ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w96 4/1 ಪು. 32
  • “ನಿಮಗೆ ತಾಳ್ಮೆ ಬೇಕು”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ನಿಮಗೆ ತಾಳ್ಮೆ ಬೇಕು”
  • ಕಾವಲಿನಬುರುಜು—1996
ಕಾವಲಿನಬುರುಜು—1996
w96 4/1 ಪು. 32

“ನಿಮಗೆ ತಾಳ್ಮೆ ಬೇಕು”

ನಾವು “ವಾಗ್ದಾನದ ಫಲವನ್ನು” ಹೊಂದಬೇಕಾದರೆ, ನಮಗೆ “ತಾಳ್ಮೆ ಬೇಕು.” (ಇಬ್ರಿಯ 10:36) ಈ ವಚನದಲ್ಲಿ ಪೌಲನು ಉಪಯೋಗಿಸಿರುವ “ತಾಳ್ಮೆ” ಎಂಬ ಶಬ್ದಕ್ಕಿರುವ ಗ್ರೀಕ್‌ ಪದವು, “ಕಷ್ಟಕರವಾದ ಮತ್ತು ಅನನುಕೂಲಕರವಾದ ಪರಿಸ್ಥಿತಿಗಳ ಕೆಳಗೆ ಜೀವಿಸುವ ಸಸ್ಯವೊಂದರ ಸಾಮರ್ಥ್ಯ”ವನ್ನು ವರ್ಣಿಸಲು ಕೆಲವೊಮ್ಮೆ ಉಪಯೋಗಿಸಲ್ಪಟ್ಟಿತ್ತೆಂದು ಒಬ್ಬ ಬೈಬಲ್‌ ಪಂಡಿತನು ವಿವರಿಸುತ್ತಾನೆ.

ಯೂರೋಪಿನ ಪರ್ವತಗಳಲ್ಲಿ, ಅಂತಹದ್ದೇ ಒಂದು ಸಸ್ಯವು ಬೆಳೆಯುತ್ತದೆ. ಕುತೂಹಲಕರವಾಗಿ, ಇದು ನಿತ್ಯಜೀವಿ (ಲಿವ್‌ ಫಾರೆವರ್‌) ಎಂದು ಕರೆಯಲ್ಪಡುತ್ತದೆ. ಈ ಆಲ್ಪೈನ್‌ ಸಸ್ಯವು ಸದಾಕಾಲ ಜೀವಿಸುವುದಿಲ್ಲವಾದರೂ, ಪ್ರತಿ ಬೇಸಗೆಕಾಲದಲ್ಲಿ ಅತ್ಯಂತ ಮನೋಹರವಾದ ಹೂವುಗಳನ್ನು ಫಲಿಸುತ್ತಾ, ಅದು ಅನೇಕ ವರ್ಷಗಳ ವರೆಗೆ ಬದುಕುತ್ತದೆ ಎಂಬುದು ನಿಶ್ಚಯ. ಆ ಸಸ್ಯದ “ಸಹಿಷ್ಣುತೆ ಮತ್ತು ಬಾಳಿಕೆ”ಯ ಕಾರಣದಿಂದಾಗಿ, ಅದಕ್ಕೆ ನಿತ್ಯಜೀವಿ ಎಂಬ ಹೆಸರು ಕೊಡಲ್ಪಟ್ಟಿತ್ತೆಂದು ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ ವಿವರಿಸುತ್ತದೆ. (ಸೆಂಪರ್ವಿವಮ್‌ ಜಾತಿಯ ಈ ಸಸ್ಯಗಳಿಗಿರುವ ವೈಜ್ಞಾನಿಕ ಹೆಸರೂ, “ನಿತ್ಯಜೀವಿ” ಎಂದು ಅರ್ಥೈಸುತ್ತದೆ.)

