ಮನೆಯಿಂದ ಮನೆಗೆ ಪರಿಣಾಮಕಾರಿಯಾಗಿ ಕಾರ್ಯನಡಿಸುವುದು
1 ಇಂದು “ಸುವಾರ್ತೆ” ಯು ಭೂಮಿಯಲ್ಲಿಲ್ಲಾ ಸಾರಲ್ಪಡುತ್ತಿದೆ. (ಮತ್ತಾ. 24:14) ಇದು ಪ್ರಧಾನವಾಗಿ ಮನೆಯಿಂದ ಮನೆಯ ಶುಶ್ರೂಷೆಯ ಮೂಲಕ ಪೂರೈಸಲ್ಪಡುತ್ತಿದೆ.—ಅ.ಕೃ. 20:20, 21.
2 ನಮ್ಮ ನಿರೂಪಣೆಗಳು ನಾವು ಭೇಟಿಯಾಗುವಂಥ ಜನರಿಗೆ ನಿಜಾರ್ಥವುಳ್ಳವುಗಳಾಗಿರಬೇಕು. ಪುರುಷರು, ಸ್ತ್ರೀಯರು ಮತ್ತು ಯುವಕರು ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ಭಿನ್ನರಾಗಿರುತ್ತಾರೆ. ಆದುದರಿಂದ, ನಮ್ಮ ಟೆರಿಟೊರಿಯಲ್ಲಿನ ಜನರಿಗೆ ಅಪ್ಪೀಲಾಗಬಹುದಾದ ವಿವಿಧ ಶಾಸ್ತ್ರೀಯ ವಿಷಯಗಳೊಂದಿಗೆ ಸಿದ್ಧರಾಗಿರುವುದು ಒಳ್ಳೆಯದಾಗಿರುತ್ತದೆ.
3 ಪ್ರಕಾಶನಗಳ ಸದುಪಯೋಗವನ್ನು ಮಾಡಿರಿ: ಎಲ್ಲಾ ಕಡೆಗಳಲ್ಲಿರುವ ಹಲವಾರು ಮಂದಿಗಳಿಗೆ ಅಪ್ಪೀಲಾಗುವ ವಿಷಯಗಳ ಒಂದು ವಿಶಾಲವ್ಯಾಪ್ತಿಯನ್ನು ಸದಾ ಜೀವಿಸಬಲ್ಲಿರಿ ಪುಸ್ತಕವು ಆವರಿಸುತ್ತದೆ. ದೃಷ್ಟಿಗೋಚರದ ಹಾಗೂ ಶಾಬ್ದಿಕವಾಗಿರುವ ದೃಷ್ಟಾಂತಗಳು ಪರಿಣಾಮಕಾರಿ ಸಹಾಯಕಗಳಾಗಿವೆ. ಪುಸ್ತಕವು ಹೃದಯಕ್ಕೆ ಅಪ್ಪೀಲಾಗುತ್ತದೆ, ಮತ್ತು ನಿರ್ಣಯಗಳನ್ನು ಮಾಡಲು, ಹೌದು, ಅವರ ನಂಬಿಕೆಗಳನ್ನು, ನಡತೆ, ಮನೋಭಾವ ಮತ್ತು ಜೀವನದ ರೀತಿಯನ್ನು ಬದಲಿಸುವ ಅಗತ್ಯತೆಯನ್ನು ಕಾಣಲು ಅದು ಜನರಿಗೆ ಸಹಾಯಮಾಡುತ್ತದೆ. ಸದಾ ಜೀವಿಸಬಲ್ಲಿರಿ ಪುಸ್ತಕದ ಪರಿವಿಡಿಯೊಂದಿಗೆ ಪೂರ್ಣ ಪರಿಚಿತರಾಗಿರುವುದು ಜನರೊಂದಿಗೆ ಒಂದು ವಿಸ್ತಾರವಾದ ವಿವಿಧ ವಿಷಯಗಳ ಮೇಲೆ ಪರಿಣಾಮಕಾರಿಯಾಗಿ ಮಾತಾಡಲು ನಮ್ಮನ್ನು ಶಕ್ತರನ್ನಾಗಿ ಮಾಡುವುದು. ಇದು ಮನೆಯವನ ಆಸಕ್ತಿಯ ಹರವನ್ನು ವಿವೇಚಿಸಲು ನಮಗೆ ಸಹಾಯ ಮಾಡುವುದು.
