ದೇವರ ಸಂಸ್ಥೆಯೊಂದಿಗೆ ಸಹವಾಸ ಮಾಡಲು ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು
(There is no corresponding article in English)
1 ಆತನ ಚಿತ್ತವನ್ನು ಅದ್ವಿತೀಯವಾಗಿ ಮಾಡುತ್ತಿರುವ ಮತ್ತು ಈ ಲೋಕದ ರಾಜಕೀಯ, ಧಾರ್ಮಿಕ ಮತ್ತು ವಾಣಿಜ್ಯ ಸಂಸ್ಥೆಗಳಿಂದ ಸಂಪೂರ್ಣವಾಗಿ ಜೊತೆಗೂಡದ ಕೇವಲ ಒಂದು ಸಂಸ್ಥೆ ಯೆಹೋವನಿಗೆ ಇದೆ. ಬೈಬಲಿನ ತಿಳಿವಳಿಕೆಯನ್ನು ಪಡೆಯುವುದರಲ್ಲಿ ಮತ್ತು ದೇವರ ಉದ್ದೇಶಗಳ ನಿಜವಾದ ಒಳನೋಟವನ್ನು ಪಡೆಯುವುದರಲ್ಲಿ ಒಂದು ಪ್ರಾಮುಖ್ಯವಾದ ಕಾರ್ಯವನ್ನು ಈ ಸಂಸ್ಥೆಯು ಮಾಡುತ್ತಿದೆ ಮಾತ್ರವಲ್ಲ, ಪ್ರತಿ ವಿದ್ಯಾರ್ಥಿಯು ಯೆಹೋವ ದೇವರ ಭೂಸಂಸ್ಥೆ ಮತ್ತು ಅದರ ಕೆಲಸದ ಕುರಿತು ತಿಳಿಯುವಂತೆ ಸಹಾಯ ಮಾಡುವ ಮತ್ತು ಅವರನ್ನು ಅದರ ಕಡೆಗೆ ನಿರ್ದೇಶಿಸುವ ಜವಾಬ್ದಾರಿಯನ್ನೂ ಕೂಡ ಅದು ಹೊಂದಿದೆ.
2 ಕ್ರೈಸ್ತತ್ವದ ಪರಿಚಯವಿರದ ಜನರಿಗೆ, ಮತ್ತು ಅವರು ಒಂದು “ಸಂಸ್ಥೆಯನ್ನು” ಸೇರುವಾಗ ಮಹತ್ತರವಾದ ಒತ್ತಡ ಮತ್ತು ಹೊಣೆಯನ್ನು ಅನುಭವಿಸುವ ಜನರಿಗೆ, ದೇವರ ಸಂಸ್ಥೆಯ ಕುರಿತು ಕಲಿಸುವುದು ಸುಲಭವಾದ ವಿಷಯವಲ್ಲ. ಇದರ ಜೊತೆಗೆ, ಅನೇಕ ಜನರು ಯೆಹೋವನ ಸಾಕ್ಷಿಗಳನ್ನು ಬೇರೆ ಹೊಸ ಧರ್ಮಗಳಿಗೆ ಸಮಾನರೆಂದು ವೀಕ್ಷಿಸುವ ಮತ್ತು ರಕ್ತ ವಿವಾದವನ್ನು ಸೇರಿಸಿ ಸಾಕ್ಷಿ ತತ್ವಗಳ ಕುರಿತು ಪೂರ್ವಾಗ್ರಹಗಳನ್ನು ಹೊಂದಿರುವ ಕಾರಣ, ಸಂಸ್ಥೆಯ ಕುರಿತು ವಿವರಿಸಲು ಕಷ್ಟಕರವೆಂದು ಕಾಣುವ ಪ್ರಚಾರಕರು ಇರಬಹುದು. ಆ ಕಾರಣಕ್ಕಾಗಿ, ಸಂಸ್ಥೆಯ ಕುರಿತು ಬಹಳಷ್ಟು ವಿವರಣೆಯನ್ನು ಮಾಡಿದಲ್ಲಿಯೂ ಕೂಡ, ಅದು ಪ್ರಭಾವಕಾರಿಯಾಗಿರದ ಸನ್ನಿವೇಶವು ಸಂಭವಿಸುತ್ತದೆ ಮತ್ತು ವಿದ್ಯಾರ್ಥಿಯು ಕೂಟಗಳಿಗೆ ಬರದೆ ಇರುತ್ತಾನೆ ಯಾ ಕಾರ್ಯವೆಸಗದೆ ಇರುತ್ತಾನೆ.
