“ನಿಮ್ಮ ಅತ್ಯಮೂಲ್ಯ ಕೊಡುಗೆ”
ಈ ಮಾತುಗಳಿಂದ, ಬೆಲ್ಜಿಯಂನ ಮಾಜಿ ಪ್ರಧಾನ ಮಂತ್ರಿಯೊಬ್ಬರು ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷa ಪುಸ್ತಕವನ್ನು ವರ್ಣಿಸಿದರು. ನೆರೆಯವನೊಬ್ಬನು ಅವರಿಗೆ ಸ್ನೇಹಪರ ಸಂದರ್ಶನವನ್ನು ನೀಡಿದ್ದಾಗ ಅವನಿಂದ ಆ ಪುಸ್ತಕವನ್ನು ಸ್ವೀಕರಿಸಿದ್ದರು. ಬಳಿಕ ಅವರು ತಮ್ಮ ಕೃತಜ್ಞತೆಯನ್ನು ಸೂಚಿಸುತ್ತಾ ಒಂದು ಪತ್ರವನ್ನು ಬರೆದು ತಿಳಿಸಿದ್ದು: “ನಿಮ್ಮ ಸ್ನೇಹಮಯ ಭೇಟಿಯು ನಿಜವಾಗಿ ನನ್ನ ಮನಃಸ್ಪರ್ಶಿಸಿತು. ನಿಮ್ಮ ಅತ್ಯಮೂಲ್ಯ ಕೊಡುಗೆ, ಅಂದರೆ ಪೂರ್ಣವಾಗಿ ‘ಮಹಾನ್ ಪುರುಷನ’ ಕುರಿತಾಗಿ ತಿಳಿಸುವ ಆ ಪುಸ್ತಕವಂತೂ ನನಗೆ ತುಂಬಾ ಹಿಡಿಸಿತು.”
ಆ ಪುಸ್ತಕವನ್ನು ಜಾಗರೂಕತೆಯಿಂದ ಓದಿದ್ದ ಆ ಮಾಜಿ ಪ್ರಧಾನ ಮಂತ್ರಿ ಈ ತೀರ್ಮಾನಕ್ಕೆ ಬಂದರು: “ಸುವಾರ್ತೆ ಪುಸ್ತಕದಲ್ಲಿರುವ ಸಂದೇಶದಲ್ಲಿ ಜನರು ಹೆಚ್ಚು ಆಸಕ್ತರಾಗಿರುವುದಾದರೆ ಮತ್ತು ಯೇಸು ಕ್ರಿಸ್ತನು ತಿಳಿಸಿದ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿ ನಡೆದರೆ ಇಂದಿನ ಜಗತ್ತು ತೀರಾ ಭಿನ್ನವಾಗಿರುತ್ತಿತ್ತು. ಆಗ ನಮಗೆ ಸೆಕ್ಯುರಿಟಿ ಕೌನ್ಸಿಲ್‌ನ (ಭದ್ರತಾ ಮಂಡಳಿಯ) ಅಗತ್ಯವೇ ಬೇಕಾಗುತ್ತಿರಲಿಲ್ಲ. ಭಯೋತ್ಪಾದಕರ ದಾಳಿಯೂ ಇರುತ್ತಿರಲಿಲ್ಲ. ಜಗತ್ತಿನಲ್ಲಿ ಯಾರೂ ಹಿಂಸಾಚಾರ ನಡೆಸುತ್ತಿರಲಿಲ್ಲ.” ಹೀಗೆಲ್ಲಾ ಆಗುವುದು ಒಂದು ಭ್ರಮೆಯೆಂದು ಅವರು ತಿಳಿಸಿದರಾದರೂ ತಮ್ಮ ನೆರೆಯವನ ಸ್ನೇಹಪರ ಭೇಟಿಯನ್ನು ತುಂಬಾ ಗೌರವಿಸಿದರು.
ಆ ಪತ್ರವು ಮುಂದುವರಿಸಿದ್ದು: “ನೀವು ಹಿತವನ್ನೇ ಕೋರುವ ಪ್ರಶಾಂಸಾರ್ಹರಾದ ಜನರ ಒಂದು ದೊಡ್ಡ ಗುಂಪಿಗೆ ಸೇರಿದ್ದೀರಿ. ಲೋಕದಲ್ಲಿ ನಡೆಯುವುದೆಲ್ಲವೂ ಒಳ್ಳೆಯದೆಂದಾಗಲಿ, ಲೋಕದಲ್ಲಿ ನಡೆಯುವುದೆಲ್ಲವೂ ಕೆಟ್ಟದೆಂದಾಗಲಿ ನೀವು ಹೇಳುವುದಿಲ್ಲ. ಆದರೂ, ಮಾನವರೆಲ್ಲರಿಗೆ ಒಳ್ಳೆದಾಗಬೇಕೆಂದು ಮತ್ತು ಪರಿಸ್ಥಿತಿಗಳು ಸುಧಾರಣೆಗೊಳ್ಳಬೇಕೆಂದು ಬಯಸುವವರಾಗಿದ್ದೀರಿ.”
ಅತ್ಯುತ್ತಮ ಲೋಕವೊಂದು ಬರುವುದು ಮಾನವರ ಪ್ರಯತ್ನಗಳಿಂದಲ್ಲ ಬದಲಾಗಿ ದೇವರ ಹಸ್ತಕ್ಷೇಪದಿಂದಲೇ ಎಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ. ಅವರು ಮಹಾ ಪುರುಷನಾದ ಯೇಸು ಕ್ರಿಸ್ತನನ್ನು ಅನುಸರಿಸಲು ಪ್ರಯತ್ನಿಸುತ್ತಾರೆ. ಯೆಹೋವನ ಸಾಕ್ಷಿಗಳು ಇತ್ತೀಚಿಗೆ ಎಂದಾದರೂ ನಿಮ್ಮನ್ನು ಭೇಟಿಯಾಗಿದ್ದಾರೋ? ಜೀವಿಸಿರುವವರಲ್ಲಿ ಅತ್ಯಂತ ಮಹಾ ಪುರಷನ ಕುರಿತು ಅವರೊಂದಿಗೆ ಸ್ವಾರಸ್ಯಕರ ಸಂಭಾಷಣೆ ನಡೆಸುವುದರಲ್ಲಿ ನೀವು ಆನಂದಿಸುವಿರಿ. ಅಲ್ಲದೆ, ಆ ಮಾಜಿ ಪ್ರಧಾನ ಮಂತ್ರಿಯ ಮನಮೆಚ್ಚಿಸಿದ ಪುಸ್ತಕವನ್ನು ನಿಮಗೆ ನೀಡಲು ಅವರು ಸಂತೋಷಿಸುವರು.
[ಪಾದಟಿಪ್ಪಣಿ]
a ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.