ಪ್ರಶ್ನಾ ಪೆಟ್ಟಿಗೆ
● ದೀಕ್ಷಾಸ್ನಾನಕ್ಕೆ ಒಪ್ಪಲ್ಪಡುವ ಮುಂಚೆ, ಅಸ್ನಾನಿತ ಪ್ರಚಾರಕನು ಕ್ಷೇತ್ರಸೇವೆಯಲ್ಲಿ ಎಷ್ಟರ ಮಟ್ಟಿಗೆ ಪಾಲಿಗನಾಗಿರಬೇಕು?
ಅಸ್ನಾನಿತ ಪ್ರಚಾರಕನಾಗಿ ಯೋಗ್ಯತೆ ಪಡೆಯುವವನು ಈವಾಗಲೇ ಯೆಹೋವನ ಸಾಕ್ಷಿಯಾಗುವ ತನ್ನ ಬಲವಾದ ಇಚ್ಛೆಯನ್ನು ಹಲವಾರು ವಿಧಗಳಲ್ಲಿ ತೋರಿಸಿರುವನು. (ಕೀರ್ತ.110:3) ಪವಿತ್ರ ಶಾಸ್ತ್ರದ ಶ್ರದ್ಧೆಯುಳ್ಳ ಅಭ್ಯಾಸವು ಅವನ ಯೋಚನೆಯಲ್ಲಿ, ಮನೋಭಾವದಲ್ಲಿ, ಮತ್ತು ಜೀವನಕ್ರಮದಲ್ಲಿ ಒಂದು ಬದಲಾವಣೆಯನ್ನು ತಂದಿದೆ. ಯೆಹೋವನನ್ನು ಮೆಚ್ಚಿಸುವ ಮತ್ತು ಅವನ ಚಿತ್ತವನ್ನು ಮಾಡುವ ಹೃದಯಪೂರ್ವಕ ಇಚ್ಛೆಯಿಂದ ಪ್ರೇರಿತನಾದ ಅಂತಹ ಹೊಣೆಯುಳ್ಳ ಬೈಬಲ್ ವಿದ್ಯಾರ್ಥಿಯು ಕ್ರಮವಾಗಿ ಯೆಹೋವನ ಜನರೊಂದಿಗೆ ಸಭಾಕೂಟಗಳಲ್ಲಿ, ಸಮ್ಮೇಲನಗಳಲ್ಲಿ ಮತ್ತು ಅಧಿವೇಶನಗಳಲ್ಲಿ ಕೂಡಿಬರುತ್ತಾನೆ. (ಇಬ್ರಿ. 10:24, 25) ಅಂಥ ಕ್ರೈಸ್ತ ಕೂಟಗಳಲ್ಲಿ ಕ್ರಮವಾದ ಹಾಜರಿಯಲ್ಲದೆ, ಕೂಟಗಳಲ್ಲಿ ಉತ್ತರಕೊಡುವ ಮೂಲಕ ತನ್ನ ನಂಬಿಕೆಯ ಬಹಿರಂಗ ಅರಿಕೆಯನ್ನು ಮಾಡುವರೇ ಅವನು ಹೃದಯ ಪ್ರೇರಣೆಯನ್ನು ಪಡೆದಿರಬಹುದು, ಪ್ರಾಯಶ: ದೇವಪ್ರಭುತ್ವ ಶಾಲೆಯನ್ನೂ ಅವನು ಸೇರಿರಬಹುದು.—ಕೀರ್ತ.40:9, 10; ಒಎಂ ಪುಟ 73.
ಒಮ್ಮೆ ಬೈಬಲ್ ವಿದ್ಯಾರ್ಥಿ ಸತ್ಯವನ್ನು ಸ್ವೀಕರಿಸಿ, ತಾನು ರಾಜ್ಯದ ಸಂದೇಶದ ಮಹತ್ವವನ್ನು ನಿಜವಾಗಿ ಗಣ್ಯಮಾಡುತ್ತಾನೆಂದು ತೋರಿಸುವಾಗ, ಮನೆ ಮನೆಯ ಶುಶ್ರೂಷೆಯ ಸುಯೋಗವನ್ನು ಪಡೆಯಬಹುದು. ಇದು ಯೆಹೋವನ ಸಾಕ್ಷಿಗಳ ಪ್ರಾಮುಖ್ಯ ಕೆಲಸ. (ಮತ್ತಾ. 24:14; 28:19, 20 ಒಎಂ ಪುಟ 111) ಈ ಸಂಬಂಧದಲ್ಲಿ, ಅಭ್ಯಾಸ ನಡಿಸುವ ಪ್ರಚಾರಕ ಮತ್ತು ಹಿರಿಯರು ಇಬ್ಬರಿಗೂ ವಿದ್ಯಾರ್ಥಿಯ ಇಡೀ ಜೀವಿತವು ಕ್ರಿಸ್ತೀಯ ತತ್ವಗಳಿಗೆ ಹೊಂದಿಕೆಯಲ್ಲಿದೆಯೇ ಎಂದು ಖಾತ್ರಿ ಮಾಡುವ ಗಂಭೀರ ಜವಾಬ್ದಾರಿಕೆ ಇದೆ. ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗುವ ನಿಜ ಅಪೇಕ್ಷೆಯು ಅವನಿಗಿರಬೇಕು ಮತ್ತು ರಾಜ್ಯವನ್ನು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲ್ಸದಲ್ಲಿ ಪಾಲಿಗನಾಗುವ ಸುಯೋಗವನ್ನು ಅವನು ಗಣ್ಯಮಾಡಬೇಕು.—ಗಲಾ. 6:6; w88 11⁄15 ಪುಟ 17; ಒಎಂ ಪುಟ 98-9, 174.
