ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w01 6/15 ಪು. 31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಅನುರೂಪ ಮಾಹಿತಿ
  • ಮುಂತಿಳಿಸಲ್ಪಟ್ಟಂತೆ ಎಲ್ಲವನ್ನು ಹೊಸದುಮಾಡುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ಆದಿಕಾಂಡ 1:1—“ಆರಂಭದಲ್ಲಿ ದೇವರು ಆಕಾಶ, ಭೂಮಿ ಸೃಷ್ಟಿ ಮಾಡಿದನು”
    ಬೈಬಲ್‌ ವಚನಗಳ ವಿವರಣೆ
  • ಹೊಸ ಲೋಕ—ನೀವು ಅಲ್ಲಿರುವಿರೊ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ದೇವರು ವಾಗ್ದಾನಿಸಿರುವ ಒಂದು ಹೊಸ ಲೋಕ
    ಎಚ್ಚರಿಕೆಯಿಂದಿರಿ!
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
w01 6/15 ಪು. 31

ವಾಚಕರಿಂದ ಪ್ರಶ್ನೆಗಳು

ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಭಾಷಾಂತರವು, 2 ಪೇತ್ರ 3:13ರಲ್ಲಿ “ನೂತನಾಕಾಶಮಂಡಲ [ಬಹುವಚನ] ಮತ್ತು ನೂತನಭೂಮಂಡಲ”ದ ಕುರಿತಾಗಿ ತಿಳಿಸಿ, ಅನಂತರ ಪ್ರಕಟನೆ 21:1ರಲ್ಲಿ “ನೂತನಾಕಾಶಮಂಡಲ [ಏಕವಚನ] ನೂತನಭೂಮಂಡಲ” ಎಂದು ಏಕೆ ಹೇಳುತ್ತದೆ?

ಮೂಲಭೂತವಾಗಿ ಇದು ಮೂಲ ಭಾಷೆಗಳ ಒಂದು ವ್ಯಾಕರಣಸಂಬಂಧಿತ ವಿವರವಾಗಿದೆ. ಆದರೆ ಅದರ ಅರ್ಥದ ಸಂಬಂಧದಲ್ಲಿ ಅದಕ್ಕೆ ಯಾವುದೇ ವಿಶೇಷ ಮಹತ್ವವಿರುವಂತೆ ತೋರುವುದಿಲ್ಲ.

ಮೊದಲನೆಯದಾಗಿ, ಹೀಬ್ರು ಶಾಸ್ತ್ರವಚನಗಳನ್ನು ಪರಿಗಣಿಸಿರಿ. ಇಂಗ್ಲಿಷ್‌ನಲ್ಲಿ “ಆಕಾಶಮಂಡಲ (ಏಕವಚನ)” ಅಥವಾ “ಆಕಾಶಮಂಡಲ (ಬಹುವಚನ)” ಎಂದು ಭಾಷಾಂತರಿಸಲ್ಪಟ್ಟಿರುವ ಶಾಮಾಯಿಮ್‌ ಎಂಬ ಹೀಬ್ರು ಪದವು, ಮೂಲ ಭಾಷಾ ಗ್ರಂಥಪಾಠದಲ್ಲಿ ಯಾವಾಗಲೂ ಬಹುವಚನದಲ್ಲಿದೆ. ಈ ಬಹುವಚನವು, ಉತ್ಕೃಷ್ಟತೆಯನ್ನು ಸೂಚಿಸಲಿಕ್ಕಾಗಿರುವ ಒಂದು ಬಹುವಚನವನಲ್ಲ, ಬದಲಾಗಿ ಒಂದು ಅಖಂಡದ ಪ್ರತ್ಯೇಕ ಭಾಗಗಳು, ಅಂತರ ಅಥವಾ ಸ್ಥಳವನ್ನು ವ್ಯಾಪಿಸುವುದನ್ನು ಅಥವಾ ಹರಡಿಕೊಳ್ಳುವುದನ್ನು ಸೂಚಿಸುವ ಒಂದು ಬಹುವಚನವಾಗಿದೆ. ಇದು ಅರ್ಥಮಾಡಿಕೊಳ್ಳಬಹುದಾದ ಸಂಗತಿಯಾಗಿದೆ, ಯಾಕೆಂದರೆ ಭೌತಿಕ ಆಕಾಶವು ಭೂಮಿಯಿಂದಾಚೆ ಎಲ್ಲ ದಿಕ್ಕುಗಳಲ್ಲೂ ವ್ಯಾಪಿಸಿ, ಅದರಲ್ಲಿ ಕೋಟ್ಯಾನುಕೋಟಿ ನಕ್ಷತ್ರಗಳು ಒಳಗೊಂಡಿವೆ. ಶಾಮಾಯಿಮ್‌ ಎಂಬ ಪದದ ಮುಂಚೆ ಒಂದು ನಿರ್ದೇಶ ಗುಣವಾಚಿ ಇರುವಾಗ, ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಭಾಷಾಂತರವು ಹೆಚ್ಚುಕಡಿಮೆ ಬದಲಾವಣೆಯಿಲ್ಲದೆ ಅದನ್ನು ಯೆಶಾಯ 66:22ರಲ್ಲಿರುವಂತೆ “ಆಕಾಶಮಂಡಲ” [ಬಹುವಚನ] ಎಂದು ತರ್ಜುಮೆಮಾಡುತ್ತದೆ. ಶಾಮಾಯಿಮ್‌ ಪದಕ್ಕೆ ಯಾವುದೇ ನಿರ್ದೇಶ ಗುಣವಾಚಿ ಇಲ್ಲದಿರುವಾಗ, ಅದನ್ನು ಏಕವಚನದಲ್ಲಿ (ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ನಲ್ಲಿ ಆದಿಕಾಂಡ 1:8; 14:​19, 22; ಕೀರ್ತನೆ 69:34ರಲ್ಲಿರುವಂತೆ) ಅಥವಾ ಬಹುವಚನದಲ್ಲಿ (ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ನಲ್ಲಿ ಆದಿಕಾಂಡ 49:25; ನ್ಯಾಯಸ್ಥಾಪಕರು 5:4; ಯೋಬ 9:8; ಯೆಶಾಯ 65:17ರಲ್ಲಿರುವಂತೆ) ತರ್ಜುಮೆಮಾಡಸಾಧ್ಯವಿದೆ.

