ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w16 ನವೆಂಬರ್‌ ಪು. 19-20
  • ‘ಇದು ವಿಶೇಷವಾದ ಕೆಲಸ’

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ಇದು ವಿಶೇಷವಾದ ಕೆಲಸ’
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಅನುರೂಪ ಮಾಹಿತಿ
  • ಯೆಹೋವನ ಧಾರಾಳತನಕ್ಕೆ ಕೃತಜ್ಞತೆ ತೋರಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಸಿದ್ಧಮನಸ್ಸನ್ನು ಯೆಹೋವನು ಸಮೃದ್ಧವಾಗಿ ಆಶೀರ್ವದಿಸುತ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಅವರ ಸಮೃದ್ಧಿಯು ಕೊರತೆಯನ್ನು ನೀಗಿಸಿತು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಇತರರ ಅಗತ್ಯಗಳನ್ನು ಪೂರೈಸಲು ನಾವೇನು ಮಾಡಬಲ್ಲೆವು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
w16 ನವೆಂಬರ್‌ ಪು. 19-20
ರಾಜ ದಾವೀದ ಆಲಯದ ಒಬ್ಬನಿಗೆ ನಕ್ಷೆಯನ್ನು ತೋರಿಸುತ್ತಿದ್ದಾನೆ; ಒಬ್ಬ ಸಹೋದರ ಕಟ್ಟಡದ ನಕ್ಷೆಯನ್ನು ಗಮನಿಸುತ್ತಿದ್ದಾನೆ

‘ಇದು ವಿಶೇಷವಾದ ಕೆಲಸ’

ರಾಜ ದಾವೀದನು ಯೆರೂಸಲೇಮಿನಲ್ಲಿ ಒಂದು ದೊಡ್ಡ ಸಭೆ ಕರೆದನು. ಅದಕ್ಕೆ ತನ್ನ ರಾಜ್ಯದ ಅಧಿಪತಿಗಳು, ಕಂಚುಕಿಗಳು, ರಣವೀರರನ್ನು ಕರೆದಿದ್ದನು. ಒಂದು ವಿಶೇಷವಾದ ಪ್ರಕಟಣೆಯನ್ನು ರಾಜ ಮಾಡಿದಾಗ ಜನರೆಲ್ಲರೂ ಬಹಳ ಸಂತೋಷಪಟ್ಟರು. ಯೆಹೋವನು ತನ್ನ ಆರಾಧನೆಗಾಗಿ ಒಂದು ಭವ್ಯವಾದ ಮಂದಿರವನ್ನು ಕಟ್ಟುವಂತೆ ಹೇಳಿದ್ದನು. ಇದನ್ನು ದಾವೀದನ ಮಗನಾದ ಸೊಲೊಮೋನ ಕಟ್ಟಲಿದ್ದನು. ದಾವೀದನಿಗೆ ಯೆಹೋವ ದೇವರು ದೇವಾಲಯದ ನಕ್ಷೆಯನ್ನು ಕೊಟ್ಟನು. ಅದನ್ನು ದಾವೀದ ಸೊಲೊಮೋನನಿಗೆ ಕೊಟ್ಟು ‘ಮಾಡತಕ್ಕ ಕೆಲಸ ವಿಶೇಷವಾದದ್ದು. ಕಟ್ಟತಕ್ಕ ಮಂದಿರವು ದೇವರಾದ ಯೆಹೋವನಿಗಾಗಿಯೇ ಹೊರತು ಮನುಷ್ಯನಿಗಾಗಿ ಅಲ್ಲ’ ಎಂದು ಹೇಳಿದನು.—1 ಪೂರ್ವ. 28:1, 2, 6, 11, 12; 29:1.

