ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w96 12/1 ಪು. 32
  • ಯಾರು ಸೌವಾರ್ತಿಕರಾಗಿರುವರು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯಾರು ಸೌವಾರ್ತಿಕರಾಗಿರುವರು?
  • ಕಾವಲಿನಬುರುಜು—1996
ಕಾವಲಿನಬುರುಜು—1996
w96 12/1 ಪು. 32

ಯಾರು ಸೌವಾರ್ತಿಕರಾಗಿರುವರು?

ಸುಮಾರು 40 ವರ್ಷಗಳ ಹಿಂದೆ, ವರ್ಲ್ಡ್‌ ಕೌನ್ಸಿಲ್‌ ಆಫ್‌ ಚರ್ಚಸ್‌ನ ಕೂಟವೊಂದರಲ್ಲಿ, “ಸೌವಾರ್ತಿಕತೆಯ ಆತ್ಮದಲ್ಲಿ ವಿಕಸಿಸುವಂತೆ” ಮತ್ತು ತಮ್ಮ ಹಿಂಡುಗಳಿಗೆ “ಸುವಾರ್ತೆಯನ್ನು ಬೋಧಿಸುತ್ತಾ ಹೋಗಲು” ಕಲಿಸುವಂತೆ ಅದರ ಸದಸ್ಯರು ಪ್ರಚೋದಿಸಲ್ಪಟ್ಟರು. ಐದು ವರ್ಷಗಳ ತರುವಾಯ, ಒಬ್ಬ ಕ್ಯಾತೊಲಿಕ್‌ ವೈದಿಕನಾದ ಜಾನ್‌ ಎ. ಒಬ್ರಾಯನ್‌, ಸುಮ್ಮನೆ “ನಮ್ಮ ಮನೆಗಳಲ್ಲಿ ಕುಳಿತುಕೊಂಡಿರುವ ಮೂಲಕವಾಗಿ” ಅಲ್ಲ, ಬದಲಾಗಿ ಹೊಸ ಶಿಷ್ಯರ “ಬಳಿಗೆ ಹೋಗುವ ಮೂಲಕ” ಅವರನ್ನು ಕರೆತರುವ ಅಗತ್ಯದ ಕುರಿತಾಗಿ ಬರೆದನು. ಮತ್ತು “ಸುವಾರ್ತೆಯ ಕುರಿತಾಗಿ ನಾಚಿಕೆಪಟ್ಟುಕೊಳ್ಳುವಂತಹ ಸಮಯವು ಇದಾಗಿರುವುದಿಲ್ಲ, ಅದನ್ನು ಮೇಲ್ಚಾವಣಿಗಳಿಂದ ಸಾರುವ ಸಮಯವು ಇದಾಗಿದೆ” ಎಂದು, 1994ರ ಜನವರಿ ತಿಂಗಳಿನಲ್ಲಿ, ಪೋಪ್‌ ಜಾನ್‌ ಪಾಲ್‌ II ಹೇಳಿದರು.

