳಲ್ಲಿದ್ದ ಅವರ ಸಾವಿರಾರು ಸಹೋದರರೊಂದಿಗೆ, ಫ್ರಾನ್ಸಿಸ್ಕೊ ಮತ್ತು ಆತನ ಕುಟುಂಬವು, ಈಗ ಮೊಸಾಂಬೀಕ್ನಲ್ಲಿ ಸ್ವತಂತ್ರ ಪರಿಸ್ಥಿತಿಗಳ ಕೆಳಗೆ ಆರಾಧಿಸುತ್ತದೆ ಮತ್ತು ಸಾರುತ್ತದೆ.