ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w13 1/1 ಪು. 16
  • ಬೈಬಲ್‌ ಕೊಡುವ ಉತ್ತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೈಬಲ್‌ ಕೊಡುವ ಉತ್ತರ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಅನುರೂಪ ಮಾಹಿತಿ
  • ದೇವರ ಹೆಸರು
    ಎಚ್ಚರ!—2017
  • ದೇವರಿಗೊಂದು ಹೆಸರಿದೆಯಾ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ದೇವರ ಹೆಸರು ನಿಮಗೆ ಗೊತ್ತಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ದೇವರ ಹೆಸರು—ಅದರ ಉಪಯೋಗ ಮತ್ತು ಅದರ ಅರ್ಥ
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
w13 1/1 ಪು. 16

ಬೈಬಲ್‌ ಕೊಡುವ ಉತ್ತರ

ದೇವರ ಹೆಸರೇನು?

ನಮ್ಮ ಕುಟುಂಬದಲ್ಲಿ ಎಲ್ಲರಿಗೂ ಒಂದು ಹೆಸರಿದೆ. ಮನೆಲಿರೋ ಪ್ರಾಣಿಗಳಿಗೂ ಹೆಸರು ಇಡುತ್ತೇವೆ! ಹೀಗಿರುವಾಗ ಇಡೀ ವಿಶ್ವಕ್ಕೇ ಒಡೆಯನಾದ ದೇವರಿಗೆ ಒಂದು ಹೆಸರಿರಲೇ ಬೇಕು. ಬೈಬಲಿನಲ್ಲಿ ನೋಡುವುದಾದರೆ ದೇವರಿಗೆ ಅನೇಕ ಬಿರುದುಗಳನ್ನು ಕೊಡಲಾಗಿದೆ. ಸರ್ವಶಕ್ತ, ಪರಮಾಧಿಕಾರಿ ಪ್ರಭು, ಸೃಷ್ಟಿಕರ್ತ ಇತ್ಯಾದಿ. ಅಷ್ಟೇ ಅಲ್ಲ ಆತನಿಗೆ ಒಂದು ಹೆಸರಿದೆ ಅಂತನೂ ಬೈಬಲ್‌ ಹೇಳುತ್ತೆ.—ಯೆಶಾಯ 42:8 ಓದಿ.

ಬೈಬಲಿನಲ್ಲಿ ತುಂಬ ಕಡೆ ದೇವರ ಹೆಸರು ಇರುವುದನ್ನು ನಾನು ನೋಡಬಹುದು. ಉದಾಹರಣೆಗೆ, ಕೀರ್ತನೆ 83:18ರಲ್ಲಿ “ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು” ಅಂತ ಇದೆ.

ದೇವರ ಹೆಸರನ್ನು ಉಪಯೋಗಿಸಬೇಕು ಏಕೆ?

ನಾವು ದೇವರ ಹೆಸರನ್ನು ಉಪಯೋಗಿಸಬೇಕು ಎನ್ನುವುದು ದೇವರ ಆಸೆ. ಹೆಚ್ಚಾಗಿ ನಾವು ನಮ್ಮ ಸ್ನೇಹಿತರನ್ನು ಹೆಸರಿಡಿದು ಮಾತಾಡಿಸುತ್ತೇವೆ. ಹೀಗಿರುವಾಗ ಯೆಹೋವ ದೇವರ ಜೊತೆ ಮಾತಾಡುವಾಗಲೂ ಹೆಸರಿಡಿದು ಮಾತಾಡಬೇಕಲ್ಲವಾ? ಯೇಸು ಕ್ರಿಸ್ತ ಸಹ ದೇವರ ಹೆಸರನ್ನು ಉಪಯೋಗಿಸುವಂತೆ ಪ್ರೋತ್ಸಾಹಿಸಿದ್ದಾನೆ.—ಮತ್ತಾಯ 6:9; ಯೋಹಾನ 17:26 ಓದಿ.

ಹಾಗಂತ ದೇವರ ಹೆಸರನ್ನು ತಿಳಿದುಕೊಂಡ ತಕ್ಷಣ ಆತನ ಮಿತ್ರರಾಗಿಬಿಡುತ್ತೇವಾ? ಇಲ್ಲ. ನಾವು ಆತನ ಬಗ್ಗೆ ಇನ್ನು ಜಾಸ್ತಿ ತಿಳಿದುಕೊಳ್ಳಬೇಕು. ಉದಾಹರಣೆಗೆ, ದೇವರ ಗುಣ ವ್ಯಕ್ತಿತ್ವ ಎಂಥದ್ದು? ಆತನಿಗೆ ಆಪ್ತರಾಗಲು ಏನು ಮಾಡಬೇಕು? ಎಂಬ ಇತ್ಯಾದಿ ವಿಷಯಗಳನ್ನು ತಿಳಿದುಕೊಳ್ಳಬೇಕು. ಈ ವಿಷಯಗಳನ್ನು ತಿಳಿದುಕೊಳ್ಳಲು ಬೈಬಲ್‌ ನಿಮಗೆ ಸಹಾಯಮಾಡುತ್ತದೆ. (w13-E 01/01)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