ನಂತರ ದಾವೀದನು ಜನರಿಗೆ ‘ಈ ಹೊತ್ತು ಉದಾರಹಸ್ತದಿಂದ ಯೆಹೋವನಿಗೋಸ್ಕರ ಕಾಣಿಕೆಯನ್ನರ್ಪಿಸುವದಕ್ಕೆ ಯಾರಿಗೆ ಮನಸ್ಸಿದೆ’ ಎಂದು ಕೇಳಿದನು. (1 ಪೂರ್ವ. 29:5) ನೀವು ಅಲ್ಲಿದ್ದಿದ್ದರೆ ಏನು ಮಾಡುತ್ತಿದ್ದಿರಿ? ಆ ವಿಶೇಷವಾದ ಕೆಲಸಕ್ಕೆ ಬೆಂಬಲ ಕೊಡುತ್ತಿದ್ದಿರಾ? ಇಸ್ರಾಯೇಲ್ಯರು ಕೂಡಲೇ ಸ್ಪಂದಿಸಿದರು. “ಅವರು ಪೂರ್ಣಮನಸ್ಸಿನಿಂದಲೂ ಸ್ವೇಚ್ಛೆಯಿಂದಲೂ ಯೆಹೋವನಿಗೆ ಕಾಣಿಕೆ” ಕೊಟ್ಟು ಸಂತೋಷಪಟ್ಟರು.—1 ಪೂರ್ವ. 29:9.

ಶತಮಾನಗಳ ನಂತರ ಯೆಹೋವನು ಆಧ್ಯಾತ್ಮಿಕ ಆಲಯದ ಏರ್ಪಾಡು ಮಾಡಿದನು. ಯೇಸುವಿನ ಯಜ್ಞದ ಆಧಾರದ ಮೇಲೆ ಮಾನವರು ಆತನನ್ನು ಆರಾಧಿಸುವ ಏರ್ಪಾಡೇ ಅದು. (ಇಬ್ರಿ. 9:11, 12) ಜನರು ತನ್ನೊಂದಿಗೆ ಪುನಃ ಒಳ್ಳೇ ಸಂಬಂಧವನ್ನು ಪಡೆಯಲು ಯೆಹೋವನು ಇಂದು ಹೇಗೆ ಸಹಾಯ ಮಾಡುತ್ತಿದ್ದಾನೆ? ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದ ಮೂಲಕ. (ಮತ್ತಾ. 28:19, 20) ಈ ಕೆಲಸದ ಫಲಿತಾಂಶ? ಪ್ರತಿವರ್ಷ ಲಕ್ಷಾಂತರ ಬೈಬಲ್‌ ಅಧ್ಯಯನಗಳನ್ನು ನಡೆಸಲಾಗುತ್ತಿದೆ, ಸಾವಿರಾರು ಶಿಷ್ಯರು ದೀಕ್ಷಾಸ್ನಾನ ಪಡಕೊಳ್ಳುತ್ತಿದ್ದಾರೆ ಮತ್ತು ನೂರಾರು ಹೊಸ ಸಭೆಗಳನ್ನು ರಚಿಸಲಾಗುತ್ತಿದೆ.

ಪ್ರಗತಿ ಹೆಚ್ಚುತ್ತಾ ಹೋದಂತೆ ಹೆಚ್ಚು ಬೈಬಲ್‌ ಪ್ರಕಾಶನಗಳನ್ನು ಮುದ್ರಿಸಬೇಕಾಗುತ್ತದೆ, ಹೆಚ್ಚು ರಾಜ್ಯ ಸಭಾಗೃಹಗಳನ್ನು ಕಟ್ಟಬೇಕಾಗುತ್ತದೆ, ಅಧಿವೇಶನ ಮತ್ತು ಸಮ್ಮೇಳನಗಳಿಗಾಗಿ ಜಾಗ ತೆಗೆದುಕೊಳ್ಳುವ ಅವಶ್ಯಕತೆಯೂ ಹೆಚ್ಚುತ್ತದೆ. ಸುವಾರ್ತೆ ಸಾರುವ ನಮ್ಮ ಕೆಲಸ ಒಂದು ವಿಶೇಷವಾದ, ಫಲದಾಯಕ ಕೆಲಸ ಅಂತ ನೀವು ಒಪ್ಪುವುದಿಲ್ವಾ?—ಮತ್ತಾ. 24:14.

