ಪ್ರಕಟಣೆಗಳು
• ಪುಸ್ತಕ ನೀಡುವಿಕೆಗಳು: ಮೇ ಮತ್ತು ಜೂನ್: ವಾಚ್‌ಟವರ್ ಚಂದಾ. ಪ್ರತಿ ಒಂದು ವರ್ಷದ ಚಂದಾ 40 ರೂಪಾಯಿ. ಆರು ತಿಂಗಳ ಚಂದಾ ಮತ್ತು ತಿಂಗಳ ಪತ್ರಿಕೆಗಳ ವಾರ್ಷಿಕ ಚಂದಾ 20 ರೂಪಾಯಿ. ತಿಂಗಳ ಸಂಚಿಕೆಗಳಿಗೆ ಆರು ತಿಂಗಳ ಚಂದಾ ಇಲ್ಲ. ಚಂದಾ ತಕ್ಕೊಳ್ಳದಾಗ, ಎರಡು ಪತ್ರಿಕೆಗಳನ್ನು ಮ್ಯಾಗಜಿನ್ ಸೈಜಿನ ಬ್ರೊಷರೊಂದಿಗೆ 7 ರೂಪಾಯಿಗೆ ನೀಡಿರಿ. ಜುಲೈ: ದಿ ಬೈಬಲ್—ಗಾಡ್ಸ್ ವರ್ಡ್ ಆರ್ ಮ್ಯಾನ್ಸ್? ಎಂಬ ಹೊಸ ಪುಸ್ತಕವನ್ನು 10 ರೂಪಾಯಿಗೆ ನೀಡಿರಿ. (ಇದು ದೊರೆಯದಿದ್ದಲ್ಲಿ 192 ಪುಟದ ಹಳೇ ಪುಸ್ತಕಗಳಲ್ಲೊಂದನ್ನು 5 ರೂಪಾಯಿಗೆ ನೀಡಿರಿ.) ಅಗೋಸ್ತ್ ಮತ್ತು ಸಪ್ಟಂಬರ: ಸ್ಕೂಲ್ ಬ್ರೊಷರನ್ನು ಬಿಟ್ಟು ಬೇರೆಯಾವುದೇ 32 ಪುಟದ ಬ್ರೊಷರ್ 3 ರೂಪಾಯಿಗೆ. ಒಕ್ಟೋಬರ: ಕ್ರಿಯೇಶನ್ ಪುಸ್ತಕವನ್ನು 30 ರೂಪಾಯಿಗೆ ನೀಡಿರಿ. ಚಿಕ್ಕ ಸೈಜಿನ ಅವೃತಿ 15 ರೂಪಾಯಿಗೆ. (ಯಾವ ಭಾಷೆಗಳಲ್ಲಿ ಇದು ದೊರೆಯುವದಿಲ್ಲವೋ ಅಲ್ಲಿ ಲಿವ್ವ್ ಫಾರೆವರ್ ಯಾ ಬೈಬಲ್ ಸ್ಟೋರಿಸ್ ಪುಸ್ತಕಗಳನ್ನು ಉಪಯೋಗಿಸಬಹುದು.) ನವಂಬರ: ಎವೇಕ್! ವಾರ್ಷಿಕ ಚಂದಾ ಅಥವಾ ವಾಚ್‌ಟವರ್ ಚಂದಾ ಯಾ ಎರಡಕ್ಕೂ, ಒಂದಕ್ಕೆ 40 ರುಪಾಯಿಯಂತೆ. ಆರು ತಿಂಗಳ ಚಂದಾ ಮತ್ತು ತಿಂಗಳ ಪತ್ರಿಕೆಯ ಚಂದಾ 20 ರೂಪಾಯಿ. (ತಿಂಗಳ ಸಂಚಿಕೆಗಾಗಿ ಆರು ತಿಂಗಳ ಚಂದಾ ಇಲ್ಲ.)
• ಅಧ್ಯಕ್ಷ ಮೇಲ್ವಿಚಾರಕ ಯಾ ಅವನಿಂದ ನೇಮಿತ ಬೇರೆಯಾರಾದರೂ ಸಭಾ ಎಕೌಂಟನ್ನು ಜೂನ್ 1ಕ್ಕೆ ಅಥವಾ ಅನಂತರ ಆದಷ್ಟು ಬೇಗ ಆಡಿಟ್ ಮಾಡತಕ್ಕದ್ದು.
• ತಮ್ಮ ಮೆಮೋರಿಯಲ್ ರಿಪೋರ್ಟ್ ಕಾರ್ಡ್ (ಎಸ್-7) ನ್ನು ಇನ್ನೂ ಪೋಸ್ಟ್‌ಮಾಡದ ಸಭೆಗಳೆಲ್ಲವು ಆದಷ್ಟು ಬೇಗನೇ ಆ ಕಡೆಗೆ ಲಕ್ಷ್ಯಕೊಡತಕ್ಕದ್ದು.
