ಪೀಠಿಕೆ
ಭವಿಷ್ಯ ಹೇಗಿರಲಿದೆ?
ನಿಮಗೆ ಯಾವತ್ತಾದರೂ ನಿಮ್ಮ ಮತ್ತು ನಿಮ್ಮ ಕುಟುಂಬದ ಭವಿಷ್ಯ ಹೇಗಿರಬಹುದೆಂಬ ಕುತೂಹಲ ಹುಟ್ಟಿದೆಯಾ? ಬೈಬಲ್ ಹೀಗನ್ನುತ್ತದೆ:
“ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:29.
ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆ ಮಾನವಕುಲ ಮತ್ತು ಭೂಮಿಗಾಗಿ ದೇವರಿಗಿರುವ ಅದ್ಭುತಕರ ಉದ್ದೇಶವನ್ನು ನೀವು ಅರ್ಥಮಾಡಿಕೊಳ್ಳಲು ಮತ್ತು ಆ ಉದ್ದೇಶದಿಂದ ಪ್ರಯೋಜನ ಪಡೆಯಲು ನೀವೇನು ಮಾಡಬೇಕೆಂದು ತಿಳಿಸಲಿದೆ.