ಬೈಬಲ್ ವಿದ್ಯಾರ್ಥಿಯು ನಮ್ಮೊಂದಿಗೆ ಸೇವೆ ಮಾಡಲು ಯೋಗ್ಯತೆ ಪಡೆಯುವ ಸಮಯದಿಂದ ತನ್ನನ್ನು ದೀಕ್ಷಾಸ್ನಾನಕ್ಕೆ ನೀಡಿಕೊಳ್ಳಲು ಶಕ್ತನಾಗುವ ತನಕ ಅತಿ ಹೆಚ್ಚು ಸಮಯ ದಾಟಬೇಕೆಂಬ ಅಗತ್ಯವಿಲ್ಲ. ಇಷ್ಟರೊಳೆಗೆ ಅವನ ಜೀವನ ಕ್ರಮವು ಕ್ರೈಸ್ತ ತತ್ವಗಳೊಂದಿಗೆ ಪೂರ್ಣ ಸಹಮತದಲ್ಲಿದೆ, ಆದ್ರೆ ಬಹಿರಂಗ ಸೇವೆಯಲ್ಲಿ ಅವನಿಗೆ ಅನುಭವ ಕಡಿಮೆ. ಕ್ಷೇತ್ರಸೇವೆಯಲ್ಲಿ ಕ್ರಮದ ಮತ್ತು ಹುರುಪಿನ ಪಾಲನ್ನು ತಕ್ಕೊಳ್ಳುವರೇ ಅವನು ದೃಢ ನಿಶ್ಚಯ ಮಾಡಿರುವನೆಂದು ತೋರಿಸಲು ಸಾಕಷ್ಟು ಸಮಯವನ್ನು ಅವನಿಗೆ ಕೊಡಬೇಕು.—ಕೀರ್ತ. 40:8; ರೋಮಾ. 10:9, 10, 14, 15.
ವ್ಯಕ್ತಿಯು ದೀಕ್ಷಾಸ್ನಾನಕ್ಕೆ ತಯಾರಾಗುವ ಸಮಯದೊಳಗೆ, ಅವನು ಇತರರೊಂದಿಗೆ ಕ್ರಮವಾಗಿ ಸುವಾರ್ತೆಯನ್ನು ಹಂಚುವವನೂ, ಪ್ರತಿತಿಂಗಳು ಕೇವಲ ಒಂದೆರಡು ತಾಸಿಗಿಂತ ಹೆಚ್ಚು ಸೇವೆ ಮಾಡುವವನೂ ಆಗಿರುವನು. (w84 6⁄1 ಪುಟ 8 ಪಾರಾ 2) ಆದರೆ ದೀಕ್ಷಾಸ್ನಾನವನ್ನು ವಿನಂತಿಸುವ ಪ್ರತಿಯೊಬ್ಬನ ಹಿನ್ನೆಲೆ, ವಯಸ್ಸು, ಸೀಮಿತ ಮುಂತಾದವುಗಳನ್ನು ಗಮನಕ್ಕೆ ತಂದುಕೊಂಡು ಅವನ ವೈಯಕ್ತಿಕ ಸ್ಥಿತಿಗತಿಗಳನ್ನು ಪರಾಮರ್ಶಿಸಬೇಕು ನಿಶ್ಚಯ. ಹಿರಿಯರು ಅವರ್ ಮಿನಿಷ್ಟ್ರಿ ಪುಸ್ತಕದ 175ನೇ ಪುಟದಲ್ಲಿ ತಮಗೆ ಕೊಡಲ್ಪಟ್ಟ ಮಾರ್ಗದರ್ಶನೆಯಿಂದ ನಡಿಸಲ್ಪಡ ಬಯಸಬೇಕು: “ಯಾರ ಹೃದಯವು ಯೆಹೋವನ ಕಡೆಗೆ ತಿರುಗಿದೆಯೋ ಮತ್ತು ಯಾರು ಮೂಲಭೂತ ಬೈಬಲ್ ಸತ್ಯಗಳ ಅರ್ಥವನ್ನು ಗ್ರಹಿಸಿದ್ದಾರೋ ಅವರಲ್ಲಿ ನಮ್ಮ ಆಸಕ್ತಿ ಇರಬೇಕು. ನಿಮ್ಮ ಪ್ರೀತಿಯುಳ್ಳ ಸಹಾಯದಿಂದ, ದೀಕ್ಷಾಸ್ನಾನ ಪಡೆಯುವವರು ಕ್ರೈಸ್ತ ಶುಶ್ರೂಷೆಯನ್ನು ಮಾಡಲು ಉತ್ತೇಜನ ಮತ್ತು ಸಹಾಯವನ್ನು ಹೊಂದಿ, ಆ ಮಹತ್ವದ ನೇಮಕವನ್ನು ಪೂರೈಸಲು ಸುಸನ್ನದ್ಧರಾಗುವರು.”—ಮತ್ತಾ. 16:24; ಯೋಹಾ. 4:34; 1 ಪೇತ್ರ 2.21.