3 ವಿದ್ಯಾರ್ಥಿಯ ಪ್ರಗತಿ ಮತ್ತು ಹಿನ್ನೆಲೆಯನ್ನು ಪರಿಗಣಿಸಿರಿ: ಬೈಬಲ್ ವಿದ್ಯಾರ್ಥಿಗಳಲ್ಲಿ, ಬೈಬಲ್ ಮತ್ತು ಕ್ರೈಸ್ತತ್ವಕ್ಕಿಂತ ಹೆಚ್ಚಾಗಿ ಮಕ್ಕಳ ತರಬೇತಿ ಹಾಗೂ ಕುಟುಂಬ ಜೀವನದ ಕುರಿತು ಕಲಿಯುವುದರಲ್ಲಿ ಆಸಕ್ತರಾಗಿರುವ ಕಾರಣ ಒಂದು ಮನೆ ಬೈಬಲ್ ಅಧ್ಯಯನಕ್ಕೆ ಪ್ರತಿಕ್ರಿಯೆ ತೋರಿಸಿದ ಅನೇಕರು ಇದ್ದಾರೆ. ಇಸ್ರಾಯೇಲ್ ಜನಾಂಗದ ಇತಿಹಾಸದೊಂದಿಗೆ ಆರಂಭವಾಗುವ ಜೆಹೋವಾಸ್ ವಿಟ್ನೆಸಸ್-ಡೂಇಂಗ್ ಗಾಡ್ಸ್ ವಿಲ್ ಬ್ರೋಷರ್ನ ಅಧ್ಯಯನವನ್ನು ಥಟ್ಟನೆ ತೆಗೆದುಕೊಳ್ಳುವ ಮೂಲಕ ಪರಿಣಾಮಗಳನ್ನು ಅಪೇಕ್ಷಿಸುವುದು, ಈ ವ್ಯಕ್ತಿಗಳ ವಿಷಯದಲ್ಲಿ ಅತಿ ಹೆಚ್ಚನ್ನು ನಿರೀಕ್ಷಿಸುವ ಅರ್ಥದಲ್ಲಿರಬಹುದು. ಇಂಥ ಒಂದು ಸಂದರ್ಭದಲ್ಲಿ, ಅವರೊಂದು ಸಂತೋಷದ ಕುಟುಂಬ ಜೀವನವನ್ನು ಹೊಂದಬೇಕೆಂಬ ಉದ್ದೇಶದಿಂದ ಮಾನವವರ್ಗವನ್ನು ಸೃಷ್ಟಿಸಿದ ದೇವರ ಕುರಿತು ಮತ್ತು ಮಾನವವರ್ಗಕ್ಕಾಗಿ ಯೆಹೋವನು ಬೈಬಲನ್ನು ಒಂದು “ಮಾರ್ಗದರ್ಶಕ ಪುಸ್ತಕ” ದಂತೆ ಒದಗಿಸಿದ್ದಾನೆಂದು ವಿವರಿಸಲು ಸಮಯವನ್ನು ಪ್ರಥಮವಾಗಿ ವ್ಯಯಿಸುವುದು ಹೆಚ್ಚು ಪರಿಣಾಮಕಾರಿಯಾಗಿರುವುದು. ಇನ್ನೊಂದು ಕಡೆಯಲ್ಲಿ, ಕ್ರೈಸ್ತಪ್ರಪಂಚದಲ್ಲಿರುವ ಚರ್ಚುಗಳಲ್ಲಿ ಒಂದಕ್ಕೆ ಸೇರಿರುವ ವ್ಯಕ್ತಿಗಳಿಗೆ, ಯಾವುದು ಪ್ರಥಮ ಶತಮಾನದ ಕ್ರೈಸ್ತ ಸಭೆಯನ್ನು ಬಹಳವಾಗಿ ಹೋಲುತ್ತದೆ ಎಂಬುದನ್ನು ನಿಶ್ಚಯಿಸಲು, ಯೆಹೋವನ ಸಾಕ್ಷಿಗಳ ಸಂಸ್ಥೆಯನ್ನು ತಮ್ಮ ಚರ್ಚಿನೊಂದಿಗೆ ಹೋಲಿಸುವಂತೆ ಸಹಾಯ ಮಾಡಸಾದ್ಯವಿದೆ.
