ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w07 10/1 ಪು. 32
  • “ಮುಪ್ಪಿನಲ್ಲಿಯೂ ಫಲಿಸುವರು”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಮುಪ್ಪಿನಲ್ಲಿಯೂ ಫಲಿಸುವರು”
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
w07 10/1 ಪು. 32

“ಮುಪ್ಪಿನಲ್ಲಿಯೂ ಫಲಿಸುವರು”

ಮೆಡಿಟರೇನಿಯನ್‌ ದೇಶಗಳಲ್ಲಿ ಅನೇಕ ಜನರು ತಮ್ಮ ಅಂಗಳಗಳಲ್ಲಿ ಖರ್ಜೂರದ ಮರಗಳನ್ನು ಬೆಳೆಸುತ್ತಾರೆ. ಈ ಮರಗಳು ಸುಂದರ ಸುಮಧುರ ಫಲಗಳಿಗೆ ಸುಪ್ರಸಿದ್ಧವಾಗಿವೆ. ಮಾತ್ರವಲ್ಲ, ಅವು ನೂರಾರು ವರುಷಗಳ ವರೆಗೆ ಫಲ ಕೊಡುತ್ತಲೇ ಇರುತ್ತವೆ.

ಪುರಾತನ ಇಸ್ರಾಯೇಲ್‌ನ ರಾಜ ಸೊಲೊಮೋನನು ಶೂಲೇಮ್ಯ ಚೆಲುವೆಯೊಬ್ಬಳ ಮೈಕಟ್ಟನ್ನು ಕಾವ್ಯರೂಪದಲ್ಲಿ ವರ್ಣಿಸುತ್ತಾ ಖರ್ಜೂರ ಮರಕ್ಕೆ ಹೋಲಿಸಿದನು. (ಪರಮಗೀತ 7:7) ಬೈಬಲ್‌ನ ಗಿಡಗಳು (ಇಂಗ್ಲಿಷ್‌) ಪುಸ್ತಕ ತಿಳಿಸುವುದು: “ಖರ್ಜೂರವೃಕ್ಷಕ್ಕಿರುವ ಹೀಬ್ರು ಪದ ‘ತಾಮಾರ್‌.’ . . . ಯೆಹೂದ್ಯರಿಗೆ ಇದು ಲಾವಣ್ಯ ಮತ್ತು ಮನೋಹರತೆಯ ಚಿಹ್ನೆಯಾಗಿತ್ತು. ಆದುದರಿಂದ ಅವರು ಅನೇಕವೇಳೆ ಹೆಣ್ಣುಮಕ್ಕಳಿಗೆ ಆ ಹೆಸರನ್ನು ಇಡುತ್ತಿದ್ದರು.” ಉದಾಹರಣೆಗೆ, ಸೊಲೊಮೋನನ ಬಹು ಸುಂದರಿಯಾದ ಮಲತಂಗಿಯ ಹೆಸರು ತಾಮಾರ್‌. (2 ಸಮುವೇಲ 13:1) ಇಂದಿಗೂ ಕೆಲವು ಹೆತ್ತವರು ತಮ್ಮ ಹೆಣ್ಣುಮಕ್ಕಳಿಗೆ ಆ ಹೆಸರಿಡುತ್ತಾರೆ.

ಆದರೆ ಖರ್ಜೂರ ಮರಕ್ಕೆ ಕೇವಲ ಬೆಡಗಿನ ಸ್ತ್ರೀಯರನ್ನು ಮಾತ್ರ ಹೋಲಿಸಲಾಗಿಲ್ಲ. ಕೀರ್ತನೆಗಾರನು ಹಾಡಿದ್ದು: “ನೀತಿವಂತರು ಖರ್ಜೂರದ ಮರದಂತೆ ಬೆಳೆಯುವರು; ಲೆಬನೋನಿನ ದೇವದಾರುವೃಕ್ಷದ ಹಾಗೆ ವೃದ್ಧಿಯಾಗುವರು. ಯೆಹೋವನ ಆಲಯದಲ್ಲಿ [ಸಸಿಗಳಂತೆ] ನೆಡಲ್ಪಟ್ಟವರು ನಮ್ಮ ದೇವರ ಅಂಗಳದಲ್ಲಿ ಚೆನ್ನಾಗಿ ಬೆಳೆಯುವರು. ಮುಪ್ಪಿನಲ್ಲಿಯೂ ಫಲಿಸುವರು; ಪುಷ್ಟಿಯಾಗಿದ್ದು ಶೋಭಿಸುವರು.”—ಕೀರ್ತನೆ 92:12-14.

ಸಾಂಕೇತಿಕವಾಗಿ ಹೇಳುವುದಾದರೆ, ತಮ್ಮ ಇಳಿವಯಸ್ಸಿನಲ್ಲಿಯೂ ದೇವರನ್ನು ನಂಬಿಗಸ್ತಿಕೆಯಿಂದ ಸೇವಿಸುವವರು ಮನೋಹರವಾಗಿ ಶೋಭಿಸುವ ಖರ್ಜೂರದ ಮರಕ್ಕೆ ಅನೇಕ ವಿಷಯಗಳಲ್ಲಿ ಹೋಲುತ್ತಾರೆ. “ನರೆಗೂದಲೇ ಸುಂದರ ಕಿರೀಟವು; ಅದು ಧರ್ಮಮಾರ್ಗದಲ್ಲಿ ದೊರಕುವದು” ಎನ್ನುತ್ತದೆ ಬೈಬಲ್‌. (ಜ್ಞಾನೋಕ್ತಿ 16:31) ಮುಪ್ಪಡರಿದಂತೆ ಶಾರೀರಿಕ ಬಲ ಕುಂದುತ್ತಾ ಹೋಗುತ್ತದೆ ನಿಜ. ಆದರೆ ದೇವರ ವಾಕ್ಯವಾದ ಬೈಬಲ್‌ನ ಕ್ರಮವಾದ ಅಧ್ಯಯನದಿಂದ ತಮ್ಮನ್ನು ಪೋಷಿಸಿಕೊಳ್ಳುವ ಮೂಲಕ ವೃದ್ಧರು ಆಧ್ಯಾತ್ಮಿಕವಾಗಿ ಬಲಹೊಂದಿ ನಳನಳಿಸಬಲ್ಲರು. (ಕೀರ್ತನೆ 1:1-3; ಯೆರೆಮೀಯ 17:7, 8) ಅವರ ಸವಿ ಮಾತುಗಳು ಮತ್ತು ಉತ್ತಮ ಆದರ್ಶದ ಕಾರಣ ನಂಬಿಗಸ್ತ ವಯೋವೃದ್ಧರು ಇತರರಿಗೆ ಉತ್ತೇಜನದ ಮಹಾಪೂರವಾಗಿದ್ದಾರೆ. ಅಲ್ಲದೆ, ವರ್ಷವರ್ಷವೂ ಫಲಿಸುತ್ತಾರೆ. (ತೀತ 2:2-5; ಇಬ್ರಿಯ 13:15, 16) ಹೌದು, ತಮ್ಮ ಬಾಳ ಮುಸ್ಸಂಜೆಯಲ್ಲೂ ವೃದ್ಧರು ಖರ್ಜೂರವೃಕ್ಷದಂತೆ ಫಲಿಸಬಲ್ಲರು. (w07 9/15)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