ಮುಖ್ಯ ವಿಷಯ | ದೇವರ ಹೆಸರಿಗೆ ಮಸಿಬಳಿಯುವ ಸುಳ್ಳುಗಳು
ದೇವರನ್ನು ಪ್ರೀತಿಸಲು ಶ್ರಮಪಡಬೇಕಾ?
“‘ನಿನ್ನ ದೇವರಾದ ಯೆಹೋವನನ್ನ ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಮನಸ್ಸಿಂದ ಪ್ರೀತಿಸಬೇಕು.’ ಇದೇ ಪ್ರಾಮುಖ್ಯವಾದ ಮತ್ತು ಮೊದಲು ಪಾಲಿಸಬೇಕಾದ ಆಜ್ಞೆ.”—ಯೇಸು ಕ್ರಿಸ್ತ, ಕ್ರಿ.ಶ 33.a
ದೇವರನ್ನ ಪ್ರೀತಿಸೋದು ತುಂಬ ಕಷ್ಟ ಯಾಕಂದ್ರೆ ಆತನು ತುಂಬ ದೂರದಲ್ಲಿ ಇದ್ದಾನೆ, ಆತನನ್ನ ಅರ್ಥ ಮಾಡಿಕೊಳ್ಳೋಕೆ ಆಗಲ್ಲ, ಆತನು ತುಂಬ ಕ್ರೂರಿ ಅಂತ ಕೆಲವರು ಹೇಳ್ತಾರೆ. ಈ ಕೆಳಗಿನ ಅನುಭವಗಳನ್ನ ನೋಡಿ:
“ನಾನು ಸಹಾಯಕ್ಕಾಗಿ ದೇವರಿಗೆ ಪ್ರಾರ್ಥಿಸಿದೆ. ಅದೇ ಸಮಯದಲ್ಲಿ ಆತನು ನನ್ನಿಂದ ದೂರದಲ್ಲಿದ್ದಾನೆ ಅಂತನೂ ಅನಿಸಿತು. ದೇವರಿಗೆ ಯಾವುದೇ ಭಾವನೆಗಳಿಲ್ಲ ಅಂತ ನಾನು ಅಂದ್ಕೊಂಡಿದ್ದೆ.”—ಮಾರ್ಕೊ, ಇಟಲಿ.
“ದೇವರ ಸೇವೆ ಮಾಡಬೇಕಂತ ತುಂಬ ಆಸೆ ಇತ್ತು. ಆದರೆ ದೇವರು ನನ್ನಿಂದ ದೂರದಲ್ಲಿದ್ದಾನೆ ಅಂತ ನಂಗೆ ಅನಿಸಿತು. ಆತನಲ್ಲಿ ಭಾವನೆಗಳೇ ಇಲ್ಲ, ಯಾವಾಗಲೂ ಶಿಕ್ಷೆ ಕೊಡ್ತಾನೆ ಅಂತ ನಾನು ಅಂದುಕೊಂಡಿದ್ದೆ.”—ರೊಸಾ, ಗ್ವಾಟೆಮಾಲ.
“ನಾನು ಚಿಕ್ಕವಳಿದ್ದಾಗ ದೇವರು ನಮ್ಮ ತಪ್ಪುಗಳನ್ನ ಹುಡುಕಿ ನಮ್ಮನ್ನ ಶಿಕ್ಷಿಸ್ತಾನೆ ಅಂತ ನಂಗೆ ಅನಿಸ್ತಿತ್ತು. ಆತನು ನಮ್ಮಿಂದ ದೂರದಲ್ಲಿದ್ದಾನೆ ಅಂತನೂ ಅನಿಸೋಕೆ ಶುರು ಆಯ್ತು. ದೇವರು ಒಬ್ಬ ಪ್ರಧಾನಮಂತ್ರಿ ತರ. ಜನರಿಗೆ ಸಹಾಯ ಮಾಡ್ತಾನೆ ಆದ್ರೆ ನಿಜವಾಗ್ಲೂ ಅವರ ಮೇಲೆ ಆಸಕ್ತಿ ತೋರಿಸಲ್ಲ ಅಂತ ನಾನು ಅಂದುಕೊಂಡೆ.”—ರೇಮಾಂಡ್, ಕೆನಡಾ.
ನಿಮಗೇನು ಅನಿಸುತ್ತೆ? ದೇವರನ್ನ ಪ್ರೀತಿಸೋಕೆ ಆಗೋದೇ ಇಲ್ಲವಾ? ಈ ಪ್ರಶ್ನೆಯನ್ನ ನೂರಾರು ವರ್ಷಗಳಿಂದ ಕೆಲವು ಕ್ರೈಸ್ತರು ಕೇಳಿದ್ದಾರೆ. ಮಧ್ಯ ಯುಗದಲ್ಲಿ ಅನೇಕ ಕ್ರೈಸ್ತ ಪ್ರಪಂಚದವರು ಸರ್ವಶಕ್ತ ದೇವರಿಗೆ ಪ್ರಾರ್ಥನೆ ಮಾಡ್ತಾ ಇರಲಿಲ್ಲ. ಯಾಕೆ? ಯಾಕಂದ್ರೆ ದೇವರಂದ್ರೆ ಜನರು ಹೆದರಿ ನಡುಗುತ್ತಾ ಇದ್ರು. ಇತಿಹಾಸಗಾರನಾದ ವಿಲ್ ಡುರಂಟ್ ಹೀಗಂತಾರೆ: “ಪಾಪ ಮಾಡಿದ ಒಬ್ಬ ಸಾಮಾನ್ಯ ಮನುಷ್ಯ ಕ್ರೂರಿಯಾದ ದೇವರಿಗೆ ಹೇಗೆ ತಾನೇ ಪ್ರಾರ್ಥನೆ ಮಾಡಕ್ಕೆ ಸಾಧ್ಯ?”
ಜನರು ಯಾಕೆ ದೇವರನ್ನ “ಒಬ್ಬ ಕ್ರೂರಿ” ಅಂತ ಅಂದುಕೊಳ್ತಾರೆ? ಇದರ ಬಗ್ಗೆ ನಿಜವಾಗಲೂ ಬೈಬಲ್ನಲ್ಲಿ ಏನಿದೆ? ದೇವರ ಬಗ್ಗೆ ಸತ್ಯ ಕಲಿತರೆ ನೀವು ಆತನನ್ನ ಪ್ರೀತಿಸೋಕೆ ಶುರು ಮಾಡ್ತಿರಾ?