4 ಆದುದರಿಂದ, ವಿದ್ಯಾರ್ಥಿಯ ಧಾರ್ಮಿಕ ಹಿನ್ನೆಲೆಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾ, ಜೆಹೋವಾಸ್ ವಿಟ್ನೆಸಸ್-ಡೂಇಂಗ್ ಗಾಡ್ಸ್ ವಿಲ್ ಎಂಬ ಬ್ರೋಷರನ್ನು ಆರಂಭದಿಂದಲೇ ಉಪಯೋಗಿಸುವುದು ಉತ್ತಮವಾಗಿರುವುದೊ ಯಾ ಮನೆ ಬೈಬಲ್ ಅಧ್ಯಯನವು ಸ್ವಲ್ಪ ಸಮಯದ ವರೆಗೆ ಮುಂದುವರಿದ ಬಳಿಕ ಬ್ರೋಷರನ್ನು ಆರಂಭಿಸುವ ಸೂಕ್ತವಾದ ಒಂದು ಸಮಯವನ್ನು ಆರಿಸುವುದು ಉತ್ತಮವಾಗಿರುವುದೊ ಎಂದು ಚಾಲಕನು ನಿಶ್ಚಯಿಸಬಲ್ಲನು.
5 ಅಥವಾ ಜೆಹೋವಾಸ್ ವಿಟ್ನೆಸಸ್ ಇನ್ ದ ಟ್ವೆಂಟಿಯತ್ ಸೆಂಚುರಿ ಎಂಬ ಬ್ರೋಷರನ್ನು ಯಾ ರೀಸನಿಂಗ್ ಪುಸ್ತಕದಲ್ಲಿ “ಯೆಹೋವನ ಸಾಕ್ಷಿಗಳು” ಎಂಬ ತಲೆಬರಹದ ಕೆಳಗೆ ಇರುವ ಭಾಗವನ್ನು ಉಪಯೋಗಿಸಲು ನೀವು ಬಯಸಬಹುದು. ಯೆಹೋವನ ಸಾಕ್ಷಿಗಳ ಚಟುವಟಿಕೆಯು ಒಂದು ಭೌಗೋಲಿಕವಾದ ಬೈಬಲಿನ ಶೈಕ್ಷಣಿಕ ಕಾರ್ಯವಾಗಿದೆ ಮತ್ತು ಬೈಬಲನ್ನೇ ಅದರ ಅಶುದ್ಧಗೊಳಿಸದ ರೂಪದಲ್ಲಿ ಕಲಿಯುವಂತೆ ಜನರಿಗೆ ಸಹಾಯ ಮಾಡುತ್ತಿರುವ ಒಂದು ಗುಂಪು ಅವರಾಗಿದ್ದಾರೆಂದು, ಆತ್ಮಸ್ಥೈರ್ಯದಿಂದ ಇತರರಿಗೆ ಅವನು ಹೇಳಶಕ್ತನಾಗುವಂತೆ ನಿಮ್ಮ ವಿದ್ಯಾರ್ಥಿಗೆ ಸಹಾಯ ಮಾಡಿರಿ.