ಯೆಶಾಯ 65:17 ಮತ್ತು 66:22ರಲ್ಲಿ, ಆಕಾಶಕ್ಕಾಗಿರುವ ಹೀಬ್ರು ಪದವು ಬಹುವಚನದಲ್ಲಿದೆ, ಮತ್ತು ಈ ಎರಡೂ ವಚನಗಳಲ್ಲಿ, “ನೂತನಾಕಾಶಮಂಡಲ [ಬಹುವಚನ] ಮತ್ತು ನೂತನಭೂಮಂಡಲ” ಎಂಬುದಾಗಿ ತರ್ಜುಮೆಮಾಡಲಾಗಿದೆ.

ಗ್ರೀಕ್‌ ಪದವಾದ ಔರಾನಸ್‌ ಏಕವಚನದಲ್ಲಿದೆ ಮತ್ತು ಅದರರ್ಥ “ಆಕಾಶ” ಆಗಿದೆ. ಮತ್ತು ಬಹುವಚನದಲ್ಲಿರುವ ಔರನೊಯಿ ಎಂಬುದರ ಅರ್ಥ, “ಆಕಾಶ” [ಬಹುವಚನ] ಎಂದಾಗಿದೆ. ಆಸಕ್ತಿಕರವಾದ ಸಂಗತಿಯೇನೆಂದರೆ, ಗ್ರೀಕ್‌ ಸೆಪ್ಟ್ಯುಅಜಿಂಟ್‌ನ ತರ್ಜುಮೆಗಾರರು ಯೆಶಾಯ 65:17 ಮತ್ತು 66:22ರಲ್ಲಿ ಏಕವಚನ ಪದವನ್ನು ಉಪಯೋಗಿಸಿದರು.

ಈಗ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿ ಎರಡು ವಚನಗಳಲ್ಲಿರುವ, “ನೂತನಾಕಾಶಮಂಡಲ ಮತ್ತು ನೂತನಭೂಮಂಡಲ” ಎಂಬ ವಾಕ್ಸರಣಿಯ ಕುರಿತಾಗಿ ಏನು?