ಸೌವಾರ್ತಿಕರಿಗಾಗಿರುವ ಈ ತಡೆತಡೆದು ಬರುವ ಕರೆಗಳು, ಅಸಡ್ಡೆಗೆ ಗುರಿಯಾಗಿವೆಯೆಂಬುದು ಸ್ಪಷ್ಟ. ಇಲವಾರ ಮರ್ಕ್ಯುರಿ ಎಂಬ ಆಸ್ಟ್ರೇಲಿಯನ್‌ ವಾರ್ತಾಪತ್ರದಲ್ಲಿನ ಲೇಖನವೊಂದು ಹೇಳಿದ್ದು: “ಆಸ್ಟ್ರೇಲಿಯದ ದಕ್ಷಿಣ ಕರಾವಳಿಯ ಪ್ರಖ್ಯಾತ ಕ್ಯಾತೊಲಿಕರು, ತಮ್ಮ ನಂಬಿಕೆಯಲ್ಲಿ ಯೆಹೋವನ ಸಾಕ್ಷಿ-ರೀತಿಯ ಸಮೀಪಿಸುವಿಕೆಯನ್ನು ಅಂಗೀಕರಿಸಲು ಆತುರರಾಗಿಲ್ಲ.” ಸೌವಾರ್ತಿಕತೆಯು “ಕ್ಯಾತೊಲಿಕ್‌ ಮನೋವೃತ್ತಿಯ ಭಾಗವೇ ಆಗಿಲ್ಲ”ವೆಂದು ಒಬ್ಬ ಮನುಷ್ಯನು ಹೇಳಿದನು. ಇನ್ನೊಬ್ಬನು ತರ್ಕಿಸಿದ್ದು: “ಚರ್ಚು ಕದತಟ್ಟುವ ಮೂಲಕವಾಗಿ ಅಲ್ಲ, ಬದಲಾಗಿ ತನ್ನನ್ನು ತಾನೇ ಪ್ರವರ್ತಿಸಿಕೊಳ್ಳುವುದು ಒಳ್ಳೆಯದು. ಶಾಲೆಗಳ ಅಥವಾ ಅಂಚೆಯ ಮೂಲಕ ಸಂದೇಶಗಳನ್ನು ಕಳುಹಿಸುವುದು ಹೆಚ್ಚು ಉತ್ತಮವಾದದ್ದಾಗಿರಬಹುದು.” ಸ್ಥಳಿಕ ಕತೀಡ್ರಲ್‌ವೊಂದರ ಪ್ರಾಂತೀಯ ಪಾದ್ರಿಯು ಸಹ, ಪೋಪರ ಹೇಳಿಕೆಗಳ ಅರ್ಥವಿವರಣೆಮಾಡುವ ವಿಧದ ಕುರಿತು ನಿಶ್ಚಿತನಾಗಿರಲಿಲ್ಲ. “ಜನರು ತಮಗೆ ತಿಳಿದಿರುವ ಸುವಾರ್ತೆಯನ್ನು ತಮ್ಮ ಸ್ವಂತ ಜೀವಿತಗಳಾದ್ಯಂತ ರೂಢಿಸಿಕೊಳ್ಳುವಂತೆ ನಾವು ಅವರನ್ನು ಪ್ರೋತ್ಸಾಹಿಸುತ್ತೇವೆ” ಎಂದು ಅವನು ಹೇಳಿದನು. “ಅದು ಕದತಟ್ಟುವುದನ್ನು ಅರ್ಥೈಸುತ್ತದೋ ಇಲ್ಲವೋ ಎಂಬುದು ಬೇರೊಂದು ವಿಷಯವಾಗಿದೆ.” ವಾರ್ತಾ ಲೇಖನದ ಶಿರೋನಾಮವು ಅದನ್ನು ಚೆನ್ನಾಗಿ ಹೀಗೆ ಸಂಗ್ರಹಾನುವಾದಮಾಡುತ್ತದೆ: “ಸಾರಲಿಕ್ಕಾಗಿರುವ ಪೋಪರ ಕರೆಗೆ ಕ್ಯಾತೊಲಿಕರು ಲಕ್ಷ್ಯಕೊಡುವುದಿಲ್ಲ.”

ಸುವಾರ್ತೆಯನ್ನು ಬೋಧಿಸುವ ವಿಷಯದಲ್ಲಿ ಕ್ರೈಸ್ತಪ್ರಪಂಚದ ವೈಫಲ್ಯದ ಹೊರತೂ, 50 ಲಕ್ಷಕ್ಕಿಂತಲೂ ಅಧಿಕ ಸಂಖ್ಯೆಯ ಯೆಹೋವನ ಸಾಕ್ಷಿಗಳು, ‘ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡು’ವ ಯೇಸುವಿನ ಆಜ್ಞೆಯನ್ನು ಅನುಸರಿಸುತ್ತಿದ್ದಾರೆ. (ಮತ್ತಾಯ 28:19, 20; ಅ. ಕೃತ್ಯಗಳು 5:42ನ್ನು ಹೋಲಿಸಿರಿ.) ಅವರ ಮನೆಯಿಂದ ಮನೆಯ ಸಾರುವಿಕೆಯು, ಈಗ 230ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಕಾರ್ಯರೂಪಕ್ಕೆ ತರಲ್ಪಡುತ್ತಿದೆ. ಅವರು ತರುವ ಸಂದೇಶವು ಒಂದು ಇತ್ಯಾತ್ಮಕ ಸಂದೇಶವಾಗಿದೆ; ಇದು ಭವಿಷ್ಯತ್ತಿಗಾಗಿರುವ ಬೈಬಲಿನ ಅದ್ಭುತಕರ ವಾಗ್ದಾನಗಳನ್ನು ಎತ್ತಿತೋರಿಸುತ್ತದೆ. ಅವರು ಮುಂದಿನ ಬಾರಿ ಭೇಟಿಮಾಡುವಾಗ ಅವರೊಂದಿಗೆ ಮಾತಾಡಬಾರದೇಕೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