ನಮಗೆ ದೇವರ ಮೇಲೆ ಮತ್ತು ಜನರ ಮೇಲೆ ಪ್ರೀತಿ ಇದೆ. ಇನ್ನೂ ಎಷ್ಟೋ ಜನರಿಗೆ ಸುವಾರ್ತೆ ಸಾರಬೇಕಾಗಿದೆ. ಹಾಗಾಗಿ “ಯೆಹೋವನಿಗೋಸ್ಕರ ಕಾಣಿಕೆಯನ್ನರ್ಪಿಸುವದಕ್ಕೆ” ನಾವು ಮುಂದೆ ಬರುತ್ತೇವೆ. ‘ನಮ್ಮ ಆದಾಯದಿಂದ ಯೆಹೋವನನ್ನು ಸನ್ಮಾನಿಸುವುದು’ ಒಂದು ದೊಡ್ಡ ಸುಯೋಗ ಅಲ್ಲವೇ? ನೀವು ಕೊಟ್ಟ ಕಾಣಿಕೆಗಳನ್ನು ಒಳ್ಳೇ ರೀತಿ ಉಪಯೋಗಿಸಿರುವುದನ್ನು ನೋಡುವಾಗ ಕಾಣಿಕೆ ಕೊಟ್ಟಿದ್ದು ಸಾರ್ಥಕ ಅಂತ ಅನಿಸುವುದಿಲ್ವಾ?—ಜ್ಞಾನೋ. 3:9.

ಲೋಕವ್ಯಾಪಕ ಕೆಲಸಕ್ಕಾಗಿ ದಾನಕೊಡುವ ಕೆಲವು ವಿಧಗಳು

ಇಂದು ಅನೇಕರು ಇಂತಿಷ್ಟು ಹಣವನ್ನು ‘ತೆಗೆದಿಟ್ಟು’ ಅದನ್ನು ಸಭೆಯಲ್ಲಿರುವ “ಲೋಕವ್ಯಾಪಕ ಕೆಲಸ” ಎಂಬ ಗುರುತಿನ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕುತ್ತಾರೆ. (1 ಕೊರಿಂ. 16:2) ಆ ಹಣವನ್ನು ಸಭೆಗಳು ಪ್ರತಿ ತಿಂಗಳು ತಮ್ಮ ದೇಶದಲ್ಲಿರುವ ಯೆಹೋವನ ಸಾಕ್ಷಿಗಳ ಕಾರ್ಯಾಲಯಕ್ಕೆ ಕಳುಹಿಸುತ್ತವೆ. ನೀವು ನೇರವಾಗಿ ದಾನ ಮಾಡಲು ಬಯಸುವುದಾದರೆ ಅದನ್ನು ನಿಮ್ಮ ದೇಶದಲ್ಲಿ ಕೆಲಸವನ್ನು ನೋಡಿಕೊಳ್ಳುತ್ತಿರುವ ಯೆಹೋವನ ಸಾಕ್ಷಿಗಳ ಕಾರ್ಯಾಲಯಕ್ಕೆ ಕಳುಹಿಸಬಹುದು.a ನೀವು ನೇರವಾಗಿ ದಾನ ಕೊಡಬಹುದಾದ ಕೆಲವು ವಿಧಗಳು:

ನೇರವಾಗಿ ಕೊಡಬಹುದಾದ ದಾನಗಳು

  • ಎಲೆಕ್ಟ್ರಾನಿಕ್‌ ಬ್ಯಾಂಕ್‌ ವರ್ಗಾವಣೆ ಮೂಲಕ ಕೊಡಬಹುದಾದ ದಾನಗಳು.b

  • ಹಣ, ಆಭರಣ ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ದಾನವಾಗಿ ನೀಡಬಹುದು. ಈ ರೀತಿ ದಾನ ನೀಡುವಾಗ, ಇದು ನೇರವಾಗಿ ಕೊಡುತ್ತಿರುವ ದಾನವೆಂದು ಸೂಚಿಸುವ ಒಂದು ಪತ್ರವನ್ನು ಜೊತೆಗೆ ಕಳುಹಿಸಿ.