6 ನೀವು ಮಾಡಲು ಯತ್ನಿಸಬೇಕಾದ ಮುಂದಿನ ವಿಷಯವು, ವಿದ್ಯಾರ್ಥಿಯು ಸುಲಭವಾಗಿ ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಹಲವಾರು ಕೂಟಗಳ ಮತ್ತು ಸಮ್ಮೇಳನಗಳ ಉದ್ದೇಶ, ಒಳವಿಷಯಗಳು, ಮತ್ತು ಹಾಜರಾಗುವವರಿಗೆ ಆಗುವ ಪ್ರಯೋಜನಗಳ ಕುರಿತು ವಿವರಿಸುವುದೇ ಆಗಿದೆ. ವಿದ್ಯಾರ್ಥಿಯು ಈಗ ಕಲಿಯುತ್ತಿರುವ ವಿಷಯಗಳು ದೇವರ ವಾಕ್ಯದ ಮೇಲೆ ಆಧಾರಿತವಾದ ಸತ್ಯಗಳಾಗಿವೆ, ಮತ್ತು ಅವುಗಳನ್ನು ಐಹಿಕ ಪುಸ್ತಕಗಳಿಂದ ಪಡೆಯಲು ಸಾಧ್ಯವಿಲ್ಲ. ಅದರಂತೆಯೇ, ಕೂಟಗಳು ಬೈಬಲಿನಲ್ಲಿ ಆಸಕ್ತಿಯಿರುವ ಜನರಿಗಾಗಿ ಯೆಹೋವ ದೇವರ ವಿಶೇಷವಾದ ಬೈಬಲ್ ಶಿಕ್ಷಣದ ಕಾರ್ಯಕ್ರಮವಾಗಿದೆ. ಆದುದರಿಂದ, ಕೂಟಗಳ ಬಗ್ಗೆ ಇರುವ ವಿಷಯದ ಕೇವಲ ಒಂದು ಬಾರಿಯ ಮೇಲ್ಭಾಗದ ಆವರಿಸುವಿಕೆಯಿಂದ ತೃಪ್ತರಾಗಬೇಡಿ, ಆದರೆ ಕೂಟಗಳನ್ನು ವಿಭಿನ್ನ ಕೋನಗಳಿಂದ—ಹಾಜರಾಗುವ ಜನರು, ಮತ್ತು ಕೂಟಗಳಿಂದ ಯಾವ ಪ್ರಯೋಜನಗಳು ಸಿಗುತ್ತವೆ ಎಂಬ ಇಂಥ ಕೋನಗಳಿಂದ ಪರೀಕ್ಷಿಸಿರಿ. ನೀವು ಇಲ್ಲಿಯ ತನಕ ಏನನ್ನು ಕಲಿತು ಅನುಭವಿಸಿದ್ದೀರೊ ಅದರ ಮೇಲೆ ಆಧಾರಿತವಾದ ಸ್ವಾರಸ್ಯಕರವಾದ ಚರ್ಚೆಗಳನ್ನು ನಡಿಸಿರಿ.
