ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w11 4/15 ಪು. 28
  • ನಿಮಗೆ ನೆನಪಿದೆಯೇ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ನೆನಪಿದೆಯೇ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಅನುರೂಪ ಮಾಹಿತಿ
  • “ನಾನು ವಿಶ್ವಾಸವಿಟ್ಟಿದ್ದೇನೆ”
    ಅವರ ನಂಬಿಕೆಯನ್ನು ಅನುಕರಿಸಿ
  • “ನಾನು ವಿಶ್ವಾಸವಿಟ್ಟಿದ್ದೇನೆ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಏದೆನ್‌ ತೋಟ ನಿಜವಾಗ್ಲೂ ಇತ್ತಾ ಅಥವಾ ಅದೊಂದು ಕಟ್ಟುಕಥೆನಾ?
    ಕಾವಲಿನಬುರುಜು: ಏದೆನ್‌ ತೋಟ ನಿಜವಾಗ್ಲೂ ಇತ್ತಾ ಅಥವಾ ಕಟ್ಟುಕಥೆನಾ?
  • ನೀವು ಅಧರ್ಮವನ್ನು ದ್ವೇಷಿಸುತ್ತೀರೊ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
w11 4/15 ಪು. 28

ನಿಮಗೆ ನೆನಪಿದೆಯೇ?

ಕಾವಲಿನಬುರುಜುವಿನ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಆನಂದಿಸಿದ್ದೀರೋ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:

• ನಿಜ ಕ್ರೈಸ್ತರು ದೇವರ ನಾಮವನ್ನು ರಕ್ಷಾತಾಯಿತವಾಗಿ ಉಪಯೋಗಿಸುತ್ತಾರೋ?

ಅನೇಕ ಜನರು ಒಂದು ವಸ್ತು ಅಥವಾ ಚಿಹ್ನೆಯನ್ನು ರಕ್ಷಾತಾಯಿತವನ್ನಾಗಿ ಬಳಸುತ್ತಾರೆ, ಅದಕ್ಕೆ ತಮ್ಮನ್ನು ಕಾಪಾಡುವ ಅದ್ಭುತ ಶಕ್ತಿಯಿದೆ ಎಂದು ನೆನಸುತ್ತಾರೆ. ದೇವಜನರಾದರೋ ಯೆಹೋವನ ನಾಮವನ್ನು ಹಾಗೆ ವೀಕ್ಷಿಸುವುದಿಲ್ಲ. ಅವರು ಯೆಹೋವನಲ್ಲಿ ನಂಬಿಕೆಯನ್ನಿಡುತ್ತಾರೆ ಹಾಗೂ ಆತನ ಚಿತ್ತವನ್ನು ಮಾಡಲು ಶ್ರಮಿಸುತ್ತಾರೆ. ಈ ವಿಧದಲ್ಲಿ ಆತನ ನಾಮವನ್ನು ಆಶ್ರಯಿಸುತ್ತಾರೆ. (ಚೆಫ. 3:12, 13)—1/15, ಪುಟ 5-6.

• ರಾಜ ಸೌಲನನ್ನು ಯೆಹೋವನು ತಿರಸ್ಕರಿಸಿದ್ದೇಕೆ?

ದೇವರ ಪ್ರವಾದಿ ಬಂದು ಯಜ್ಞವನ್ನು ಅರ್ಪಿಸುವ ತನಕ ಸೌಲನು ಕಾಯಬೇಕಿತ್ತು. ಆದರೆ ತಾನೇ ಅದನ್ನು ಅರ್ಪಿಸುವ ಮೂಲಕ ಸೌಲನು ಅವಿಧೇಯನಾದನು. ಸಮಯಾನಂತರ, ಶತ್ರುಗಳನ್ನು ನಿರ್ಮೂಲಮಾಡಬೇಕೆಂಬ ದೇವರ ಆಜ್ಞೆಗೂ ಅವನು ಅವಿಧೇಯನಾದನು.—2/15, ಪುಟ 22-23.

• ನಾವು ಅಧರ್ಮವನ್ನು ದ್ವೇಷಿಸುತ್ತೇವೆಂದು ಹೇಗೆ ತೋರಿಸಬಲ್ಲೆವು?

ನಾವು ಮದ್ಯಸಾರವನ್ನು ತಕ್ಕ ಸ್ಥಾನದಲ್ಲಿಡುವೆವು, ಮಾಟಮಂತ್ರಗಳನ್ನು ತೊರೆಯುವೆವು ಹಾಗೂ ಅನೈತಿಕತೆಯ ಕುರಿತ ಯೇಸುವಿನ ಎಚ್ಚರಿಕೆಗೆ ಕಿವಿಗೊಡುವೆವು. ಉದಾಹರಣೆಗೆ ಕಾಮಪ್ರಚೋದಕ ಚಿತ್ರಗಳನ್ನು ನೋಡದಿರುವೆವು ಹಾಗೂ ಅವುಗಳ ಬಗ್ಗೆ ಯೋಚಿಸುತ್ತಾ ಕಲ್ಪನಾಲೋಕದಲ್ಲಿ ವಿಹರಿಸದಿರುವೆವು. (ಮತ್ತಾ. 5:27, 28) ಅಲ್ಲದೆ ಬಹಿಷ್ಕೃತ ವ್ಯಕ್ತಿಗಳೊಂದಿಗೂ ನಾವು ಸಹವಾಸಮಾಡೆವು.—2/15, ಪುಟ 29-32.

• ‘ನೀರಾವರಿಯಲ್ಲಿ ನೆಡಲ್ಪಟ್ಟು ತನ್ನ ಬೇರುಗಳನ್ನು ಹರಡಿರುವ’ ಮರದಂತೆ ಯೆರೆಮೀಯನು ಇದ್ದದ್ದು ಹೇಗೆ? (ಯೆರೆ. 17:7, 8)

ಅವನು ‘ಸದಾ ಫಲಕೊಡುತ್ತಾ ಇದ್ದನು.’ ತನ್ನ ಸುತ್ತಲೂ ಇದ್ದ ದುಷ್ಟ ಕುಚೋದ್ಯಗಾರರ ಪ್ರಭಾವಕ್ಕೆ ಅವನು ಒಳಗಾಗಲಿಲ್ಲ. ಬದಲಾಗಿ ಜೀವಪೋಷಕ ನೀರಿನ ಉಗಮನಾದ ಯೆಹೋವನಿಗೆ ಅಂಟಿಕೊಂಡಿದ್ದನು ಹಾಗೂ ಆತನು ಹೇಳಿದ ವಿಷಯಗಳನ್ನೆಲ್ಲ ಹೃದಯದಲ್ಲಿಟ್ಟುಕೊಂಡಿದ್ದನು.—3/15, ಪುಟ 14.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