ಚ್ಯಾರಿಟಬಲ್‌ ಯೋಜನೆc

ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕೊಡುವುದಲ್ಲದೆ ಲೋಕವ್ಯಾಪಕವಾಗಿ ನಡೆಯುವ ಸಾರುವ ಕೆಲಸಕ್ಕೆ ಸಹಾಯಮಾಡಲು ಬೇರೆ ವಿಧಗಳಲ್ಲೂ ದಾನ ಕೊಡಬಹುದು. ಅವುಗಳನ್ನು ಮುಂದೆ ಪಟ್ಟಿಮಾಡಲಾಗಿದೆ. ನೀವು ಯಾವುದೇ ವಿಧದಲ್ಲಿ ದಾನಕೊಡಲು ಬಯಸುವಲ್ಲಿ ಮೊದಲು ಸ್ಥಳೀಯ ಶಾಖಾ ಕಚೇರಿಯನ್ನು ಸಂಪರ್ಕಿಸಿ ನಮ್ಮ ದೇಶದಲ್ಲಿ ಯಾವ ವಿಧಗಳಲ್ಲಿ ದಾನ ಕೊಡಬಹುದೆಂದು ತಿಳಿದುಕೊಳ್ಳಿ. ಕಾನೂನು ಮತ್ತು ತೆರಿಗೆ ನಿಯಮಗಳು ದೇಶದಿಂದ ದೇಶಕ್ಕೆ ಬೇರೆ ಬೇರೆಯಾಗಿರುವುದರಿಂದ ಯಾವುದೇ ವಿಧದಲ್ಲಿ ದಾನ ಮಾಡುವ ಮೊದಲು ತೆರಿಗೆ ಮತ್ತು ಕಾನೂನು ಸಲಹೆಗಾರರನ್ನು ಸಂಪರ್ಕಿಸುವುದು ತುಂಬ ಮುಖ್ಯ.

ವಿಮೆ: ಯೆಹೋವನ ಸಾಕ್ಷಿಗಳ ಕಾರ್ಯಾಲಯವನ್ನು ಜೀವ ವಿಮಾ ಪಾಲಿಸಿಯ ಅಥವಾ ನಿವೃತ್ತಿ/ಪಿಂಚಣಿ ಯೋಜನೆಯ ಫಲಾನುಭವಿಯಾಗಿ ಮಾಡಬಹುದು.

ಬ್ಯಾಂಕ್‌ ಖಾತೆಗಳು: ಬ್ಯಾಂಕ್‌ ಖಾತೆಗಳು, ಡಿಪಾಸಿಟ್‌ ಸರ್ಟಿಫಿಕೇಟ್‌ಗಳು ಅಥವಾ ವೈಯಕ್ತಿಕ ನಿವೃತ್ತಿ ಖಾತೆಗಳನ್ನು ದಾನಿಯು ಸ್ಥಳೀಯ ಬ್ಯಾಂಕ್‌ ನಿಯಮಗಳಿಗೆ ಹೊಂದಿಕೆಯಲ್ಲಿ ಯೆಹೋವನ ಸಾಕ್ಷಿಗಳ ಕಾರ್ಯಾಲಯಕ್ಕೆ ವರ್ಗಾಯಿಸಬಹುದು ಅಥವಾ ತನ್ನ ಮರಣಾನಂತರ ಅವು ಅದಕ್ಕೆ ಸಲ್ಲುವಂತೆ ಏರ್ಪಡಿಸಬಹುದು.

ಸ್ಟಾಕ್‌ಗಳು ಮತ್ತು ಬಾಂಡ್‌ಗಳು: ಸ್ಟಾಕ್‌ ಮತ್ತು ಬಾಂಡ್‌ಗಳನ್ನು ಯೆಹೋವನ ಸಾಕ್ಷಿಗಳ ಕಾರ್ಯಾಲಯಕ್ಕೆ ನೇರವಾದ ಕೊಡುಗೆಯಾಗಿ ದಾನಮಾಡಬಹುದು. ಅಥವಾ ‘ಟ್ರಾನ್ಸ್‌ಫರ್‌ ಆನ್‌ ಡೆತ್‌’ (ಸಾವಿನ ನಂತರ ವರ್ಗಾವಣೆ) ಒಪ್ಪಂದದ ಮೂಲಕ ಇದನ್ನು ಮಾಡಬಹುದು.