7 ದೃಷ್ಟಿಸಂಬಂಧಿತ ಆಕರ್ಷಣೆ: ಬ್ರೋಷರ್ಗಳು ಮತ್ತು ಪತ್ರಿಕೆಗಳಲ್ಲಿರುವ ಚಿತ್ರಗಳ ಕಡೆಗೆ ವಿದ್ಯಾರ್ಥಿಯ ಗಮನವನ್ನು ನಿರ್ದೇಶಿಸಿರಿ, ಮತ್ತು ನೀವು ತಿಳಿಸಲು ಪ್ರಯತ್ನಿಸುತ್ತಿರುವ ಅಂಶದ ಕುರಿತು ಆಳವಾದ ಪ್ರಭಾವವನ್ನು ಬೀರಲು ಯತ್ನಿಸಿರಿ. ಅವನು ಚಿತ್ರಗಳನ್ನು ಕಂಡಾಗ ಅವನಿಗೆ ಅನಿಸಿದ್ದನ್ನು ಅಭಿವ್ಯಕ್ತಿಸಲು ವಿದ್ಯಾರ್ಥಿಯನ್ನು ಉತ್ತೇಜಿಸಿರಿ. ಯೆಹೋವನ ಸಂಸ್ಥೆಗೆ ಅನೇಕ ಜನರನ್ನು ನಿರ್ದೇಶಿಸಿದ ಬಹಳ ಉತ್ಪನ್ನಕಾರಕ ಪ್ರಚಾರಕರ ಒಂದು ಗಣನೀಯವಾದ ಸಂಖ್ಯೆಯು, ಈ ಉದ್ದೇಶಕ್ಕಾಗಿ ಅವರು ಮಾಡಿದ ಚಿತ್ರ ಸಂಪುಟಗಳನ್ನು ಉಪಯೋಗಿಸುತ್ತದೆ.
8 ಸಾಧ್ಯವಾದಷ್ಟು ಬೇಗನೆ ವಿದ್ಯಾರ್ಥಿಯು ವೈಯಕ್ತಿಕವಾಗಿ ಯೆಹೋವನ ಜನರನ್ನು ನೋಡುವಂತೆ ಏರ್ಪಾಡು ಮಾಡಿರಿ. ರಾಜ್ಯ ಸಭಾಗೃಹದಲ್ಲಿ ಮತ್ತು ಸಮ್ಮೇಳನಗಳಲ್ಲಿ ಯೆಹೋವನ ಜನರೊಂದಿಗೆ ಅವನು ಸಂಪರ್ಕ ಇಡುವಂತೆ ಏರ್ಪಡಿಸಿರಿ, ಮತ್ತು ಯೆಹೋವನ ಸಾಕ್ಷಿಗಳು ಕೇವಲ ಸಾಮಾನ್ಯ ಜನರೆಂಬುದನ್ನು ಆದರೆ ಬೈಬಲನ್ನು ನಂಬುವ ಮತ್ತು ಯೆಹೋವನ ಮಾರ್ಗಗಳ ಗಣ್ಯತೆಯಲ್ಲಿ ನಡೆಯುತ್ತಿರುವ ಜನರೆಂದು ನೋಡಲು ಅವನಿಗೆ ಸಹಾಯ ಮಾಡಿರಿ. ಒಂದು ಕೂಟಕ್ಕಾಗಿ ಉಪಯೋಗಿಸಲಾಗದೆ ಇರುವ ಸಮಯದಲ್ಲಿ ರಾಜ್ಯ ಸಭಾಗೃಹವನ್ನು ಅವನಿಗೆ ತೋರಿಸಿ, ಅದು ಯಾವ ರೀತಿಯ ಸ್ಥಳವಾಗಿದೆ ಎಂದು ವಿವರಿಸುವುದು ಕೂಡ ಬಹಳ ಪರಿಣಾಮಕಾರಿಯಾಗಿದೆ. ಸಾಧ್ಯವಾದರೆ ಬೆತೆಲನ್ನು ಸಂದರ್ಶಿಸುವಂತೆ ಅವನನ್ನು ಪ್ರೋತ್ಸಾಹಿಸಿರಿ.
