ಪ್ರಶ್ನಾ ಪೆಟ್ಟಿಗೆ
● ಸಭಾ ಪುಸ್ತಕಭ್ಯಾಸವನ್ನು ಹಾಜರಾಗುವಾಗ ನಾವು ಕ್ರಿಸ್ತೀಯ ಸ್ವದರ್ತನೆಯನ್ನು ಹೇಗೆ ತೋರಿಸಬಹುದು?
ನಾವು ಸಾಧಾರಣವಾಗಿ ನಮ್ಮ ನೆರೆಹೊರೆಯವರಿಂದ ಅವಲೋಕಿಸಲ್ಪಡುತ್ತೇವೆ ಮತ್ತು ಕೆಲವುಸಾರಿ ಅವರು ನಮ್ಮ ನಡವಳಿಕೆಯ ಬಗ್ಗೆ ಮಾತಾಡುತ್ತಾರೆ ಮತ್ತು ಪ್ರತಿಕ್ರಿಯೆಯನ್ನೂ ತೋರಿಸುತ್ತಾರೆ. (1 ಕೊರಿಂಥ 4:9 ಹೋಲಿಸಿ.) ನಮ್ಮ ನಡವಳಿಕೆಯ ಬಗ್ಗೆ ಅವರ ಮಾತುಗಳು ಮತ್ತು ಪ್ರತಿಕ್ರಿಯೆಗಳು ಒಳ್ಳೇದಾಗಿರಬೇಕೆಂದು ಯೆಹೋವನ ಸೇವಕರಾದ ನಾವು ಬಯಸುತ್ತೇವೆ. (1 ಪೇತ್ರ 2:12) ಇದು ಸಭಾ ಪುಸ್ತಕಭ್ಯಾಸದ ಚಟುವಟಿಕೆಯ ಸಂಬಂಧದಲ್ಲಿ ಸತ್ಯವು. ಇವುಗಳಲ್ಲಿ ಹೆಚ್ಚಿನವು ಖಾಸಗೀ ಮನೆಗಳಲ್ಲಿ ನಡಿಸಲ್ಪಡುವುದರಿಂದ ನಾವು ಮಾಡುವ ಎಲ್ಲದರಲ್ಲಿ ಸ್ವದರ್ತನೆಯು ಬಿಂಬಿಸುವಂತೆ ವಿಶೇಷ ಜಾಗ್ರತೆ ವಹಿಸಬೇಕು. ಪುಸ್ತಕಭ್ಯಾಸದ ನೆರೆಹೊರೆಯಲ್ಲಿ ಪಾರ್ಕಿಂಗ್ ಜಾಗವು ಚಿಕ್ಕದಾಗಿದ್ದಲ್ಲಿ, ನೆರೆಯವರಿಗೆ ಅನಾನುಕೂಲವೂ ಕಷ್ಟವೂ ಆಗುವ ರೀತಿಯಲ್ಲಿ ನಮ್ಮ ಕಾರನ್ನು ಅಡಾದ್ಡಿಡಿಯ್ಡಾಗಿ ಪಾರ್ಕ್ ಮಾಡದಂತೆ ಅವರ ಕಡೆಗೆ ನಮಗಿರುವ ಪ್ರೀತಿಯು ನಮ್ಮನ್ನು ತಡೆಯಬೇಕು.
ನಾವು ಕೂಡಿಬರುವಾಗಲ್ಲೆಲ್ಲಾ ಸಂತೋಷದಲ್ಲಿರುತ್ತೇವೆ ಮತ್ತು ಇದು ಹೆಚ್ಚಾಗಿ ಕೂಟದ ಮುಂಚೆ ಮತ್ತು ಅನಂತರ ಸಂಭ್ರಮದ ಸಂಭಾಷಣೆಯನ್ನು ಹೊರಡಿಸುತ್ತದೆ. (ಮೀಕ 2:12) ಸ್ವದರ್ತನೆ ಮತ್ತು ಇತರರಿಗಾಗಿ ಪರಿಗಣನೆಯು ನಾವು ನಮ್ಮ ಸಂಭಾಷಣಾ ದ್ವನಿಯನ್ನು ಸಭ್ಯ ಮಟ್ಟಕ್ಕೆ ತರುವಂತೆ ಮಾಡಬೇಕು. (ಮತ್ತಾ. 7:12; ಗಲಾ. 6:10) ನಮ್ಮ ಮಕ್ಕಳು ಹೊರಗೆ ಓಡ್ಯಾಡದಿರುವಂತೆ ಮತ್ತು ಬೇರೆಯವರ ಸೊತ್ತನ್ನು ಹಾಳುಮಾಡದಂತೆ ನಿರ್ಬಂಧಿಸುವಂತೆಯೂ ಕ್ರೈಸ್ತ ಪ್ರೀತಿಯು ನಮ್ಮನ್ನು ಪ್ರೇರಿಸಬೇಕು. (ಜ್ಞಾನೋ. 29:15; 1 ಕೊರಿ. 13:4, 5) ಎಲ್ಲಿ ಪುಸ್ತಕಭ್ಯಾಸ ನಡಿಯುತ್ತದೋ ಆ ಮನೆಯಲ್ಲಿ ಗೌರವಯುಕ್ತ ನಡವಳಿಕೆಯೂ ಇದರಲ್ಲಿ ಸೇರಿದೆ. ಯಾವುದೇ ಅಯೋಗ್ಯ ನಡವಳಿಕೆಯು ತೋರಿಬಂದರೆ ಹಿರಿಯರು ಪ್ರೀತಿಯುಳ್ಳ ಮತ್ತು ಕಟ್ಟುನಿಟ್ಟಿನ ಸೂಚನೆಯನ್ನು ಕೊಡಲು ನಿಧಾನಿಸಬಾರದು. ಈ ಮೂಲಕ ನೆರೆಯವರ ದೂರುಗಳು, ಅಭ್ಯಾಸಕ್ಕಾಗಿ ತನ್ನ ಮನೆಯನ್ನು ಔದಾರ್ಯದಿಂದ ತೆರೆದ ಮನೆಯವನಿಗೆ ತೊಂದರೆಗಳು ಅಥವಾ ನಿರ್ದಿಷ್ಟ ಪುಸ್ತಕಭ್ಯಾಸವನ್ನು ಹಾಜರಾಗುವವರಿಗೆ ಅನಾನುಕೂಲತೆಯೇ ಮುಂತಾದ ಸಮಸ್ಯೆಗಳೇಳಲಾರವು.