ಸ್ಥಿರಾಸ್ತಿ: ಮಾರಲು ಸಾಧ್ಯವಿರುವ ಸ್ಥಿರಾಸ್ತಿಯನ್ನು ಯೆಹೋವನ ಸಾಕ್ಷಿಗಳ ಕಾರ್ಯಾಲಯಕ್ಕೆ ನೇರವಾದ ಕೊಡುಗೆಯಾಗಿ ದಾನಮಾಡಬಹುದು. ವಾಸದ ಮನೆಯನ್ನು ದಾನವಾಗಿ ಕೊಡುತ್ತಿರುವಲ್ಲಿ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಅಂದರೆ ದಾನಿಯು ಜೀವದಿಂದಿರುವ ವರೆಗೆ ಅಲ್ಲೇ ವಾಸಿಸುವ ಷರತ್ತಿನೊಂದಿಗೆ ದಾನಮಾಡಬಹುದು.

ಉಯಿಲುಗಳು ಮತ್ತು ಟ್ರಸ್ಟ್‌ಗಳು: ಆಸ್ತಿ ಅಥವಾ ಹಣ ಯೆಹೋವನ ಸಾಕ್ಷಿಗಳ ಕಾರ್ಯಾಲಯಕ್ಕೆ ಸಲ್ಲುವಂತೆ ಮಾಡಲು ಕಾನೂನುಬದ್ಧವಾಗಿ ಉಯಿಲು ಬರೆದಿಡಬಹುದು. ಅಥವಾ ಯೆಹೋವನ ಸಾಕ್ಷಿಗಳ ಕಾರ್ಯಾಲಯವನ್ನು ಒಂದು ಟ್ರಸ್ಟ್‌ ಅಗ್ರೀಮೆಂಟ್‌ನ ಫಲಾನುಭವಿಯಾಗಿ ಮಾಡಬಹುದು. ಈ ಏರ್ಪಾಡಿನಲ್ಲಿ ಕೆಲವೊಂದು ತೆರಿಗೆ ವಿನಾಯಿತಿ ಸಿಗಬಹುದು.