4 ಶುಶ್ರೂಷೆಯಲ್ಲಿ ಪರಿಣಾಮಕಾರಿಯಾಗಿರಲು, ನಾವು ಅಪ್ಪಟವಾದ ವೈಯಕ್ತಿಕ ಆಸಕ್ತಿಯನ್ನು ತೋರಿಸುವ ಅಗತ್ಯವಿದೆ. (ಫಿಲಿ. 2:4) ವ್ಯಕ್ತಿಯನ್ನು ಮತ್ತು ಅವನ ಅಗತ್ಯತೆಗಳನ್ನು ಒಳಗೂಡಿಸುವ ರಾಜ್ಯದ ವಿಷಯವೊಂದರ ಮೇಲೆ ಸಂಭಾಷಣೆಯನ್ನು ಕೇಂದ್ರೀಕರಿಸಲು ಪ್ರಯತ್ನಿಸಿರಿ. ಯುಕ್ತವಾದ ಪ್ರಶ್ನೆಗಳೊಂದಿಗೆ ಅವನು ವ್ಯಕ್ತಪಡಿಸುವಂತೆ ಮಾಡಿ ವ್ಯಕ್ತಿಯ ಆಲೋಚನೆಯನ್ನು ಅರ್ಥೈಸಿಕೊಳ್ಳಲು ಅನ್ವೇಷಿಸಿರಿ. ಅವನ ಉತ್ತರಗಳಿಗೆ ಗಮನಕೊಟ್ಟು ಆಲಿಸಿರಿ. ಯಾವ ವಿಷಯದಲ್ಲಿ ಅವನು ಅಭಿರುಚಿಯುಳ್ಳವನಾಗಿದ್ದಾನೆ ಎಂದು ವಿವೇಚಿಸಲು ನಿಮಗೆ ಅವನ ಹೇಳಿಕೆಗಳು ಸಹಾಯ ಮಾಡಬಹುದು. ರಾಜ್ಯದ ಸಂದೇಶದ ಮೌಲ್ಯತೆಯನ್ನು ಜನರು ಕಾಣುವಂತೆ ಜನರಿಗೆ ನೆರವಾಗಲು ಮತ್ತು ಅದರ ಕುರಿತು ಹೆಚ್ಚನ್ನು ಹೇಗೆ ಕಲಿಯಶಕ್ತರು ಎಂದು ಅವರಿಗೆ ತೋರಿಸಲು ನಾವು ಬಯಸುತ್ತೇವೆ. ಅವರನ್ನು ಭೇಟಿಯಾದ ಸಹೋದರನು ಅವರಲ್ಲಿ ಯಥಾರ್ಥವಾದ ವೈಯಕ್ತಿಕ ಅಭಿರುಚಿಯನ್ನು ಪ್ರೇಕ್ಷಿಸಿದರ್ದಿಂದ ಅವರು ಬೈಬಲ್ ಅಭ್ಯಾಸವೊಂದನ್ನು ಸ್ವೀಕರಿಸಿದರು ಎಂದು ದಂಪತಿಯೊಂದು ವಿವರಿಸಿದರು.
5 ಪದೇ ಪದೇ ಕಾರ್ಯನಡಿಸಿದ ಕ್ಷೇತ್ರಗಳಲ್ಲಿ: ಪದೇ ಪದೇ ಕಾರ್ಯನಡಿಸಿದ ಟೆರಿಟೊರಿಗಳಲ್ಲಿ ಪರಿಣಾಮಕಾರತೆಯನ್ನು ವಿಕಸಿಸುವುದು ವಿಶೇಷವಾಗಿ ಮಹತ್ವದ್ದಾಗಿರುತ್ತದೆ. ಹೆಚ್ಚು ಪರಿಣಾಮಕಾರಿ ಶುಶ್ರೂಷೆಯು ನಮ್ಮ ಟೆರಿಟೊರಿಯನ್ನು ವಿಸ್ತರಿಸಲು ನಮಗೆ ಸಹಾಯ ಮಾಡುತ್ತದೆ. (w 88 7⁄15 ಪುಟಗಳು 15-20) ನಾವೆಂದೂ ಆ ಮನೆಗೆ ಭೇಟಿ ನೀಡಿರಲಿಲ್ಲವೆಂಬಂತೆ ವರ್ತಿಸುವ ಬದಲಾಗಿ, ಮನೆಯವನ ಹಿಂದಿನ ಮನೋವೃತ್ತಿಯನ್ನು ಅಂಗೀಕರಿಸಿ, ಅದನ್ನು ನಮ್ಮ ಪ್ರಯೋಜನಕ್ಕಾಗಿ ಬಳಸಬಹುದು. ನಮ್ಮ ಹಿಂದಿನ ಭೇಟಿಯ ಕುರಿತು ಪ್ರಾಸಂಗಿಕವಾಗಿ ಸೂಚಿಸಸಾಧ್ಯವಿದೆ, ತದನಂತರ ಆಗ ಏನು ಹೇಳಿದ್ದೇವೊ ಅದರ ಮೇಲೆ ಕಟ್ಟಬಹುದು. ನಮ್ಮ ರಾಜ್ಯದ ಸೇ ಯ ಹಿಂದಿನ ಸಂಚಿಕೆಗಳಲ್ಲಿ ಮತ್ತು ರೀಸನಿಂಗ್ ಪುಸ್ತಕದಲ್ಲಿ ಸೂಚಿಸಲ್ಪಟ್ಟ ನಿರೂಪಣೆಗಳನ್ನು ಟೆರಿಟೊರಿಯ ಆವಶ್ಯಕತೆಗಳಿಗನುಗುಣವಾಗಿ ಅಳವಡಿಸಸಾಧ್ಯವಿದೆ.
6 ರಾಜ್ಯದ ಆಶೀರ್ವಾದಗಳಿಂದ ಅಧಿಕ ಜನರು ಪ್ರಯೋಜನಪಡೆಯುವಂತೆ ಯೆಹೋವನು ತಾಳ್ಮೆಯಿಂದ ಬಾಗಲನ್ನು ತೆರೆದಿಡುತ್ತಾನೆ. ಜನರಿಗಾಗಿ ಅವನಲ್ಲಿ ಪ್ರೀತಿಯಿದ್ದ ಕಾರಣ ಯೇಸುವಿನ ಶುಶ್ರೂಷೆಯು ಪರಿಣಾಮಕಾರಿಯಾಗಿತ್ತು. (ಮಾರ್ಕ 6:34) ಅವನ ಮಾದರಿಯನ್ನು ಅನುಸರಿಸಲು ನಾವು ನಮ್ಮ ಕೈಲಾದದ್ದೆಲ್ಲವನ್ನು ಮಾಡುತ್ತಿದ್ದೇವೊ? (1 ಪೇತ್ರ 2:21) ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಪಾಲು ತಕ್ಕೊಳ್ಳಲು ನಾವು ತಡೆಗಟ್ಟದೆ ಇರೋಣ.—2 ತಿಮೊ. 4:5.