THERE IS NO ANNUAL MEETING FILE IN KANNDA, BUT WAS SUBSTITUTED BY THE FOLLOWING:
ಸಂಬಂಧಿಕರಿಗೆ ಸಾಕ್ಷಿ ನೀಡುವುದು ಉತ್ತಮ ಫಲಿತಾಂಶಗಳನ್ನು ತರುತ್ತದೆ
ಟೈವಾನಿನ ಟೈನಾನ್ನಲ್ಲಿ, ಒಬ್ಬ ಯುವ ಗೃಹಿಣಿಯು ಬೈಬಲನ್ನು ಅಭ್ಯಸಿಸಲು ಆರಂಭಿಸಿದಳು. ಅವಳು ಒಂದು ದೊಡ್ಡ ಕುಟುಂಬದೊಂದಿಗೆ ಜೀವಿಸುತ್ತಾಳೆ. ಅವರಲ್ಲಿ ಹೆಚ್ಚಿನವರು ಪ್ರೆಸ್ಬಿಟೀರಿಯನ್ ಚರ್ಚಿನಲ್ಲಿ ಪ್ರಮುಖರಾಗಿದ್ದರು. ‘ಇತರ ಧರ್ಮಗಳನ್ನು ಖಂಡಿಸುತ್ತಿ’ದುದ್ದಕ್ಕಾಗಿ ಅವಳ ಚರ್ಚು ಸಾಕ್ಷಿಗಳನ್ನು ಟೀಕಿಸುತ್ತಿದ್ದರಿಂದ, ಅವಳು ಹೀಗೆ ಮಾಡುವುದನ್ನು ಜಾಗರೂಕತೆಯಿಂದ ವರ್ಜಿಸಿದಳು ಆದರೆ ಕ್ರೈಸ್ತ ಗುಣಗಳನ್ನು ಪ್ರದರ್ಶಿಸುವುದರ ಮೇಲೆ ಕೇಂದ್ರೀಕರಿಸಿದಳು. ಕೂಟಗಳಿಗೆ ಹೋಗಲು ಅವಳು ತನ್ನ ಮೋಟಾರ್ ಸೈಕಲಿನಲ್ಲಿ ಹದಿನಾರು ಕಿಲೊಮೀಟರ್ ಪ್ರಯಾಣಮಾಡಬೇಕಾಗಿದ್ದರೂ ಆಕೆ ಉಪಸ್ಥಿತಿಯಲ್ಲಿ ಕ್ರಮವಾಗಿದಳ್ದು. ಬೇಗನೇ, ಕುಟುಂಬ ಸದಸ್ಯರು ಆಕೆ ತನ್ನ ವ್ಯಕ್ತಿತ್ವದಲ್ಲಿ ಮಾಡುತ್ತಿದ್ದ ಬದಲಾವಣೆಗಳನ್ನು ಗಮನಿಸಲಾರಂಭಿಸಿದರು. ಇದರಿಂದಾಗಿ ಮತ್ತು ಅವಳ ಸಮಯೋಚಿತ ನಯದಿಂದ ಸಾಕ್ಷಿನೀಡುವಿಕೆಯ ಫಲಿತಾಂಶವಾಗಿ, ಅವಳ ನಾದಿನಿಯು ಅಭ್ಯಸಿಸಲಾರಂಭಿಸಿದಳು. ಅನಂತರ, ಅವಳ ಸ್ವಂತ ಗಂಡನು ಅವಳೇನನ್ನು ಕಲಿಯುತ್ತಿದ್ದಳೋ ಅದನ್ನು ಪರೀಕ್ಷಿಸಿ ನೋಡಲು ಒಪ್ಪಿದನು. ಮುಂದೆ, ಅವನ ಸಹೋದರ ಮತ್ತು ಒಬ್ಬ ಸೋದರಸಂಬಂಧಿ ಅಭ್ಯಸಿಸಲಾರಂಭಿಸಿದರು. ಅನಂತರ, ಕುಟುಂಬದ ವಿವಿಧ ಸದಸ್ಯರು ಕಲಿಯುತ್ತಿದ್ದ ವಿಷಯದಲ್ಲಿ ಅತೆಯ್ತು ಆಸಕ್ತಿಯನ್ನು ತೋರಿಸಲಾರಂಭಿಸಿದರು. ಆ ಯುವ ಹೆಂಗಸು ಅನಂತರ, 322 ಕಿಲೊಮೀಟರ್ಗಳು ದೂರದಲ್ಲಿ ಜೀವಿಸುತ್ತಿರುವ ತನ್ನ ಸ್ವಂತ ಹೆತ್ತವರಿಗೆ ಸಾಕ್ಷಿನೀಡಿದಳು. ಅವರು ಅಭ್ಯಸಿಸಲಾರಂಭಿಸಿದರು. ಆ ಯುವ ಹೆಂಗಸು, ಅವಳ ಗಂಡ, ಮತ್ತು ಇಬ್ಬರು ಸಂಬಂಧಿಕರು ಈಗ ದೀಕ್ಷಾಸ್ನಾನವನ್ನು ಪಡೆದಿದ್ದಾರೆ, ಹಲವಾರು ಇತರ ಸಂಬಂಧಿಕರು ಸತ್ಯವನ್ನು ಕಲಿಯುವುದರಲ್ಲಿ ಉತ್ತಮ ಪ್ರಗತಿಯನ್ನು ಮಾಡುತ್ತಿದ್ದಾರೆ, ಮತ್ತು ಅದೇ ಚರ್ಚಿನಿಂದ ಇನ್ನೊಬ್ಬ ದಂಪತಿಗಳು ಸಾರುವ ಕಾರ್ಯದಲ್ಲಿ ಪಾಲುತೆಗೆದುಕೊಳ್ಳಲು ಸಾಧ್ಯವಾಗುವಂತೆ ಈಗೀಗಲೇ ರಾಜೀನಾಮೆ ಕೊಟ್ಟಿದ್ದಾರೆ. ಮಾತಿನಿಂದಲೂ ಉತ್ತಮ ನಡತೆಯಿಂದಲೂ ಇತರರಿಗೆ ಸತ್ಯವನ್ನು ಶಿಫಾರಸ್ಸು ಮಾಡಿದುದಕ್ಕಾಗಿ ಯೆಹೋವನಿಂದ ಎಂತಹ ಒಂದು ಆಶೀರ್ವಾದ!