“ನನ್ನಲ್ಲಿ ಯಾವ ದೋಷವಿದೆ ಎಂಬುದು ಕೊನೆಗೂ ನನಗೆ ಗೊತ್ತಾಯಿತು!”
ಟೋಕಿಯೋದ ವ್ಯಕ್ತಿಯೊಬ್ಬನು, 2000, ಡಿಸೆಂಬರ್ 1ರ ಕಾವಲಿನಬುರುಜು ಪತ್ರಿಕೆಯ ಸಂಚಿಕೆಯನ್ನು ಓದಿದಾಗ, ಅವನಿಗೆ ಈ ಮೇಲೆ ಕೊಡಲ್ಪಟ್ಟಿರುವಂತೆ ಅನಿಸಿತು. “ನಾಳೆ ಏನಾಗುವುದೋ ನಿಮಗೆ ತಿಳಿಯದು” ಎಂಬುದು ಆ ಲೇಖನದ ಮೇಲ್ಬರಹವಾಗಿತ್ತು. ಮತ್ತು ಇದು ವೈದ್ಯಕೀಯವಾಗಿ ಮೇನಿಕ್-ಡಿಪ್ರೆಸಿವ್ ಸೈಕಾಸಿಸ್ ರೋಗ ಎಂದು ಪ್ರಸಿದ್ಧವಾಗಿರುವ ರೋಗದಿಂದ ಕಷ್ಟಾನುಭವಿಸುತ್ತಿರುವ ಮಾಜಿ ಮಿಷನೆರಿಯೊಬ್ಬರ ಅನುಭವವನ್ನು ಪ್ರಕಟಿಸಿತ್ತು.
ಟೋಕಿಯೋದ ಆ ವ್ಯಕ್ತಿಯು ಈ ಪತ್ರಿಕೆಯ ಪ್ರಕಾಶಕರನ್ನು ಸಂಬೋಧಿಸಿ ಬರೆದ ಒಂದು ಪತ್ರದಲ್ಲಿ ತಿಳಿಸಿದ್ದು: “ಅದರಲ್ಲಿ ವರ್ಣಿಸಲ್ಪಟ್ಟಿರುವ ರೋಗಲಕ್ಷಣಗಳೆಲ್ಲಾ ನನ್ನಲ್ಲಿದ್ದವು. ಆದುದರಿಂದ ನಾನು ಮನೋರೋಗ ಚಿಕಿತ್ಸಕರ ಆಸ್ಪತ್ರೆಗೆ ಹೋದೆ ಮತ್ತು ನನಗೂ ಮೇನಿಕ್ ಡಿಪ್ರೆಷನ್ ಇದೆಯೆಂಬುದು ಗೊತ್ತಾಯಿತು. ನನ್ನನ್ನು ಪರೀಕ್ಷಿಸಿದ ವೈದ್ಯರು ತುಂಬ ಆಶ್ಚರ್ಯಚಕಿತರಾದರು. ‘ಈ ರೋಗವಿರುವ ಜನರು, ತಾವು ಅಸ್ವಸ್ಥರು ಎಂದು ನೆನಸುವುದೇ ಅಪರೂಪ’ ಎಂದು ಅವರು ಹೇಳಿದರು. ನನ್ನ ಅಸ್ವಸ್ಥತೆಯು ತುಂಬ ಗಂಭೀರವಾಗುವುದಕ್ಕೆ ಮೊದಲೇ ನನಗೆ ಈ ಅಸ್ವಸ್ಥತೆಯಿದೆ ಎಂಬುದನ್ನು ಪತ್ತೆಹಚ್ಚಲು ನನಗೆ ಸಹಾಯ ಸಿಕ್ಕಿತ್ತು.”
ಲೋಕದಾದ್ಯಂತವಿರುವ ಕೋಟಿಗಟ್ಟಲೆ ಜನರು, ಕಾವಲಿನಬುರುಜು ಪತ್ರಿಕೆಯ ಹಾಗೂ ಅದರ ಸಂಗಾತಿ ಪತ್ರಿಕೆಯಾದ ಎಚ್ಚರ!ದ ಪ್ರತಿಯೊಂದು ಸಂಚಿಕೆಯನ್ನು ಓದುವ ಮೂಲಕ ಬೇರೆ ಬೇರೆ ರೀತಿಯಲ್ಲಿ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ. ಈ ಲೇಖನಗಳು ಬೋಧಪ್ರದವೂ ಸಂತೃಪ್ತಿಕರವೂ ಆಗಿವೆ ಎಂಬುದು ಅವರಿಗೆ ತಿಳಿದುಬಂದಿದೆ. ಕಾವಲಿನಬುರುಜು ಪತ್ರಿಕೆಯು ಈಗ 141 ಭಾಷೆಗಳಲ್ಲಿ ಮುದ್ರಿಸಲ್ಪಡುತ್ತಿದೆ, ಮತ್ತು ಎಚ್ಚರ! ಪತ್ರಿಕೆಯು 86 ಭಾಷೆಗಳಲ್ಲಿ ಪ್ರಕಾಶಿಸಲ್ಪಡುತ್ತಿದೆ. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಕ್ರಮವಾಗಿ ಓದುವುದರಲ್ಲಿ ನೀವು ಸಹ ಆನಂದಿಸುವಿರಿ.