• ಅಗೋಸ್ತ್ ಮತ್ತು ಸಪ್ಟಂಬರದಲ್ಲಿ ಎವೇಕ್! ಬ್ರೊಷರುಗಳು ಗುಜರಾತಿ, ಹಿಂದಿ ಮತ್ತು ಕನ್ನಡದಲ್ಲಿ ಮಾತ್ರವೇ ಒಂದು ವಿಶೇಷ ಚಟುವಟಿಕೆಯಾಗಿ ನೀಡಲ್ಪಡುತ್ತವೆ. ನೀಡಿಕೆಯು 3ಕ್ಕೆ ರೂ. 1:50 ದರದಲ್ಲಿ. ಈ ಹಳೇ ಪ್ರಕಾಶನಗಳನ್ನು ಜನರಿಗೆ ತಲಪಿಸುವಂತೆ ಈ ಚಟುವಟಿಕೆಗೆ ಒಳ್ಳೇ ಬೆಂಬಲವನ್ನು ಕೊಡುವುದೊಳ್ಳೆಯದು. ವಿಶೇಷ ಏರ್ಪಾಡಿನ ಕೆಳಗೆ ಮಾತ್ರವೇ ನೀಡಲ್ಪಡುವ ಇಂತಹ ಬ್ರೊಷರಿಗಾಗಿ ಕ್ರೆಡಿಟ್ ಕೇಳುವಾಗ, ನೀಲಬಣ್ಣದ ಎಸ್-20 ಫಾರ್ಮಿನ ಎಡಗಡೆಯ ಗೀಟುಗಳ ಕೆಳಗೆ ಎರಡು ಪ್ರತ್ಯೇಕ ಗೀಟುಗಳಲ್ಲಿ “ಪಯನೀಯರ್ ಸ್ಪೆಶಲ್ ಕ್ಯಾಂಪೈನ್ ಬ್ರೊಷರ್ಸ್” ಎಂದು ಒಂದನೇ ಗೀಟಲ್ಲಿ, ಮತ್ತು “ಪಬಿಶ್ಲರ್ ಸ್ಪೆಶಲ್ ಕ್ಯಾಂಪೈನ್ ಬ್ರೊಷರ್ಸ್” ಎಂದು ಎರಡನೆ ಗೀಟಲ್ಲಿ ಬರೆಯಿರಿ. ಕೌಂಟರಲ್ಲಿ ಪ್ರತಿ ಬ್ರೊಷರ್ ಪ್ರಚಾರಕರಿಗೆ 50 ಪೈಸ ಮತ್ತು ಪಯನೀಯರಿಗೆ 40 ಪೈಸ ದರದಲ್ಲಿ ಸಿಗುವುದರಿಂದ, ಪ್ರತಿ ಬ್ರೊಷರಿನ ಮೇಲೆ ಪ್ರಚಾರಕರಿಗಾಗಿ ರೂ.1.25 ಮತ್ತು ಪಯನೀಯರಿಗಾಗಿ ರೂ.1.35 ಕ್ರೆಡಿಟನ್ನು ಸಭೆಗೆ ಕೊಡಲಾಗುವುದು. ಈ ಏರ್ಪಾಡು ಮೇಲೆ ತಿಳಿಸಲಾದ ಮೂರು ಭಾಷೆಗಳ ಬ್ರೊಷರುಗಳಿಗೆ ಮಾತ್ರವೇ ಅನ್ವಯಿಸುವುದು ಮತ್ತು ಕೇವಲ ಈ ವಿಶೇಷ ಚಟುವಟಿಕೆಗಾಗಿ. ಹಿಂದೆ ತಿಳಿಸಿದ ಪ್ರಕಾರ ಈ ಬ್ರೊಷರ್ ನೀಡುವಿಕೆಗಳನ್ನು ಪತ್ರಿಕೆಗಳಾಗಿ ಲೆಕ್ಕಿಸಬೇಕೆಂಬದನ್ನು ನೆನಪಿಡಿರಿ. ಮತ್ತು ಶಾಖೆಯಲ್ಲಿ ಈ ಹಳೇ ಬ್ರೊಷರ್‌ಗಳ ಸಂಗ್ರಹವು ಸೀಮಿತವಾಗಿರುವುದರಿಂದ ‘ಮೊದಲು ಬಂದವರಿಗೆ ಮೊದಲು ಸೇವೆ’ ಯ ಆಧಾರದಲ್ಲಿ ಆರ್ಡರು ನಿರ್ವಹಿಸಲ್ಪಡುವುದು.
• ದೊರೆಯುವ ಹೊಸ ಪ್ರಕಾಶನಗಳು:
ಶುಡ್ ಯು ಬಿಲಿವ್ ಇನ್ ದ ಟ್ರಿನಿಟಿ?
ಗುಜರಾತಿ, ಕನ್ನಡ ಮತ್ತು ಲುಶಯಿ