ಬಾಳಿಕೆ ಬರುವ ಈ ಸಸ್ಯವನ್ನು ಇಷ್ಟು ಗಮನಾರ್ಹವಾಗಿ ಮಾಡುವಂತಹ ವಿಷಯವು ಯಾವುದೆಂದರೆ, ಅತ್ಯಂತ ಶುಷ್ಕ ಸ್ಥಳಗಳಲ್ಲಿ ಇದು ಬೆಳೆಯುತ್ತದೆ. ಗಾಳಿಯ ಹೊಡೆತಕ್ಕೆ ಸಿಕ್ಕಿದ ಪರ್ವತಗಳ ಎತ್ತರದ ಇಳುಕಲುಗಳಲ್ಲಿ, ಎಲ್ಲಿ ತಾಪಮಾನವು 24 ತಾಸುಗಳಲ್ಲಿ 35°Cನಷ್ಟು ಇಳಿಯಸಾಧ್ಯವಿದೆಯೋ ಅಲ್ಲಿ ಇದನ್ನು ಕಂಡುಕೊಳ್ಳಸಾಧ್ಯವಿದೆ. ಶಿಲಾಮಯವಾದ ಬಿರುಕುಗಳಲ್ಲಿರುವ ಸ್ವಲ್ಪ ಪ್ರಮಾಣದ ಮಣ್ಣಿನಲ್ಲಿ ಅದು ಬೇರುಗಳನ್ನು ತೂರಿಸಬಲ್ಲದು. ಇಂತಹ ಕಠಿನ ಪರಿಸ್ಥಿತಿಗಳಲ್ಲಿನ ಅದರ ತಾಳ್ಮೆಯ ಕುರಿತಾದ ರಹಸ್ಯಗಳಲ್ಲಿ ಕೆಲವು ಯಾವುವು?

ಈ ನಿತ್ಯಜೀವಿ ಸಸ್ಯವು ದಪ್ಪ ಮೆತು ತಿರುಳಿನ ಎಲೆಗಳನ್ನು ಹೊಂದಿದ್ದು, ಇವು ಜಾಗರೂಕತೆಯಿಂದ ನೀರನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ. ಮಳೆಯಿಂದ ಅಥವಾ ಕರಗುತ್ತಿರುವ ಹಿಮದಿಂದ ದೊರೆಯುವ ಎಲ್ಲಾ ತೇವಾಂಶದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಇದು ಸಾಧ್ಯಮಾಡುತ್ತದೆ. ಅಲ್ಲದೆ ಅವುಗಳ ಶಿಲಾಮಯ ಆಧಾರದ ಮೇಲೆ ದೃಢವಾದ ಹಿಡಿತವನ್ನು ಪಡೆದುಕೊಳ್ಳಲಿಕ್ಕಾಗಿ ಅವುಗಳ ಬಲವನ್ನು ಐಕ್ಯಗೊಳಿಸುವಂತಹ ಸಮೂಹಗಳಲ್ಲಿ ಅದು ಬೆಳೆಯುತ್ತದೆ. ಬಿರುಕುಗಳಲ್ಲಿ ಬೇರುಬಿಡುವ ಮೂಲಕವಾಗಿ, ಅಲ್ಲಿ ಕಡಿಮೆ ಮಣ್ಣು ಇರಬಹುದಾದರೂ ಇತರ ಘಟಕಗಳ ಚಟುವಟಿಕೆಯಿಂದ ಉಂಟುಮಾಡಲ್ಪಡುವ ಹವಾಮಾನ ಪರಿಸ್ಥಿತಿಗಳ ವಿರುದ್ಧವಾಗಿ ಇದಕ್ಕೆ ಸ್ವಲ್ಪ ರಕ್ಷಣೆಯಿದೆ. ಬೇರೆ ಮಾತುಗಳಲ್ಲಿ, ಅದರ ಕಷ್ಟಕರ ಸನ್ನಿವೇಶಗಳನ್ನು, ಅತ್ಯುತ್ತಮ ಪ್ರಯೋಜನ ಬರುವಂತೆ ಉಪಯೋಗಿಸಿಕೊಳ್ಳುವ ಮೂಲಕ ಇದು ಹುಲುಸಾಗಿ ಬೆಳೆಯುತ್ತದೆ.