“ಚ್ಯಾರಿಟಬಲ್‌ ಯೋಜನೆ” ಎಂಬ ಪದ ಸೂಚಿಸುವಂತೆ, ಈ ರೀತಿಯ ದಾನವನ್ನು ಕೊಡುವಾಗ ಸ್ವಲ್ಪ ಯೋಜನೆ ಮಾಡಬೇಕಾಗುತ್ತದೆ. ಚ್ಯಾರಿಟಬಲ್‌ ಯೋಜನೆಯ ಮೂಲಕ ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸಕ್ಕೆ ದಾನ ಕೊಡಲು ಬಯಸುವ ವ್ಯಕ್ತಿಗಳಿಗೆ ನೆರವಾಗುವಂತೆ, ಚ್ಯಾರಿಟಬಲ್‌ ಪ್ಲಾನಿಂಗ್‌ ಟು ಬೆನಿಫಿಟ್‌ ಕಿಂಗ್‌ಡಮ್‌ ಸರ್ವಿಸ್‌ ವರ್ಲ್ಡ್‌ವೈಡ್‌ ಎಂಬ ಕಿರುಹೊತ್ತಗೆಯನ್ನು ಇಂಗ್ಲಿಷ್‌ ಮತ್ತು ಸ್ಪ್ಯಾನಿಷ್‌ ಭಾಷೆಯಲ್ಲಿ ರಚಿಸಲಾಗಿದೆ.d ಈ ಕಿರುಹೊತ್ತಗೆಯಲ್ಲಿ, ಯಾವೆಲ್ಲ ರೀತಿಯಲ್ಲಿ ಈಗ ಅಥವಾ ಅಂತಿಮ ಉಯಿಲಿನ ಮೂಲಕ ದಾನಗಳನ್ನು ನೀಡಬಹುದೆಂಬ ಮಾಹಿತಿಯಿದೆ. ಇದರಲ್ಲಿರುವ ಎಲ್ಲ ಮಾಹಿತಿ ನಿಮಗೆ ಅನ್ವಯಿಸಲಿಕ್ಕಿಲ್ಲ. ಏಕೆಂದರೆ ನಿಮ್ಮ ದೇಶದ ತೆರಿಗೆ ಅಥವಾ ಕಾನೂನುಗಳು ಬೇರೆ ಇರಬಹುದು. ಅನೇಕರು ಲೋಕವ್ಯಾಪಕವಾಗಿ ನಡೆಯುವ ನಮ್ಮ ಧಾರ್ಮಿಕ ಹಾಗೂ ಮಾನವೋಪಕಾರಿ ಚಟುವಟಿಕೆಗಳಿಗೆ ಈ ರೀತಿಯಲ್ಲಿ ಸಹಾಯ ನೀಡಿದ್ದಾರೆ ಮತ್ತು ತೆರಿಗೆ ವಿನಾಯಿತಿ ಪಡೆದಿದ್ದಾರೆ. ಈ ಕಿರುಹೊತ್ತಗೆ ನಿಮ್ಮ ದೇಶದಲ್ಲಿ ಲಭ್ಯವಿರುವಲ್ಲಿ ಅದನ್ನು ನಿಮ್ಮ ಸಭೆಯ ಕಾರ್ಯದರ್ಶಿಯಿಂದ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ, jw.org ವೆಬ್‌ಸೈಟಿನ ಮುಖಪುಟದಲ್ಲಿರುವ “ನಮ್ಮ ಲೋಕವ್ಯಾಪಕ ಕೆಲಸಕ್ಕಾಗಿ ದಾನಗಳನ್ನು ನೀಡಿ” ಎಂಬ ಲಿಂಕನ್ನು ಒತ್ತಿ ಅಥವಾ ಕೆಳಗೆ ನೀಡಲಾದ ವಿಳಾಸವನ್ನು ಬಳಸುತ್ತಾ ಯೆಹೋವನ ಸಾಕ್ಷಿಗಳಿಗೆ ಪತ್ರ ಬರೆಯಿರಿ ಅಥವಾ ಫೋನ್‌ ಮೂಲಕ ಸಂಪರ್ಕಿಸಿ.

Jehovah’s Witnesses of India

Post Box 6440, Yelahanka

Bengaluru 560 064

Karnataka, India

ದೂರವಾಣಿ: 080-2309426

a ಭಾರತದಲ್ಲಾದರೆ, “Jehovah’s Witnesses of India”ಗೆ ಸಂದಾಯವಾಗಬೇಕೆಂದು ನಮೂದಿಸಿ.

b ಭಾರತೀಯ ಪಾಸ್‌ಪೋರ್ಟ್‌ ಹೊಂದಿರುವವರು www.jwindiagift.org ವೆಬ್‌ಸೈಟ್‌ ಬಳಸಬಹುದು.

c ನಿರ್ಣಯ ಮಾಡುವ ಮುಂಚೆ ದಯವಿಟ್ಟು ಸ್ಥಳೀಯ ಶಾಖಾ ಕಚೇರಿಯನ್ನು ಸಂಪರ್ಕಿಸಿ.

d ‘ನಿಮ್ಮ ಅಮೂಲ್ಯ ವಸ್ತುಗಳಿಂದ ಯೆಹೋವನನ್ನು ಸನ್ಮಾನಿಸಿರಿ’ ಎಂಬ ಡಾಕ್ಯುಮೆಂಟ್‌ ಭಾರತದಲ್ಲಿ ಇಂಗ್ಲಿಷ್‌, ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಲಭ್ಯ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