9 ಇದರ ಜೊತೆಗೆ, ಅಧ್ಯಯನಕ್ಕಾಗಿ ಸರಿಯಾದ ಸಂಗಾತಿಗಳನ್ನು ನೀವು ಆಮಂತ್ರಿಸಬಲ್ಲಿರಿ ಮತ್ತು ಯೆಹೋವನ ಜನರು ಅನುಭವಿಸುವ ಸಂತೋಷದ ಕುರಿತು ಅವರು ಮಾತಾಡುವಂತೆ ಅನುಮತಿಸಿರಿ. ಉದಾಹರಣೆಗೆ, ಯೆಹೋವನ ಸಂಸ್ಥೆಯ ಮೂಲಕ ಒದಗಿಸಲಾದ ಶಿಕ್ಷಣ ಕಾರ್ಯಕ್ರಮವು ಹೇಗೆ ಸಹಾಯವುಳ್ಳದ್ದಾಗಿದೆ ಎಂದು ಒಬ್ಬ ಯುವ ಪ್ರಚಾರಕನು ವಿವರಿಸುವಂತೆ ನೀವು ಕೇಳಿಕೊಳ್ಳಸಾಧ್ಯವಿದೆ. ಅವನೊಬ್ಬ ಸಾಕ್ಷಿಯಾಗುವ ಮೊದಲು ಇದ್ದ ರೀತಿಯ ಹೋಲಿಕೆಯಲ್ಲಿ ಒಬ್ಬ ತಂದೆ ಹಾಗೂ ಗಂಡನಂತೆ ಅವನು ಹೇಗೆ ಬದಲಾಗಿದ್ದಾನೆಂದು ಒಬ್ಬ ಕ್ರೈಸ್ತ ಕುಟುಂಬದ ತಲೆಯು ಹೇಳುವಂತೆ ನೀವು ಕೇಳುವುದಾದರೆ, ಯೆಹೋವನ ಸಾಕ್ಷಿಗಳಿಗೆ ಮತ್ತು ಅವರ ಸಂಸ್ಥೆಗೆ ಇನ್ನೂ ನಿಕಟನೆಂದು ವಿದ್ಯಾರ್ಥಿಗೆ ಅನಿಸಸಾಧ್ಯವಾಗಿರುವುದು.
10 ಪೂರ್ವದಲ್ಲಿ ಮಾಡಲಾದಂತೆ, ಅಧ್ಯಯನದ ಮುಂಚೆ ಯಾ ಅನಂತರ, ಆನಂದಿಸಬಹುದಾದ 10-15 ನಿಮಿಷಗಳ ಚರ್ಚೆಯನ್ನು ನಡೆಸಿರಿ, ಮತ್ತು ವಿದ್ಯಾರ್ಥಿಯು ಯೆಹೋವನ ಸಂಸ್ಥೆಯ ಸಂಪೂರ್ಣ ಚಿತ್ರವನ್ನು ಗ್ರಹಿಸುವಂತೆ ಸಹಾಯ ಮಾಡಿರಿ. ಇದರ ಜೊತೆಗೆ, ಯೆಹೋವನ ಸಂಸ್ಥೆಯನ್ನು ವಿದ್ಯಾರ್ಥಿಯು ನೋಡಿ ಅನುಭವಿಸುವಂತೆ ಸಹಾಯ ಮಾಡಲು, ಯೆಹೋವನ ಜನರೊಂದಿಗೆ ಸಹವಾಸ ಮಾಡಲಿಕ್ಕಾಗಿ ಸಂದರ್ಭಗಳನ್ನು ಕ್ರಮೇಣ ಹೆಚ್ಚಿಸಲು ಹಲವಾರು ಅವಕಾಶಗಳನ್ನು ಉಪಯೋಗಿಸಿರಿ. ನೀವು ಈ ವಿಷಯಗಳನ್ನು ಮಾಡುವುದಾದರೆ, ವಿದ್ಯಾರ್ಥಿಯು ಭೂಸಂಸ್ಥೆಯನ್ನೂ ಅದರ ಚಟುವಟಿಕೆಗಳನ್ನೂ ಅರ್ಥಮಾಡಿಕೊಳ್ಳುವನು ಮತ್ತು ನಮ್ಮೊಂದಿಗೆ ದೇವರ ಸ್ತುತಿಗಾರನಾಗುವನು.