ರಾಜ್ಯ ಸಭಾಗೃಹಗಳನ್ನು ಗುರುತಿಸುವದು
1 “ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹ” ಎಂಬ ಒಂದು ಯುಕ್ತವಾದ ಗುರುತಿನೊಂದಿಗೆ ಪ್ರತಿಯೊಂದು ರಾಜ್ಯ ಸಭಾಗೃಹವು ಸ್ಪಷ್ಟವಾಗಿ ಗುರುತಿಸಲ್ಪಡಬೇಕು. ಗುರುತು ಹಲಗೆಯು ನೀಟೂ, ಸುರುಚಿಯುಳ್ಳದ್ದೂ ಆಗಿದ್ದು ಒಳ್ಳೇ ದುರುಸ್ತಿಯಲ್ಲಿರಬೇಕು.
2 ಎಲ್ಲಿ ವಿವಿಧ ಭಾಷೆಗಳ ಸಭೆಗಳು ಒಂದೇ ರಾಜ್ಯ ಸಭಾಗೃಹದಲ್ಲಿ ಕೂಡಿಬರುತ್ತವೋ ಅಲ್ಲಿ ಪ್ರತಿ ಭಾಷೆಯಲ್ಲಿ ಗುರುತು ಹಲಗೆ ಹಾಕಲ್ಪಡಬೇಕು. ಇದು ಆ ಭಾಷೆಯನ್ನಾಡುವ ಜನರಿಗೆ ನಮ್ಮ ಆರಾಧನಾ ಸ್ಥಳವನ್ನು ಗುರುತಿಸಲು ಸುಲಭವನ್ನಾಗಿ ಮಾಡುವದು. ಸಂಬಂಧಿಸಿದ ಸಭೆಗಳ ಹಿರಿಯ ಮಂಡಲಿಯು ನಿರ್ದಿಷ್ಟ ರಾಜ್ಯ ಸಭಾಗೃಹವನ್ನುಪಯೋಗಿಸುವ ಸಭೆಗಳ ಭಾಷೆಗಳಲ್ಲಿ ತಕ್ಕದಾದ ಗುರುತು ಹಲಗೆಯನ್ನು ಹಾಕಲು ಎರ್ಪಾಡು ಮಾಡ ಶಕ್ತರಾಗಬೇಕು—ಫಿಲಿ. 2:4.
3 ಅದಲ್ಲದೆ, ಎಲ್ಲಿ ವ್ಯಾವಹಾರ್ಯವೋ ಅಲ್ಲಿ ಕೂಟದ ವೇಳೆಗಳನ್ನು ಹಚ್ಚಬೇಕು ಮತ್ತು ಅವು ಸದ್ಯದ ವೇಳೆಯಾಗಿರಬೇಕು. ಒಂದಕ್ಕಿಂತ ಹೆಚ್ಚು ಭಾಷಾಗುಂಪುಗಳು ಒಂದು ಹೋಲನ್ನು ಬಳಸುವದಾದರೆ ಪ್ರತಿಯೊಂದು ಭಾಷಾಗುಂಪಿನ ಕೂಟದ ವೇಳೆಗಳನ್ನು ಸೂಚಿಸುವ ಒಂದು ಸಂಘಟಿತ ಗುರುತು ಹಲಗೆಯಿರಬೇಕು.