2 ಪೇತ್ರ 3:13ರಲ್ಲಿ ಅಪೊಸ್ತಲನು ಗ್ರೀಕ್‌ ಬಹುವಚನವನ್ನು ಉಪಯೋಗಿಸಿದನು. ಅದಕ್ಕಿಂತ ಸ್ವಲ್ಪ ಮುಂಚಿನ ವಚನಗಳಲ್ಲಿ (7, 10, 12) ಅವನು ಸದ್ಯದ ದುಷ್ಟ ‘ಆಕಾಶಮಂಡಲದ’ ಕುರಿತಾಗಿ ಮಾತಾಡುವಾಗ ಬಹುವಚನವನ್ನು ಉಪಯೋಗಿಸಿದನು. 13ನೇ ವಚನದಲ್ಲೂ ಆ ಬಹುವಚನವನ್ನು ಆತನು ಹೊಂದಿಕೆಯಾಗಿಯೇ ಉಪಯೋಗಿಸಿದನು. ಅಷ್ಟುಮಾತ್ರವಲ್ಲದೆ, ಅವನು 2 ಪೇತ್ರ 2:22ರಲ್ಲಿ, ಜ್ಞಾನೋಕ್ತಿ 26:11ರ ಹೀಬ್ರು ಗ್ರಂಥಪಾಠದಿಂದ ಉಲ್ಲೇಖಿಸಿದಂತೆಯೇ, ಇಲ್ಲಿಯೂ ಮೂಲತಃ ಯೆಶಾಯ 65:17ರಿಂದ ಉಲ್ಲೇಖಿಸುತ್ತಿರುವಂತೆ ತೋರುತ್ತದೆ. ಮತ್ತು ಅಲ್ಲಿ ಆ ಹೀಬ್ರು ಪದವು ಬಹುವಚನದಲ್ಲಿದೆ. ಹೀಗೆ, ಪೇತ್ರನು “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ [ಬಹುವಚನ] ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ” ಎಂದು ಸೂಚಿಸಿದನು.

ಸ್ವಲ್ಪ ವ್ಯತ್ಯಾಸದೊಂದಿಗೆ ಪ್ರಕಟನೆ 21:1ರಲ್ಲಿ ಅಪೊಸ್ತಲ ಯೋಹಾನನು, ಸೆಪ್ಟ್ಯುಅಜಿಂಟ್‌ನಲ್ಲಿರುವ ಯೆಶಾಯ 65:17ರ ತರ್ಜುಮೆಯನ್ನು ಉಪಯೋಗಿಸಿರಬಹುದು. ಮತ್ತು ಈಗಾಗಲೇ ನಾವು ನೋಡಿರುವಂತೆ, ಸೆಪ್ಟ್ಯುಅಜಿಂಟ್‌ನಲ್ಲಿ “ಆಕಾಶ”ಕ್ಕಾಗಿರುವ ಗ್ರೀಕ್‌ ಪದವು, ಏಕವಚನದಲ್ಲಿದೆ. ಆದುದರಿಂದ ಯೋಹಾನನು ಹೀಗೆ ಬರೆದನು: “ನೂತನಾಕಾಶಮಂಡಲವನ್ನೂ [ಏಕವಚನ] ನೂತನಭೂಮಂಡಲವನ್ನೂ ಕಂಡೆನು. ಮೊದಲಿದ್ದ ಆಕಾಶಮಂಡಲವೂ ಮೊದಲಿದ್ದ ಭೂಮಂಡಲವೂ ಇಲ್ಲದೆ ಹೋದವು.”

ಇವೆಲ್ಲವೂ ತರ್ಜುಮೆಗೆ ಸಂಬಂಧಿಸಿರುವ ವ್ಯಾಕರಣ ವಿವರಗಳಾಗಿವೆ. ಆದುದರಿಂದ “ನೂತನಾಕಾಶಮಂಡಲ” ಎಂಬ ಪದವು, ಏಕವಚನದಲ್ಲಿ ಭಾಷಾಂತರಿಸಲ್ಪಟ್ಟಿರಲಿ ಅಥವಾ ಬಹುವಚನದಲ್ಲಿ ಭಾಷಾಂತರಿಸಲ್ಪಟ್ಟಿರಲಿ ಇದರಿಂದ ಅದರ ಅರ್ಥದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲವೆಂಬುದನ್ನು ಪುನಃ ಹೇಳುವೆವು. ಅನ್ವಯಾರ್ಥವು ಒಂದೇ ಆಗಿರುತ್ತದೆ.

[ಪುಟ 31ರಲ್ಲಿರುವ ಚಿತ್ರ ಕೃಪೆ]

ನಕ್ಷತ್ರಗಳು: Frank Zullo

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