ಆತ್ಮಿಕವಾಗಿ ಮಾತಾಡುವಾಗ, ನಮ್ಮ ತಾಳ್ಮೆಯ ಗುಣವನ್ನು ಪರೀಕ್ಷಿಸುವಂತಹ ಸನ್ನಿವೇಶಗಳಲ್ಲಿ ನಾವು ನಮ್ಮನ್ನು ಕಂಡುಕೊಳ್ಳಬಹುದು. ಪರೀಕ್ಷೆಯ ಕೆಳಗೆ ತಾಳಿಕೊಳ್ಳುವಂತೆ ಯಾವುದು ನಮಗೆ ಸಹಾಯ ಮಾಡುವುದು? ನಿತ್ಯಜೀವಿ ಸಸ್ಯದಂತೆ, ನಾವು ದೇವರ ವಾಕ್ಯದ ಜೀವದಾಯಕ ನೀರನ್ನು ಶೇಖರಿಸಿಕೊಳ್ಳಬಲ್ಲೆವು ಮತ್ತು ಬೆಂಬಲಕ್ಕಾಗಿಯೂ ರಕ್ಷಣೆಗಾಗಿಯೂ ನಾವು ನಿಜ ಕ್ರೈಸ್ತರೊಂದಿಗೆ ನಿಕಟವಾಗಿ ಸಹವಸಿಸಬಲ್ಲೆವು. ಎಲ್ಲಕ್ಕಿಂತ ಮಿಗಿಲಾಗಿ, ಆಲ್ಪೈನ್‌ ಹೂವಿನಂತೆ, ನಾವು ನಮ್ಮ “ಬಂಡೆ”ಯಾದ ಯೆಹೋವನಿಗೆ, ಹಾಗೂ ಆತನ ವಾಕ್ಯಕ್ಕೆ ಮತ್ತು ಆತನ ಸಂಸ್ಥೆಗೆ ಭದ್ರವಾಗಿ ಅಂಟಿಕೊಳ್ಳಬೇಕು.—2 ಸಮುವೇಲ 22:3, NW.

ನಿಜವಾಗಿಯೂ, ಕಠಿನವಾದ ಒಂದು ಪರಿಸರದಲ್ಲಿಯೂ, ಲಭ್ಯವಿರುವ ಒದಗಿಸುವಿಕೆಗಳ ಪ್ರಯೋಜನವನ್ನು ನಾವು ಪಡೆದುಕೊಳ್ಳುವುದಾದರೆ ನಾವು ತಾಳಿಕೊಳ್ಳಸಾಧ್ಯವಿದೆ ಎಂಬುದಕ್ಕೆ ನಿತ್ಯಜೀವಿ ಸಸ್ಯವು ಒಂದು ಆಕರ್ಷಕವಾದ ಜ್ಞಾಪನವಾಗಿದೆ. ಅಂತಹ ತಾಳ್ಮೆಯು ನಾವು ‘ವಾಗ್ದಾನದ ಫಲವನ್ನು ಬಾಧ್ಯತೆಯಾಗಿ ಪಡೆಯು’ವುದಕ್ಕೆ ಮುನ್ನಡಿಸುವುದು ಎಂಬುದಾಗಿ ಯೆಹೋವನು ನಮಗೆ ಆಶ್ವಾಸನೆ ಕೊಡುತ್ತಾನೆ; ಇದು ಅಕ್ಷರಶಃ ನಿತ್ಯವಾಗಿ ಜೀವಿಸುವುದನ್ನು ಅರ್ಥೈಸುವುದು.—ಇಬ್ರಿಯ 6:12, NW; ಮತ್ತಾಯ 25:46.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